1083

ನಾನ್ಯಾಕೆ ನನ್ನ ಜೀವನವನ್ನು ಸಂಪೂರ್ಣವಾಗಿ ಪ್ರೀತಿಸೋಕೆ ಶುರು ಮಾಡಿದೆ ? ಒಂದು ಸ್ಫೂರ್ತಿಧಾಯಕ ಆರ್ಟಿಕಲ್ !

ಮನುಷ್ಯನ ಬುದ್ಧಿ ಇಷ್ಟೇ !!.. ಪ್ರತಿ ಕ್ಷಣ , ಪ್ರತಿ ದಿನ ತನ್ನ ಹಿಂದಿನ ಜೀವನವನ್ನೋ ಅಥವಾ ತನ್ನ ಈಗಿನ ಜೀವನವನ್ನು ಇನ್ನೊಬ್ಬರ ಜೀವನದೊಂದಿಗೆ ಹೋಲಿಸಿಕೊಂಡು ಇರುವ ಕ್ಷಣವನ್ನು ವ್ಯರ್ಥ ಮಾಡಿಕೊಳ್ಳುತ್ತ ಮಾನಸಿಕವಾಗಿ ಜರ್ಜರಿತನಾಗಿರುತ್ತಾನೆ .ಈ ಪ್ರಪಂಚದಲ್ಲಿ ಪ್ರತಿಯೊಬ್ಬರ ಜೀವನ ನಾವು ಹೇಗೆ ನೋಡುತ್ತೇವೆಯೋ ಆ ರೀತಿಯಲ್ಲಿ ಖಂಡಿತವಾಗಿಯೂ ಇರುವುದಿಲ್ಲ .. ಪ್ರತಿ ಕ್ಷಣ ನಾವು ನಮ್ಮ ಜೀವನ ಯಾಕೆ ಹೀಗೆ ? ಅವರ ಜೀವ ಅಷ್ಟೊಂದು ಸುಂದರ ಹೇಗೆ ಎಂದು ಲೆಕ್ಕಾಚಾರ ಹಾಕ್ಕೊಂಡು ಟೈಮ್ ಪಾಸ್ ಮಾಡ್ಕೊಂಡು ಇರ್ತೇವೆ .. ನೆನಪಿಡಿ .. ಈ ನಮ್ಮ ಜೀವನವೆಂಬ ಆಟದಲ್ಲಿ ನಾವು ಏನನ್ನು ಬಯಸುತ್ತೇವೆಯೋ ಅದು ದೊರಕುವುದಿಲ್ಲ ..ನಮಗೆ ಏನು ಯೋಗ್ಯತೆ ಇದೆಯೋ ಅದು ಮಾತ್ರ ಸಿಗುತ್ತದೆ .. ದೇವರು ನಾವು ಬಯಸಿದ್ದನ್ನು ಕೊಡದೆ ಇದ್ದಾಗ ತುಂಬಾ ಕೋಪ ಮಾಡ್ಕೋತೀವಿ .. ಆದರೆ ಅವನ ಪ್ಲಾನ್ ಬೇರೆಯದ್ದೇ ಆಗಿರುತ್ತದೆ .. ನಮಗೆ ಇನ್ನೂ ಸುಂದರವಾದದ್ದನ್ನು ಕೊಡಲಿಕ್ಕಾಗಿಯೇ ಅವನು ನಾವು ಬಯಸಿದ materialistic things ಅನ್ನು ಕೊಡುವುದಿಲ್ಲ ..ಭಗವಂತ ನಮಗೆ ಈಗ ಏನೇನು ಕೊಟ್ಟಿದ್ದಾನೆ ಅಂತ ಒಂದು 5 ನಿಮಿಷ ಕಣ್ಣು ಮುಚ್ಚಿ ಯೋಚಿಸಿ .. Simply recall everything .. ಆವಾಗ ನಿಮಗೆ ಗೊತ್ತಾಗುತ್ತದೆ .. ನಮ್ಮ ಜೀವನ ಚೆನ್ನಾಗಿದೆ .. ನಾನು ಖುಷಿಯಾಗಿರಲು ಏನೇನು ಬೇಕೋ ನನ್ನ ಯೋಗ್ಯತೆಗೆ ಅನುಸಾರವಾಗಿ ಭಗವಂತ ಕೊಡುತ್ತಲೇ ಇದ್ದಾನೆ ಎಂದು .

ನೀವೇನು ಕಳೆದುಕೊಂಡಿದ್ದೀರಿ ಅನ್ನೋದಿಕ್ಕಿಂತ ಇಷ್ಟು ವರ್ಷಗಳಲ್ಲಿ ಏನೇನು ಗಳಿಸಿದ್ದೀರಿ ಅಂತ ಒಂದು ಚೂರು ನೆನಪಿಸಿಕೊಳ್ಳಿ .. ಆಗ ನಿಮಗೆ ಅರಿವಾಗುತ್ತದೆ ..

