2369

ನೀರವ ರಾತ್ರಿ

ಅದು ೨೦೧೫ ರ ಬೇಸಿಗೆಯ ಒಂದು ದಿನ. ನಾನಾಗ ಮೈಸೂರ್ ಅಲ್ಲಿ ಎಂ.ಟೆಕ್. ಮಾಡ್ತಾ ಇದ್ದೆ. ನಾನು ಇಂಜಿನಿಯರಿಂಗ್ ಮುಗಿಸಿದ ಮೇಲೆ ಒಂದು ವರ್ಷ ಟೀಚಿಂಗ್ ಮಾಡಿ, ಆಮೇಲೆ ಎಂ.ಟೆಕ್. ಎಂಟ್ರನ್ಸ್ ಎಕ್ಸಾಮ್ ಬರೆದಿದ್ದು. ನಂಗೆ ಒಳ್ಳೆ rank ಕೂಡ ಬಂತು.

ಆಮೇಲೆ ಶುರುವಾಗಿದ್ದು ಯಾವ ಕಾಲೇಜು ಅಲ್ಲಿ ಎಂ.ಟೆಕ್. ಮಾಡೋದು ಅಂತ. ಇಲ್ಲಿರೋ ಎಲ್ಲ ಕಾಲೇಜು ಅಲ್ಲಿ ನಂಗೆ ಸೀಟ್ ಇತ್ತು. ಆದ್ರೆ ನಂಗೆ ಮೈಸೂರ್ ಅಂದ್ರೆ ಚಿಕ್ಕಂದಿನಿಂದ್ಲು ತುಂಬಾ ಇಷ್ಟ. ಸರಿ ಒಂದು ಒಳ್ಳೆ ಅವಕಾಶ ಸಿಕ್ತು ಅಂತ ಮೈಸೂರ್ ಅಲ್ಲಿ ಇರೋ SJCE ನ ಆಯ್ಕೆ ಮಾಡಿಕೊಂಡೆ.

ನಾನು ಕಾಲೇಜು ಸೇರೋ ಆವಾಗ್ಲೇ ಇಂಜಿನಿಯರಿಂಗ್ ಕೋರ್ಸ್ ಎಲ್ಲ ಸ್ಟಾರ್ಟ್ ಆಗಿತ್ತು. ಹಾಗಾಗಿ ನನಗೆ ಕಾಲೇಜು ಲೇಡೀಸ್ ಹಾಸ್ಟೆಲ್ ಅಲ್ಲಿ ಸೀಟ್ ಸಿಗಲಿಲ್ಲ. ಸರಿ ನನ್ನ ವಾಸ್ತವ್ಯದ ಹುಡುಕಾಟ ಶುರು ಆಯಿತು. ಮೈಸೂರ್ ನನಗೆ ತುಂಬಾ ಅಂದ್ರೆ ತುಂಬಾ ಹೊಸ್ತು. ನನ್ನ ಒಬ್ಬ ಕಸಿನ್ ಅಲ್ಲಿ ಓದ್ತಾ ಇದ್ದ ಅನ್ನೋದು ಬಿಟ್ರೆ ನನಗೆ ಇನ್ಯಾರು ಪರಿಚಯನೇ ಇರ್ಲಿಲ್ಲ.

ಊರಿನ ಪ್ರತೀ ಬೀದಿನು ನಂಗೆ ಹೊಸ್ತು. ನಂಗೆ ಗೊತ್ತಿರೋ ಹಾಗೆ ಅಲ್ಲಿ ಪ್ರೈವೇಟ್ ಹಾಸ್ಟೆಲ್ ಅಂತ ಯಾವುದೂ ಇರ್ಲಿಲ್ಲ. ಸೋ ನಾನು ಎಲ್ಲಾದ್ರೂ ಪಿ.ಜಿ ಹುಡ್ಕಿಕೊಳ್ಳೋದು ಅನಿವಾರ್ಯ ಆಗಿತ್ತು. ನಾನು ಪಿ. ಜಿ ಹುಡ್ಕಿದ್ದು, ಈವಾಗ ಇರೋ ಪಿ. ಜಿ ಗೆ ಬಂದು ಸೇರಿದ್ದು ಒಂದು ದೊಡ್ಡ ಕಥೆ. ಬಹುಶ ಅದನ್ನು ಇನ್ನೊಂದ್ ಸಲ ಹೇಳ್ತಿನಿ.

