- By Pradeepa Achar
- Sunday, July 24th, 2016
ವೀಕೆಂಡ್ ಬಂತು ಅಂದ್ರೆ ಎಲ್ಲರಿಗೂ ಒಂಥರ ಹಬ್ಬಾನೇ ಸರಿ . ಫ್ಯಾಮಿಲಿ ಜೊತೆ ಇರೋರು ಮನೇಲಿ ಫ್ಯಾಮಿಲಿ ಜೊತೆ , ಮಕ್ಕಳ ಜೊತೆ ಕಾಲ ಕಳೀತಾರೆ. ಆದರೆ ಬ್ಯಾಚುಲರ್ ಆಗಿದ್ದೋರಿಗೆ ವೀಕೆಂಡ್ ಬಂತು ಅಂದ್ರೆ ಏನೇನ್ ಮಾಡ್ಬೇಕು ಅಂತಾನೆ ತೊಚೋಲ್ಲ .ಸುಮ್ಮನೆ ಮನಸ್ಸಿಗೆ ಬಂದದ್ದನ್ನೆಲಾ ಮಾಡ್ತಾರೆ
1.ಸೂರ್ಯ ನೆತ್ತಿ ಮೇಲೆ ಬಂದ್ ಮೇಲೆ ಎದ್ದೇಳೋ ಸೋಂಬೇರಿಗಳು
ಕೆಲವರು ವೀಕೆಂಡ್ ಅಲ್ಲಿ ಸೂರ್ಯೋದಯ ನೋಡಿರೋದೇ ಡೌಟ್ ..12 ಘಂಟೆಗೆ ಎದ್ದು ಅಲ್ಲಿ ಇಲ್ಲಿ ಕೆರ್ಕೊಳ್ತಾ ಹಾಗೂ ಹೀಗೂ ಹಲ್ ಉಜ್ಕೊಂಡು ಒಂದ್ ಟೀ ಕುಡ್ಕೊಂಡ್ , ಸಂಜೆ ಊಟ ಮಾಡ್ತಾರೆ
2.weekend ಗೋಸ್ಕರ ಕಾಯ್ಕೊಂಡ್ ಇರೋ ಎಣ್ಣೆ ಮೇಸ್ಟ್ರು
ಶುಕ್ರವಾರ ರಾತ್ರಿಯಿಂದಾನೆ ಫ್ರೆಂಡ್ಸ್ ರೂಮ್ ಅಲ್ಲಿ ಜಾಂಡಾ ಊರ್ಕೊಂಡು ಎಣ್ಣೆ ಪಾರ್ಟಿ ಶುರು ಹಚ್ಕೊಳ್ತಾರೆ . ಹ್ಯಾಂಗ್ ಓವರ್ ಇಳಿಯೋಕೆ ಭಾನುವಾರ ಸಂಜೆ ನೇ ಆಗಬೇಕು
3.ಶಾಪಿಂಗ್ maniac ಗಳು
ಕೆಲವರು ದುಡಿದ ದುಡ್ಡಲ್ಲಿ ಮುಕ್ಕಾಲ್ ಭಾಗವನ್ನು ಶಾಪಿಂಗ್ ಗೆ ಹಾಕ್ತಾರೆ . ತಗೊಂಡಿರೋ items ನ ಎಷ್ಟ್ ಉಪಯೋಗಿಸ್ತಾರೋ ಗೊತ್ತಿಲ್ಲ but ತಗೋಳ್ಳೋದ್ ಮಾತ್ರ ಕಡಿಮೆ ಮಾಡೋಲ್ಲ
4 Jolley Days ಮೂವಿಲಿ ಇರೋ team ತರ ಟ್ರಿಪ್ ಹೋಗೋ ಪಾರ್ಟಿಗಳು
