- By Guest Writer
- Saturday, December 17th, 2016
ಚಿತ್ರ ದೊಡ್ದದಾದರೇನು ಚಿಕ್ಕದಾದರೇನು?ಸಿನಿಮಾದಲ್ಲಿ ಬರುವ ಪಾತ್ರಗಳು ಮದುವೆ ಆಮಂತ್ರಣ ನೀಡಲು ಮನೆಗೆ ಬಂದ ಅತಿಥಿಯ ಹಾಗೆ ಪ್ರೇಕ್ಷಗನಿಗೆ ಏನು ಹೇಳಬೇಕೆಂದು ಪಾತ್ರಗಳು ಪರದೆಯ ಮೇಲೆ ಬರುತ್ತವೆಯೋ ಅದನ್ನು ಹೇಳಿ ಹೊರಟು ಹೋಗಿ ಬಿಡಬೇಕು.ವಿನಾಕಾರಣ ಹೆಚ್ಚು ಹೊತ್ತು ಅಲ್ಲೆ ನಿಲ್ಲಬಾರದು.ಬೋರು ಹೊಡೆಸಬಾರದು.ಮನುಷ್ಯ ಕಥೆಗಳನ್ನು ಇಷ್ಟಪಡುವವನು.ಅದೂ ತನ್ನ ಬದುಕಿನ ಕಥೆ ಪರದೆಯ ಮೇಲೆ ಬಂದಾಗ ಇನ್ನಷ್ಟು ಇಷ್ಟಪಡುತ್ತಾನೆ.ಎರಡು ನಿಮಿಷದಲ್ಲಿ ಒಂದು ಚಿಕ್ಕ ಕಥೆಯನ್ನು ಹೇಳುವುದು ಅಷ್ಟು ಸುಲಭವಲ್ಲ.ಎರಡು ಮೂರು ನಿಮಿಷದಲ್ಲಿ ದೊಡ್ದದೊಂದು ಕಥೆಯನ್ನು ಹೇಳುವುದು ಇನ್ನೂ ದೊಡ್ಡ ಸವಾಲು.
ಈ ಕಿರು ಚಿತ್ರದಲ್ಲಿ ಕೇವಲ ಮೂರು ನಿಮಿಷದಲ್ಲಿ ನಮ್ಮ ಬದುಕು ಮತ್ತು ಅದರ ಹೋರಾಟ ಆರಂಭವಾದ ರೀತಿಯನ್ನು ಹೇಳುವ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ.
“ದ ಟಿಫ್ಫಿನ್ ಬಾಕ್ಸ್” ಈ ಕಿರುಚಿತ್ರವನ್ನು ಪ್ರಮೋದ್ ಮರವಂತೆ ಬರೆದು,ನಿರ್ದೇಶಿಸಿದ್ದಾರೆ.ಸಚಿನ್ ಬಸ್ರೂರ್ ಸಂಗೀತ ನೀಡಿದ್ದಾರೆ.ಯೋಗೆಂದ್ರ ಆಚಾರ್ಯ ನಟಿಸಿದ್ದಾರೆ.ನೋಡಿ ಶೇರ್ ಮಾಡಿ.
ನಿಮ್ಮ ವೀವ್ ಮತ್ತು ವಾವ್ ಗಳೇ ಇಂತಹ ಪ್ರತಿಭೆಗಳಿಗೆ ಚಪ್ಪಾಳೆ .
This video belongs to Pramod M
ಇಲ್ಲಿ embed ಮಾಡಿರುವ youtube ವೀಡಿಯೊ link ಅದರ ಮೂಲ ಹಕ್ಕುದಾರರ youtube channel ಯಿಂದ ಎರವಲು ಪಡೆಯಲಾಗಿದೆ ..