ಒಂದು ಸಲ ನಾನು ನನ್ನ ಪಾಲಿಗೆ ಇರುವ ಕೆಲಸವನ್ನು ಸರಿಯಾಗಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ .ಪ್ರತೀ ಕ್ಷಣವೂ ಅವಮಾನ ನನ್ನನ್ನು ಬೆಂಬಿಡದೆ ಕಾಡುತ್ತಿದೆ .ಈ ಜೀವನ ತುಂಬಾ ಬೇಸರ ತರಿಸಿದೆ ,…ಪ್ರತೀ ದಿನವೂ , ಪ್ರತೀ ಕ್ಷಣವೂ ನಾನು ಮಾನಸಿಕವಾಗಿ ಕುಂದುತ್ತಿದ್ದೇನೆ ಅನ್ನಿಸುತ್ತಿರುವಾಗ ಒಂದು ದಿನ ನಾನು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಒಬ್ಬ ಕುರುಡ ವ್ಯಕ್ತಿ ಶಿಸ್ತಾಗಿ ಡ್ರೆಸ್ ಮಾಡಿಕೊಂಡು ಬ್ಯಾಗ್ ಹಾಕಿಕೊಂಡು ಹತ್ತಿ ನನ್ನ ಪಕ್ಕದ ಸೀಟಲ್ಲಿ ಕೂತರು .. ಸ್ವಲ್ಪ ಸಮಯದಲ್ಲಿ ಅವರು ನನ್ನ ಜೊತೆ ಮಾತಾಡೋಕೆ ಶುರು ಮಾಡಿದಾಗ , ಅವರ ಬಗ್ಗೆ ಅವರು ಹೇಳಲು ಶುರು ಮಾಡಿದರು ..ಅವರು ಒಂದು ಕಂಪನಿಯಲ್ಲಿ ಕೆಲಸ ಮಾಡುತ್ತಾರೆ ..ಅವರಿಗೆ ಅವರ ಕೆಲಸಕ್ಕಿಂತ ನಾನು ಕೆಲಸ ಮಾಡುತ್ತೀನಿ . ಯಾರ ಹಂಗಿಲ್ಲದೆ ಬದುಕುತ್ತೀನಿ ಅನ್ನುವ ಛಲ ಕಾಣಿಸುತ್ತಿತ್ತು .. ಅವರು ಬಸ್ ಇಳಿದಾಗ ನನ್ನ ಮನಸ್ಸಿನಲ್ಲಿ ಒಂದು ವಿಷಯ ತುಂಬಾನೇ ಕಾಡೋಕೆ ಶುರು ಮಾಡ್ತು … ಯಾವುದೇ ಜೀವಿ ಬದುಕಲು ಬೇಕಾಗುವ ಅತ್ಯಮೂಲ್ಯ ಅಂಗಗಳಲ್ಲಿ ಕಣ್ಣು ಕೂಡ ಒಂದು .. ದೇವರು ನನಗೆ ಎಲ್ಲಾ ಅಂಗಗಳನ್ನು ಸರಿಯಾಗಿಯೇ ಕೊಟ್ಟಿದ್ದಾನೆ .. ಒಂದು ಅಂಗ ಸರಿಯಿಲ್ಲದೆ ಈ ಮನುಷ್ಯನೇ ಜೀವನದ ಬಗ್ಗೆ ಇಷ್ಟೊಂದು hopes ಇಟ್ಟುಕೊಂಡಿರುವಾಗ ನಾನ್ಯಾಕೆ ಬದುಕುವ ಛಲ ಕಳೆದುಕೊಳ್ಳಬೇಕೆನಿಸಿತು .. ಅದೇ ದಿನದಿಂದ ಇಷ್ಟ ಪಟ್ಟು ಕೆಲಸ ಮಾಡೋಕೆ ಶುರು ಮಾಡಿದೆ ..ಪ್ರತೀ ವಿಷಯಗಳಲ್ಲೂ ಅತೀ ಹೆಚ್ಚು ಗಮನ ಕೊಡೋಕೆ ಶುರು ಮಾಡಿದೆ .. ಹಂತ ಹಂತವಾಗಿ ಯಶಸ್ಸು ಸಿಗೋಕೆ ಶುರು ಆಯ್ತು ..

