609

Nokia 6 phone ಬಗ್ಗೆ ನಿಮಗೆ ತಿಳಿದಿರಬೇಕಾದ ಅಂಶಗಳು

ನಮ್ ಹುಡುಗರಲ್ಲಿ ಹೆಚ್ಚು ಕಮ್ಮಿ ಎಲ್ಲಾ ವೆರೈಟಿಯವರು ಇದ್ದಾರೆ. ಆ ಕಡೆ 1st Rank ರಾಜು ಇಂದ ಈ ಕಡೆ ಲಾಸ್ಟ್ ಬೆಂಚ್ ಕರ್ಣ, ಡಾ. ಹರೀಶ್, ಮುಂಗಾರು ಮಳೆ ನಂದಿನಿ, ಪರಂದಾಮಯ್ಯ ಊರ್ ಬಾಗ್ಲು, ನಾನು, ಡೈರೆಕ್ಟರ್ ಸೂರ್ಯ, ನಾರ್ಕೋಸ್‌ ಪಾಬ್ಲೋ‌ ಎಸ್ಕೋಬರ್ ವರೆಗೂ ಎಲ್ಲಾ ವ್ಯಕ್ತಿತ್ವದರು‌ ಇದ್ದಾರೆ. ಕೆಲವರು ಕ್ರಿಕೆಟ್ ಆಡ್ಕೊಂಡು ದೊಡ್ಡವರಾದರು, ಕೆಲವರು ದೊಡ್ಡವರ ಸಿನಿಮಾ (?) ನೋಡ್ಕೊಂಡು ದೊಡ್ಡವರಾದರು, ಮತ್ತು ನಾನು ಜಾಹೀರಾತು ನೋಡುತ್ತಾ ದೊಡ್ಡವನಾದೆ. I meant to say, I was very fond of ads those days, ಇವತ್ತಿಗೂ ಜಾಹೀರಾತು ನೋಡುವ ಖಯಾಲಿ ಹಾಗೇ ಇದೆ ಅನ್ನಿ. ಇಂಟರೆಸ್ಟಿಂಗ್ ವಿಷಯ ಏನೆಂದರೆ, ನಮ್ಮ ಉಳಿದ ಹುಡುಗರ ಹಾಗೆ ನನಗೆ ಕ್ರಿಕೆಟ್ ಆಡಲು / ನೋಡಲು ಅಷ್ಟೇನೂ ಖುಷಿಯಾಗುತ್ತಿರಲಿಲ್ಲ.‌ ಆದರೂ ODI, ಟೆಸ್ಟ್ ಮ್ಯಾಚ್ ಗಳು ಎಷ್ಟು ಆಗುತ್ತೋ ಅಷ್ಟು ನೋಡುತ್ತಿದ್ದೆ. ಕಾರಣ: ಜಾಹೀರಾತುಗಳು. ಆ ರೀತಿಯಾಗಿ‌ ನನ್ನ ಗಮನಕ್ಕೆ ಬಂದು, ನಾನು ತೀರಾ ಮೆಚ್ಚಿದ ಮನಮೋಹಕ ಜಾಹೀರಾತು MasterCard ದು. ಆಗ ಬರುತ್ತಿದ್ದ MasterCard ಜಾಹೀರಾತಿನ ಅಡಿಬರಹ ಮೇಲೆ ನೀವು‌ ಓದಿದ ಇಂಗ್ಲೀಷ್ ಸಾಲುಗಳು. ಕಮಿಂಗ್ ಟು‌ ಪಾಯಿಂಟ್, ಚಿಕ್ಕ ವಯಸ್ಸಲ್ಲಿ ನಮಗೆ ಕೆಲವು ವ್ಯಕ್ತಿಗಳು, ವಿಷಯಗಳು, ತಿಂಡಿಗಳು, ಇತ್ಯಾದಿ ಇಷ್ಟವಾಗಿರುತ್ತವೆ, ಆದರೆ ಕಾಲ ಕ್ರಮೇಣ ಅದರೊಂದಿಗೆ ಆ ಮುಗ್ಧ ಭಾವುಕ ನಂಟು ಮಾಯವಾಗಬಹುದು. ಆದರೂ ಆ ವಿಷಯ / ವಸ್ತು / ವ್ಯಕ್ತಿಗಳೊಂದಿಗೆ ಅದೇನೋ ಒಂಥರಾ nostalgic missing feeling