1801

ನಿನ್ನಿಂದಾನೆ ಎಲ್ಲಾ…!

old railway station

ದೇವಗಿರಿಯ ರೈಲ್ವೆ ನಿಲ್ದಾಣಕ್ಕೆ ಅಂದು ರಾತ್ರಿ ರೈಲು ಕೊಂಚ ತಡವಾಗಿ ಬಂದು ಸೇರಿತ್ತು, ಸರ್ ಬರ್ಟನ್ ಅವರು ನಿಲ್ದಾಣದಿಂದ ಆಚೆ ಬಂದು ನೋಡುತ್ತಾರೆ , ಅವರ ದುರಾದೃಷ್ಠಕ್ಕೆ ಯಾವ ಆಟೋಗಳು ಇಲ್ಲ, ಯಾರು ಕಾಣ್ತಾನು ಇಲ್ಲ, ಇವರ ಜೊತೆ ರೈಲಿನಿಂದ ಇಳಿದವರೆಲ್ಲನ್ನು ಅವರವರ ಮನೆಯವರು ಬಂದು ಕರೆದುಕೊಂಡು ಹೋದರು, ಎದುರಿಗೆ ಬೀಡಿ ಸೇದುತ್ತ ನಿಂತಿದ್ದ ಕೂಲಿಯವನನ್ನು, ಯಾಕೆ ಇವತ್ತು ಯಾವ ಆಟೋಗಳು ಇಲ್ಲ ಅಂತ ಕೇಳಿದರು, ಆತ ಇವತ್ತು ಆಟೋ ಸ್ಟ್ರೈಕ್ ಎಂದು ಹೇಳಿದ, ಬೇರೆ ದಾರಿ ಇಲ್ಲದೆ ನಡೆದು ಹೊರಟರು ಬರ್ಟನ್ ಸರ್,

a-lone-man-jasna-buncic

 

ಪ್ರಯಾಣದ ದಣಿವು ಮತ್ತು ಆ ರಾತ್ರಿಯಲ್ಲಿ ನಡೆದು ಮನೆಗೆ ಹೋಗುತ್ತಿದ್ದರಿಂದ ಅವರನ್ನು ಇನಷ್ಟು ಸುಸ್ತು ಮಾಡಿತ್ತು, ಪಕ್ಕದಲ್ಲಿ ಕಂಡ ಸಿಧ್ದಾರ್ಥನ ಮನೆಯಲ್ಲಿ ಸ್ವಲ್ಪ ವಿಶ್ರಮಿಸಿ , ನೀರು ಕುಡಿದು ಹೋಗೋಣ ಎಂದು ಸಿಧಾರ್ಥನ ಮನೆ ಕೆಡೆಗೆ ಹೋದರು.

 

 

ಶರ್ಟ್ ಹೊಲೆದು ಕೊಳ್ಳುತ್ತ ಮನೆಯ ಮುಂಭಾಗದ ಕಟ್ಟೆಯ ಮೇಲೆ ಕೂತಿದ್ದ ಸಿಧಾರ್ಥ,maxresdefault

ಬರ್ಟನ್ :             ಸಿಧ್ದಾರ್ಥ…ಸಿದ್…ಇಲ್ಲೆಕೂತಿದ್ಯ..?

ಸಿಧ್ದಾರ್ಥ :         ಬನ್ನಿ ಬರ್ಟನ್ಸರ್… ಬನ್ನಿ….ಇತ್ತೀಚಿಗೆ ಕಾಣ್ತಾನೆಯಿಲ್ಲ.?

ಬರ್ಟನ್ :          (ಕಟ್ಟೆಯ ಮೇಲೆ ಕೂತು) ಊರಿಗೆ ಹೋಗಿದ್ದೆ ತಂಗಿ ಮನೇಗೆ, ಮಗುಆಯ್ತಲ್ಲ ನೋಡ್ಕೊಂಡ್ ಬರೋಣ ಅಂತ ಹೋಗಿದ್ದೆ.

