- By Guest Writer
- Sunday, January 8th, 2017
ಯಾವಾಗಲೂ ಸರಿಯಾಗಿ 5:30 pm ಗೆ ಕಾಲೇಜ್ ಇಂದ ಹೊರಡೋ ನಾನು, ನಿನ್ನೆ ಏನೋ ಪ್ರಾಜೆಕ್ಟ್ ಮೀಟಿಂಗ್ ಇದ್ದಿದ್ದರಿಂದ 6:15 ಗೆ ಕಾಲೇಜ್ ಬಿಡೋ ಹಾಗೆ ಆಯ್ತು.. ದಿನಾಗ್ಲೂ ಕಾರ್ pooling ಮಾಡೋದ್ರಿಂದ, ಬಸ್ ಜಂಜಾಟ ಇರಲಿಲ್ಲ.. ” ಅಯ್ಯೋ.. ಇವತ್ತು ಬಸ್ ಅಲ್ಲಿ ನೇತಾಡ್ಕೊಂಡ್ ಹೋಗಬೇಕಲ್ಲಪ್ಪಾ.. ಸೀಟ್ ಸಿಕ್ರೆ ಸಾಕು ” ಅನ್ಕೊಂಡ್ ಬಸ್ ಸ್ಟಾಪ್ ಗೆ ಬಂದೆ …ಮೊಬೈಲ್ ಅಲ್ಲಿ ಅದೇ notifications ಮೇಲೆ ಬೆರಳಾಡಿಸ್ತಾ ಎಷ್ಟೇ ಹೊತ್ತು ಕಾದ್ರೂ ಒಂದೇ ಒಂದು ಬಸ್ ಸುಳಿವಿಲ್ಲ .. !! ಹಾಗೂ ಹೀಗೂ ಒಂದ್ ಇಪ್ಪತ್ತು ನಿಮಿಷ ಆದಮೇಲೆ ಯಾವುದೋ ಒಂದು ಬಸ್ ಅಂತೂ ಇಂತೂ ಬಂತು..!!
” FINALLYYYY !!!!! ” ಅನ್ಕೊಂಡ್ ನೋಡಿದ್ರೆ… ಸಿಕ್ಕಾಪಟ್ಟೆ rush !! ಜನಾ ಅಂದ್ರೆ ಜನ!! ಟೈಮ್ ನೋಡಿದ್ರೆ ಆಗಲೇ 7 pm ಆಗಿತ್ತು .. ಈ ಬಸ್ ಬಿಟ್ರೆ, ಇನ್ಯಾವಾಗ next ಬಸ್ ಬರತ್ತೋ ಏನೋ.. ‘ಶಿವಾ’ ಅಂತ ಹತ್ಕೊಂಡೆ … ಯಾಕ್ ಕೇಳ್ತಿರಾ ಆಮೇಲೆ ನನ್ ಪಾಡು .. ಬಸ್ ಅಲ್ಲಿ ನಿಲ್ಲೋಕೂ ಜಾಗ ಇಲ್ಲ .. “ಹೀಗೆ 45 mins ನಿಲ್ಬೇಕಲ್ಲಪ್ಪಾ … ಗಾಳಿ ಬರ್ತಾ ಇಲ್ಲ… ಹೊಟ್ಟೆ ಹಸಿವು ಬೇರೆ atleast ಸ್ವಲ್ಪ ಗಾಳಿ ಬರೋ ಕಡೆ ಆದರೂ ನಿಂತಿದ್ರೆ ಸಮಾಧಾನ ಆಗ್ತಾ ಇತ್ತು ” ಅಂತ ಅನ್ಕೊಂಡೆ ..