ಇದ್ದೇ ಇರುತ್ತೆ. Kismi ಚಾಕೊಲೆಟ್, little hearts ಸಕ್ಕರೆ ಬಿಸ್ಕತ್ ಗಳು , ಆಸೆ ಚಾಕೊಲೇಟ್, ತೀರ್ಥ ರೂಪ ಅಜ್ಜಯ್ಯನವರಿಗೆ ಎಂದು ಶುರು ಮಾಡುತ್ತಿದ್ದ ಇಂಗ್ಲೆಂಡ್ ಲೆಟರ್, ಥೋ‌ ಸಾರಿ, ಇನ್ ಲ್ಯಾಂಡ್ ಲೆಟರ್, ಸೌರವ್ ಗಂಗೂಲಿ, ಹೀಗೆ ಹಲವಾರು ವಿಷಯ, ವಸ್ತುಗಳ ಮೇಲೆ ನಾವು 90s Kids ಗಳಿಗೆ ಒಂದು attachment ಇದೆ. ಅಂತಹ ಒಂದು ವಿಷಯ ನೋಕಿಯಾ. ಸಾವಿಲ್ಲದ‌ ಮನೆಯಲ್ಲಿ ಸಾಸಿವೆ ತಗೊಂಡು ಎಂಬ‌ ಮಾತನ್ನು ಪ್ರತಿ ಕಾಲ, ಸನ್ನಿವೇಶಕ್ಕೆ ತಕ್ಕಂತೆ ಏನಾದರೂ ಹೊಸದೊಂದು ವಿಷಯದೊಂದಿಗೆ equate ಮಾಡಿ ಹೇಳುವುದನ್ನು ಕಾಣಬಹುದು. ಪೆನ್ ಇಲ್ಲದ ಬರಹಗಾರನ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ, ಕ್ರೆಡಿಟ್ ಕಾರ್ಡ್ ಇಲ್ಲದ ಟೆಕ್ಕಿ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ, ನೋಕಿಯಾ ಫೋನ್ ಇಲ್ಲದವರ ಮನೆಯಿಂದ ಸಾಸಿವೆ ತೆಗೆದುಕೊಂಡು ಬಾ, ಇತ್ಯಾದಿ. ಆ ಮಟ್ಟಿಗೆ ನೋಕಿಯಾ ಫೋನುಗಳು‌ ಒಂದು ಕಾಲದಲ್ಲಿ ವಿಜಯನಗರ ಸಾಮ್ರಾಜ್ಯದ ರೇಂಜಿಗೆ ಮೊಬೈಲ್ ಲೋಕವನ್ನೇ ಆಳಿತ್ತು ಅಂದರೆ ತಪ್ಪಾಗಲಾರದು. ಆನಂತರ android ಆಗಮನ, Samsung, motorola, blackberry, iPhone ಗಳ ಸದ್ದು ಗದ್ದಲದಲ್ಲಿ ಹಳೇ ಪಿಚ್ಚರ್ ಗಳಲ್ಲಿ ಮುಸೂರು ದಸರಾ ಹಬ್ಬದಲ್ಲಿ ಚಿಕ್ಕ ತಮ್ಮ ಕಳೆದುಹೋಗುವ ಥರ ನೋಕಿಯಾ ಮಾಯವಾಗಿತ್ತು. ಆಗ back with a bang ಎನ್ನುವ ಹಾಗೆ ನೋಕಿಯಾ 6 ಫೋನ್ ಇದೇ ಆಗಸ್ಟ್ 23 ರಂದು ಭಾರತದಲ್ಲಿ ಲಾಂಚ್ ಆಗುತ್ತಿದೆ. ಅದರ technical specification ತಿಳಿಸುವ infotainment ಅಂಕಣ ಇದು. ಉಸ್ಸಪ್ಪ, ಅಂತೂ ವಿಷಯಕ್ಕೆ ಬಂದೆ:

ಫೋನ್ ಬಾಕ್ಸ್ ನಲ್ಲಿ ಚಾರ್ಜರ್, ಡೇಟಾ ಕೇಬಲ್, ಹೆಡ್ ಸೆಟ್, ಕೈಪಿಡಿ ಪುಸ್ತಕ ಮತ್ತು ಸಿಮ್ insert ಸಹಾಯಕ ಕೀ ಇರಲಿದೆ.

3GB RAM ಸಾಮರ್ಥ್ಯ ಇರುವ Qualcomm Snapdragon 430 ಮೊಬೈಲ್ ಪ್ಲಾಟ್ ಫಾರಂ ಇರುವ ಈ ಫೋನಿನಲ್ಲಿ‌ ಅತ್ಯಂತ ಲೇಟೆಸ್ಟ್ ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್ ಇದೆ. ‘snap’ ಪದ ನೋಡಿ ಕೆಲವರು ‘1 ಸ್ಟಾರ್’ ಕೊಡದೇ ಇದ್ದರೆ ಸಾಕಪ್ಪ ದೇವರೇ, IYKWIM!! 32 GB internal memory ಇರುವ ಇದರಲ್ಲಿ ಅವರವರ ವೈಯಕ್ತಿಕ ಕೆಪ್ಯಾಕಿಟಿಗೆ ತಕ್ಕಂತೆ 128 GB ವರೆಗೂ ಬಾಹ್ಯ ಮೆಮೋರಿ‌ ಕಾರ್ಡ್ ಬಳಸಬಹುದು. 16MP ಹಿಂಬದಿ ಕ್ಯಾಮೆರಾ ಮತ್ತು ಸೆಲ್ಫೀ ಶೂರ / ವನಿತರಯರಿಗಾಗಿ ಅಂತಲೇ 8 MP ಮುಂಬದಿ ಕ್ಯಾಮೆರಾ ಇದೆ. Focal length, ISO, aperture ಅಂತ ಬರೆಯೋಕೆ ನನಗೂ ಹೆಚ್ಚಾಗಿ ಗೊತ್ತಿಲ್ಲ, ಹಾಗಾಗಿ ನೀವು ಸೇಫ್ ಆದಂಗಾಯ್ತು, thank God!

ಇನ್ನು ಡಿಸ್‌ಪ್ಲೇ ವಿಷಯಕ್ಕೆ ಬಂದರೆ 5.5″ IPS LCD ಪರದೆ ಇದ್ದು, ವಿಶೇಷವಾಗಿ ಬೆಳಕಿನಲ್ಲೂ ಓದಬಹುದಾದ sunlight readability ತಂತ್ರಜ್ಞಾನ ಅಳವಡಿಸಲಾಗಿದೆ. 1920×1080, 16:9 Full HD ವೀಡಿಯೋ ವೀಕ್ಷಣೆ ಸೌಕರ್ಯ ಹೊಂದಿರುವ ಇದರಲ್ಲಿ Corning Gorilla ಗ್ಲಾಸ್ ಬಳಕೆಯಾಗಿದೆ. ಎರಡು ಸ್ಪೀಕರ್ ಗಳು, Dolby Atmos ಹೊಂದಿರುವ ಸ್ಮಾರ್ಟ್ ಆಂಪ್ಲಿಫೈಯರ್ ಜೊತೆಗೆ 3.5mm ಹೆಡ್ ಸೆಟ್ ಜ್ಯಾಕ್ ಕೂಡ ಉಂಟು. ಆಗಲೇ ಬಾಕ್ಸ್ ನಲ್ಲಿ ಏನೇನಿದೆ ಎಂದು ವಿವರಿಸುವಾಗ ಹೆಡ್ ಸೆಟ್ ಇತ್ತು ಅಂತ ಹೇಳಿದ ಕೂಡಲೇ ಹೆಡ್ ಸೆಟ್ ಪ್ಲಗ್ ಮಾಡೋಕೆ ‘ಕಿಂಡಿ’ (!) ಇರಲೇಬೇಕು ಕಣೋ ಗುಬಾಲ್ಡ್ ಅಂತ ಬೈಯ್ಯಬೇಡಿ ಪ್ಲೀಸ್, ಏನೋ ಚಿಕ್ಕ ಹುಡುಗರು ನಾವು 😆😆

3000 mAh ಸುದೀರ್ಘ ಬಾಳಿಕೆಯ ಬ್ಯಾಟರಿ, ಮೈಕ್ರೋ USB (2.0), USB OTG, ವೈಫೈ, ಬ್ಲೂ ಟೂತ್ 4.1, ಏಂಬಿಯೆಂಟ್ ಲೈಟ್ ಸೆನ್ಸಾರ್, ಇ – ಕಂಪಾಸ್, ಹಾಲ್ ಸೆನ್ಸಾರ್, ಬೆರಳಚ್ಚು ಸೆನ್ಸಾರ್, (ಏನ್ ಸಾರ್ ಇದೆಲ್ಲಾ?!?), NFC ಹಂಚಿಕೆ, ಹೀಗೆ ಹಲವಾರು ಹೊಸ ತಂತ್ರಜ್ಞಾನ, ಅಳವಡಿಕೆಗಳೊಂದಿಗೆ ನೋಕಿಯಾ ಮತ್ತೆ ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಹೆಚ್ಚುವರಿ ಮಾಹಿತಿಗಾಗಿ ಸುಮ್ಮನೆ ಡೈಮೆನ್ಷನ್ ಹೇಳುವುದಾದರೆ, 154 ಮಿಲಿಮೀಟರ್ ಉದ್ದ, 78.5 ಮಿಲಿಮೀಟರ್ ಅಗಲ, 7.58 ಮಿಲಿಮೀಟರ್ ದಪ್ಪ ಇದೆ (ಕ್ಯಾಮೆರಾ ಲೆನ್ಸ್ ಸೇರಿ 8.4 ಮಿಲಿಮೀಟರ್ ಆಗುತ್ತೆ, ಆ ಮಾತು ಬೇರೆ).