ಸಿಧ್ದಾರ್ಥ :          (ನಕ್ಕು) ಓಹೋ… ಏಸುನಾ…? ಮೇರಿನ…?

ಬರ್ಟನ್ :           (ನಕ್ಕು) ಏಸು…!

ಸಿಧ್ದಾರ್ಥ :        (ನಕ್ಕು ಸುಮ್ಮನೆ ಆಗ್ತಾನೆ)

ಬರ್ಟನ್ :           (ಮುಂದಿದ್ದ ಮಡಿಕೆಯಲ್ಲಿ ಎರೆಡು ಲೋಟು ನೀರು ಕುಡಿದು ಕುಳಿತರು)sketches

ಸಿಧಾರ್ಥ :        ತುಂಬ ಸುಸ್ತಾಗಿದ್ದೀರ ಅನ್ಸತ್ತೆ..?

ಬರ್ಟನ್:          ಹೌದು ಕಣೊ… ಪ್ರಯಾಣದ ಆಯಾಸ ಹೇಗೆ ಮಾಡ್ಸತ್ತೆ ಅಂತ ನಿಂಗೆ ಗೊತ್ತಲ್ಲ…?

ಸಿಧ್ದಾರ್ಥ :         ಅದು ಸರಿ..

ಬರ್ಟನ್ :         ನೋಡು ಮಗೂನ (ಮೊಬೈಲ್ ಕೈಗೆ ಕೊಡ್ತಾರೆ)

ಸಿಧ್ದಾರ್ಥ :          (ನೋಡಿ) ಚೆನ್ನಾಗಿದ್ದಾನೆ…! ಮಗು ಫೋಟೋನ ನಿಮ್ಮ ತಂಗಿ ವಾಟ್ಸಪ್ನಲ್ಲಿ ಕಳ್ಸಿದ್ದಿದ್ದ್ರೆ, ನೀವು ಅಷ್ಟು ದೂರ ಹೋಗೊ ಅಷ್ಟೆ ಇರ್ಲಿಲ್ಲ,ಹೋಗಕ್ಕೆ ಒಂದು ವರೆ ದಿನ ಪ್ರಯಾಣ, ಬರಕ್ಕೆ ಒಂದು ವರೆ ದಿನ ಪ್ರಯಾಣ…. ದುಡ್ಡು ಸಮಯ ಎರಡು ಮಿಕ್ಕಿರದು.

ಬರ್ಟನ್ :           ಅದು ಹೇಗಯ್ಯ ಅಷ್ಟು ದೂರ ಇದೆ ಅಂತ ಹೋಗ್ದೆಯಿರೋಕೆ ಆಗತ್ತ…?ಸಂಬಂಧ ಅಲ್ವ….? ಹಾಗೆಲ್ಲ ಮಾಡಕ್ಕಾಗತ್ತ..?

ಸಿಧ್ದಾರ್ಥ :          ಸದ್ಯ ಅಲ್ಲೊಬ್ರು ,ಇಲ್ಲೊಬ್ರು ಇದ್ದೀರಲ್ಲ…! ಮೊನ್ನೆ ಫೇಸ್ ಬುಕ್ ನಲ್ಲಿಒಂದು ಪೋಸ್ಟ್ ನೋಡ್ದೆ ಸರ್ ಹುಡುಗ-ಹುಡುಗಿ ನಿಶ್ಚಿತಾರ್ಥಾನinternetನಲ್ಲೆ ಮಾಡ್ಕೊಂಡಿದ್ದಾರೆ, ಇಬ್ರು ತಂದೆ-ತಾಯಿನು ಬಂಧು-ಬಳಗಾನ ಕರ್ಸಿ projector ಹಾಕಿ ಹುಡುಗ-ಹುಡೀಗೀನ ತೋರ್ಸಿ ತಟ್ಟೆಬದಲಾಯಿಸಿ ಕೊಂಡಿದ್ದಾರೆ. ಜನ ಬೇಸರ ಮಾಡ್ಕೊಳ್ದೆ ಶಿಸ್ತಾಗಿ ಎದ್ದು ನಿಂತು ಚಪ್ಪಾಳೆ ಹೊಡ್ದಿರ್ತಾರೆ ಅನ್ನೋದು ನನ್ನ ನಂಬಿಕೆ.