ಈಗಿರೋ ಪಿ.ಜಿ ನಿಜ ಅಂದ್ರೆ ಒಂದು ತ್ರೀ ಫ್ಲೋರ್ ಮನೆ. ಅದರ ಮೇಲೆರಡು ಅಂತಸ್ತನ್ನ ಚಿಕ್ಕ ಚಿಕ್ಕ ಕೊಣೆಗಳನ್ನಾಗಿ ಮಾಡಿದ್ರು. ಇದ್ದಿದ್ರಲ್ಲಿ ಸ್ವಲ್ಪ ದೊಡ್ಡ ಕೋಣೆ ಅಂದ್ರೆ ನಮ್ದು. ಹಾಗಾಗಿ ಅಲ್ಲಿ ಇಬ್ಬರು ಶೇರ್ ಮಾಡ್ಬೇಕಿತ್ತು. ನಂಗೆ ಸಿಕ್ಕಿದ ರೂಮ್ಮೇಟ್ ತುಂಬಾ ಒಳ್ಳೆವಳು. ಅವ್ಳು ನಂದೇ ಕಾಲೇಜು ಅಲ್ಲಿ M.B.A ಮಾಡ್ತಾ ಇದ್ಲು.

ನಮ್ಮಿಬ್ರ ಜೊತೆಯಾಗಿನ ಜೀವನ ಅಲ್ಲಿಂದ ಸ್ಟಾರ್ಟ್ ಆಯ್ತು. ದಿನಗಳು ತುಂಬಾ ಚೆನ್ನಾಗಿ ಕಳೀತಾ ಇತ್ತು. ಪ್ರತಿ ದಿನಾನೂ ನೆನಪಿಟ್ಕೊಳ್ಳೋ ಅಂತ ದಿನಗಳವು. ಪ್ರತಿಯೊಂದು ಘಟನೇನೂ ಒಂದೊಂದು ಕಥೆ. ಅದ್ನೇಲ್ಲ ಮುಂದೆ ಶೇರ್ ಮಾಡ್ತೀನಿ. ಹೀಗೇ ಇರ್ಬೇಕಾದ್ರೆ ಒಂದಿನ ಇದೊಂದು ಘಟನೆ ನಡೀತು.

ನಂಗೆ ನೆನಪಿರೋ ಹಾಗೆ ನಾನು ಅತ್ಯಂತ ಭಯ ಪಟ್ಟ ದಿನ ಅದು. ಆಗ್ಲೇ ಹೇಳಿದಹಾಗೆ ಅದು ಬೇಸಿಗೆಯ ದಿನ. ಮೈಸೂರ್ ಅಲ್ಲಿ ಬೇಸಿಗೆ ತುಂಬಾ ವಿಪರೀತ. ಅವತ್ತು ರಾತ್ರಿ ಊಟ ಮಾಡಿ ಮಾಲ್ಗಿದ್ವಿ. ನಮ್ಮ ರೂಮ್ ಬಗ್ಗೆ ಸ್ವಲ ಹೇಳ್ತಿನಿ ಇಲ್ಲೇ. ಅದೊಂದು ಸಿಂಗಲ್ ರೂಮ್, ಜೊತೆಗೆ attached ಬಾತ್ರೂಮ್. ಮಧ್ಯ ವಾರ್ಡ್ರೋಬ್ ಮತ್ತೆ ಚಿಕ್ಕ kitchen. ಅವಳ ಬೆಡ್ entrance ಡೋರ್ ಹತ್ರ ಇದ್ರೆ ನನ್ನ ಬೆಡ್ kitchen ಪಕ್ಕ ಇತ್ತು.