ನನ್ ಪುಣ್ಯಕ್ಕೆ next ಸ್ಟಾಪ್ ಅಲ್ಲಿ ಬಸ್ ಅಲ್ಲಿ ನಿಂತಿದ್ದ ಅರ್ಧ ಜನ ಕಡಿಮೆ ಆದ್ರು.. ನಂಗೆ ಕಿಟಕಿ ಪಕ್ಕ ಗಾಳಿ ಬರೋ ಕಡೆ, ನಿಲ್ಲೋ “ಭಾಗ್ಯ” ಸಿಕ್ತು…. “ಆಹಾ!!” ಅಂತ ತಂಗಾಳಿನ ಸವಿಯೋ ಅಷ್ಟರಲ್ಲಿ ನಿಂತೂ ನಿಂತೂ ಕಾಲು ನೋವಾಗಿತ್ತು .. “ಅಯ್ಯೋ… ಇನ್ನೂ ಅರ್ಧ ಗಂಟೆ ನಿಲ್ಬೇಕಲ್ಲಪ್ಪಾ !! ಸ್ವಲ್ಪ ಆದ್ರೂ ಕೂರೋಕೆ ಜಾಗ ಇದಿದ್ರೆ ಆರಾಮಾಗಿ ಇರ್ತಿತು” ಅನ್ಕೊಂಡೆ
ಆ ದೇವ್ರಿಗೆ ನನ್ನ ಕೂಗು ಕೇಳಿಸ್ತೇನೋ .. ನನ್ ಮುಂದೆ ಇದ್ದ ಸೀಟ್ ಖಾಲಿ ಆಯ್ತು.. ಸಿಕ್ಕಿದ್ದೇ ಸಾಕು ಅಂತ ‘ಪಟ್’ ಅಂತ ಕುತ್ಕೊಂಡೆ .. “ಅಬ್ಭಾ ಸದ್ಯ.. ಇನ್ನು ನೆಮ್ಮದಿ” ಅನ್ನೋ ಅಷ್ಟರಲ್ಲಿ , ಪಕ್ಕದಲ್ಲಿ ಕೂತಿದ್ದ ಆಂಟಿ ನ ನೋಡಿದೆ.. ಧಡೂತಿ ಆಂಟಿ .. ಎರಡು ಸೀಟ್ ಅಲ್ಲಿ ಒಂದೂ ಮುಕ್ಕಾಲು ಸೀಟ್ ಉ ಅವರೇ ಕೂತಿದಾರೆ ಅನ್ಸ್ತು.. “ನಂಗೆ ಜಾಗನೇ ಸಲ್ತಾ ಇಲ್ಲ” ಅಂತ ಮನಸಲ್ಲಿ ಕಸಿವಿಸಿ ಶುರು ಆಯಿತು …
ಸ್ವಲ್ಪ ಹಾಗೂ ಹೀಗೂ position adjust ಮಾಡ್ಕೊಂಡೆ .. ಊಹುಂ ..!! ಏನೇ ಆದ್ರೂ ಜಾಗ ಸಲ್ತಾ ಇಲ್ಲ.. ಹೊಟ್ಟೆ ಬೇರೆ ತಾಳ ಹಾಕ್ತಾ ಇತ್ತು.. ಪಕ್ಕದಲ್ಲಿ ಇದ್ದ ಆಂಟಿ ನನ್ ನೋಡಿ smile ಮಾಡಿದಾಗ ಉರಿತಾ ಇತ್ತು… ಮನಸಲ್ಲಿ ಅದೇ ರಾಗ ಅದೇ ಹಾಡು .. “ಜಾಗ ಸಲ್ತಾ ಇಲ್ಲ… ಜಾಗ ಸಲ್ತಾ ಇಲ್ಲ “!! ಹೀಗೆ ಮನಸಲ್ಲೇ ಕೊರಗಿಕೊಂಡು ಕೂತಿದ್ದೆ… ನನ್ ಸ್ಟಾಪ್ ಬಂತು… !!
ಬಸ್ ಇಂದ ‘ಉಸ್ಸಪ್ಪಾ’ ಅಂತ ಇಳಿದು ಮನೆಗೆ ಹೋಗಬೇಕಾದ್ರೆ , ಬಸ್ ಅಲ್ಲಿ ಆಗಿದ್ದನೆಲ್ಲಾ ಮನಸಲ್ಲೇ rewind and play ಮಾಡಿದೆ.. ನಿಜಕ್ಕೂ ಆಶ್ಚರ್ಯ ಆಯ್ತು..
first ಬಸ್ ಸಿಕ್ಕಿದ್ರೆ ಸಾಕಪ್ಪಾ ಅಂತಿದ್ದೆ .. ಬಸ್ ಸಿಕ್ಕಿದ ತಕ್ಷಣ, ನಿಂತ್ಕೊಳೋಕೆ ಜಾಗ ಸಿಕ್ಕಿದ್ರೆ ಸಾಕು… ಆಮೇಲೆ ಕಿಟಕಿ ಪಕ್ಕ.. ಗಾಳಿ ಬೇಕು.. ಆಮೇಲೆ ಕಾಲು ನೋವು .. ಕೂರೋಕೆ ಸ್ವಲ್ಪ ಜಾಗ ಸಿಕ್ರೆ ಸಾಕು .. ಆಮೇಲೆ ಜಾಗ ಸಿಕ್ಕಿದ್ರೂ ಜಾಗ ಸಾಲ್ತಿಲ್ಲ..!!!
“what is my problem !!!? “ಅನಿಸ್ತು … ಸಿಕ್ಕಿದಷ್ಟರಲ್ಲಿ ತೃಪ್ತಿ ಪಡೋ ಬುದ್ಧಿ ಯಾಕಿಲ್ಲ ನಂಗೆ ಅನಿಸ್ತು .. ~~ ನನ್ ಜೊತೆ ಬಸ್ ಹತ್ತಿದವರು ನಾನ್ ಇಳಿಬೇಕಾದ್ರೂ ನಿಂತೇ ಇದ್ರು.. ಅಂತದ್ರಲ್ಲಿ ನಂಗೆ, atleast ಕೂರೋಕೆ ಜಾಗ ಸಿಕ್ಕಿತ್ತು.. ! instead of being happy and thankful for what I have.. why did my mind create fuss about the things I don’t have!! Why did I want even more!!! ನಾನ್ಯಾಕೆ ಆ ಆಂಟಿ ನ ನೋಡಿ , ಅವರಿಗೆ ಅಷ್ಟೊಂದ್ ಜಾಗ ಸಿಕ್ತು.. ನಂಗೆ ಇಲ್ಲ ಅಂತ ಕಂಪೇರೆ ಮಾಡ್ಕೊಂಡ್ ಮನಸಿಗೆ ಕಸಿವಿಸಿ ಮಾಡ್ಕೊಂಡೆ??!! I dunno.. I don’t have an answer!!
