4405

What if you get married to a ಟಿಕ್ ಟಾಕ್ Queen

ಟಿಕ್ಟಾಕ್ ವೀಡಿಯೋಸ್ ನೋಡಿ ಖುಷಿ ಪಡೋರ್ ಎಷ್ಟ್ ಜನ ಇದ್ದಾರೋ ಅಷ್ಟೇ ಜನ ಕ್ಯಾಕರಿಸಿ ಉಗಿಯೋರು ಕೂಡ ಇದ್ದಾರೆ .. ಏನೇ ಆಗ್ಲಿ ಟಿಕ್ಟಾಕ್ ಬಂದ ಮೇಲೆ ಎಷ್ಟೋ ಹುಡುಗಿರೋ ಟ್ಯಾಲೆಂಟ್ ಹೊರಗಡೆ ಬರ್ತಾ ಇವೆ . ಏನೇ ಆಗಲಿ, ಅವ್ರಿಗೆ ಟ್ಯಾಲೆಂಟ್ ತೋರಿಸೋಕೆ ಒಂದು ಪ್ಲಾಟ್ಫಾರ್ಮ್ ಸಿಕ್ಕಿದೆ . ಅವರ ಪಾಡಿಗೆ ಖುಷಿಯಿಂದ ಜನರನ್ನು ಮನೋರಂಜಿಸಿ ಖುಷಿಪಟ್ಕೋತಿದ್ದಾರೆ.

ಈ ಆರ್ಟಿಕಲ್ ಕೇವಲ ತಮಾಷೆಗಾಗಿ . ಸೀರಿಯಸ್ ಆಗಿ ತಗೊಂಡ್ರೆ ನೀವು ಜನರನ್ನು ಮನೋರಂಜಿಸುವ ನಟ / ನಟಿಯರೇ ಅಲ್ಲಾ.. ಕೇವಲ ತಮಾಷೆಗಾಗಿ ಈ ಆರ್ಟಿಕಲ್ ಓದಿ ,ಖುಷಿ ಪಡಿ ..ಅಷ್ಟೇ

incase ನೀವು ಮದ್ವೆ ಆಗೋ ಹುಡುಗಿ ಟಿಕ್ಟಾಕ್ ಸ್ಟಾರ್ ಆಗಿದ್ದರೆ ನಿಮ್ಮ ಪರಿಸ್ಥಿತಿ ಹೇಗೇಗೆಲ್ಲ ಇರಬಹುದು ?

1.ನೀವೂ ಕೂಡ ನಿಧಾನವಾಗಿ ನಿಮ್ಮ ಹೆಂಡತಿಯ tiktok ವೀಡಿಯೋಸ್ ಅಲ್ಲಿ ಕಾಣಿಸಿಕೊಳ್ಳೋಕೆ ಶುರುಮಾಡ್ತೀರಿ .

2.ನೀವು ನಿಮ್ಮ ಫ್ರೆಂಡ್ಸ್ ನ ಮೀಟ್ ಮಾಡೋಕೆ ನಿಮ್ಮ ಅಡ್ಡಕ್ಕೆ ಹೋದಾಗ ನಿಮ್ಮ friends -” ಮಗ, tiktok ಹೀರೋಯಿನ್ ಮ್ಯಾನೇಜರ್ ಬಂದ ನೋಡು ಮಗ .. ದೊಡ್ ಸೆಡೆ ನನ್ಮಗ ” ಅಂತ ಇನ್ನೊಂದ್ ರೌಂಡ್ ಟ್ರೊಲ್ಲಿಂಗ್ ಪಕ್ಕಾ

3.ನೀವು ನಿಮ್ ಹೆಂಡ್ತಿ ಜೊತೆ ಮದ್ವೆ function ಗೆ , ಟ್ರಿಪ್ ಗೆ ಯಾವ್ದಾದ್ರು ಪ್ಲೇಸ್ ಗೆ ಹೋದಾಗ ನಿಮ್ ಹೆಂಡ್ತಿ ಖಂಡಿತ ಒಂದ್ ಟ್ರಿಕ್ಟಾಕ್ ವಿಡಿಯೋ ಮಾಡ್ತಾಳೆ..ನೀವು ಅದರಲ್ಲಿ ಪಕ್ಕಾ ಬಕ್ರಾ ಆರ್ಟಿಸ್ಟ್

4.ನಿಮ್ ಮೊಬೈಲ್ ಗ್ಯಾಲರಿ ಲಿ ನಿಮ್ ಫೋಟೋಸ್ ಗಿಂತ ಜಾಸ್ತಿ ನೀವ್ ಮಾಡಿರೋ tiktok ವೀಡಿಯೋಸ್ ಇರುತ್ತೆ

