497

ತಬ್ಬಲಿಯಾಗೋ ಮುಂಚೆ ತಬ್ಬಿಕೊಳ್ಳಿ

ಪಾತ್ರೆಗಳ ಕರ್ಕಶ ಶಬ್ದ ತಡರಾತ್ರಿವರೆಗು ಬರುತ್ತಿತ್ತು ಅಡಿಗೆ ಮನೆಯಿಂದ!
ಅಮ್ಮಾ ಅಡಿಗೆ‌ಮನೆಯಲ್ಲಿದ್ದಾಳೆ?

ಮನೆಯ ಮೂವರು ಸೊಸೆಯಂದಿಯರು ನಿದ್ರಿಸಲು ಹೋಗಿದ್ದಾರೆ ,
ಅಮ್ಮಾ ಇನ್ನೂ ಅಡಿಗೆ‌ಮನೆಯಲ್ಲಿದ್ದಾಳೆ!!
ಅಮ್ಮನ ಕೆಲಸ ಇನ್ನೂ ಬಾಕಿಯಿದೆ,ಆದರೆ ಕೆಲಸ ಎಲ್ಲರದೂ ಅಲ್ಲವೇ?
ಆದರೂ ಅಮ್ಮಾ ಎಲ್ಲರ ಕೆಲಸ ತನ್ನದು ಎಂದು ನಂಬುತ್ತಾಳೆ.

ಹಾಲು ಬಿಸಿ ಮಾಡಿ
ತಣ್ಣಗಾಗಿಸಿ
ಮೊಸರು ಮಾಡಬೇಕು
ಯಾಕೆಂದರೆ ಬೆಳ್ಳಂಬೆಳಿಗ್ಗೆ ಮಗನಿಗೆ ಫ್ರೇಶ್ ಮಜ್ಜಿಗೆ ಕೊಡಬೇಕಲ್ಲವೇ!!

ಸಿಂಕ್ ನಲ್ಲಿರುವ ಪಾತ್ರೆಗಳನ್ನು ಅಮ್ಮ ತಿಕ್ಕುತ್ತಿದ್ದಾಳೆ
ವಿಧಾನ ಬದಲಾಗಿರಬಹುದು ಶುಚಿಯಾಗಬೇಕಲ್ಲವೇ??
ಪಾತ್ರೆಗಳ ಶಬ್ದದಿಂದ
ಸೊಸೆ ಸುಪುತ್ರರ ನಿದ್ರೆ ಹಾಳಾಗುತ್ತಿದೆ

ಹಿರಿಸೊಸೆ ಹಿರಿಮಗನಿಗೆ ಹೇಳಿದಳು
ನಿನ್ನ ಅವ್ವನಿಗೆ ನಿದ್ರೆ ಬರಲ್ವಾ
ಅವಳು ಮಲಗಲ್ಲಾ,ನಮ್ಮನ್ನು ಮಲಗಲು ಬಿಡಲ್ಲಾ.

ಎರಡನೇ ಸೊಸೆ ಹೇಳಿದಳು ಎರಡನೇ ಸುಪುತ್ರನಿಗೆ
ನೀವೆ ನೋಡಿ ಬೆಳ್ಳಿಗೆ ನಾಲ್ಕು ಗಂಟೆಗೆ ಮತ್ತೆ ಶುರು ಮಾಡ್ತಾಳೆ ,” ಕಟರ್ ಪಟರ್” ನಿನ್ನ
ಅವ್ವ ನಿಗೆ ನೆಮ್ಮದಿಯೇ ಇಲ್ವಾ??

