12185

ಬನ್ನಿ ನೋಡಿ ಮಂದಾರ್ತಿಯ ದೇಗುಲವ ..!!!

ಮಂದಾರ್ತಿ, ಬ್ರಹ್ಮಾವರದಿಂದ ಕೇವಲ 10 ಕಿಲೋಮೀಟರ್ ದೂರದಲ್ಲಿದೆ. ಇಲ್ಲಿ ದುರ್ಗಾಪರಮೇಶ್ವರಿ ದೇವಸ್ಥಾನವಿದ್ದು  ಇತಿಹಾಸ ಪ್ರಸಿದ್ಧವಾಗಿದೆ. ಇದೊಂದು ಕರಾವಳಿಯ ಸುಪ್ರಸಿದ್ದ ದೇವಸ್ಥಾನವಾಗಿದ್ದು ಸಹಸ್ರಾರು ಭಕ್ತರು ದಿನಂಪ್ರತಿ ಆಗಮಿಸುತ್ತಾರೆ.
ನಾಗಲೋಕವನ್ನು ಆಳುತ್ತಿದ್ದ ರಾಜ ಶಂಕಚೂಡನ 5 ಮಕ್ಕಳಾದ ದೇವರತಿ , ನಾಗರತಿ, ಚಾರುರತಿ, ಮಂದಾರತಿ ಮತ್ತು ನೀಲರತಿ, ಒಮ್ಮೆ ಇವರೆಲ್ಲ ಕೈಲಾಸಕ್ಕೆ ಸುಬ್ರಹ್ಮಣ್ಯ ಸ್ವಾಮಿಯನ್ನು  ಮದುವೆಯಾಗುವ ಇಚ್ಛೆಯಿಂದ ಹೋಗುತ್ತಾರೆ . ಹೋಗ್ತಾ ಇರುವಾಗ ಕೈಲಾಸದ ಬಾಗಿಲಲ್ಲಿ ನಂದಿಯು ಇವರನ್ನು ತಡೆಯುತ್ತಾನೆ . ಒಳಗೆ ಬಿಡಲು ಒಪ್ಪದೇ ಇದ್ದಾಗ ಇವರ ನಡುವೆ ವಾಗ್ವಾದ ನಡೆದು ನಂದಿಯು ಇವರಿಗೆ ನೀವು ಹಾವಾಗಿ ಭೂಲೋಕ ಕ್ಕೆ ಹೋಗಿ ಅಂತ ಶಾಪ ಕೊಡುತ್ತಾನೆ.ಶಾಪದಂತೆ ಈ ಐವರು ಹಾವಾಗಿ ಭೂಮಿಗೆ ಬಂದು ಬೀಳ್ತಾರೆ .
ಹೀಗೆ ವ್ಯಾಘ್ರಪಾದ  ಮಹರ್ಷಿಗಳು ಸಹ್ಯಾದ್ರಿ ಘಟ್ಟದ ಕಾಡಿನಲ್ಲಿ ಹೋಗ್ತಾ ಇರುವಾಗ ಈ ಐದು ಹಾವನ್ನು ನೋಡ್ತಾರೆ ಮತ್ತು ಅವರ ದಿವ್ಯ ಶಕ್ತಿಯಿಂದ ಈ ಐವರ ಪೂರ್ವಾಪರ ತಿಳಿದುಕೊಳ್ತಾರೆ. ಹಾವಾದ ಈ ರಾಣಿಯರ ಬಳಿ ಮಹರ್ಷಿಗಳು ಒಬ್ಬ ರಾಜನಿಂದ ನಿಮ್ಮ ಶಾಪ ವಿಮೋಚನೆಯಾಗುತ್ತದೆ ಎಂದು ಅಲ್ಲಿಂದ ಹೊರಡ್ತಾನೆ.
