2796

ಹುಡುಗರು ಹುಡುಗಿಯರ ಬಗ್ಗೆ ಅತೀವವಾಗಿ ಇಷ್ಟ ಪಡುವ 7 ವಿಷಯಗಳು

  • By Guest Writer
  • Monday, January 23rd, 2017
  • Things You Should Know

ಹೆಣ್ಣಿರದ ಭೂಮಿ‌ ಹಂಗೇಕೆ?
ಹೆಣ್ಣಿರದ ಸ್ವರ್ಗ ನಂಗೇಕೆ?

ರವಿಮಾಮ ಅಂದರೆ ಸುಂದರ ಹೀರೋಯಿನ್ ಗಳು, ಸುಂದರ ಹೀರೋಯಿನ್ ಇದ್ದರೆ ಅದು ರವಿಮಾಮ ಚಿತ್ರ ಆಗಿರಲೇಬೇಕು ಎಂಬ ಮಾತು ಗಾಂಧಿನಗರದಲ್ಲಿದೆ. ಅಂಥ ರವಿಚಂದ್ರನ್ ಅಭಿನಯದ ರಸಿಕ ಚಿತ್ರದ ಸಾಲುಗಳಿವು. Being a ಹುಡುಗ, ಹುಡುಗಿಯರನ್ನು ನೋಡೋದು, ಮಾತನಾಡೋದು ಯಾರಿಗೆ ಇಷ್ಟ ಆಗಲ್ಲ‌ ಹೇಳಿ. ಅವರು ಕ್ಲಾಸ್ / ಆಫೀಸಿನಲ್ಲಿ ಇದ್ದರಂತೂ ಅದರ ಗಮ್ಮತ್ತೇ ಬೇರೆ. ಅವರಿಗೆ ಅಷ್ಟು ಚೆನ್ನಾಗಿ ವಾಹನ‌ ಓಡಿಸಲು ಬರೋದಿಲ್ಲ, ಸಿಂಗಲ್-ಗಳ ಬದುಕು ಯಾವಾಗಲೂ ಆರಾಮ್ ಎಂದು ಎಷ್ಟೇ ಟ್ರೋಲ್ ಮಾಡಿದರೂ ಹೆಣ್ಣಿರದ ಜಗವನ್ನು ಊಹಿಸಿಕೊಳ್ಳುವುದೂ ಅಸಾಧ್ಯ. Women; can’t live with them, can’t live without them ಎಂದು ಅದಕ್ಕಾಗಿಯೇ ಹೇಳಿರಬೇಕು. ಇಂತಿಪ್ಪ ಹೆಣ್ಣ್ ಮಕ್ಳು ಬಗ್ಗೆ ನಾವು ಹುಡುಗರು ಇಷ್ಟ ಪಡುವ ಒಂದಷ್ಟು ವಿಷಯಗಳು

#1 ಕಣ್ಣುಗಳು
‘ಕಣ್ಣಲ್ಲಿ ಕಸವ ಬೀಳಿಸಿಕೊಂಡು, ಊದಲು ಕರೆದರೆ ನಿನ್ನ, ನಿನ್ನಯ ಬಿಂಬವ ನೋಡಲು ನೀನು, ಲೂಟಿಯಾಗಿ ಹೋದೆ ನಾನು’ ಎಂದು ಜಯಂತ್ ಕಾಯ್ಕಿಣಿ ಮನಸಾರೆ ಚಿತ್ರಕ್ಕೆ ಬರೆದಿದ್ದಾರೆ. ಹುಡುಗಿಯರ ಕಣ್ಣಲ್ಲಿ ನಮ್ಮ ಪ್ರತಿಬಂಬ ನೋಡಿಕೊಂಡು ಫೀಲಿಂಗ್ಸ್ ಎಂಬ ಬರ್ಮುಡಾ ತ್ರಿಭುಜದಲ್ಲಿ‌ ಕಳೆದು ಹೋದವರೆಷ್ಟೋ.

3

#2 ನಗು; ಮುಗುಳ್ನಗು to be precise
ಅಯ್ಯಯ್ಯಯ್ಯೋ, ನಗ್ತವ್ಳೋ ಅಂತ ಮನಸ್ಸು ಕುಣಿದಾಡಲು ಶುರು ಮಾಡುತ್ತೆ, crush ಒಂದು ಲುಕ್ ಕೊಟ್ಟರೆ ಸಾಕು. ಇನ್ನೂ ನಕ್ಕರೆ ಅಂತೆ ಮುಗೀತು‌ ಕಥೆ, ಕನಸಲ್ಲಿ‌ ಒಂದು ರೌಂಡು, ಮದುವೆ ಆಗಿ, ಮಕ್ಕಳು ಆಗಿ, ಮೊಮ್ಮಕ್ಕಳಿಗೆ ಪೋಲಿಯೀ ಡ್ರಾಪ್ಸ್ ಹಾಕಿಸುವವರೆಗೂ‌ ಕಲ್ಪನೆ ಹೋಗಿಬಿಡುತ್ತೆ. ತಪ್ಪು ನಮ್ಮದಲ್ಲ, ನಿಮ್ಮ ಒಂದು‌ ಚಿಕ್ಕ‌ ನಗುವಿಗೆ ಇರುವ ಶಕ್ತಿ ಅಂಥದ್ದು.