ಇಷ್ಟೂ ದಿನಾ ನಾನು ಬೇರೆಯವರ ತೋರುವಿಕೆಯ ಜೀವನದ ಜೊತೆ ನನ್ನ ನಿಜವಾದ ಜೀವನಕ್ಕೆ ಹೋಲಿಸಿಕೊಂಡು ಪರಿತಪಿಸುತ್ತಿದ್ದೆ .. ಅದೊಂದು incident ನನ್ನ್ನ ಬದುಕಿನ ಬಗೆಗಿನ ಆಲೋಚನಾ ಶಕ್ತಿಯನ್ನೇ ಬದಲಿಸುತ್ತಾ ಹೋಯ್ತು .. ನಾನು ಯಾರ ಜೀವ ಅತೀ ಸುಂದರವಾಗಿದೆ ಅಂತ ಅಂದುಕೊಳ್ಳುತ್ತಿದ್ದೆನೋ ಅವರನ್ನು ಹತ್ತಿರದಿಂದ ಗಮನಿಸಿದಾಗ ನನ್ನ ಜೀವನವೇ ಸುಂದರವಾಗಿದೆ ಅನ್ನಿಸೋಕೆ ಶುರುವಾಯ್ತು ..

ನೀವು ಏನು ಮಾಡುತ್ತಿದೀರೋ ಆ ಕೆಲಸವನ್ನು ತುಂಬಾ ಪ್ರೀತಿಸಿ ..ಜೀವನವನ್ನು ಪ್ರೀತಿಸಿ .. ಯಾವುದೇ ಕಾರಣಕ್ಕೂ ನಿಮ್ಮ ಜೀವನವನ್ನು ಬೇರೆಯವರ ಜೀವನದ ಜೊತೆ ತುಲನೆ ಮಾಡಿಕೊಳ್ಳುವ ತಪ್ಪನ್ನು ಮಾಡಬೇಡಿ .. ಜೀವನದಲ್ಲಿ ಯಾವುದೇ ಕಾರಣಕ್ಕೂ ಪ್ಲಾನ್ ಮಾಡಬೇಡಿ .. ಕೇವಲ ಗುರಿ ಮಾತ್ರ ಇಟ್ಟುಕೊಳ್ಳಿ .. ಇಂತಿಷ್ಟು ವರ್ಷದಲ್ಲಿ ನಾನೇನು ಮಾಡಬೇಕು ಅಂತ ಗುರಿ ಇಟ್ಟುಕೊಳ್ಳಿ ..ಆ ಗುರಿ ಈಡೇರಿಸಿಕೊಳ್ಳುವತ್ತ ಕೆಲಸ ಮಾಡಿ ..ಪ್ಲಾನ್ ಮಾಡಿದರೆ ಜೀವನದ ಪ್ರತೀ ನಿಮಿಷ ತೊಳಲಾಟದಲ್ಲೇ ಸಾಗುತ್ತದೆ .. ಆ ತೊಳಲಾಟ ನಿಮಗೆ ನಿಮ್ಮ ಆಸೆ ಈಡೇರಿಸಿಕೊಳ್ಳಲು ಬಿಡುವುದಿಲ್ಲ .. ಸಾಧ್ಯವಾದಷ್ಟೂ ಖುಷಿಯಾಗಿರಿ .. ಸೋಶಿಯಲ್ ಮೀಡಿಯಾ ದಲ್ಲಿ ನೀವು ಬೇರೆಯವರ ಜೀವನವನ್ನು ನೋಡಿ ಖುಷಿ ಪಡಿ ವಿನಃ ಯಾವುದೇ ಕಾರಣಕ್ಕೂ ತುಲನೆ ಮಾಡಿಕೊಳ್ಳೋಕೆ ಶುರು ಮಾಡಬೇಡಿ … ಯಾಕೆಂದರೆ ಸೋಶಿಯಲ್ ಮೀಡಿಯಾ ದಲ್ಲಿ ಜನ ಅವರ ಖುಷಿಯ ಒಂದು ಭಾಗವನ್ನಷ್ಟೇ ಅತ್ಯಾಕರ್ಷಕವಾಗಿ ಹಂಚಿಕೊಳ್ಳುತ್ತಾರೆಯೇ ವಿನಃ ಅವರ ಜೀವನದ ಕಷ್ಟಗಳನ್ನಲ್ಲ..

ಇಲ್ಲೊಂದು ಸ್ಫೂರ್ತಿಧಾಯಕ ವಿಡಿಯೋ ಇದೆ ನೋಡಿ .. ಈ ವಿಡಿಯೋ ನಿಮಗೆ ಒಂದು ಸ್ಪೂರ್ತಿಯ ಚಿಲುಮೆಯಾಗಲಿ ..ಸಾಧಿಸೋಕೆ ಪ್ರೇರಣೆ ಸಿಗಲಿ

ಈ ಆರ್ಟಿಕಲ್ ಇಷ್ಟ ಆಗಿದ್ದರೆ ಶೇರ್ ಮಾಡಿ .. ಹಾಗೆಯೇ ನಮ್ಮ ಪೇಜ್ ಲೋಕಲ್ ಪೇಜ್ ಅನ್ನು ಲೈಕ್ ಮಾಡೋದು ಮರೀಬೇಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..