ಕಿರಿಯವಳು ಕಿರಿಯವನಿಗೆ ಹೇಳುತ್ತಾಳೆ
” ಪ್ಲೀಸ್ ಹೋಗಿ ನಿಲ್ಲಿಸಿ ರಾತ್ರಿ ಸಿಂಕ್ ಖಾಲಿ ಆಗಿರಬೇಕು ”

ಅಮ್ಮ ಪಾತ್ರೆ ತಿಕ್ಕಿ ಮುಗಿಸಿದ್ದಾಳೆ.
ಬಗ್ಗಿ ಹೋದ ಬೆನ್ನೆಲುಬು
ಗಟ್ಟಿಯಾಗಿ ಮರಗಟ್ಟಿದ ಕೈಗಳು
ಮಂಡಿ ನೋವು
ದೃಷ್ಟಿಹೀನ ಕಣ್ಣುಗಳು
ನೆತ್ತಿಯಿಂದ ಉಕ್ಕುತ್ತಿರುವ ಬೆವರು
ವಯೋಸಹಜ ಕಾಲುಗಳ ನಡುಕ

ಆದರೂ
ಬಿಸಿ ಹಾಲಿನ ಪಾತ್ರೆಯನ್ನು
ಇಂದೂ ತನ್ನ ಸೆರಗಿನಿಂದ ಎತ್ತುತ್ತಾಳೆ.
ಆದರೂ
ಅವಳ ಕೈ ಬೆರಳು ಸುಡುವುದಿಲ್ಲ
ಯಾಕೆಂದರೆ ಅವಳು ಅಮ್ಮಾ.

ಹಾಲು ತಣ್ಣಗಾಗಿದೆ
ಮೊಸರಿಗೆ ವರೆ ಹಾಕಬೇಕು
ಗಡಿಯಾರದ ಮುಳ್ಳುಗಳು ಸುಸ್ತಾಗಿದೆ
ಆದರೂ ಅಮ್ಮ ಫ್ರೀಜ್ ನಿಂದ ಬೀನ್ಸ್ ತೆಗೆದು ಕತ್ತರಿಸ ತೊಡಗಿದಳು
ಅವಳಿಗೆ ನಿದ್ರೆ ಬರಲ್ಲಾ
ಯಾಕೆಂದರೆ ಅವಳು ಅಮ್ಮಾ.

ಕೆಲವೊಮ್ಮೆ ಯೋಚಿಸುತ್ತೇನೆ ಅಮ್ಮ ಎಂಬ ವಿಚಾರದಲ್ಲಿ ಬರೆಯುವುದು ,ಹೇಳುವುದು ಅಭಿಪ್ರಾಯ ಪಡುವುದು ಕಾನೂನಾತ್ಮಕ ನಿಲ್ಲಬೇಕು.
ಯಾಕೆಂದರೆ ಈ ವಿಷಯ ವಿವಾದಾತ್ಮಕವಲ್ಲದು
ಯಾಕೆಂದರೆ ಈ ಸಂಬಂಧ ಸ್ವಯಂ ಸಂಯೋಗದಿಂದ ಸೃಷ್ಟಿಯಾದದ್ದು

ರಾತ್ರಿ ಹನ್ನೆರಡು ಆಗಿದೆ ಬೀನ್ಸ್ ಕತ್ತರಿಸಿಯಾಯಿತು
ಒಮ್ಮೆಲೇ ನೆನಪಾಯಿತು ಮಾತ್ರೆ ಇನ್ನೂ ತಗೊಂಡೆ ಇಲ್ಲಾ
ಬೆಡ್ ನ ತಲೆದಿಂಬು ಕೆಳಗೆ ಮಡಗಿದ ಕೈಚೀಲ ತೆಗೆದಳು
ಚಂದಿರನ ಬೆಳದಿಂಗಳಿನಲ್ಲಿ
ಮಾತ್ರೆಯ ಬಣ್ಣದ ಲೆಕ್ಕಾಚಾರದಿಂದ ಬಾಯಿಗೆ ಹಾಕಿದಳು ಗಟಾರ್ ಅಂತ ನೀರು ಕುಡಿದಳು

ಪಕ್ಕದ ಮಂಚದಲ್ಲಿ ಮಲಗಿದ ಅಪ್ಪ ಹೇಳಿದ “ಬಂದೇಯಾ??
ಬಂದೇ ಇವತ್ತು ಅಷ್ಟೇನು ಕೆಲಸ ಇರಲಿಲ್ಲ,
ಅಮ್ಮನ ಸಹಜ ಉತ್ತರ.