ಈ ಪಾರ್ಟಿಗಳು ಒಂಥರಾ ಹಲಸಿನ ಹಣ್ಣು ಇದ್ ಹಾಗೆ . ಹೊರಗೆ ಹಾರ್ಡ್..ಒಳಗೆ ಸಾಫ್ಟ್ .. ವೀಕ್ ಡೇಸ್ ಅಲ್ಲಿ ಕೆಲ್ಸದಲ್ಲಿ ಬ್ಯುಸಿ ಆಗಿರ್ತಾರೆ .ವೀಕೆಂಡ್ ಅಲ್ಲಿ ಚಿಕ್ ಮಕ್ಕಳ್ ಥರ backpack ಹಾಕ್ಕೊಂಡ್ friends ಜೊತೆ ಸುತ್ತಾಡೋಕ್ ಹೋಗ್ತಾರೆ
5.ಪ್ರೊಫೆಷನಲ್ goal ಇಟ್ಟುಕೊಂಡಿರೋರು
ಈ ಪಾರ್ಟಿಗಳು ಸಕತ್ ಸೀರಿಯಸ್ . ವೀಕೆಂಡ್ ಅಲ್ಲಿ ಸಹ ಟೈಮ್ ವೇಸ್ಟ್ ಮಾಡೋಲ್ಲ . ಯಾವ್ದಾದ್ರೂ ಕೋರ್ಸ್ ಮಾಡ್ಕೋತಾ , ಇಲ್ಲ ಸರ್ಟಿಫಿಕೇಷನ್ ಮಾಡ್ಕೋತಾ ಇರ್ತಾರೆ
6.ರೋಮಿಯೋ ರಾಜಾಗಳು
ಈ ಪಾರ್ಟಿಗಳು ರೋಮಿಯೋ ರಾಜರು . girlfriend ಜೊತೆ ಬರೀ ಸುತ್ತಾಡೋದೇ ಆಯ್ತು .ಗರ್ಲ್ ಫ್ರೆಂಡ್ ಗೆ ಆ ಥರ ಯಾಕೆ ಮಾಡ್ಕೊಂಡಿದೀಯ? ಈ ಥರ ಯಾಕಿಲ್ಲ ? ಮೊನ್ನೆ ಕಾಲ್ ಮಾಡಿದಾಗ receive ಮಾಡೋಕ್ ಟೈಮ್ ಯಾಕ್ ತಗೊಂಡೆ ? ಹಂಗೆ ಹಿಂಗೇ ಏನೇನೋ ಮಾತಾಡ್ತಾ ಅಂತೂ ಇಂತೂ ಅವರ ಹುಡ್ಗೀರ್ ಜೊತೆ ಟೈಮ್ ಸ್ಪೆಂಡ್ ಮಾಡ್ತಾರೆ
7.ಕುಂಭಕರ್ಣನ ತಮ್ಮಂದಿರು
ಇವರಷ್ಟು ಸುಖ ಪುರಷರು ಎಲ್ಲೂ ಸಿಗೋಲ್ಲ .. ಇರೋ ಎರ್ಡು ದಿನ ವೀಕೆಂಡ್ ನ ಕುಂಭಕರ್ಣ ಸಹ ನಾಚ್ಕೊಳ್ಳೋ ಅಷ್ಟು ನಿದ್ದೆ ಮಾಡ್ತಾರೆ ..ಅಷ್ಟ್ ನಿದ್ದೆ ಮಾಡೋರು ಸ್ನಾನ ಮಾಡ್ತಾರಾ ಅಂತ ಪ್ರಶ್ನೆ ಕೇಳ್ಬೇಡಿ
8.ಬೆಟ್ಟ ಗುಡ್ಡ ಅಲೆಯೋ ಟ್ರೆಕ್ಕಿಂಗ್ trekkers
ವೀಕೆಂಡ್ ಬಂತು ಅಂದರೆ ಈ ಪಾರ್ಟಿಗಳು ಕಾಡು ಮೇಡು, ಬೆಟ್ಟ ಗುಡ್ಡ ಸುತ್ತಾಡೋದರಲ್ಲೇ ಇರ್ತಾರೆ .ಇವರು ಸುತ್ತದೆ ಇರೋ ಬೆಟ್ಟ ಗುಡ್ಡ ಕರ್ನಾಟಕದಲ್ಲೇ ಇರೋಲ್ಲ
9.ವೀಕೆಂಡ್ ಅಲ್ಲಿ ಗಡದ್ದಾಗಿ ಊಟ ಹೊಡೆಯೋಕೆ ರೆಡಿ ಆಗಿರೋ ಹೊಟ್ಟೆಬಾಕರು ..I mean, #Foodie
