- By Guest Writer
- Saturday, May 14th, 2016
ಈ ಅಂಕಣ ಕಳಿಸಿದವರು : ಅಶ್ವಿನಿ ಸೊನ್ನಾದ್
ಜೀವನದ ದಾರಿಯಲ್ಲಿ ಎಲ್ಲರದ್ದೂ ಅಲೆಯುವ ಸರದಿ ಬದುಕಿನ ಈ ದಾರಿಯಲ್ಲಿ ನಾವೆಲ್ಲರೂ ಬಂದು ಹೋಗುವ ಪಾತ್ರಗಳು….
ಬದುಕಿನ ಪ್ರತಿ ಪುಟವು ಭಿನ್ನ ಭಿನ್ನ ಬಾಲ್ಯದಲ್ಲಿ ಮುಟ್ಟಾಟದೊಂದಿಗೆ ಶುರುವಾಗುವ ಈ ಬದುಕು ಬಲು ಸೋಜಿಗ ಎಲ್ಲರು ಈ ಆಟದಲ್ಲಿ ಭಾಗಿಗಳು ಕಣ್ಣು ಕಟ್ಟಿ ಬಿಟ್ಟ ಆ ದೇವರುಮಾತ್ರ ವೀಕ್ಷಕ ….
ಎಲ್ಲರನ್ನು ಮುಟ್ಟುತ್ತೇನೆ ಅಂದರೆ ಎಲ್ಲವನ್ನು ಪಡೆದು ತೀರುತ್ತೇನೆ ಎಂಬ ಹಂಬಲದೊಂದಿಗೆ ಕಣ್ಣು ಕಟ್ಟಿಕೊಂಡು ಈ ಅಂಗಳಕೆ ಇಳಿದವರು ನಾವು ಈ ಮುಟ್ಟಾಟದ ಬಯಲಲ್ಲಿಮುಟ್ಟುವ ಆತುರದಲ್ಲಿ ನಾವು ತುಳಿದ ಕಲ್ಲು ಮುಳ್ಳುಗಳು ಅಂದರೆ ನೋವು ನಲಿವುಗಳು ವಿಭಿನ್ನ……
ಎಲ್ಲವನ್ನು ಸಹಿಸಿ ಆಡುವ ಈ ಮುಟ್ಟಾಟದಲಿ ನಮ್ಮ ತೆಕ್ಕೆಗೆ ಬಿದ್ದವರೆಷ್ಟೂ ನಮ್ಮಿಂದ ಬಹು ದೂರ ಸಾಗಿದವರೆಷ್ಟೋ ….ಸಿಕ್ಕಷ್ಟು ಸಂತೋಷದಲ್ಲಿ ಸುಮ್ಮನಿದ್ದರೆ ಮುಗಿತಿತ್ತೇನೋ ಮುಟ್ಟಾಟ …..
ಆದರೂ ನಡೆದಿದೆ ಈ ಆಟ ಸಿಗದವರಿಗಾಗಿ ಹುಡುಕಾಟ ಬನ್ನಿ ಮತ್ತೊಮ್ಮೆ ಈ ಬಯಲಿನ ಬಾಂದಳಕೆ ಮುಟ್ಟಾಟದ ಅಂಗಳಕೆ….