1581

ಹೆಸರಿನೊಳಗೇನಿದೆ…? ನಾಮದ ಹಿಂದಿನ ಮಹಿಮೆ

ಇನ್ನೊಂದ್ಸಲ competition ಗೆ  ಹೆಸರು ಬದಲಯಿಸಿ ಕೊಡ್ಬೆಕು. ಈ ಹೆಸರು ನೀಡಿದ್ದಕ್ಕೆ ನಂಗೆ ಪ್ರೈಸ್ ಬರೊಲ್ಲ ಅಂತ ಮೆಸ್ ಅಣ್ಣನ ಪುಟ್ಟ ಮಗಳು ನನ್ನಲ್ಲಿ ಹೇಳಿದಳು. ನಾನು ಅವಳಿಗೆ ತಿಳಿ ಹೇಳಿದರೂ ಬಿಡದೆ ಪಟ್ಟು ಹಿಡಿದಳು. ಸುಲಭವಾಗಿ ಅರ್ಥವಾಗುವ ಪ್ರಾಯ ಅವಳದಲ್ಲ. ಅರ್ಥವಾಗುವಂತೆ ಹೇಳುವ ತಾಳ್ಮೆ ನನ್ನಲ್ಲೂ ಇರಲಿಲ್ಲ.

ನಂಗೂ ಸಣ್ಣವಳಿದ್ದಾಗ ನನ್ನ ಹೆಸರು ಮಾತ್ರ ಮುದ್ದಾಗಿಲ್ಲ ಎನಿಸುತಿತ್ತು. ಅಮ್ಮ ಅಪ್ಪನಿಗು ಹೇಳ್ತಿದ್ದೆ. ಅದೆಲ್ಲ ಆಗಿ ಯಾವಾಗ ಎಲ್ಲರೂ ನನ್ನ ಹೆಸರಿಂದ ನನ್ನ ಗುರ್ತಿಸಲಾರಂಭಿಸಿದರೋ ಆಗ ಅಪ್ಪ ಸುಮ್ಮನೆ ಹೆಸರು ಬದಲಾಯಿಸುವ ಮಾತೆತ್ತಿದಾಗ ಅದನ್ನು ಕಲ್ಪಿಸಿಕೊಳ್ಳಲು ನನ್ನಿಂದಾಗಲಿಲ್ಲ. ಬೇರಾವುದೋ ದೇಹವನ್ನು ನನ್ನಾತ್ಮ ಹೊಕ್ಕಾಗ ಆಗಬಹುದಾದಷ್ಟೇ ಯಾತನೆ ನನಗಾಗ ಆಗಿತ್ತು.

ಹದಿಹರೆಯದಲ್ಲಿ ಅಥವಾ ಅದಕ್ಕಿಂತ ಮೊದಲು ಯಾರಾದ್ರು ಅದೆಂಥ ಹೆಸರು ಅಂತಲೋ ಅಥವಾ ಹೆಸರಿನ ಹಿಂದೆಮುಂದೆ ವಿಶೇಷಣವೊಂದನ್ನು ಸೇರಿಸಿದಾಗ ಹೆಸರಿನ ಬಗ್ಗೆ ಬೇಸರವುಂಟಾಗುತ್ತದೆ. ಬೆಳೆದು ದೊಡ್ಡವರಾದ ಮೇಲೆ ಐಡೆಂಟಿಟಿ ಸಿಕ್ಕ ಮೇಲೆ ಊಹುಂ! ಮನಸ್ಸು ಹೆಸರು ಬದಲಾಯಿಸಿಕೊಳ್ಳಲು ಒಪ್ಪುವುದಿಲ್ಲ. ಅಷ್ಟೊತ್ತಿಗೆ ನಮ್ಮ ಹೆಸರಿನೊಂದಿಗೆ ವ್ಯಕ್ತಿತ್ವ ಗಟ್ಟಿಗೊಂಡಿರುತ್ತದೆ. ಆಯಾ ಪ್ರದೇಶಗಳಿಗುಣವಾಗಿ ಹೆಸರುಗಳಲ್ಲಿ ಭಿನ್ನತಯಿರುತ್ತವೆ. ಒಂದು ಪ್ರದೇಶದ ಹೆಸರು ಮತ್ತು ಸರ್ ನೇಮ್ ಗಳು ಮತ್ತೊಂದು ಪ್ರದೇಶದ ಜನರಿಗೆ ನಗು ತರಿಸಬಹುದು. ವಿಚಿತ್ರ ಎನಿಸಲೂ ಬಹುದು. ಇವರ ಹೆಸರು ಮತ್ತಿನ್ಯಾರಿಗೋ ನಗೆ ವಸ್ತುವಾಗಬಹುದು. ಏನೇ ಆಗಲಿ ಹೆಸರಿನಿಂದ ವ್ಯಕ್ತಿಯನ್ನಾಗಲಿ ವ್ಯಕ್ತಿತ್ವವನ್ನಾಗಲಿ ಅಳೆಯುವುದು ಖಂಡಿತಾ ತಪ್ಪು.