ಬರ್ಟನ್ :         (ಜೋರಾಗಿ ನಕ್ಕು) ಇನ್ನು ಈ ಕಣ್ಣಲ್ಲಿ ಏನೇನು ನೋಡ್ಬೇಕೊ…? ಜನವಿದ್ಯೆ ಕಲ್ತ್ರು, ಬದ್ಕದ್ ಕಲಿಲಿಲ್ಲ,

ಸಿಧಾರ್ಥ :         ಮನೇನಲ್ಲಿ , ಸ್ಕೂಲ್ ನಲ್ಲಿ,ಕಾಲೇಜ್ ನಲ್ಲಿ ಬದುಕಿನ ಮೌಲ್ಯಾನ ಹೇಳಿಕೊಡೋರು ಇದ್ರೆ ತಾನೆ ….?

ಬರ್ಟನ್ :          ಅದು ಸರಿ ….. ಮನೇಲಿ ಯಾರು ಇದ್ದ ಹಾಗ್ ಇಲ್ಲ…?

ಸಿಧ್ದಾರ್ಥ :           ಹ್ಹ…ಹ್ಹ… ನಾನು ಹೇಳಿದ್ದು, ನೀವು ಉತ್ತರ ಕೊಟ್ಟಿದ್ದು ,ಈಗ ನೀವುಮನೇಲಿ ಯಾರು ಇಲ್ವ ಅಂತ ಕೇಳ್ತಿರೋದ ಎಲ್ಲ ಹೆಂಗೆ ಸಿಂಕ್ಆಯ್ತಲ್ವ…?

ಬರ್ಟನ್ :           (ನಗ್ತಾರೆ)

ಸಿಧ್ದಾರ್ಥ :          ಈಗ ಒಂದು ಸ್ವಲ್ಪ ಹೊತ್ತಿಗೆ ಮುಂಚೆ ಒಂದು ಸಣ್ಣ ಸಂಗೀತ ಕಛೇರಿನಡೀತು ಮನೆನಲ್ಲಿ, ಕಛೇರಿ ಮುಗಿಯಲ್ಲ ಅಂತ ಗೊತ್ತಾದ ಮೇಲೆ ಹೊರಗೆಹೋದ್ರು.(ನಗ್ತಾನೆ)

ಬರ್ಟನ್ :           (ಸಣ್ಣ ಕೋಪ) ದೊಡ್ಡೋರು ಏನೊ ಹೇಳ್ತಾರೆ, ಕೇಳ್ಕೊಂಡು ಇರಕ್ಕೆಏನೋ ನಿಂಗೆ ..? ಯಾವಾಗ್ಲು ಅವರಿಗೆ ಯಾಕೆ ಬೇಜಾರ್ ಮಾಡತ್ಯ…?ವಯಸ್ಸಾಗಿದೆ ಅವರಿಗೆ.