ಆಗ ಮಧ್ಯ ರಾತ್ರಿ ಕಳೆದು ಸುಮಾರ್ ಹೊತ್ತಾಗಿತ್ತು. ಇಬ್ರು ತುಂಬಾ ಘಾಡವಾಗಿ ನಿದ್ರೆ ಮಾಡ್ತಾ ಇದ್ವಿ. ಸುಮಾರು ೨ ಗಂಟೆ ಆಸುಪಾಸು ಇರಬಹುದು. ನಂಗೆ ಇದ್ದಕಿದ್ದ ಹಾಗೆ ಎಚ್ಚರ ಆಯ್ತು. ಸುತ್ತಲೂ ತುಂಬಾ ಕತ್ತಲು. ನೀರವ ಮೌನ. ಬಿಟ್ರೆ ದೂರದಲ್ಲಿ ಕೂಗ್ತಾ ಇರೋ ನಾಯಿಗಳ ಸದ್ದು. ಸ್ವಲ್ಪ ಹೊತ್ತು ಅದನ್ನೇ ಕೇಳ್ತಿಸ್ಕೊಳ್ತಿದ್ದ ನನ್ನ ಮನಸಲ್ಲಿ ಸಣ್ಣಗೆ ಅಳುಕು ಶುರು ಆಯ್ತು.

ಏನೇ ಮಾಡಿದ್ರು ನಿದ್ದೆ ಬರೋ ಯಾವ ಲಕ್ಷಣನೂ ಕಾಣಿಸ್ಲಿಲ್ಲ. ಅದ್ರ ಜೊತೆಗೆ ವಿಪರೀತ ಸೆಕೆ ಬೇರೆ. ಸರಿ ಹೋಗಿ ಮುಖ ತೊಳ್ಕೊಂಡು ಬರೋಣ ಅಂತ ಎದ್ದು bathroom ಕಡೆ ಹೋದೆ. ಬಾತ್ರೂಮ್ ಲೈಟ್ ಆನ್ ಮಾಡಿ ಒಳಗಡೆ ಹೋಗಿ, ಟ್ಯಾಪ್ ಇಂದ ನೀರ್ ಬಿಟ್ಟು ಮಗ್ ಅಲ್ಲಿ ನೀರ್ ತಗೊಂಡು ಮುಖ ತೊಳೀತಾ ಇದ್ದೆ. ಹೊರಗಡೆ ಇರೋ ಮೌನಕ್ಕಿಂತ ಮನ್ಸಲ್ಲಾಗ್ತಿರೋ ಭಯನೇ ನನ್ನ ನಡುಗೋ ಹಾಗೆ ಮಾಡ್ತಾ ಇತ್ತು. ಆಗ ತುಂಬಾ ವಿಚಿತ್ರವಾಗಿ ಒಂದು ಘಟನೆ ನಡೀತು. ಟ್ಯಾಪ್ ಇಂದ ಕೇಳಿಸ್ತಿದ್ದ ನೀರಿನ ಸದ್ದು ಇದ್ದಕ್ಕಿದ್ದ ಹಾಗೆ ನಿಂತೋಯ್ತು.

ಇದ್ಯಾಕೆ ನೀರು ನಿಲ್ತು ಅಂತ ನೋಡೋಕೆ ಕಣ್ಣು ಬಿಟ್ರೆ ಕಂಡಿದ್ದು ಫುಲ್ ಕತ್ತಲೆ. ಕರೆಂಟ್ ಯಾಕೆ ಹೋಯ್ತು ಅಂತ ಆಲೋಚನೆ ಮಾಡೋ ಅಷ್ಟ್ರಲ್ಲಿ ನನ್ನ ಕಾಲಲ್ಲಿ ನಡುಕ ಶುರು ಆಗಿತ್ತು. ಸರಿ ನೋಡೋಣ ಅಂತ ೧ ಹೆಜ್ಜೆ ಡೋರ್ ಹತ್ರ ಇಟ್ಟಿದ್ದೆ ತಡ ಡೋರ್ ಅದ್ರಷ್ಟಕ್ಕೆ ಕ್ಲೋಸ್ ಆಯಿತು. ಆದ್ರೆ ಅದು ಸುಮ್ನೆ ಗಾಳಿಗೆ ಕ್ಲೋಸ್ ಆದ ಹಾಗೆ ಇರ್ಲಿಲ್ಲ. ಯಾವ್ದೋ ಒಂದು ಬಲದಲ್ಲಿ ಎಳೆದ ಹಾಗೆ ಇತ್ತು. ಅಲ್ಲಿಗೆ ನನ್ನ ಗಂಟಲು ಒಣಗೋಕೆ ಶುರು ಆಯ್ತು. ಆದ್ರೂ ಜೋರಾಗಿ ಗಾಳಿ ಬೀಸಿರಬೇಕು ಅಂತ ಧೈರ್ಯ ತಗೊಂಡು, ಡೋರ್ ಹ್ಯಾಂಡ್ಲರ್ ಹಿಡ್ಕೊಂಡು ಎಳೆದೆ.

