2170

ನಿರೀಕ್ಷೆಯ ಕುದುರೆಯ ಏರಿ

ಈ ಅಂಕಣ ಬರೆದವರುಜ್ಯೋತಿ ಮುಳಸವಳಗಿ

ನಮ್ಮ ಜೀವನದಲ್ಲಿ ನಾವು ಸುಮಾರ್ ಸಲ ,ಸುಮಾರ್ ಏನು ?ಯಾವಾಗಲೂ ಅಂತಾನೇ ಹೇಳಬಹುದು .ಯಾವುದಕ್ಕಾದರೂ ಕಾಯ್ದಿರೋ/ಕಾಯ್ತಾ ಇರುವ ಅನುಭವ ಎಲ್ಲರಿಗೂ ಆಗಿರುತ್ತೆ, ಉದಾಹರಣೆಗೆ  ಸ್ಕೂಲ್ ಮುಗೀಲಿ ಅಂತ ಬೆಲ್ ಗೊಸ್ಕರ, exams ಮುಗೀಲಿ ಅಂತ ರಜೆಗೊಸ್ಕರ, home work  ಮುಗಿದ್ರೆ ಆಟಕ್ಕೋಸ್ಕರ ,ಬಸ್ಗೋಸ್ಕರ ,ಹೋಟೆಲಲ್ಲಿ ಮಾಡಿರೋ ಆರ್ಡರ್ ಗೊಸ್ಕರ ,bank ಅಲ್ಲಿ  ನಮ್ಮ ಫಾರ್ಮ್  ಪಾಳಿಗೋಸ್ಕರ ಎಲ್ಲಕ್ಕಿಂತ ಹೆಚ್ಚು IRCTC tatkal ticket ಅಂತೂ ಕಾಯೋದು ಅಂದ್ರೆ ಎನು ಅಂತಾ ಕಲ್ಸಿಬಿಡುತ್ತೆ.

ಇನ್ನು ಸ್ವಲ್ಪ ವಿಶೇಷವಾದವುಗಳೆಂದರೆ ಮೊದಲು ಸಿಗುವ ಕೆಲಸದ ಮೊದಲನೆ ದಿನಕ್ಕೊಸ್ಕರ ,ಮೊದಲು ಸಿಗುವ ಸಂಬಳಕ್ಕೊಸ್ಕರ , ಮೊದಲು ಅನುಭವ ವಾಗುವ ಪ್ರೀತಿಗೊಸ್ಕರ ;)ಮೊದಲು ಹೃದಯ ಕದಿಯುವ ಪ್ರೇಮಿಗೋಸ್ಕರ.ಇದೆಲ್ಲದರಲ್ಲೂ ನಮಗೆ ಒಂದು ನಿರೀಕ್ಷೆ ಇದೆ , ಮುಂದೆ ನಮ್ಮ ಕೈಗೆ ಎನು ಸಿಗುತ್ತೆ ಅನ್ನೋದರ ಬಗ್ಗೆ ಪರಿಪೂರ್ಣ ಅಲ್ಲದೆ ಇದ್ದರೂ  ಅರ್ಧ ಭಾಗದಷ್ಟು ಕಲ್ಪನೆ ಇದೆ .

ಒಬ್ಬ ತಾಯಿ ತನ್ನ ಮಗುವನ್ನು ನೋಡೋದಕ್ಕೆ ಕಾಯುತ್ತಾಳಲ್ಲ ….ಅದೇನೋ ಒಂಥರಾ ವಿಚಿತ್ರ ಮತ್ತು ವೈಶಿಷ್ಟ್ಯವಾದದ್ದು …  ಕುತೂಹಲಗಳ  ಗೂಡು ….ಮಗು ಹೆಣ್ಣು ಮಗುನೋ ಗಂಡು ಮಗುನೋ ಅಂತ ಕುತೂಹಲ ….,ಅಮೆಲೆ 6 ತಿಂಗಳು ಕಾಯಬೇಕಲ್ಲ ಅನ್ನೊ ಬೇಸರ … ಮಗು ನೊಡೊಕ್ಕೆ ಹೇಗಿರುತ್ತೆ ಅನ್ನೋ ಕಲ್ಪನೆಯಲ್ಲಿ ಕೂತರೆ ಸುಮಾರು ಚಿತ್ರಗಳು ಮನಸಲ್ಲಿ ಮೂಡಿ ,ದೇವರು  ಯಾಕಾದರೂ  9 ತಿಂಗಳು ಕಾಯಿಸ್ತಾನೆ ಅನ್ನೋ ಕೋಪ ,ಕಡೆಗೆ ಹಾಗೋ ಹೀಗೋ 9 ತಿಂಗಳು ಕಳೆದು doctor ಕೊಟ್ಟಿರೋ date ಹತ್ತಿರ ಬಂದಾಗ ತಾನು ಹೆರಿಗೆ ನೋವು ಅನುಭವಿಸಬೆಕು ಅನ್ನೊ ಭಯವನ್ನು ಮೀರಿಸುವ ನಿರೀಕ್ಷೆ ಅದು , ನವ ಮಾಸ ಕಳೆದು ಕಡೆಗೊಂದು ದಿನ ಅನಿರೀಕ್ಷಿತೆಗಳ ಜಾಲದಲ್ಲಿ ಹೊರಳಾಡಿ ತನ್ನ ದೇಹದ ಯಾವ ಭಾಗಕ್ಕೆ ಏನಾಗಿದೆಯೋ ಅನ್ನೋ ಚಿಂತೆಯನ್ನು   ಒಂದು ಕ್ಷಣಾನೂ ಮಾಡದೆ ತಾನು ಮೊದಲು ಮಗುವನ್ನು ನೋಡಬೇಕೆನ್ನುವ  ನಿರೀಕ್ಷೆ ಕೊನೆಯಾಗುವ ಆ ಕ್ಷಣ ನಾವು ಜೀವನದಲ್ಲಿ ಬೇರೆ ಎಲ್ಲದಕ್ಕೂ ಮಾಡಿರುವ ನಿರೀಕ್ಷೆಯನ್ನು ಮತ್ತು ಅದಕ್ಕೆ ಕೊಟ್ಟ ಪ್ರಾಮುಖ್ಯತೆಯನ್ನು ಕ್ಷುಲ್ಲಕ ಅನ್ನಿಸುವಂತೆ ಮಾಡುತ್ತೆ .

ನೀವೂ ಕೂಡ ನಿಮ್ಮ ಬರಹಗಳನ್ನು ನಮಗೆ ಕಳುಹಿಸಬಹುದು . ನಿಮ್ಮ ಬರವಣಿಗೆಗಳನ್ನು localkebal@gmail.com ಗೆ ಕಳಿಸಿ 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..