ಸಿಧ್ದಾರ್ಥ :          ನಾನು ವಯಸ್ಸಿಗೆ ಬಂದಿದ್ದೀನಿ….  ವಯಸ್ಸಿಗೆ ಬಂದಿರೋ ಮಗನ ಹತ್ರಹೇಗೆ ನಡ್ಕೊಬೇಕು ಅಂತ ಗೊತ್ತಾಗಲ್ಲ, ಆಚಾರ ,ಸಂಪ್ರದಾಯನಿಯಮಗಳನ್ನ ಹೇಳಕ್ಕೆ ಬಂದ್ರೆ ಕೇಳ್ಬಿಡ್ಬೇಕ…? ಆಗಲ್ಲ…! ಅಲ್ಲ ಸರ್ , ನಮ್ಮಪ್ಪ ಅಮ್ಮಂಗೆ ಅವರು ಯಾಕೆ ಈ ಆಚರಣ ಮಾಡ್ತಾಯಿದ್ದೀವಿ, ಈ ನಿಯಮಗಳ ಉದ್ದೇಶ ಏನು …? ಏನು ಗೊತ್ತಿಲ್ಲ , ಸುಮ್ಮನೆ ಕುರುಡರ ತರ ಬದುಕ್ತಾಯಿದ್ದಾರೆ, ಅವರಿಗೆ ಅದು ಯಾಕೆ ಹೀಗೆ ..? ಇದು ಯಾಕೆ ಹಾಗೆ ಅಂತ ತಿಳ್ಕೊಳ್ಳೊ ಪ್ರಯತ್ನಾನು ಮಾಡಲ್ಲ, ಮನಸ್ಸು ಇಲ್ಲ, ನಾನು ಯಾಕ್ ಹಾಗೆ…? ಯಾಕಿ ಹೀಗೆ ಅಂತ ಕೇಳುದ್ರು..? ಬೈತ್ತಾರೆ… ಅವರಿಗೆ ವಿಷಯ ಗೊತ್ತಿಲ , ನನಗೆ ಆಚರಣೆ ಮಾಡು ಅಂತ್ತಾರೆ, ನಾನು ಕೇಳಲ್ಲ ಬರ್ಟನ್ ಸರ್…!

ಬರ್ಟನ್:            ನಿನ್ನ ಸಮಸ್ಯೆ ಏನೋ.. ಸಿಧ್ದಾರ್ಥ ….? ಯಾರು ಏನು ಹೇಳುದ್ರುಸರಿಯಿಲ್ಲ ಅಂತ್ಯಾ, ಎದುರು ಮಾತಾಡತ್ಯಾ…! ನೀನೊಬ್ಬ ಮಾತ್ರಸರಿಗಿರೋದ…?

ಸಿಧ್ದಾರ್ಥ :           ಇದೆ…ಇದೆ.. ನಾನು ಸರಿ ಇಲ್ಲ ಅನ್ನೋದು…. ಯಾವುದೊ ನೀತಿನಿಯಮ ಹೇಳ್ತೀರಿ ..! ಯಾಕೆ ಪಾಲಸಿಬೇಕು ಅಂತ ಕೇಳುದ್ರೆ ..? ನಿಮ್ಮ ಹತ್ರಉತ್ತರ ಇಲ್ಲ ನಾನು ಎದುರು ಮಾತಾಡ್ತೀನಿ ಅನ್ಸತ್ತೆ…. ನಾನು ಎದುರುಮಾತಾಡ್ತಾಯಿಲ್ಲ..! ಪ್ರಶ್ನೆ ಕೇಳ್ತಾಯಿದ್ದೀನಿ ತಿಳ್ಕೊಳಕ್ಕೆ ಅಂತ… ಅದಕ್ಕೆನಿಮ್ಮ ಪೀಳಿಗೆ ಅವರ ಹತ್ರ ಉತ್ತರ ಇಲ್ಲ , ದೊಡ್ಡೋರು ಹೇಳಿದ್ದಿನ್ನಯಾಕೆ ಏನು ಅಂತ ಪ್ರೆಶ್ನೆ ಮಾಡ್ಬಾರ್ದು, ಹೇಳಿದ್ದಿನ್ನ ಮಾಡ್ಬೇಕು ಅಂತಗದರ್ತೀರ..!

ಬರ್ಟನ್:            (ಸಮಾದಾನವಾಗಿ) ನಿನ್ನ ಪ್ರಶ್ನೆ ಏನು ಅಂತ ನನಗೆ ಚನ್ನಾಗಿ ಗೊತ್ತು, ಈಧರ್ಮಗಳು ಯಾಕೆ ಬೇಕು , ಎಲ್ಲಾ ಬಿಟ್ಟು ಮನುಷ್ಯನೆ ಒಂದು ಧರ್ಮಅಂತ ಯಾಕೆ ಬದುಕ್ ಬಾರ್ದು ಅಂತ ತಾನೆ..?