ಅಲ್ಲಿಗೆ ನನ್ನ ಮನಸ್ಸಲ್ಲಿದ್ದ ಕಟ್ಟ ಕಡೆಯ ಧೈರ್ಯನೂ ಉಡುಗಿ ಹೋಯ್ತು. ಯಾಕೆಂದ್ರೆ ನಾ ಎಷ್ಟೇ ಬಲ ಹಾಕಿದ್ರು ಆ ಡೋರ್ ಓಪನ್ ಆಗ್ತಿರ್ಲಿಲ್ಲ. ಇನ್ನೇನು ನನ್ನ ತಲೆ ಸುತ್ತಿ ಬಿದ್ದೆ ಬೀಳ್ತಿದ್ದೀನಿ ಅಂತ ಅಂಸೋಕ್ಕೆ ಶುರು ಆಯಿತು. ಇನ್ನೆರಡು ಸಲ ಕಷ್ಟದಿಂದ ಇರೋ ಶಕ್ತಿನೆಲ್ಲ ಹಾಕಿ ಬಾಗಿಲು ಬಡಿದೆ. ಜೊತೆಗೆ ಆದಷ್ಟು ಗಟ್ಟಿಯಾಗಿ ಕಿರುಚಿದೆ. ನನ್ನ ರೂಮೇಟ್ಗೆ ಅದು ಹೇಗಾದ್ರು ಕೇಳಿಸ್ಲಿ ಅಂತ.
ಮನಸಲ್ಲಿ ಇರೋ ದೇವರನೆಲ್ಲ ನೆನಪು ಮಾಡ್ಕೊಂಡು ಕಾಪಾಡು ದೇವರೇ ಅಂತ ಬೇಡ್ಕೊಳ್ತಿದ್ದೆ.

ಆಗ ಇದ್ದಕ್ಕಿದ್ದಂತೆ ಡೋರ್ ಓಪನ್ ಆಯಿತು. ದೇವರೇ ಅಂತ ತೆಗೆದು ನೋಡಿದ್ದೇ ನನ್ನ ಇಡೀ ಮೈ ನಡುಗಿ ಹೋಯ್ತು . ಕಿಟಕಿ ಇಂದ ಒಳಗಡೆ ಬರ್ತಿದ್ದ ಬೀದಿ ದೀಪದ ಬೆಳಕಲ್ಲಿ, ನನಗೆ ಕಾಣಸಿದ್ದು ಬಾಗಿಲಿನಿಂದ ೨ ಇಂಚು ದೂರದಲ್ಲಿ ನಿಂತಿದ್ದ ಒಂದು ಆಕೃತಿ ಜೊತೆಗೆ ಚೀರಾಟ.

ಅದನ್ನ ನೋಡಿ ನನ್ನ ಹೃದಯ ನಿಂತ ಹಾಗೆ ಆಯಿತು. ಗಂಟಲಿಂದ ಎಷ್ಟು ಸಾದ್ಯನೋ ಅಷ್ಟು ದೊಡ್ಡ ಕೂಗು ಹೊರಗಡೆ ಬಂತು. ಇನ್ನೇನು ಬಿದ್ದೇ ಬೀಳ್ಬೇಕು, ಅಷ್ಟ್ರಲ್ಲಿ ಬಾತ್ರೂಮ್ ಲೈಟ್ ಆನ್ ಆಯಿತು. ನಂಗೆ ಮುಂದೆ ಆ ಆಕೃತಿಯ ಜಗದಲ್ಲಿ ಕಾಣಸಿದ್ದು ನನ್ನ ರೂಮೇಟ್….

