1942

ಮಫ್ತಿ ಚಿತ್ರದ ಬಗ್ಗೆ ನೀವು ತಿಳಿದುಕೊಳ್ಳಬೇಕಾದ 5 ವಿಷಯಗಳು

  • By Arun Kumar PT
  • Sunday, December 3rd, 2017
  • Things You Should Know

ಮಫ್ತಿ ಚಿತ್ರ ಡಿಸೆಂಬರ್ 1 ರಿಂದ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಎಂದಿನಂತೆ ಉಗ್ರಂ ಶ್ರೀ ಮುರಳಿ ಮತ್ತು ಶಿವಣ್ಣ ಅವರನ್ನು ಮತ್ತೆ ಮಾಸ್ ಚಿತ್ರದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು. ಬೆಂಗಳೂರಿನ ಊರ್ವಶಿ ಚಿತ್ರಮಂದಿರದಲ್ಲಿ ಅಕ್ಷರಶಃ ಹಬ್ಬದ ವಾತಾವರಣ ನಿರ್ಮಾಣ ಆಗಿರೋದರ ವರದಿ ಈಗಾಗಲೇ ಹಳೆಯದಾಗಿದೆ. ನಿರ್ದೇಶಕ ನರ್ತನ್ ಅವರು ಮೊದಲ ಪ್ರಯತ್ನದಲ್ಲೇ ಸಿಕ್ಸರ್ ಹೊಡೆದಿರೋದು ಪ್ರೇಕ್ಷಕರಿಗೆ ಖುಷಿ ನೀಡಿದೆ. ಅಂತಹ ಮಫ್ತಿ ಚಿತ್ರವನ್ನು FDFS ನೋಡಿ ಚಿತ್ರ ವಿಮರ್ಶೆ ನಿಮಗಾಗಿ.

1. ಮಾಸ್ ಮೇಕಿಂಗ್ ಮತ್ತು ತಂತ್ರಜ್ಞಾನ ಕೌಶಲ
ಇಡೀ ಚಿತ್ರದಲ್ಲಿ ಒಬ್ಬ ಡಾನ್ ಮತ್ತು ಒಬ್ಬ ಪೊಲೀಸ್ ಆಫೀಸರ್ ನಡುವಿನ ತಂತ್ರ, ಪ್ರತಿ ತಂತ್ರಗಳ ಕಥಾನಕ ತುಂಬಾ ಕುತೂಹಲಕಾರಿ ಮತ್ತು ಮಾಸ್ ಆಗಿದೆ. ಛಾಯಾಗ್ರಹಣ, ಎಡಿಟಿಂಗ್, VFX ವಿಭಾಗದಲ್ಲಿ ಕೂಡ ಚಿತ್ರ ನಿಮಗೆ ಒಂದು advanced feel ಕೊಡುವುದು ಪಕ್ಕಾ, ಡೌಟೇ ಬೇಡ.

2. ಪಕ್ವ ನಿರ್ದೇಶನ
ನಿರ್ದೇಶಕ ನರ್ತನ್ ಅವರು ಮೊದಲ ಪ್ರಯತ್ನದಲ್ಲಿ ಪ್ರೇಕ್ಷಕರಿಗೆ ಅದ್ಭುತ ಚಿತ್ರವನ್ನು ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದ ಶುರುವಿನಿಂದ ಕೊನೆಯವರೆಗೂ ತಮ್ಮ ಪವರ್ ಪ್ಯಾಕೇಜ್ ಕಥಾನಕ ತೆರೆದಿಡುವಲ್ಲಿ ಯಶಸ್ವಿಯಾಗಿರುವುದು ವಿಶೇಷ.

 

3. ಟೆರಿಫಿಕ್ ಶಿವಣ್ಣ
ಆನಂದ್ ಚಿತ್ರದಿಂದ ಇಲ್ಲಿಯವರೆಗೆ ನಾನು ಶಿವಣ್ಣ ಅವರನ್ನು almost ಎಲ್ಲಾ ಬಗೆಯ ಪಾತ್ರಗಳಲ್ಲಿ ನೋಡಿದ್ದೇನೆ. There’s practically nothing Shivanna can’t do it. ಆದರೆ ಓಂ ಚಿತ್ರ ಅದು ಯಾವ ಘಳಿಗೆಯಲ್ಲಿ ತೆರೆ ಕಂಡಿತೋ, ಆಗಿನಿಂದ ಶಿವಣ್ಣ ಅವರನ್ನು ನೆಗಟಿವ್ ಶೇಡ್ ನಲ್ಲಿ ನೋಡುವ ಗಮ್ಮತ್ತೇ ಬೇರೆ ಅನಿಸತೊಡಗಿತು. ಅರ್ಧ ಚಿತ್ರ ಮುಗಿಯುವವರೆಗೂ ಚಿತ್ರದಲ್ಲಿ ಶಿವಣ್ಣನ ಪಾತ್ರ ಭೈರತಿ ರಣಗಲ್ಲ್ ಪ್ರವೇಶ ಆಗದಯೇ ಅದರ ಖದರ್ ರೂಪುಗೊಳ್ಳುವಂತೆ ಮಾಡಿರುವುದು ನಿರ್ದೇಶಕರ ಜಾಣ್ಮೆಗೆ ಹಿಡಿದ ಕನ್ನಡಿ.

