1246

ಮನಸ್ಸೆಂಬ ಜಿಜ್ಞಾಸೆ

  • By Vinay MT
  • Tuesday, February 9th, 2016
  • Ankanagalu

ಪ್ರೀತಿಯ ಸ್ನೇಹಿತರೆ, ಮೊದಲು ಈ ಕೆಳಗಿನ ಹಾಡುಗಳನ್ನು ನೆನಪಿಸಿಕೊಳ್ಳಿ …
ಮನಸ್ಸೇ ಬದುಕು ನಿನಗಾಗಿ, ಬವಣೆ ನಿನಗಾಗಿ(ಅಮೃತವರ್ಷಿಣಿ )…
ಮನಸ್ಸೇ ಓ ಮನಸ್ಸೇ ಎಂಥ ಮನಸ್ಸೇ(ಚಂದ್ರಮುಖಿ ಪ್ರಾಣಸಖಿ)…
ನಿನ್ನ ನನ್ನ ಮನವೂ ಸೇರಿತು ನನ್ನ ನಿನ್ನ ಹೃದಯ ಹಾಡಿತು(ಭಾಗ್ಯವಂತರು)…
ಮನಸ್ಸೇ ಮನಸ್ಸೇ ಥ್ಯಾಂಕ್ ಯು (ರಂಗ ಎಸ್ ಎಸ್ ಎಲ್ ಸಿ)…

ಈಗ ನನ್ನ ಒಂದು ಸರಳ ಬಾಲಿಶ ಪ್ರಶ್ನೆಗೆ ಉತ್ತರಿಸಿ …
ಮನೆಯಲ್ಲಿನ ಪುಟ್ಟ ಮಕ್ಕಳು ಕಣ್ಣು ಯಾವುದು, ತಲೆ ಯಾವುದು, ಮೂಗು ಯಾವುದು ಎಂದೊಡನೆ ಹೇಗೆ ಸರಿಯಾಗಿ ದೇಹದ ಅಂಗಾಂಗಗಳನ್ನು ತೋರಿಸುತ್ತಾರೋ ಹಾಗೆ ನೀವು ನಿಮ್ಮ ಮನಸ್ಸು/ಮನ ಯಾವುದು ಎಂಬುದನ್ನು ಗುರುತು ಮಾಡಿಕೊಳ್ಳಿ .

ಮನಸ್ಸು ಎಂಬುದು ದೇಹದ ನಿರ್ದಿಷ್ಟ ಅಂಗವಾಗಿಲ್ಲದಿದ್ದರು, “ಇಂದೇಕೋ ಮನಸ್ಸಿಗೆ ಬೇಜಾರು”, “ಇಂದು ಮನ ಸಂತೋಷಗೊಂಡಿದೆ” ಎನ್ನುವ ವಾಕ್ಯಗಳನ್ನು ಲೋಕಾಭಿರಾಮವಾಗಿ ಉಪಯೋಗಿಸುವ ನಾವುಗಳು ಸಾಮಾನ್ಯವಾಗಿ ಮನಸ್ಸು ಎಂದಾಕ್ಷಣ ನಮ್ಮ ಹೃದಯದ ಮೇಲೆ ಕೈ ಹಿಡುತ್ತೇವೆ ಅಲ್ಲವೇ ?