ಸಿಧ್ದಾರ್ಥ :          (ಏನು ಮಾತಾಡದೆ ಬಟ್ಟೆ ಹೊಲಿಯಲು ಮುಂದಾಗ್ತಾನೆ)

ಬರ್ಟನ್ ;           ದೇವನೊಬ್ಬ ನಾಮ ಹಲವು ಕಣೊ ಸಿಧ್ದಾರ್ಥ …

ಸಿಧ್ದಾರ್ಥ :          ಅದಕ್ಕೆ ಮನುಷ್ಯ ಹಲವಾರು ತರ ಕಿತ್ತಾಡ್ತಾಯಿರೋದು.

ಬರ್ಟನ್ :          ಅದು ಮನುಷ್ಯ ಮಾಡೊ ಹುಚ್ಚಾಟ..

ಸಿಧ್ದಾರ್ಥ :         ಅಲ್ಲ…

ಬರ್ಟನ್ ;          ನಿಂದೊಳ್ಳೆ ಚೆನ್ನಾಯ್ತು ಇದಕ್ಕೆ ದೇವರು ಹೇಗೆ ಕಾರ್ಣ ಆಗ್ತಾನೊ..?

ಸಿಧ್ದಾರ್ಥ :          ಈ ಭೂಮಿ ಮೇಲೆ ಒಂದು ಹುಲ್ಲು ಕಡ್ಡಿ ಅಲ್ಲಾಡಬೇಕು ಅಂದ್ರು ಆಪರಮಾತ್ಮನ ಕೃಪೆಯಿರ್ಬೇಕು ಅಂತ ನೀವು ದೊಡ್ಡೋರೆ ಹೇಳಿದ್ದು.

ಬರ್ಟನ್ :          ಅಯ್ಯೊ ಕಥೆ ಕಣೊ ನಿನ್ನದು, ಹೌದು ಅಂದ್ರೆ ಇದೆಲ್ಲ ದೇವರ ಆಟಅಂತ್ಯ , ಇಲ್ಲ ಅಂದ್ರೆ ಇಲ್ದೇಯಿರೊ ದೇವರಿಗೋಸ್ಕರ ಯಾಕೆ ಕಿತ್ತಾಡ್ತಾರೆಅಂತ್ಯ…! ಅಲ್ಲಿಗೆ ನಿನ್ನ ಪ್ರಕಾರ ದೇವರು ಇಲ್ಲ… ಅಲ್ವ…?

ಸಿಧ್ದಾರ್ಥ :         ದೇವರು ಇಲ್ಲ ಅಂತ ನಾನು ಎಲ್ಲಿ ಹೇಳ್ದೆ..? ದೇವರಿದ್ದಾನೆ ಅವನುಇರೋದ್ರಿಂದಾನೆ ಎಲ್ಲಾ… ಅವನಿಂದಾನೆ ಎಲ್ಲಾ…(ಆಕ್ರೋಶದಲ್ಲಿ)

ಬರ್ಟನ್  :         ಜನ ಆಯ ಧರ್ಮಗಳಲ್ಲಿ ಚನ್ನಾಗೆ ಇದ್ದಾರೆ … ನೀನ್ಯಾಕೆ ಸರಿಯಿಲ್ಲಅಂತ ಇದ್ಯ…?