2

 

#3 ಓಪನ್ ಹೇರ್-ಸು ಬಿಟ್ಕೊಂಡು
ಭಟ್ರುಗೆ ಏನೋ ಆಗಿದೆ, ಕೂದಲು ತುರುಬು ಕಟ್ಟಿದರೇನು? ಓಪನ್ ಬಿಟ್ಟರೇನು, ಅಂಥ ವ್ಯತ್ಯಾಸ ಆಗಲ್ಲ ಅಂತಲೇ ನಾನೂ ಭಾವಿಸಿದ್ಧೆ, ನಮ್ ಕ್ರಷ್ ಅನ್ನು ಓಪನ್ ಹೇರ್-ಸು ಬಿಟ್ಕೊಂಡು ಬರುವುದನ್ನು ನೋಡುವವರೆಗೆ. ಹಸಿದವನೇ ಬಲ್ಲ ಊಟದ ಸವಿಯ ಎಂಬುವಂತೆ ಓಪನ್ ಹೇರ್-ಸು ಬಿಟ್ಕೊಂಡು ಬರುವ ಹುಡುಗಿಯರ ಬಿನ್ನಾಣ ವರ್ಣಿಸಲಾಗದು.
1

#4 ಸೀರೇಲಿ‌ ಹುಡುಗೀರ‌ ನೋಡಲೇಬಾರದು
ನನ್ನವಳನ್ನು ಒಮ್ಮೆ ಕಾಡಿ ಬೇಡಿ ಸೀರೆ ಉಟ್ಟು ಬರಲು ಹೇಳಿದ್ದೆ. ಪಾಪದ ಕುರಿ ಆಸೆ ಈಡೇರಲಿ ಅಂತ ಅವರೂ ಒಂದು ದಿನ ಸೀರೆ ಉಟ್ಟು ಎದುರಿಗೆ ಬಂದರು, ಯಾಕ್ ಕೇಳ್ತೀರಾ ನಮ್ ಆನಂದವ! Happiness is.. Seeing your girl in a saree ಅನಿಸಿದ್ದು ಆಗಲೇ. ಸೀರೆ ಉಡೋದು ಕಷ್ಟ, maintain ಮಾಡೋದು ಇನ್ನೂ ಕಷ್ಟ ಅಂತ ಗೊತ್ತು. ಆದರೂ ನಿಮ್ಮ ಪರಿಶ್ರಮಕ್ಕೆ ನಮ್ಮದೊಂದು ಸಲಾಂ.

4

#5 Angry Birds
ಯಾರಾದರೂ ಸಿಟ್ಟಾಗಿದ್ದರೆ ಅಥವಾ ಕೆಟ್ಟ ಮೂಡ್ ನಲ್ಲಿದ್ದರೆ ಯಾಕೆ ಮಾತನಾಡಿಸೋದಪ್ಪಾ ಅಂತ ದೂರಾನೇ ಇರ್ತೀವಿ‌. ಆದರೆ ಹುಡುಗಿಯರು ಸಿಟ್ಟು ಮಾಡಿಕೊಂಡರೆ ನೋಡೋದು ಒಂಥರಾ ಚೆಂದ. ಅವರ birthday ಮರೆತಾಗ ಸಿಟ್ಟು ಮಾಡಿಕೊಳ್ಳುವಷ್ಟರ ಮಟ್ಟಿಗೆ ಸೀರಿಯಸ್ ಸಿಟ್ಟಲ್ಲ, ಯಾಕೋ ಈ ಡ್ರೆಸ್ ಅಲ್ಲಿ ದಪ್ಪ ಕಾಣಿಸ್ತಾ ಇದ್ದೀರಾ ಅಂತ ಹೇಳಿ ಬರಿಸುವ ‘adorable anger’. ಹುಡುಗಿಯರು ನಕ್ಕರೆ ಚೆಂದ, ಸಿಟ್ಟು ಮಾಡ್ಕೊಂಡ್ರೆ ಇನ್ನೂ ಚೆಂದ, ಏನಾದರೂ ಹೊಗೆ ಜೋಕ್ಸ್ ಹೇಳಿ ಮತ್ತೆ ನಗಿಸಬಹುದು ಅಂತ.