3m
ಬಹಿಷ್ಕಾರಕ್ಕೆ ಒಳಗಾಗಿ ವೇಷ ಧರಿಸಿಕೊಂಡು ಇದೆ ಕಾಡಿನಲ್ಲಿ ಅಲೆದಾಡುತ್ತಿರುವ ಅವಂತಿ ರಾಜ್ಯದ ರಾಜನಾದ ದೇವವರ್ಮನು ಈ ಐದು ಹಾವನ್ನು ನೋಡಿ ಇವ್ಗಳನ್ನು ರಕ್ಷಿಸಬೇಕೆಂದು ಬಟ್ಟೆಯಲ್ಲಿ ಸುತ್ತಿಕೊಂಡು ಪಶ್ಚಿಮದ ಕಡೆ ಹೊರಡ್ತಾನೆ. ಹೀಗೆ ಹೋಗ್ತಾ ಇರುವಾಗ ಒಂದೊಂದೇ ಹಾವು ಬಟ್ಟೆಯಿಂದ ಜಾರಿ ಕೆಳಗೆ ಬೀಳ್ತದೆ ಹೀಗೆ ಬಿದ್ದ ಒಂದು ಹಾವೇ ಮಂದಾರತಿ ಅದುವೇ ಈಗ ಮಂದಾರ್ತಿಯಾಗಿ ಪುಣ್ಯ ಸ್ಥಳವಾಗಿದೆ.ಹಾಗೆಯೇ ಉಳಿದ ಹಾವುಗಳು ಬಿದ್ದ ಸ್ಥಳ ನೀಲಾವರ(ನೀಲರತಿ) , ಚಾರುರತಿ(ಚೋರಾಡಿ), ನಾಗರತಿ(ನಾಗೇರ್ತಿ), ದೇವರತಿ(ಅರಶಿನಕಾನು).
ಹೀಗೆ ಮಂದಾರ್ತಿಯಲ್ಲಿ ನೆಲೆಸಿರುವ ಮಂದರತಿಯಿಂದ ಮೊದಲ್ಗೊಂಡು ಶ್ರೀ ದುರ್ಗಾಪರಮೇಶ್ವರಿಗೆ ಇಲ್ಲಿ ನಿತ್ಯವೂ ಪೂಜೆ ನಡಯುತ್ತದೆ.ದಿನಂಪ್ರತಿ ನೂರಾರು ಭಕ್ತರು ಇಲ್ಲಿಗೆ ಆಗಮಿಸಿ ಶ್ರೀ ದೇವಿಯ ಕ್ರಪೆಗೆ ಪಾತ್ರಾಗುತ್ತಾರೆ. ದಿನಂಪ್ರತಿ ಬರುವ ಭಕ್ತರಿಗೆ ಅನ್ನ ಪ್ರಸಾದದ ವ್ಯವಸ್ಥೆ ಇಲ್ಲಿ ಇದೆ. ಒಮ್ಮೆ ಹೀಗೆ ಅನ್ನ ಸಂತರ್ಪಣೆಯ ಸಂದರ್ಭದಲ್ಲಿ, ಬಂದ ಭಕ್ತರ ಮಗು ಪಾಯಸ ಬೇಕೆಂದು ಹಠ ಮಾಡಿತ್ತಂತೆ ಯಾರೇ ಎಷ್ಟು ಸಮಾಧಾನ ಮಾಡಿದರು ಸುಮ್ಮನಾಗದಿದ್ದಾಗ, ಇದನ್ನರಿತ ಧರ್ಮದರ್ಶಿಗಳು ದೇವಿಯೇ ಈ ಮಗುವಿನ ರೂಪದಲ್ಲಿ ಬಂದು ಭಕ್ತರಿಗೆ ಅನ್ನಸಂತರ್ಪಣೆಯಲ್ಲಿ ದಿನಾ  ಪಾಯಸವನ್ನು ಪ್ರಸಾದದ ರೂಪದಲ್ಲಿ  ನೀಡಬೇಕೆಂದು ನಿಶ್ಚಯಿಸಿ , ಈಗ ದಿನಾ ಅನ್ನಸಂತರ್ಪಣೆಯಲ್ಲಿ ಪಾಯಸವನ್ನು ಪ್ರಸಾದವಾಗಿ ನೀಡುತ್ತಾರೆ.