ಹಾಗೆ
ಬಿದ್ದುಕೊಂಡಳು ನಾಳಿನ ಚಿಂತೆಯಲ್ಲಿ
ಗೊತ್ತಿಲ್ಲ ನಿದ್ರೆ ಬರುತ್ತೋ ಏನೋ ಆದರೂ ನಾಳೆ
ಅವಳಿಗೆ ಸುಸ್ತು ಎಂಬುದೇ ಇರಲ್ಲಾ
ಯಾಕೆಂದರೆ ಅವಳು ಅಮ್ಮಾ.

ಬೆಳಗಿನ ಅಲಾರಾಂ ಆಮೇಲೆ ಹೊಡೆಯುತ್ತದೆ
ಅಮ್ಮನ ನಿದ್ರೆ ಮೊದಲೇ ಬಿಟ್ಟಿರುತ್ತದೆ
ನೆನಪೆ ಬರುತ್ತಿಲ್ಲ ಕೊರೆಯುವ ಚಳಿಯಲ್ಲೂ
ಅಮ್ಮ ಬಿಸಿ ನೀರಿನಲ್ಲಿ ಸ್ನಾನ ಮಾಡಿದ್ದಾಳೋ ಏನೋ??
ಅವಳಿಗೆ ಚಳಿಯಾಗಲ್ಲ
ಯಾಕೆಂದರೆ ಅವಳು ಅಮ್ಮಾ

ಕಾಫಿ ಕುಡಿಯಲ್ಲಾ ಆದರೂ ಮಾಡುತ್ತಾಳೆ
ಶಾಲೆ ಹೋಗಲ್ಲಾ ಆದರೂ ಓದಿಸುತ್ತಾಳೆ
ಬೇಗನೆ ತಿಂಡಿ ತಿನ್ನಲ್ಲಾ ಆದರೂ ತಿಂಡಿ ರೆಡಿ ಮಾಡುತ್ತಾಳೆ
ಯಾಕೆಂದರೆ ಅವಳು ಅಮ್ಮಾ

ಅಮ್ಮನ ಆದರ್ಶಗಳು ಬದುಕಿನ್ನುದ್ದಕ್ಕೂ ಬರೆದಷ್ಟೂ ಮುಗಿಯದು ಬಾಕಿ ಮತ್ತೆ ಬರೆಯುವೆ ಬೇಸರವಾದಾಗ ಬಿಟ್ಟು ಹೋದ ಅಮೃತಧಾರೆಯ ನೆನಪು ಮನದಲ್ಲಿ ಮರುಕ ಹುಟ್ಟಿಸಿದಾಗ

ಮತ್ತೆ

ಎಲ್ಲಾದರು ನಿಮಗೆ ಏನಾದರೂ ಓದುತ್ತಾ ಓದುತ್ತಾ ಕಣ್ಣಂಚಿನಲ್ಲಿ ಕಂಬನಿ ಹರಿದರೆ ಆತಂಕವಿಲ್ಲದೇ ಅತ್ತು ಬಿಡಿ
ಮತ್ತೆ
ಕಂಬನಿ ಒರೆಸಿ ಅಮ್ಮನನ್ನು ಬಿಗಿದಪ್ಪಿಕೊಳ್ಳಿ
ಯಾಕೆಂದರೆ ಅವಳು ಬೇರೆ ಯಾರು ಅಲ್ಲ ನಿಮ್ಮ ಅಮ್ಮ ಅಲ್ವಾ!!

ತಬ್ಬಲಿಯಾಗೋ ಮುಂಚೆ ತಬ್ಬಿಕೊಳ್ಳಿ✍

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..