7

#6 ಲೈಟ್ಸ್, ಕ್ಯಾಮೆರಾ, ಸಿನಿಮಾ
ಈ ಲವ್ ಮಾಡೋ ಹುಡುಗ ಹುಡುಗಿಯರು ಒಂದು ಒಳ್ಳೆಯ ಕಡೆ ಊಟ, ಟ್ರಿಪ್, ಸಿನಿಮಾ, ಮಾತುಕತೆ, ಹೀಗೆ ಹಲವಾರು ಜೊತೆಯಾಗಿ ಕಾಲಹರಣ ಮಾಡುವ ಕೆಲಸಗಳನ್ನು ಇಷ್ಟಪಡುತ್ತಾರೆ. ಆದರೆ ಇಷ್ಟದ ಹುಡುಗಿ ಜೊತೆ ಸಿನಿಮಾ ನೋಡೋದು ನಮ್ಮಂಥ ಸಿನಿಪ್ರಿಯರಿಗೆ ಒಂದು ಅವರ್ಣನೀಯ ಅನುಭವ. ಎದುರಿಗೆ ಇಷ್ಟದ ಫಿಲಂ ಓಡುತ್ತಿರುತ್ತೆ, ಪಕ್ಕದಲ್ಲಿ ಈಕೆ ಎದೆಗೊರಗಿ ಚಿತ್ರ ನೋಡುವ ಸಮಯ, ಕಾಲ ಹಾಗೆಯೇ ನಿಂತುಬಿಡಲಿ ಎಂದು ಆಸಿಸಿದ್ದು ಸುಳ್ಳಲ್ಲ.

5

#7 ಬೇಗ ಬಾ ಚಿನ್ನು
ಕಿರಿಕ್ ಪಾರ್ಟಿ ಚಿತ್ರದ ‘ಬೆಳಗೆದ್ದು’ ಹಾಡಲ್ಲಿ ಸಾನ್ವಿಯನ್ನು ಒಂದು ಕ್ಷಣ ಬಾಲ್ಕನಿಯಲ್ಲಿ‌ ನೋಡಲು ಕರ್ಣ ಎಷ್ಟು ಕಷ್ಟ ಪಟ್ಟರೂ ಇಷ್ಟ ಪಟ್ಟು ಓಡಾಡುತ್ತಾನೆ ಎಂದು ನೋಡಿದ್ದೇವೆ. ನಮ್ ಸೀನಿಯರ್ ಒಬ್ಬರ ಕಥೆ ಹೆಚ್ಚು ಕಮ್ಮಿ ಹಾಗೆಯೇ ಇದೆ. ಒಮ್ಮೆ ಹೀಗೆ ಮಾತನಾಡುತ್ತಾ ಕೇಳಿದೆ, “ಇನ್ನು 30 ವರ್ಷಗಳ ನಂತರ ನಿಮ್ಮ ಲವ್ ಲೈಫಿನ ಕಡೆ ತಿರುಗಿ ನೋಡಿದರೆ ಯಾವ ಕ್ಷಣ ನಿಮಗೆ ತುಂಬಾ ಮುದ ನೀಡುತ್ತೆ” ಅಂತ. ಅವರು ಹೇಳಿದರು, “ನನ್ನ ಬೈಕ್ ಸೌಂಡ್ ಅವಳಿಗೆ ಚೆನ್ನಾಗಿ ಗೊತ್ತು, ದೂರದಲ್ಲಿ ನನ್ನ ಬೈಕ್ ಸೌಂಡು ಕೇಳುತ್ತಿದ್ದ ಹಾಗೆ ಅವರು ಬಾಲ್ಕನಿಯಲ್ಲಿ ಹಾಜರ್. ಆ ಕಡೆಯಿಂದ ಈ ಕಡೆ, ಈ ಕಡೆಯಿಂದ ಆ ಕಡೆ ನಾಲ್ಕು ರೌಂಡ್‌ ಹಾಕಿ ಮನೆಗೆ ಹೋಗೋ ಹೊತ್ತಿಗೆ ಅವರ ಮೆಸೇಜ್ ಪ್ರತ್ಯಕ್ಷ, “ಇನ್ನೊಂದು ಸಲ ಬಾ ಚಿನ್ನು, ಯಾಕೋ ಮನಸ್ಸು ತುಂಬಿ ನೋಡಿದೆ ಅನ್ನಿಸಲಿಲ್ಲ” ಅಂತ. ಮೊದಲೇ ನಾವು ಹುಡುಗರು ದಾರಿ ಮರೆಯೋದಕ್ಕೆ ಫೇಮಸ್ಸು, ಹಿಂಗೆಲ್ಲಾ ಆದರೆ ಗೊತ್ತಲ್ಲಾ ಮುಂದೆ!

6

ಹುಡುಗಿಯರ ಬಗ್ಗೆ ಎಷ್ಟು ಮಾತನಾಡಿದರೂ ಕಮ್ಮಿ ಅನಿಸುತ್ತೆ. ನಾವು ಎಷ್ಟೇ ಹೇಳುತ್ತಾ ಹೋದರೂ ಸಮಯ ಮತ್ತು ಪದಗಳು ಸಾಕಾಗುವುದಿಲ್ಲ ಎನಿಸುವ ವಿಷಯ ಇದೊಂದೇ. ಪಾಪ ಹುಡುಗಿಯರು, ಹೋಗಿ ಹೋಗಿ ನಮ್ಮಂಥ stupid ಹುಡುಗರ ಜೊತೆ ಏಗುತ್ತಾ ಇರಬೇಕಲ್ಲಾ, sooo ಪಾಪ ಅಲಾ! ಹೋಗಲಿ ಬಿಡಿ,

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..