4. ಖದರ್ ಶ್ರೀ ಮುರಳಿ
ಚಿತ್ರದ ಕೆಲವು ದೃಶ್ಯಗಳಲ್ಲಿ ಶ್ರೀ ಮುರಳಿ ಅವರು ಇನ್ನೂ ಉಗ್ರಂ ಛಾಯೆಯಿಂದ ಹೊರ ಬಂದಿಲ್ಲವೆಂದು ಭಾಸವಾದರೂ ಅವರು ಈ ಚಿತ್ರದಲ್ಲಿ ಗಣ ಪಾತ್ರಕ್ಕೆ ತಮ್ಮ ಕಡೆಯಿಂದ 100% ನ್ಯಾಯ ಒದಗಿಸಿರುವುದು ಎದ್ದು ಕಾಣುತ್ತದೆ. Action speaks louder than words ಎನ್ನುವಂತೆ ಈ ಬಗೆಯ ಮಾಸ್ ಸಿನಿಮಾಗಳಿಗೆ ಖದರ್ ಸಂಭಾಷಣೆಗಳು ಪ್ಲಸ್ ಪಾಯಿಂಟ್, ಹೆಚ್ಚಾದರೆ ಅದೇ ಮೈನಸ್ ಕೂಡ. ಎರಡರ ನಡುವಿನ ಆ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಫ್ತಿ ಯಶಸ್ವಿಯಾಗಿದೆ.

5. ಇನ್ನುಳಿದಂತೆ
ಸೈಡ್ ಟ್ರ್ಯಾಕ್ ನಲ್ಲಿ ಚಿತ್ರದಲ್ಲಿ ಒಂದು ಅನಗತ್ಯ ಲವ್ ಸ್ಟೋರಿ, ಬೇಡದೇ ಇರೋ ಮೂರು ಕಾಮಿಡಿ ಸೀನ್ ಗಳೂ ಇವೆ. Thankfully, ಹೆಚ್ಚಿನ ಸಮಯ ಈ ಭಾಗದಲ್ಲಿ ವ್ಯಯ ಆಗಿಲ್ಲ. ಇನ್ನುಳಿದಂತೆ ಶಾನ್ವಿ, ವಸಿಷ್ಠ ಸಿಂಹ, ಛಾಯಾ ಸಿಂಗ್, ದೇವರಾಜ್, ಸಾಧು ಕೋಕಿಲ, ಚಿಕ್ಕಣ್ಣ ತಮ್ಮ ಕೆಲಸವನ್ನು ಅಚ್ಚು ಕಟ್ಟಾಗಿ ಮಾಡಿದ್ದಾರೆ.

Overall ಮಫ್ತಿ ಚಿತ್ರವು ಅಬ್ಬಬ್ಬಬ್ಬಾ ಎನಿಸುವಂತೆ ಮಾಡದಿದ್ದರೂ ನಮ್ಮ ಸಾಧಾರಣ ಲೈಫಿಂದ ಹೊರ ತಂದು ಮನಸ್ಸಿಗೆ ಒಂದು ರಗಡ್ ಕಿಕ್ ನೀಡುವುದರಲ್ಲಿ ಅನುಮಾನವಿಲ್ಲ. ಚಿತ್ರದ ನಾಲ್ಕು ಆಧಾರ ಸ್ತಂಭಗಳೆಂದರೆ ಶಿವಣ್ಣ, ಶ್ರೀ ಮುರಳಿ, ನರ್ತನ್ ನಿರ್ದೇಶನ ಮತ್ತು ರವಿ ಬಸ್ರೂರ್ ಸಂಗೀತ ಮತ್ತು BGM ಎನ್ನಲಡ್ಡಿಯಿಲ್ಲ. ಕೆಲವು ದೃಶ್ಯಗಳನ್ನು ಅಮೋಘವಾಗಿ ಪ್ರೇಕ್ಷಕನಿಗೆ ದಾಟಿಸುವಲ್ಲಿ ಈ ನಾಲ್ವರ ಶ್ರಮ ಪ್ರಶಸಂನಾರ್ಹ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..