2817

10 types of ಫೇಸ್ಬುಕ್ ಹಾವಳಿ users on facebook

ಫೇಸ್ಬುಕ್ ಅಲ್ಲಿ ನಾವು ಹಲವಾರು ರೀತಿಯ ಜನಗಳನ್ನು ನೋಡಿರ್ತೇವೆ .. ಏನೇನೋ ಪೋಸ್ಟ್ ಮಾಡ್ತಾನೆ ಇರ್ತಾರೆ ..ಈ ಸಲ ಹುಡುಗರ ಅವಸ್ಥೆ ನೋಡೋಣ .. 😀 😛

ಸೂಚನೆ : ಇಲ್ಲಿ ಉಪಯೋಗಿಸಿದ ಚಿತ್ರಗಳು ಕೇವಲ ಸಾಂದರ್ಭಿಕ .. ಯಾವುದೇ ವ್ಯಕ್ತಿಗೆ ಸಂಬಂಧಿಸಿದ್ದಲ್ಲ 😀

1.Dubsmash ಅಂತ ಒಂದ್ app ಇದೆ .ಅದನ್ನ ನಮ ಜನಗಳು ಉಜ್ಜಾಡಿದಷ್ಟು ಬೇರೆ ಏನನ್ನೂ ಉಜ್ಜಾಡಿರೋಲ್ಲ .. :D..ಇರೋ ಬರೋರೆಲ್ಲ ಒಂದೇ ಸಲ ನಟ -ನಟಿಯಾರಾಗಿ ಫೇಮಸ್ ಆಗ್ಬಿಟ್ರು
1

2.ದೇವರ ಫೋಟೋ ನ ಪೋಸ್ಟ್ ಮಾಡಿ  , ಇದನ್ನ 10  ಸೆಕೆಂಡ್ಸ್ ಅಲ್ಲಿ ಶೇರ್ ಮಾಡಿ ..ನಾಳೆ ಬೆಳಿಗ್ಗೆ ಅದೃಷ್ಟ ಬರುತ್ತೆ ಅಂತ  ಬಿಟ್ಟಿ  ಲೈಕ್ಸ್ ಗೆ  ಕಾಯ್ಕೊಂಡಿರೋರು

2

3.ಆಕ್ಟಿಂಗ್ ಬರದೇ ಇದ್ರೂ ಚಿಕ್ ಚಿಕ್ ವಿಡಿಯೋ ಮಾಡಿ ಅವರ ಆಕ್ಟಿಂಗ್ ಕಲೆನ ಪ್ರದರ್ಶನ ಮಾಡೋರು

3

4.ಪ್ರೊಫೈಲ್ pic  ಅಪ್ಲೋಡ್ ಮಾಡಿ , ನನ್ pic  ನ ಲೈಕ್ ಮಾಡು ..ಪ್ಲೀಸ್ ಲೈಕ್ ಮಾಡು ಅಂತ ಇರೋ ಬರೋರಿಗೆಲ್ಲ ಪರ್ಸನಲ್ ಆಗಿ inform  ಮಾಡಿ ರೋಧನೆ ಕೊಡೋರು 4

5.DSLR ಕ್ಯಾಮರಾ ಇಟ್ಕೊಂಡು ಇರೋ ಬರೋ ಗಿಡ , ಪ್ರಾಣಿ ,ಪಕ್ಷಿ , ಹುಳ, ನೊಣ , ಸಿಕ್ ಸಿಕ್ಕಿದ್ದನ್ನೆಲ್ಲ ಫೋಟೋ ಹೊಡೆದು ಅಪ್ಲೋಡ್ ಮಾಡಿ 100  ಜನರನ್ನು ಟ್ಯಾಗ್ ಮಾಡಿ ರೋಧನೆ ಕೊಡೋರು

5

6.ಹೆವಿ ಆಗಿ buildup  ಕೊಡೋರು .. ಅವರಿಗೊಂದು ಚಿಕ್ಕ ಚಿಲ್ಟಾರಿ  ಪಿಳ್ಟ್ಯಾರೀ   ಗ್ಯಾಂಗು .

6

7.ಇರೋ ಬರೋ ಹೆಣ್ ಮಕ್ಕಳಿಗೆ ಫ್ರೆಂಡ್ ರಿಕ್ವೆಸ್ಟ್ ಹಾಕಿ , ಅವರಿಂದಾನೂ ಬ್ಲಾಕ್ ಆಗಿ , ಫೇಸ್ಬುಕ್ ಇಂದಾನೋ ಬ್ಲಾಕ್ ಆಗಿ ಹೊಗೆ ಹಾಕಿಸ್ಕೊಳ್ಳೋರು

7

8.ಫೇಸ್ಬುಕ್ ಅಲ್ಲಿ ಇರೋ ಬರೋ ಹುಡ್ಗೀರ್ ಪ್ರೊಫೈಲ್ ನ ವಿಸಿಟ್ ಮಾಡಿ “ಹೆಂಗವ್ರೆ ” ಅಂತ ನೋಡೋರು

8

9.ಹುಡ್ಗೀರ್ ಜೊತೆ ಫೋಟೋ ತೆಕ್ಕೊಂಡು ಅಪ್ಲೋಡ್ ಮಾಡಿ ಪೋಸ್ ಕೊಡೋರು

9

10.ಫೇಸ್ಬುಕ್ ಅಲ್ಲಿ ಬರೀ  ಏನೇನೋ ಕಿತ್ ಹೋಗಿರೋ ಫೀಲಿಂಗ್ ಸ್ಟೇಟಸ್ ಹಾಕ್ಕೊಂಡು ಯಾವಾಗ್ಲೂ ರೋಧನೆ ಕೊಡೋರು

10

ಇದು ಹುಡುಗರ ಅವಸ್ಥೆ ಆಯಿತು ..ಇನ್ನು ಹುಡುಗೀಯರ ಅವಸ್ಥೆ ಕೂಡ ಇದೆ ..ಅದು ಮುಂದಿನ ಆರ್ಟಿಕಲ್ ಅಲ್ಲಿ .. ಇನ್ನೂ ಹಲವಾರು ವಿಧದ ಜನರು ಫೇಸ್ಬುಕ್ ಅಲ್ಲಿದ್ದಾರೆ ..ನಿಮಗೆ ತೋಚಿದ್ದರೆ ಇಲ್ಲಿ ಕಾಮೆಂಟ್ ಮಾಡಿ..ನೀವೂ ಕೂಡ ಆರ್ಟಿಕಲ್ ಕಳಿಸಬಹುದು .. ನಮ್ಮ ವಿಳಾಸ localkebal@gmail.com

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..