2743

SAME TASTE OR DIFFERENT!!! WE LOVE EACH OTHER!

ಮನೆ ಕಟ್ಟಿ ನೋಡು ಒಮ್ಮೆ ಮನೆ ಕಟ್ಟಿ ನೋಡು..
ಮದುವೆ ಮಾಡಿ ನೋಡು ಒಂದು ಮದುವೆ ಮಾಡಿ ನೋಡು…

ಮನೆ ಕಟ್ಟೋದು .. ಮದುವೆ ಮಾಡೋದು .. ಎರಡೂ ತುಂಬಾ complex ಅಲ್ವಾ?
financial aspect ಒಂದು ಕಡೆ ಆದರೆ.. ಹತ್ತು ಹಲವಾರು confusions ಇನ್ನೊಂದು ಕಡೆ.. ಮನೆಗೆ ಯಾವ tiles ಅನ್ನೋ confusion ಇಂದ ಹಿಡಿದು..ಯಾವ paint ಉ.. ಏನ್ interior ಉ.. ಯಾವ ರೂಮಿಗೆ ಯಾವ ಕಲರ್ curtain !! ಒಂದಾ ಎರಡಾ?
ಅಲ್ಲಾ ಸ್ವಾಮಿ.. ಒಂದು ಮನೆಗೆ ಇಷ್ಟು ಯೋಚ್ನೆ ಮಾಡೋರು..ಇನ್ನು ಮದುವೆ matter ಗೆ ಎಷ್ಟು ತಲೆ ಕೆಡಿಸ್ಕೊಳ್ಳಲ್ಲ..!! first question … ಮದುವೆ ಮಾಡ್ಕೋಬೇಕಾ ಬೇಡವಾ? ಅಂತ…or to be more practical ಈಗಲೇ ಮದುವೆ ಮಾಡ್ಕೋಬೇಕಾ ಬೇಡವಾ? ಅಂತ.. OK finally ಮದುವೆ ಮಾಡ್ಕೋಬೇಕು ಅಂತ fix ಆದಮೇಲೆ , ಶುರು ಆಗತ್ತೆ ನೋಡಿ ಹುಡುಗ/ಹುಡುಗಿ ಹುಡುಕೋ tension ಉ.. love marriage ಬಗ್ಗೆ ನಾ ಮಾತಾಡ್ತಾ ಇಲ್ಲ.. ಈ arrange marriage ಅಂದ್ರೆ ಒಂದು ಸಾವಿರ ಭಯ confusion ಉ.. tension ಉ..ಒಂದು common question ಸಾಮಾನ್ಯವಾಗಿ ಎಲ್ಲರ ಮನಸಿಗೆ ಬರೋದ್ ಅಂದ್ರೆ… ” same taste ಇರೋ partner ನ select ಮಾಡಬೇಕಾ or opposite taste ಇರೋರ್ ಜೊತೆ ಜೀವನ ಚೆಂದನಾ ?” ಅಂತ..
Opposites attract each other ಅಂತ ಹೇಳ್ತಾರೆ.. Is it even true? I dunno.. “ಮದುವೆ” is not a silly matter right?? ಈಗ opposite character couple ವಿಷಯ ತೊಗೊಂಡ್ರೆ.. ನನಗೆ carnatic music ಇಷ್ಟ.. ಅವರಿಗೆ hard rock metal … ನಂಗೆ chinese .. ಅವನು ಪಕ್ಕಾ indian food .. I hate adventure games and he is crazy about them.. ಈ ಥರ ಚಿಕ್ಕ ಚಿಕ್ಕ ವಿಷಯಗಳಿಂದ ಹಿಡಿದು, ತುಂಬಾ complex ವಿಷಯಗಳವರೆಗೂ ಎಲ್ಲ opposite ಆದರೆ? life ಹೇಗ್ ಇರತ್ತೆ?
On the other side, the whole scenario has a different view..the positive side of being “opposite partners”.. u get to experience different things.. u develop variety of taste..u explore new stuff.. u can learn many many new things.. who knows, u might really like them too.. u get to listen different type of music..taste different food.. experience a whole new version of living.. do all crazy things which was out of ur league in the first place.. which is not ur normal style.. u ll see a new world!!
Same taste ಇದ್ರೆ, ಇನ್ನೊಂದ್ ಕಥೆ.. ನಂಗೂ GoT ಇಷ್ಟ.. ಅವನಿಗೂ ಇಷ್ಟ.. ನಂಗೂ ಕ್ರಿಕೆಟ್ ಅಂದ್ರೆ ಹುಚ್ಚು.. ಅವನಿಗೂ ಅಷ್ಟೇ.. ನಾನು ಸಂಜೆ ಆಯ್ತು ಅಂದ್ರೆ ಆ ಮುಗಿದೇ ಇರೋ ಪುಟ್ಟ ಗೌರಿ ಮದುವೆ ನೋಡ್ತೀನಿ.. ಅವನೂ ಅಷ್ಟೇ.. ಊಟ ಮರೆತರೂ ಪುಟ್ ಗೌರಿ ಸೀರಿಯಲ್ ನೋಡೋದ್ ಮರೆಯೋಲ್ಲ.. ಹೀಗ್ ಇದ್ದಾಗ.. ವಾದ-ವಿವಾದ, compromise ಕಥೆಗಳೇ ಬರಲ್ಲ ಅಲ್ವಾ?
Life is beautiful ಅನ್ಸತ್ತೆ.. but again on the other side, life is beautiful but boring ಅನಿಸಬೋದು..may be we ll miss many things in life.. we might never try new stuff.. black and white TV ಆಗಬಹುದು ನಮ್ ಲೈಫ್.. ಅಲ್ವಾ??
Soo…. Finally, which is better??????? I cannot conclude… but there is only one thing I wana tell.. same taste ಇರಲಿ,different ಇರಲಿ , we should learn to respect each other’s taste,.. even if we don’t like it.. at least we should not hate it… ಅವರ ಇಷ್ಟ.. ಅವರ ಖುಷಿ.. ನಮ್ಮ ಇಷ್ಟ.. ನಮ್ ಖುಷಿ.. ನಮ್ taste ನ ಅವರ ಮೇಲೆ impose ಮಾಡೋಕೂ ಹೋಗಬಾರದು.. ನನಗೆ ಮಂಕುತಿಮ್ಮನ ಕಗ್ಗ ಇಷ್ಟ.. ಅವನಿಗೆ books ಅಂದ್ರೆ, only technical .. ಅವನ birthday ಗೆ ನಾನು ಮಂಕುತಿಮ್ಮನ ಕಗ್ಗ gift ಕೊಟ್ರೆ.. definitely he ll not be happy…sooo.. we should KNOW our partner first.. wat he/she likes.. wat makes them happy.. wat brings a smile on their face.. ಒಟ್ನಲ್ಲಿ.. ಒಬ್ಬರನ್ನ ಒಬ್ಬರು ಚೆನ್ನಾಗಿ ಅರ್ಥ ಮಾಡ್ಕೋಬೇಕು.. ಗೌರವಿಸಬೇಕು.. ಇಷ್ಟ್ ಇದ್ರೆ ಸಾಕು ಅಲ್ವಾ opposite taste or same who really cares???
ನಿಮ್ opinion ಏನು? ನಿಮ್ಮ experience ಏನು ಈ ವಿಷಯದ ಬಗ್ಗೆ??

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..