5.ನೀವು ಯಾವ್ದೋ ಒಂದ್ ಪ್ಲೇಸ್ ಅಲ್ಲಿ  ಹೋಗ್ತಿರೋವಾಗ ನಿಮ್ tiktok ವೀಡಿಯೋಸ್ ನೋಡಿ ಶೇರ್ ಮಾಡಿರೋರೆಲ್ಲ “ಮಚ್ಚಾ, ಅವ್ನೆ ಅಲ್ವಾ..ಆ ವಿಡಿಯೋ ಲಿ ಇರೋನು ” ಅಂತ ಹೇಳಿದ್ದನ್ನ ನೀವ್ ಕೇಳಿಸ್ಕೊಂಡು ಒಂದ್ ಕ್ಷಣ ಯಾವ್ ವಿಡಿಯೋ ಬಗ್ಗೆ ಮಾತಾಡ್ತಿರ್ಬೋದು ಅಂತ ಕನ್ಫ್ಯೂಷನ್ ಮೋಡ್ ಗೆ ಹೋಗ್ಬಿಡ್ತೀರಾ ..ಆಮೇಲೆ ಟ್ರಿಕ್ಟಾಕ್ ವಿಡಿಯೋ ಅಂತ ಗೊತ್ತಾದ್ ಮೇಲೆ “ನನ್ನ ಕರ್ಮಾ ” ಅಂತ ಮುಂದಕ್ ಹೋಗ್ತೀರಾ

6.ಫೇಸ್ಬುಕ್ ಅಲ್ಲಿ ನಿಮ್ಮ ಫ್ರೆಂಡ್ಸ್ tiktok ಸ್ಟಾರ್ಸ್ ನ ಟ್ರೊಲ್ ಮಾಡೋದ್ ನೋಡಿ ” ಮದ್ವೆ ಆಗದೆ ಸುಮ್ನೆ ಬ್ಯಾಚುಲರ್ ಆಗಿದ್ರೆ ಬೆಟರ್ “ಅಂತ ಸೀದಾ ಬಾರ್ ಗೆ ಫ್ರೆಂಡ್ ಜೊತೆ ಹೋಗಿ ಟೈಟ್ ಆಗಿ ಇರೋ ಬರೋ frustration ಎಲ್ಲ ಹೊರಗ್ ಹಾಕ್ತೀರಾ

7.ಸರ್ಕಾರ tiktok ಬ್ಯಾನ್ ಮಾಡ್ತು ಅಂತ ಸುದ್ದಿ ಗೊತ್ತಾದ್ ತಕ್ಷಣ ಡಂಕಣಕ ಡಂಕಣಕ ಅಂತ ಸ್ಟೆಪ್ ಹಾಕೋಕೆ ಶುರು ಮಾಡ್ತೀರಿ

8.tiktok ಬ್ಯಾನ್ ಆದ್ ಎರಡನೇ ದಿನದಲ್ಲಿ ಸರ್ಕಾರ ಬ್ಯಾನ್ ಹಿಂದಕ್ಕೆ ತಗೊಂಡಾಗ -” ಇದು ಯಾರು ಬರೆದ ಕಥೆಯೋ. ನನಗಾಗಿ ಬಂದ ವ್ಯಥೆಯೋ ‘

9.ಒಂದ್ ಕಾಲದಲ್ಲಿ ರಾಜಾಜಿನಗರ ಅಲ್ಲಿರೋ ಒರಿಯನ್ ಮಾಲ್ ಅಲ್ಲಿ ಕಲರ್ ಕಲರ್ ಕಾಗೆ ನೋಡಿ ಖುಷಿ ಪಡೋಕೆ ಅಂತಾನೆ ವೀಕೆಂಡ್ ಪೂರ್ತಿ ಅಲ್ಲಿ ಕೂತ್ಕೊಂಡಿರೋ ನೀವು , tiktok ಸ್ಟಾರ್ ನ ಮದ್ವೆ ಆದ್ ಮೇಲೆ ಒರಿಯನ್ ಮಾಲ್ ಗೆ ಹೋಗೋದು ಬಿಡಿ , ರಾಜಾಜಿನಗರ ಹೆಸರ್ ಕೇಳಿದ್ ತಕ್ಷಣ ಹೆದರ್ಕೊಂಡ್ ಬಿಡ್ತೀರಿ .. anyhow Orion mall is an outdoor posh location for tiktok stars 😀

10.ಇಷ್ಟೆಲ್ಲಾ ತಲೆಬಿಸಿ ನಡುವೆಯೂ ಯಾರೋ ಒಬ್ಬ ಫ್ಯಾನ್ ನಿಮ್ tiktok ವಿಡಿಯೋ ಗೆ ” ನೀವ್ಯಾಕೆ ಫಿಲಂ ಅಲ್ಲಿ ಟ್ರೈ ಮಾಡ್ಬಾರ್ದು ” ಅಂತ ಕಾಮೆಂಟ್ ಹಾಕಿರೋದನ್ನ ನೋಡಿ ಒಳಗೊಳಗೇ ಖುಷಿ ಪಡೋಕೆ ಶುರು ಮಾಡ್ತೀರಿ ..

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..