ಸಿಧ್ದಾರ್ಥ :          ನನಗೆ ಒಬ್ಬ ಫ್ರೆಂಡ್ ಇದ್ದ ಸರ್, ಅಮ್ಮನೋರ ಬೆಟ್ಟೆಕ್ಕೆ ನಮ್ಮೆಲ್ರು ಜೊತೆಬರ್ತಾಯಿದ್ದ ಆದ್ರೆ ದೇವಸ್ಥಾನಕ್ಕೆ ಬರ್ತಾಯಿರಲಿಲ್ಲ, ಕನಿಷ್ಟ ಪಕ್ಷಪ್ರಸಾದಾನು ತಿನ್ತಾಯಿರಲಿಲ್ಲ , ಕೇಳುದ್ರೆ ನಮ್ಮ ಮನೇಲಿ ಬೈತ್ತಾರೆಅಂತ್ತಿದ್ದ. ಬೆಟ್ಟ ಏರೊ ಖುಷಿಗೆ ಅಷ್ಟೆ ಅವನು ನಮ್ಮ ಜೊತೆಬರ್ತಾಯಿದ್ದಿದ್ದು. ಇನ್ನೊಂದು ಮಾತು ಹೇಳ್ತೀನಿ  ತಪ್ಪು ತಿಳ್ಕೊಬೇಡಿ ಸರ್ಆ ನನ್ನ ಫ್ರೆಂಡ್ ಒಬ್ಬ ಕ್ರಿಶ್ಚಿಯನ್…

ಬರ್ಟನ್ ;           (ಅಸಹನೆ) ಊರಿನ ಗ್ರಾಮ ದೇವತೆ ದೇವಸ್ಥಾನದ ಸದಸ್ಯ ನಾನು…!

temple

(ನಕ್ಕು) ಅದಕ್ಕೆ ಸರ್ ಹೇಳಿದ್ದು … ತಪ್ಪುತಿಳ್ಕೊಬೇಡಿ ಅಂತ.

ಸಿಧ್ದಾರ್ಥ :          ನೀವು ಶಾಂತಿಯಿಂದ್ದ ಇದ್ದ ಹಾಗೆ,ನೆಮ್ಮದಿಯಿಂದ್ದ ಇದ್ದ ಹಾಗೆ ಎಲ್ಲಾನು ಪ್ರೀತಿಯಿಂದ ಸ್ವಾಗತಿಸಿದ ಹಾಗೆ,ಎಲ್ಲಾ ಧರ್ಮಗಳ ಎಲ್ಲಾ ಜನ ಹಾಗೆ ಇದ್ದಾರೆ ಅಂತ ಅನ್ಕೊಬೇಡಿ…..!ನಮ್ಮ ಅಪ್ಪ-ಅಮ್ಮ ಕೂಡ ಅದಕ್ಕೆ ಹೊರತಾಗಿಲ್ಲ…

ಬರ್ಟನ್ :          ನಿಜ … ಆದ್ರೆ ಅದಕ್ಕೆ ದೇವರು ಹೇಗೆ ಕಾರಣ ಆಗ್ತಾನೆ…?

ಸಿಧ್ದಾರ್ಥ :          ಅವನು ಒಂದು ಧರ್ಮ ಆಗ್ದೆ ಹಲವಾರು ಧರ್ಮ ಆಗಿಕೂತಿರೋದ್ರಿಂದಾನೆ ಧರ್ಮದ ಹೆಸರಿನಲ್ಲಿ,ಬೇದ ಭಾವ, ಹೊಡೆದಾಟ,ಕೋಮು ಗಲಭೆಗಳೆಲ್ಲ ಆಗ್ತಾಯಿರೋದು. ಅದಕ್ಕೆ ನಾನು ಹೇಳಿದ್ದು

(ದೇವರ ವಿಗ್ರಹ ಇದ್ದ ಕಡೆಗೆ ತಿರುಗಿ)