ಮುಂದಿನ ಎರಡು ಕ್ಷಣ ನಮ್ಮಿಬ್ರಿಗೂ ಸುಧಾರಿಸ್ಕೊಳ್ಳಿಕ್ಕೆ ಬೇಕಾಯ್ತು. ಸರಿಯಾಗಿ ನೀರು ಕುಡಿದು ನಾ ಅವಳಿಗೆ ಕೇಳಿದೆ ಏನಾಯ್ತು ಅಂತ. ಅವ್ಳಿಗ್ಗು ನನ್ನಷ್ಟೇ ಶಾಕ್ ಆಗಿತ್ತು. ಆಮೇಲೆ ಅವಳಿಂದ ನನಗೆ ಗೊತ್ತಾಗಿದ್ದಿದು, ತುಂಬಾ ಸೆಕೆಗೆ ನಿದ್ದೆಯಿಂದ ಅವ್ಳಿಗೂ ಎಚ್ಚರ ಆಗಿದೆ. ನೋಡಿದ್ರೆ ಬಾತ್ರೂಮ್ ಇಂದ ಲೈಟ್ ಕಾಣಿಸ್ತಿದೆ. ಸೊ ಅವ್ಳು ನಿದ್ದೆ ಕಣ್ಣಲ್ಲೇ ಎದ್ದು ಲೈಟ್ ಆಫ್ ಮಾಡೋಕೆ ಬಂದಿದಾಳೆ. ಲೈಟ್ ಆಫ್ ಮಾಡಿದ್ಮೇಲೆ ಅವ್ಳಿಗೆ ಟ್ಯಾಪ್ ಇಂದ ನೀರ್ ಸೋರ್ತಾ ಇರೋದು ಕೇಳ್ಸಿದೆ. ಹಾಗಾಗಿ ಟ್ಯಾಪ್ ಆಫ್ ಮಾಡಿ ಬಾಗ್ಲು ಹಾಕಿದ್ದಾಳೆ. ಅವ್ಳಿಗೆ ನಿದ್ದೆ ಕಣ್ಣಲ್ಲಿ ನಾನು ಎದ್ದಿದೀನಿ ಬಾತ್ರೂಮ್ ಅಲ್ಲಿ ನಿಂತಿದೀನಿ ಅಂತ ಕನಸಲ್ಲೂ ಅನ್ನಿಸಿರೋಕೆ ಸಾಧ್ಯ ಇರ್ಲಿಲ್ಲ. ನಂಗೆ ಎಷ್ಟು ಶಾಕ್ ಆಗಿತ್ತೋ ಅವ್ಳಿಗೂ ಅಷ್ಟೇ ಶಾಕ್ ಆಗಿತ್ತು ಬಾಗಿಲು ಹಾಕಿದ ತಕ್ಷಣ ಒಳಗಡೆಯಿಂದ ಚೀತ್ಕಾರ ಕೇಳಿ. ಅವಳೂ ನಿಂತಲ್ಲೇ ನಡುಗಿ ಹೋಗಿದ್ಲು .

ಅಂತೂ ತಡ ರಾತ್ರಿಯ ಆ ಭಯಾನಕ ಅನುಭವ ಸುಖಾಂತ್ಯದಲ್ಲಿ ಕೊನೆಯಾಯ್ತು. ಈಗ ನೆನಪಿಸಿಕೊಂಡರೆ ಬಿದ್ದೂ ಬಿದ್ದೂ ನಗು ಬರೋ ಈ ಘಟನೆ ಆವತ್ತು ನಮ್ಮಿಬ್ಬರ ಚಳಿ ಬಿಡಿಸಿದ್ದಂತೂ ನಿಜ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..