3549

One Plus 3 ವಿಸ್ತ್ರತ ವಿವರಣೆ :

One plus company ಮಾರುಕಟ್ಟೆಯಲ್ಲಿ ಉತ್ತಮವಾದ ಹೆಸರನ್ನು ಪಡೆದಿದ್ದರೂ ಬೇರೆ ಕಂಪನಿಗಳ ಹಾಗೆ ತುಂಬಾ ಫೋನುಗಳನ್ನು ಮಾರುಕಟ್ಟೆಗೆ ಬಿಡದೆ ,ಕೆಲವೇ ಫೋನುಗಳಿಂದ ಮಾರುಕಟ್ಟೆಯಲ್ಲಿ ತನ್ನ ಛಾಪನ್ನು ಉಳಿಸಿಕೊಂಡು ಬಂದಿದೆ. ಒನ್ಪ್ಲಸ್ಕಂಪನಿ ಮಾರುಕಟ್ಟೆಗೆ ಬಿಟ್ಟಿರುವ ಎಲ್ಲಾ ಫೋನುಗಳು ಅತ್ತ್ಯುತ್ತಮವಾದ ಗುಣಮಟ್ಟವನ್ನು ಹೊಂದಿದೆ.One plus companyಯ ಎಲ್ಲಾ ಫೋನುಗಳು ಸ್ಪರ್ಧಾತ್ಮಕ ದರದಲ್ಲಿ ಇತರೆ ಫೋನುಗಳಿಗೆ ಸರಿಸಾಟಿಯಾಗಿ ನಿಂತಿದೆ. One plus “flagship killer” ಫೋನುಗಳನ್ನುಅಭಿವೃದ್ಧಿಪಡಿಸುವುದರಲ್ಲಿ ಎತ್ತಿದ ಕೈ .
IMG_20160810_153705

One plus companyಯಿಂದ ಹೊಸದಾಗಿ ಮಾರುಕಟ್ಟೆಗೆ ಬಂದ “One Plus 3” ಫೋನು ತನ್ನ ವಿಶೇಷಣಗಳಿಂದ ಹೊಸ ಭರವಸೆಯ ಅಲೆಯನ್ನು ಸೃಷ್ಟಿಸಿದೆ. ಇದರ ವೈಶಿಷ್ಟತೆಗಳನ್ನು ನೋಡಿದರೆ ಒಳ್ಳೆಯ ಸಾಮರ್ಥ್ಯವುಳ್ಳ ಫೋನೆಂದು ಹೇಳಬಹುದು .

ಮೊದಲ ಅಭಿಪ್ರಾಯ:
ಫೋನು ಅಲ್ಯೂಮಿನಿಯಂ Frame ಹೊಂದಿದೆ . UniBody ಆಗಿರುವುದರಿಂದ ಬ್ಯಾಟರಿಯನ್ನು ಬೇರ್ಪಡಿಸಲು ಸಾಧ್ಯವಿಲ್ಲ.Corning Gorilla Glass 4 ಇರುವುದರಿಂದ ಬೇಗ scratches ಆಗುವುದಿಲ್ಲ. ಮುಂಭಾಗದ Home screen button ಅಲ್ಲಿ finger print scan ಅಳವಡಿಸಲಾಗಿದೆ . ಫೋನಿನ screen off ಇದ್ದಾಗ ಕೂಡ finger print scanನ ಮೂಲಕ ಫೋನನನ್ನು ತೆರೆಯಬಹುದು . finger print scan ಅತ್ಯತ್ತಮ ದರ್ಜೆಯದಾಗಿದ್ದು ಬೆರಳಿನ ತುಸು ಸ್ಪರ್ಶವನ್ನು ಸರಿಯಾಗಿಗ್ರಹಿಸುತ್ತದೆಈಫೋನಿನಲ್ಲಿ Type-C charging ಅಳವಡಿಸಿದೆ.ಫೋನಿನ ಬ್ಯಾಟರಿಯನ್ನು ತೆಗೆಯಲಿಕ್ಕೆ ಆಗುವುದಿಲ್ಲ. ಫೋನಿನ ಹಿಂಭಾಗದಲ್ಲಿ ಕ್ಯಾಮೆರಾ, ಫ್ಲಾಶ್, ಮತ್ತು one plus ಮುದ್ರಿಕೆ ಇದೆ.ಫೋನಿನ ಹಿಂಭಾಗ ತಿರುವಿನಿಂದ ಕೂಡಿರುವುದರಿಂದ ಎರಡು ಕಡೆ ಬಹಳ ತೆಳ್ಳಗಿದೆ. ಫೋನಿನ ಹಿಂಭಾಗ ವಿಶಿಷ್ಟ ವಿನ್ಯಾಸದಿಂದ ಕೂಡಿದೆ (texture) .
IMG_20160810_153625

ಕ್ಯಾಮೆರಾ ಹಾಗು ಫೋನಿನ ಸಾಮರ್ಥ್ಯದ ವಿಮರ್ಶೆ :
ಹಿಂಭಾಗದಲ್ಲಿ 16mp ಕ್ಯಾಮೆರಾ ಹಾಗು ಫ್ಲಾಶ್ಅ ಳವಡಿಸಲಾಗಿದೆ. ಹಿಂಭಾಗದ ಕ್ಯಾಮೆರಾ ಉತ್ತಮ ಸಾಮರ್ಥ್ಯ ಹೊಂದಿದ್ದು ಅತ್ತ್ಯುತ್ಕ್ರಷ್ಟ ಗುಣಮಟ್ಟದ ಚಿತ್ರಗಳನ್ನು ತೆಗೆಯಲು ಸಹಕಾರಿಯಾಗಿದೆ. ಕಡಿಮೆ ಬೆಳಕಿನಲ್ಲಿ ತೆಗೆದ ಚಿತ್ರಗಳು ಸಹ ಉತ್ತಮವಾಗಿ ಬರುತ್ತವೆ.
ಮುಂಭಾಗದಲ್ಲಿ 8mp ಕ್ಯಾಮೆರಾವಿದ್ದು ಸ್ವಚಿತ್ರಗಳನ್ನು(selfie) ಉತ್ತಮವಾಗಿ ತೆಗೆಯಬಲ್ಲದು.
ಫೋನು 6GB Ram ಹಾಗು 1.6Ghz quad-processor ಹೊಂದಿದ್ದು ಯಾವುದೇ ಕೆಲಸವನ್ನು ಸಲೀಸಾಗಿ ಮಾಡಬಲ್ಲದು. ಗೇಮ್ ,ವೆಬ್ಪೇಜ್ನೋಡುವುದು , ಹಲವಾರು
ಅಪ್ಲಿಕೇಶನ್ಗಳನ್ನು ತೆರೆದಿಟ್ಟರು ಸಹ ಫೋನಿನ ಸಾಮರ್ಥ್ಯದಲ್ಲಿ ಯಾವುದೇ ತೊಡಕು ಕಾಣಿಸುವುದಿಲ್ಲ (no hinderance in performance).64GB ಡೇಟಾವನ್ನು(DATA) ಫೋನಿನಲ್ಲಿ ಸಂಗ್ರಹಿಸಿಡಬಹುದು.

ಫೋನಿನ ಇತರೆ ವಿಶೇಷತೆಗಳು:
6GB RAM
1.6 GHZ quad-core Processor
64GB ಮೆಮೊರಿ
16MP ಹಾಗು 8MP ಕ್ಯಾಮೆರಾ
3000mah ಬ್ಯಾಟರಿ
Android 6.0.1
2 NanoSIM
ಫೋನಿನ ಬೆಲೆ :Rs. 27,999

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..