ನೀನೆ ಎಲ್ಲಾ ನಿನ್ನಿಂದಾನೆ ಎಲ್ಲಾ ಅಂತ….!KRISHNA

ಬರ್ಟನ್ ;          (ಎದ್ದು ಹೋಗಿ ಗಂಭೀರವಾಗಿ ನಿಲ್ಲುತ್ತಾರೆ) ನಿಜ ಸಿಧ್ದಾರ್ಥ, ನಾನು ನಿನ್ನಮಾತನ್ನ ಒಪ್ತೀನಿ… ಜಗತ್ತಿನ ಎಲ್ಲಾ ಮೂಲೆಗೂ ಬದುಕಿನ ಮೌಲ್ಯಾನತಿಳಿಸೋದಕ್ಕೆ ಹಲವು ಧರ್ಮಗಳಾಗಿ ದೇವರು ಭೂಮಿ ಮೇಲೆ ನೆಲಸಿದ್ದಾನೆಅಂತ ನಾನು ನಂಬಿದ್ದೀನಿ , ಕಚ್ಚಾಡಿ ಹೊಡೆದಾಡಿ ಅಂತ ನಮ್ಮ ಬೈಬಲ್ನಲ್ಲು ಹೇಳಿಲ್ಲ, ನಮ್ಮ ಧರ್ಮಾನೆ ಶ್ರೇಷ್ಠ ಅಂತ ತಿಳ್ಕೊಳ್ಳಿ ಅಂತ ಹಿಂದುಧರ್ಮಾನು ಹೇಳಿಲ್ಲ, ಪ್ರಪಂಚದಲ್ಲಿ ಎಲ್ಲಾ ಧರ್ಮ ನಾಶ ಮಾಡಿ ಮುಸ್ಲಿಂ ಧರ್ಮ ಒಂದೆ ಇರ್ಬೇಕು ಅಂತ ಕುರಾನ್ ನಲ್ಲು ಹೇಳ್ಳಿಲ್ಲ,

ಸಿಧ್ದಾರ್ಥ :         (ಸಿಧಾರ್ಥ ಬರ್ಟನ್ ಸರ್ ಎದುರು ಬಂದು) ಧರ್ಮಗಳು ಒಳ್ಳೇದೆ ಹೇಳಿದೆ, ಜನ ಅಧರ್ಮದಲ್ಲಿ ನಡ್ಕೊತ್ತಾಯಿದ್ದಾರೆ ಅಂತ ಆಯ್ತು….

ಬರ್ಟನ್ ;         ನಿಜ…! ಮನುಷ್ಯ ಅಲ್ಪ ಜ್ಞಾನಿ ಆದ್ರೆ , ದೇವರು ಏನು ಮಾಡ್ತಾನೆ ಹೇಳು…

ಸಿಧ್ದಾರ್ಥ :        ಭೂಮಿ ಮೇಲೆ ಏನೆ ಕ್ರಿಯೆಗಳು ಆಗ್ಬೇಕಾದ್ರು ದೇವರು ಪ್ರೇರಣೆ ಆಗ್ಲೆ ಬೇಕು ತಾನೆ…? ಇದ್ಯಾವುದು ಅವನ ಅಪ್ಪಣೆ ಇಲ್ದೆ ನಡಿತ್ತಾಯಿಲ್ಲ ಅಲ್ವ… ಹಾಗಾದ್ರೆ…? ಬೇರೆ ,ಬೇರೆ ಧರ್ಮಗಳಾಗಿ ಕೂರೊ ಅವಶ್ಯಕತೆ ಅವನಿಗೇನಿತ್ತು….? ಧರ್ಮಾನ ರಚನೆ ಮಾಡ್ದೋನಿಗೆ ಗೊತ್ತಿರಲಿಲ್ವ….? ಮುಂದೆ ಮನುಷ್ಯ… ಧರ್ಮದ ಹೆಸರಲ್ಲಿ ಕಿತ್ತಾಡೋ ಹಾಗೆ ಆಗತ್ತೆ ಅಂತ…? ಎಲ್ಲಾ ಅವನಿಗೆ ಗೊತ್ತು, ಗೊತ್ತಿದ್ದು ಜೀವಗಳ ಜೊತೆ ಆಟ ಆಡ್ತಾಯಿದ್ದಾನೆ ಅವನು , ಅದಕ್ಕೆ ಹೇಳಿದ್ದು..

