2275

ಪ್ರೀತಿ ಕುರುಡಾದರೆ ಮೊದಲ ನೋಟದಲ್ಲಿಯೇ ಪ್ರೀತಿ ಹುಟ್ಟೋದು ಹೇಗೆ…?

ಕೆಲವರು ಹೇಳುತ್ತಾರೆ ಪ್ರೀತಿ ಕುರುಡು ಎಂದು. ಅದು ತಪ್ಪು. ಪ್ರೀತಿ ಕುರುಡಾದರೆ ಮೊದಲ ನೋಟದಲ್ಲಿಯೇ ಪ್ರೀತಿ ಹುಟ್ಟೋದು ಹೇಗೆ…? ಲವ್ ಅಟ್ ಫಸ್ಟ್ ಸೈಟ್ ಆಗೋದು ಹೇಗೆ…? ಅಂದ ಮೇಲೆ ಅಲ್ಲಿ ಕಣ್ಣು, ದೃಷ್ಟಿ ಇರಲೇ ಬೇಕಲ್ಲವೇ. ಹಾಗಾದರೆ ಕುರುಡಾಗಿರುವುದು ಪ್ರೀತಿಯಲ್ಲ ಬರಿಯ ಆಕರ್ಷಣೆ ಮತ್ತು ಕಾಮ.

ಆದ್ದರಿಂದ ಕಾಮ ಪ್ರೇರಿತ ಆಕರ್ಷಣೆಯನ್ನು ತಪ್ಪಾಗಿ ಪ್ರೀತಿ ಎಂದು ಕರೆದು ಅದನ್ನು ಸಮರ್ಥಿಸಿಕೊಂಡು ಕೊನೆಗೊಂದು ದಿನ ಸತ್ಯದ ಅರಿವಾದಾಗ ತಮ್ಮ ತಪ್ಪನ್ನು ಒಪ್ಪಿಕೊಳ್ಳಲು ತಯಾರಿಲ್ಲದವರು ನೀಡುವ ಕುಂಟು ನೆಪವೇ ಪ್ರೀತಿ ಕುರುಡು ಎಂಬುದು. ಈ ರೀತಿ ಆಕರ್ಷಣೆಗೆ ಒಳಪಟ್ಟು ನಿಮ್ಮನ್ನು ಪ್ರೀತಿ ಎಂದು ನಂಬಿಸಿ ಕೊನೆಗೆ ಮೋಸ ಮಾಡಿ ಹೋಗುತ್ತಿದ್ದರೆ ಹಾಗೆ ಹೋಗುವವರು ಹೋಗಲಿ ಬಿಡಿ. ಅವರನ್ನು ನಿಲ್ಲುವಂತೆ ಒತ್ತಾಯಿಸಬೇಡಿ. ಅವರು ಮತ್ತೆ ನಿಮ್ಮನ್ನು ಪ್ರೀತಿಸುವಂತೆ ಬೇಡಿಕೊಳ್ಳಬೇಡಿ. ಅವರ ಗಮನ ನಿಮ್ಮತ್ತ ಸೆಳೆಯುವಂತೆ ಯಾವುದೇ ಭಾವನಾತ್ಮಕ ನಾಕಟವನ್ನಾಡಬೇಡಿ. ಅವರು ಮತ್ತೆ ನಿಮ್ಮನ್ನೇ ಪ್ರೀತಿಸಲು ಅಸಹಾಯಕರಾಗುವಂತೆ ಯಾವುದೇ ಇಮೋಷನಲ್ ಬ್ಲ್ಯಾಕ್ಮೇಲ್ ಬೇಡ. ಅವರು ತಾನಾಗಿಯೇ ಮತ್ತೆ ಬಂದರೆ ಸರಿ. ಇಲ್ಲಾಂದರೆ ಹೋಗುವವರು ಹೋಗಲಿ ಬಿಡಿ.

ನೀವು ಯಾರನ್ನು ಇಷ್ಟ ಪಡುತ್ತೀರೋ ಅವರಿಂದ ನಿಮಗೆ ಯಾವತ್ತೂ ಸುಖ ಸಿಗುವುದಿಲ್ಲ. ನಿಮ್ಮನ್ನು ಪ್ರೀತಿಸುವವರಿಗೆ ಸ್ಪಂದಿಸಿ ಅವರು ನಿಜವಾಗಿಯೂ ನಿಮ್ಮನ್ನು ಸುಖವಾಗಿಡುತ್ತಾರೆ. ನೆನಪಿಡಿ, ಒಬ್ಬರ ಮೇಲಿನ ಪ್ರೀತಿಗಾಗಿ ನೀವು ನಿಮ್ಮ ಮನೆ, ತಂದೆ ತಾಯಿ, ಜಾತಿ ಧರ್ಮ ಎಲ್ಲವನ್ನೂ ಬಿಟ್ಟು ಹೋಗಲು ತಯಾರಿದ್ದೀರಿ ಹೌದೆಂದಾದರೆ ಅವರೂ ನಿಮಗಾಗಿ ನಿಮ್ಮ ಪ್ರೀತಿಗಾಗಿ ಅವೆಲ್ಲವನ್ನೂ ಬಿಟ್ಟು ಬರಲು ತಯಾರಿರಬೇಕಲ್ಲವೇ…?

Courtesy :Mahesh Pai , Janamanada Sanchalana
Collected By: Nithish Acharya

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..