ಒಬ್ಬ ಕಲಾವಿದ ತಾನು ಯಾವಾಗಲೂ ಹೊಸ ಹೊಸ ಪ್ರಯೋಗಗಳಿಗೆ ತನ್ನನ್ನು ತಾನು ಒಡ್ಡಿಕೊಳ್ಳಬೇಕು, ಆಗ ಏನಾದರೂ ಹೊಸತನದ ಜನ್ಮವಾಗುತ್ತದೆ ಅಂತ ನಮ್ ಈ‌ ಸಿನಿಮಾ ಫೀಲ್ಡಲ್ಲಿ ತುಂಬಾ ಹೇಳುತ್ತಾರೆ. ಆ ಮಾತು ನಂಬಿಕೊಂಡು “ಅಬ್ಬಬ್ಬಾ, method actor ಇವರು ಶಿವಾ” ಅನಿಸಿಕೊಂಡವರೂ ಇದ್ದಾರೆ, “ಇವನಿಗೆ ಇವೆಲ್ಲಾ ಯಾಕೆ ಬೇಕಿತ್ತು ಅಂತ ಬೈಸಿಕೊಂಡವರೂ ಇದ್ದಾರೆ”. ಅದೇ ರೀತಿ, ಏನ್ ಯಾವಾಗಲೂ ಬರೀ ಲವ್ವು, ಸಿನಿಮಾ, ಟಾಪ್ 10, ತರಲೆ, ಹರಟೆ ಅಂದ್ಕೊಂಡು ಇರೊಕದು, ಒಂಚೂರು ಹೊಸ ತಂತ್ರಜ್ಞಾನ, ವಿಜ್ಞಾನ ಅಂಕಣ ಏನಾದರೂ ಟ್ರೈ ಮಾಡೋಣ ಅಂತ ಯೋಚಿಸಿ ಈ ಅಂಕಣ ಬರೆದಿದ್ದೇನೆ. ಈ ಮುಂಚೆ ಬಹಳ ಸಲ ಈ ಕುರಿತು ಪ್ರಯತ್ನ ಪಟ್ಟಿದ್ದೆನಾದರೂ ಸಾಧ್ಯವಾಗಿರಲಿಲ್ಲ, ಅದೇನೋ ಕಾಲ ಕೂಡಿ ಬರಬೇಕು‌ ಅಂತಾರಲ್ಲಾ, ಹಾಗೆ ಅಂದುಕೊಂಡು ಬಿಟ್ಟಾಕೋಣ ಬಿಡಿ. ನಿಮ್ಮ ಬಗ್ಗೆ ಗೊತ್ತಿಲ್ಲ, ಆದರೆ ನಾನು ಮಾತ್ರ ನೋಕಿಯಾದ ಈ ಹೊಸ ಫೋನ್ ಗಾಗಿ expectations ನ ಚಿಟ್ಟೆಯನ್ನು ಹೊಟ್ಟೆಯಲ್ಲಿ ಬಿಟ್ಟುಕೊಂಡವನ ಹಾಗೆ ಕಾಯುತ್ತಿದ್ದೇನೆ, ಏನಾಗುತ್ತೋ, ಕಾದು ನೋಡಬೇಕು. amazon ಅಲ್ಲಿ ಅಧಿಕೃತವಾಗಿ ಲಭ್ಯವಿದೆ, ಹಲವಾರು ಡೇಟಾ ಆಫರ್, ಕ್ಯಾಶ್ ಬ್ಯಾಕ್ ಆಫರ್ ಗಳು ಕೂಡ ಉಂಟು. ಘೋಡಾ ಹೈ, ಮೈದಾನ್ ಹೈ, ಕಟ್ಟು ಬಿಚ್ಚಿ ಕುದರೆ ಏರಿ ಓಡಾಡುತ್ತೀರೋ, ಕಟ್ಟಿ ಹಾಕಿ ಮನೆಗೆ ಹಾಒಗಿ ಮಲ್ಕೋತೀರೋ ನಿಮಗೆ ಬಿಟ್ಟಿದ್ದು!

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..