ಸಿಧ್ದಾರ್ಥ :        (ತನ್ನ ಮುಂದಿದ್ದ ದೇವರ ವಿಗ್ರಹವನ್ನು ನೋಡುತ್ತ) ನೀನೆ ಎಲ್ಲಾ , ನಿನ್ನಿಂದಾನೆ ಎಲ್ಲಾ…..!two guys

ಬರ್ಟನ್ :         ಪ್ರಪಂಚದಲ್ಲಿ ಏಕ ಕಾಲದಲ್ಲೆ ದೇವರು ಎಲ್ಲಾ ಕಡೆ ಇರ್ಬೋದು, ಆದ್ರೆ ಮನುಷ್ಯ ಇರಕ್ಕಾಗಲ್ಲ, ನಮ್ಮ ದೇಶದಲ್ಲಿ ನಡೆದ ರಾಮಾಯಣ,ಮಹಾಭಾರತ ಒಟ್ಟಿಗೆ ಇಡಿ ಜಗತ್ತಿನ ಎಲ್ಲಾ ಕಡೆ ಏಕ ಕಾಲದಲ್ಲೆ ಸಂಭವಿಸಕ್ಕೆ ಆಗಲ್ಲ ಅಲ್ವ…?

ಸಿಧ್ದಾರ್ಥ :        (ಸುಮ್ಮನೆ ನಿಲ್ಲುತ್ತಾನೆ)

ಬರ್ಟನ್ :        ಪ್ರಪಂಚದ ಮೂಲೆ,ಮೂಲೆಗಳಲ್ಲಿ ಇರೊ ಎಲ್ಲಾ ಮನುಷ್ಯರನ್ನು ಎಚ್ಚರಿಸೊಕ್ಕೋಸ್ಕಾರನೆ, ಬೇರೆ ,ಬೇರೆ ಧರ್ಮದಲ್ಲಿ ಭಗವಂತ ಬಂದಿದ್ದಾನೆ ಅಂತ ನಾನು ನಂಬಿದ್ದೀನಿ, ಎಲ್ಲಾ ಧರ್ಮ ಹೇಳಿರೋದು ಒಂದೆ, ದೇವನೊಬ್ಬ ನಾಮ ಹಲವು ಅಂತ, ಜೀವ ಇರೊ ಪ್ರತಿ ಜೀವಿನಲ್ಲು ನಾನು ಇದ್ದೀನಿ ಅಂತ ಹೇಳಿದ್ದಾನೆ ಭಗವಂತ, ಅಂದ್ರೆ ದೇವರು ನನ್ನಲ್ಲು ಇದ್ದಾನೆ, ನಿನ್ನಲ್ಲು ಇದ್ದಾನೆ ಗುರುತ್ಸಕ್ಕಾಗದೆಯಿರೊ ಅವಿವೇಕಿಗಳು ನಾವಾಗಿದ್ದೀವಿ.

ಸಿಧ್ದಾರ್ಥ :        (ಮೌನ)

ಬರ್ಟನ್:         ನಿನ್ನ ಮಾತನ್ನ ನಾನು ಒಪ್ತೀನಿ…ಸಿಧಾರ್ಥ… ನೀನೆ ಎಲ್ಲಾ…. ನಿನ್ನಿಂದಾನೆ ಎಲ್ಲಾ….

ಸಿಧ್ದಾರ್ಥ :        (ಚಕಿತಗೊಂಡು ಬರ್ಟನ್ ಸರ್ ನ ನೋಡುತ್ತಾನೆ)

ಬರ್ಟನ್ :        ಅರ್ಥ ಆಯ್ತ ಸಿಧಾರ್ಥ ….?                                                   ಮನುಷ್ಯ……!   ನೀನೆ ಎಲ್ಲಾ… ನಿನ್ನಿಂದಾನೆ ಎಲ್ಲಾ….!

ಸಿಧ್ದಾರ್ಥ :       ಏನು ತೋಚದೆ ದೇವರನ್ನು ನೋಡುತ್ತ ನಿಲ್ಲುತ್ತಾನೆ, ಬರ್ಟನ್ ಸರ್ ನಕ್ಕು ದೇವರಿಗೆ ಕೈ ಮುಗಿದು ನಿಲ್ಲುತ್ತಾರೆ.religious symbols

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..