1m
ಹಿಂದಿನ ಕಾಲದಲ್ಲಿ ಸೂರ್ಗೋಳಿ ಅಂತೂ ಅನ್ನೋ ಕಳ್ಳನೊಬ್ಬ ಆನೆಗುಡ್ಡೆಯಿಂದ ಒಂದು ಪೆಟ್ಟಿಗೆಯನ್ನು ಕದ್ಕೊಂಡು ಹೀಗೆ ಬರ್ತಾ ಇರುವಾಗ ಪೆಟ್ಟಿಗೆ ಬಾರವಾಗಿ ಬಾರಾಳಿ ಅನ್ನೋ ಒಂದು ಕಡೆ ಇಳಿಸ್ತಾನೆ (ಭಾರವಾಗಿ ಇಳ್ಸಿದ್ದರಿಂದ ಆ ಜಾಗಕ್ಕೆ ಬಾರಾಳಿ ಅನ್ನೋ ಹೆಸರು ಬಂತು ಅನ್ನೋದು ಹಿರಿಯರು ಹೇಳೋ ಮಾತು) ಈ ಸ್ಥಳವು ಮಂದರ್ತಿಯಿಂದ ಕೆಲವೇ ಕೆಲವು ದೂರದಲ್ಲಿದೆ. ಹೀಗೆ ಕೆಳಗೆ ಇಳಿಸಿದ ಪೆಟ್ಟಿಗೆಯನ್ನು ತೆರೆದು ನೋಡಿದಾಗ ಅದರಲ್ಲಿ ಗಣಪತಿ ವಿಗ್ರಹ,ಹೆಜ್ಜೆ, ಕೆಲವು ನಾಟ್ಯದ ಬಟ್ಟೆಗಳು ಇದ್ದವು. ತನ್ನ ತಪ್ಪನ್ನರಿತ ಅಂತುವು ಆ ಪೆಟ್ಟಿಗೆಯನ್ನು ಮಂದರ್ತಿಗೆ ತಂದು ಒಪ್ಪಿಸಿ ದೇವಿಯಲ್ಲಿ ಕ್ಷಮೆ ಕೇಳ್ತಾನೆ.ಹೀಗೆ ಬಂದ ಪೆಟ್ಟಿಗೆಯಿಂದ ಮಂದಾರ್ತಿಯಲ್ಲಿ ಬೆಳಕಿನ ಸೇವೆ (ಯಕ್ಷಗಾನ) ಆರಂಭಗೋಳ್ತದೆ.ಇನ್ನು ಈ ದೇವಸ್ಥಾನದ ಆಡಳಿತದಲ್ಲಿ 5 ಯಕ್ಶಗಾನ ಮೇಳಗಳಿದ್ದು ದೇವರ ಹರಕೆಯ ರೂಪದಲ್ಲಿ ಸೇವೆ ಮಾಡುತ್ತಿವೆ. ಕಷ್ಟ ಕಾರ್ಪಣ್ಯ ಎದುರಾದಾಗ ಇಲ್ಲಿ ಬಂದು ಬೆಳಕಿನ ಸೇವೆ ಮಾಡುತ್ತೇನೆ ಎಂದು ಹರಕೆ ಕಟ್ಟಿಕೊಂಡು  ಪರಿಹಾರ ಕಂಡುಕೊಂಡೋರು ಕರಾವಳಿ ಭಾಗದಲ್ಲಿ ತುಂಬ ಜನ ಇದ್ದಾರೆ. ಇಲ್ಲಿನ ಬೆಳಕಿನ ಸೇವೆ ಮಾಡಬೇಕು ಅಂದ್ರೆ ನೀವು ಕಂಡಿತಾ 5-6 ವರ್ಷ ಕಾಯ್ಬೇಕು. ಇದ್ರಲ್ಲೇ ಗೊತ್ತಾಗ್ತದೆ ಈ ದೇವಿಯ ಮಹಿಮೆ.
2m
ಈ ದೇವಸ್ಥಾನವು ಉಡುಪಿ ಜಿಲ್ಲೆ, ಉಡುಪಿ ತಾಲೂಕಿನಲ್ಲಿದೆ. ಉಡುಪಿಯಿಂದ ಬ್ರಹ್ಮಾವರ-ಬಾರಕೂರು  ಮಾರ್ಗವಾಗಿ ಗೋಳಿಯಂಗಡಿ ಕಡೆಯ ದಾರಿಯಲ್ಲಿ ಹೋದರೆ ಈ ದೇವಸ್ಥಾನವು ಸಿಗುತ್ತದೆ. ಬ್ರಹ್ಮಾವರದಿಂದ 10 ಕಿಲೋಮೀಟರ್ ದೂರ. ಖಂಡಿತ ನೋಡಲೇ ಬೇಕಾದ ಕರಾವಳಿಯ ದೇವಸ್ಥಾನಗಳಲ್ಲಿ ಒಂದು ಈ ಮಂದಾರ್ತಿ .
(ಹಿರಿಯರಿಂದ ಸಂಗ್ರಹಿಸಿದ ಮಾಹಿತಿ. ತಪ್ಪಿದ್ದಲ್ಲಿ ಕ್ಷಮೆಯಿರಲಿ )

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..