ಅಮೃತಧಾರೆ ಚಿತ್ರ ನೋಡಿ ಬಂದ ನನ್ನ್ ಗೆಳೆಯ ಹೇಳ್ತಿದ್ದ, ‘ ಊ ಹೆಸರಿರುವ ಹುಡುಗಿಯನ್ನೇ ಮದುವೆಯಾಗುತ್ತೇನೆ. ಆ ಹೆಸರೆಂದರೆ ಏನೋ ಸೆಳೆತ’ ಅಂತಾ. ಆ ಹೆಸರಿಟ್ಟು ಕೊಂಡವರೆಲ್ಲ ಅಂಥದ್ದೇ ಮನಸ್ಸಿನವರೆಂಬುದು ತಪ್ಪು ಕಲ್ಪನೆಯಲ್ಲವೆ? ಎಷ್ಟೋ ಸಲ ಗಮನಿಸಿ ಚಂದದ ಹೆಸರಿದ್ದವರಿಗೆ ಪ್ರಾಶಸ್ತ್ಯ ಸಿಗುತ್ತಿರುತ್ತದೆ. ಹೆಚ್ಚಿನ ನಟ – ನಟಿಯರನ್ನು ನೋಡಿ ಫೀಲ್ಡ್ಗೆ ಎಂಟ್ರಿ ಕೊಡುವಾಗಲೇ ಹೆಸರು ಬದಲಿಸುತ್ತಾರೆ. ಮತ್ತೆ ಕೆಲವರು ಲಕ್ ಸರಿಯಿಲ್ಲವೆಂದು ಹೆಸರು ಬದಲಿಸಿಕೊಳ್ಳುತ್ತಾರೆ. ಹೆಸರು ಬದಲಿಸುವ ಮಾತ್ರಕ್ಕೆ ಅದೃಷ್ಟ ಬದಲಾಗುತ್ತದೆಯೇ ಅಥವಾ ಪ್ರೇಕ್ಷಕನ ಮನದಾಳಕ್ಕಿಳಿಯುವ ನಟನೆ ಸಾಧ್ಯವೆ? ಹೆಸರು ಹೇಗೇ ಇರಲಿ ಪ್ರತಿಭೆಯಿದ್ದರೆ ಅಥವಾ ಒಳ್ಳೆಯ ಮನಸ್ಸಿದ್ದರೆ ಸಾಕಲ್ಲವೆ?

ಆದರೂ ಈ ಹೆಸರಿನ ಬಗ್ಗೆ ಅದೆಂಥದ್ದೋ ವ್ಯಾಮೋಹ. ಅಕ್ಕನೋ, ಅಣ್ಣನೋ ಹತ್ತಿರದ ಸಂಬಂಧಿಗಳೋ ಅಪ್ಪ-ಅಮ್ಮಂದಿರಾಗುತ್ತಿದ್ದಾರೆಂಬ ಸುದ್ದಿ ಕೇಳಿದೊಡನೆಯೇ ನಮ್ಮ ಬಂಧುಗಳೊಡನೆ ಭಿನ್ನ ಹೆಸರಿಗಾಗಿ ಹುಡುಕಾಟ ಆರಂಭಿಸಿಬಿಡುತ್ತೇವೆ. ಕೆಲವರು ಅರ್ಥವಿರುವ ಹೆಸರನ್ನು ಹುಡುಕಿದರೆ ಒಂದಷ್ಟು ಮಂದಿ ಕಿವಿಗೆ ಸೊಗಸು ಎನಿಸುವಂಥ ಹೆಸರಿಗಾಗಿ ತಡಕಾಡುತ್ತಿರುತ್ತಾರೆ. ಇನ್ನು ಕೆಲವರು ಹಳೆಯ, ದೇವರ, ವಂಶವಾಹಿನಿ ಹೆಸರನ್ನಿಡುತ್ತಾರೆ. ಆದರೆ ಹೆಸರಿನಿಂದಲೇ ವ್ಯಕ್ತಿಯನ್ನು ಅಳೆಯಬಿಡಬಾರದು. ಪ್ರತಿ ಹೆಸರಿಗೊಂದು ಅರ್ಥ ಹಿನ್ನಲೆ ಬರುತ್ತದೆ. ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸಬೇಕು.

By: S Acharya

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..