ಬದುಕೂ ಅಷ್ಟೇ ಅಲ್ವಾ ?? ಒಂದು ಬಸ್ ಪ್ರಯಾಣ ಇದ್ದಂಗೆ… ಇರೋದೇ ಸ್ವಲ್ಪ ಹೊತ್ತು.. ಯಾವಾಗ್ ಯಾರ್ ಟಿಕೆಟ್ validity ಮುಗ್ಯತ್ತೂ… ಯಾರ್ ಪ್ರಯಾಣ ಕೊನೆ ಆಗತ್ತೋ .. ಯಾರಿಗ್ ಗೊತ್ತು.. ಇರೋ ಆ ಸ್ವಲ್ಪ ಹೊತ್ತಲ್ಲೇ ಎಷ್ಟೆಲ್ಲಾ ಡ್ರಾಮಾ ಮಾಡ್ತೀವಿ ನಾವುಗಳು ..!!
2 BHK ಇರೋರಿಗೆ 3 BHK ಮಾಡೋ ಆಸೆ.. 3 bhK ಇರೋನಿಗೆ ಒಂದ್ ದೊಡ್ ಬಂಗಲೆ ಮಾಡೋ ಆಸೆ.. 30-20 ಸೈಟ್ ಇರೋನಿಗೆ , 60-40 ಮಾಡೋ ಆಸೆ!!!
“ಅಯ್ಯೋ .. ರೀ .. ನಮ ಮನೆ ಪಕ್ಕದ್ ಮನೆ ಅವರು ಸ್ಮಾರ್ಟ್ ಟಿವಿ 27 inch ದು ತೊಗೊಂಡಿದರೆ.. ನಾವ್ ಇನ್ನು 17 inch ಅಲ್ಲೇ ಇದೇವಿ.. ”
“ಮಗಾ ಏನೋ ನೀನು.. ಇನ್ನು ಅದೇ ಹಳೆ ಮಾಡೆಲ್ ಫೋನ್ ಇಟ್ಕೊಂಡಿದ್ಯ.. ನಿನ್ juniors ಎಲ್ಲ iphone ಇಟ್ಕೊಂಡ್ ಓಡಾಡ್ತಾರಲ್ಲೋ !! ”
ಊಟ ಇಲ್ದೆ ಇರೋನಿಗೆ ಒಂದ್ ಹೊತ್ತು ತಂಗಳನ್ನ ಸಿಕ್ರೂ ಖುಷಿ ಆಗತ್ತೆ.. ಬಿಸಿ ಅನಾ ಇದಿದ್ರೆ ಇನ್ನು ಚೆನ್ನಾಗ್ ಇರ್ತಿತ್ತು ಅನ್ಸತ್ತೆ ಸ್ವಲ್ಪ ಹೊಟ್ಟೆ ತುಂಬಿದ್ಮೇಲೆ.. ಅನ್ನ ಸಾರಿನ ಜೊತೆ ಸ್ವಲ್ಪ ಉಪ್ಪಿನಕಾಯಿ ಇದಿದ್ರೆ ಸ್ವರ್ಗ ಅನ್ಸತ್ತೆ…!! ಹೀಗೆ ಆಸೆ ಅನ್ನೋ ಗಾಳಿಪಟಕ್ಕೆ ಸೂತ್ರನೇ ಇಲ್ಲ ಅಲ್ವಾ?? ಆಸೆಗಳಿಗೆ ಲಿಮಿಟ್ ಏ ಇಲ್ಲ ಅಲ್ವಾ??
ಆಸೆ ಪಡೋದು ತಪ್ಪು ಅಂತ ನಾನ್ ಹೇಳ್ತಾ ಇಲ್ಲ.. ಆದ್ರೆ… ಏನೇ ಸಿಕ್ರೂ ಅಸಮಾಧಾನದಿಂದ ಅತೃಪ್ತರಾಗಿರೋದು ತಪ್ಪು ಅಂತ ನಂಗ್ ಅನ್ಸತ್ತೆ… !! ಊಟದ ಜೊತೆ ಉಪ್ಪಿನಕಾಯಿ ಸಿಗಲಿಲ್ಲ ಅಂತ ಊಟ ಮಾಡಬೇಕಾದರೆ ಕೊರಗೋ ಬದಲು.. ‘ಸಧ್ಯ ಒಂದು ಹೊತ್ತಿನ ಊಟ ಸಿಕ್ತಲ್ಲ’ ಅಂತ ಖುಷಿ ಪಡೋಣ.. ಅಲ್ವಾ???