ಅದೊಂದು ಶುಕ್ರವಾರ; ಆಫೀಸಿನಲ್ಲಿ ಸ್ನೇಹಿತರ ಜೊತೆ ಊಟ ಮಾಡುವಾಗ “ಮನಸ್ಸಿನ” ವಿಚಾರ ಬಂತು.
ಎಲ್ಲರೂ ಹೃದಯವನ್ನೇ ತೋರಿಸುತ್ತಾರೆ ಎಂದುಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು.
ಇದ್ದ ಗುಂಪಿನಲ್ಲಿ ಅರ್ಧ ಜನ ಹೃದಯವೆಂದು ಇನರ್ಧ ಜನ ಬುದ್ಧಿಯಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದಿರು.
ತಮ್ಮ ನಿಲುವೇ ಗೆಲ್ಲಬೇಕೆಂಬ ಛಲದಲ್ಲಿ ವಾಗ್ಯುದ್ದಕ್ಕೆ ನಿಂತೆವು. ಚರ್ಚೆಯ ಕಾವು ಎಷ್ಟಿತ್ತು ಎಂದರೆ ನನ್ನ ಜಾಗಕ್ಕೆ ಹೋದ ತಕ್ಷಣ ಮಾಡಿದ ಕೆಲಸ ಗೂಗಲ್ ಸರ್ಚ್. ಅಲ್ಲೇ ನಿಜವಾದ ಕೌತುಕದ ವಿಷಯವಿದದ್ದು . ಹೌದು ಗೂಗಲ್ ಕನ್ನಡದ ಮನಸ್ಸು ಎಂಬ ಪದವನ್ನು ಆಂಗ್ಲ ಭಾಷೆಯ ಮೈಂಡ್ ಎಂಬ ಪದಕ್ಕೆ ತರ್ಜುಮೆಗೊಳಿಸುತ್ತದೆ.

ಪ್ರಾಯಶಃ ಚಲನಚಿತ್ರಗಳು,ಯುಗಳ ಗೀತೆಗಳು,ಕವಿಗಳ ಕವನಗಳ ಪ್ರಭಾವವಿರಬಹುದು. ಮನಸ್ಸು ಎಂದೊಡನೆ ನಾನಂತೂ ಹೃದಯವನ್ನೇ ತೋರಿಸುವುದು.

ಆದರೆ ನನ್ನ ಅರಿವಿಗೆ ಬಂದ ಮತ್ತೊಂದು ವಿಷಯವೆಂದರೆ ಮಾನಸಿಕ /ಮಾನಸಿಕ ರೋಗಿ ಎಂದಾಕ್ಷಣ ಬುದ್ದಿಯನ್ನೇ ತೋರಿಸುವ ನಾವು ಪ್ರೀತಿ ಸ್ನೇಹ ಆತ್ಮೀಯ ಭಾವನೆಗಳ ವಿಷಯಕ್ಕೆ ಮಾತ್ರ ಮನಸ್ಸನ್ನು ಹೃದಯಕ್ಕೆ ಹೊಲಿಸುತ್ತೇವೆ. ವಿಚಿತ್ರ ಆದರೆ ಸತ್ಯ.

ನನ್ನ ಸ್ನೇಹಿತೆ ಹೇಳಿದ ಒಂದು ವಿಶ್ಲೇಷಣೆ ಚೆನ್ನಾಗಿತ್ತು. ಮನಸ್ಸನ್ನು ಹೃದಯಕ್ಕೆ ತೋರಿಸುವವರು ಭಾವ ಜೀವಿಗಳು; ಬುದ್ಧಿ ಎನ್ನುವವರು ವ್ಯವಹಾರಿಕ ಮಂದಿ (Practical).
ಅದು ಅವಳ ವ್ಯಾಖ್ಯಾನ …
ನೀವೇನಂತೀರಾ ಮನಸ್ಸು ಹೃದಯವೋ ಇಲ್ಲ ಬುದ್ದಿಯೋ !!!
ಈ ಚರ್ಚಾವಿಷಯ ಬಹಳ ಮುಂಚಿತವಾಗೆ ನಿಮ್ಮ ಹಾಗು ನಿಮ್ಮ ಸ್ನೇಹಿತರ ಹರಟೆಯಲ್ಲಿ ಬಂದಿರಬಹುದು.
ನನಗೆ ಎದುರಾಗಿದ್ದು ಇದೆ ಮೊದಲು.

ನಿಮ್ಮ ಅಭಿಪ್ರಾಯ,ಅನಿಸಿಕೆ,ಟೀಕೆ,ಟಿಪ್ಪಣಿಗಳಿಗೆ ಸ್ವಾಗತ …

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..