5120

ಹನಿಗವನಗಳು

ಹನಿಗವನಗಳ ಕವಿ : ಪ್ರಮೋದ್ ಮರವಂತೆ
ಕಣ್ಣು-ಕವನ
ಕಣ್ಣೊಳಗಿನ
ಕವನಗಳು
ಹನಿಯಾಗಿ ಹೊರಬಂದು
ಹನಿಗವನಗಳಾದವು

ಭಾರ-ಮಣ್ಣು
ಭಾರತದ ಮಣ್ಣು
ಎಷ್ಟೊಂದು ಪವಿತ್ರ
ನಮ್ಮ ಕ್ರಿಕೇಟ್ ತಂಡ
ಗೆಲ್ಲುವುದು ಇಲ್ಲಿ ಮಾತ್ರ

ಸೊನ್ನೆ
ನೋಡಿ ನೋಡಿ ಮಕ್ಕಳ
ಮಾಕ್ಸ್ ಕಾರ್ಡ್ ನ ಪುಟ
ಸೊನ್ನೆಯ ಕಂಡುಹಿಡಿದ
ಆರ್ಯಭಟ

ಎದ್ದು ಕಂಡದ್ದು
ಎದ್ದು ಕಾಣಲೆಂದು
ಹಾಕಿದ್ದಳು ಮೈತುಂಬ ಒಡವೆ
ಎದ್ದು ಕಂಡದ್ದು ಮಾತ್ರ
ಮುಖದಲ್ಲಿನ ಮೊಡವೆ

ಆ-ಭಾವ
ಅದ್ಯಾಕೋ
ಮೂಖವಾಗುವುದು ಜೀವ
ಕೇಳುವಾಗ ಲೆಕ್ಚರರ್ ವೈವಾ..

ಕ್ಯಾಮೆರಾ
ಜೀವನದಲಿ ಖುಷಿಯ
ಕ್ಷಣಗಳು ಸಾವಿರ
ಅವೆಲ್ಲವ ಹಿಡಿದಿಡುವುದು
ಕ್ಯಾಮೆರಾ

ಅವಳು
ಮುಖ ಬೆಳ್ಳಗಾಗಿಸಲು
ಏನೆಲ್ಲಾ ಬಳಸಿದಳು
ಬೆಳ್ಳಗಾದದ್ದು ಮಾತ್ರ
ಅವಳ ಕಪ್ಪು ಕೂದಲು

ಮೀನು
ಅಕ್ವೇರಿಯಂ ನ ಮೀನು
ಪುಣ್ಯ ಮಾಡಿದೆ
ಏಕೆಂದರೆ
ಮನುಷ್ಯನ ಎದುರಿಗಿದ್ದರೂ
ಜೀವಂತ ಉಳಿದಿದೆ

ಸೂರ್ಯ
ನಾನು “ಸೂರ್ಯ”
ಅವಳು “ಮಂಜು”
ಆದರೂ ಅವಳೆದುರು
ನಾನೇ ಕರಗಿ ಹೋದೆ

ಪರಿಶ್ರಮ
ಬೆವರು ಸುರಿಸದೆ
ಏನೂ ಸಾಧ್ಯವಿಲ್ಲ
ಹಗಲಿರುಳು
ಬೆವರ ಹರಿಸಿದ ಮೇಲಲ್ಲವೇ
ಬೆಳೆದದ್ದು ಮನುಷ್ಯನ
ಕಂಕುಳಲ್ಲೂ ಕೂದಲು

ವಿದಾಯ
ವಿದಾಯ ಹೊಸತೇನಲ್ಲ ನನಗೆ
ಆದರೆ ಪ್ರತಿಬಾರಿ ಬರುವ
ಕಣ್ಣೀರು ಮಾತ್ರ ಹೊಸದು

DEEP ಆ..ಆ..ಆ..
ಹಳೆಯ ಹುಡುಗಿಯ
ನೆನಪು ದೀಪದಂತೆ
ಎಣ್ಣೆ ಒಳಗಿರುವಾಗ ಮಾತ್ರ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..