ಇವರು ಮಾತ್ರ ಒಂಥರಾ ಭಕಾಸುರ ಇದ್ದಾ ಹಾಗೆ . ಇರೋ ಬಾರೋ ಎಲ್ಲ ಹೋಟೆಲ್ಗಳಲ್ಲೂ ರುಚಿ ಕಂಡಿರ್ತಾರೆ ..ಇಲ್ಲ ಇವರೇ ಮನೆಯಲ್ಲಿ ಹೊಸ ಹೊಸ ರುಚಿ ರುಚಿಯಾದ ಅಡುಗೆ ಮಾಡಿ ಸವಿತಾರೆ . ಏನೂ ಇಲ್ವಾ? ಕೊನೆಗೆ ಸoಬಂಧಿಕರ ಮನೆಯಲ್ಲಿ ಗಡದ್ದಾಗಿ ಊಟ ಮಾಡ್ತಾರೆ
10.ಊರಿಗೆ ಓಡಿ ಹೋಗೋ “mummy’s baby”ಗಳು
ಇವರು ವೀಕೆಂಡ್ ಬರೋದನ್ನೇ ಕಾಯ್ಕೊಂಡ್ ಇರ್ತಾರೆ . ಊರಿಗೆ ಹೋಗಿ ಅಮ್ಮ ಮಾಡಿದ ರುಚಿ ರುಚಿಯಾದ ಅಡುಗೆ ಸವಿಯಲು ಕಾಯ್ತಾ ಇರ್ತಾರೆ . ಹಾಗೆ ಊರಿನಲ್ಲಿರುವ ಇವರ ಆಸ್ತಿ , ಗದ್ದೆ , ತೋಟದ ಕಡೆ ಗಮನ ಕೊಟ್ಟು ನೋಡ್ಕೋತಾರೆ
11ಪುಸ್ತಕದ ಹುಳುಗಳು
ಇವರು ಒಂದೋ ಒಳ್ಳೊಳ್ಳೆ ಪುಸ್ತಕ ಓದ್ತಾ ಇರ್ತಾರೆ ಇಲ್ಲ ಕವಿತೆ ಬರೆದು ಫೇಸ್ಬುಕ್ ಅಲ್ಲಿ ಪೋಸ್ಟ್ ಮಾಡ್ತಾ ಇರ್ತಾರೆ .ಒಟ್ಟಾರೆ ವೀಕೆಂಡ್ ನ productive ಆಗಿ ಉಪಯೋಗಿಸಿಕೊಳ್ಳುವ ಪ್ರಚಂಡ ಜ್ಞಾನಿಗಳು
12.Movie buffs
ಇವರುಗಳು ವೀಕೆಂಡ್ ಅಲ್ಲಿ ಇರೋ ಬರೋ ಎಲ್ಲ ಭಾಷೆಯ , ಎಲ್ಲ ಸಿನಿಮಾಗಳನ್ನು ನೋಡ್ತಾನೆ ಇರ್ತಾರೆ . ಇವರ ಸಿನಿಮಾ ಪ್ರೀತಿ , ಸಿನಿಮಾ ಜ್ಞಾನ ಅಪರಿಮಿತ .ಕೆಲವೊಂದು ಸಲ ಸಿನಿಮಾ ರಂಗದಲ್ಲಿ ಕೆಲಸ ಮಾಡಿರುವವರಿಗಿಂತಲೂ ಜಾಸ್ತಿ ತಿಳಿದುಕೊಂಡಿರುತ್ತಾರೆ . ಯಾವುದೇ ಹೊಸ ಚಿತ್ರ ನೋಡಿದ ಕೂಡಲೇ ಫೇಸ್ಬುಕ್ ಅಲ್ಲಿ ರಿವ್ಯೂ ಬರೀತಾರೆ ..ಇಲ್ಲ youtube ಅಲಿ ವಿಡಿಯೋ ಮಾಡಿ ರಿವ್ಯೂ ಹಾಕ್ತಾರೆ
13. ಅಲ್ಲಿ ಇಲ್ಲಿ ಹುಡುಗಿಯರಿಗೆ ಕಾಳ್ ಹಾಕ್ಕೊಂಡು flirt ಮಾಡುವವರು
ವಯಸ್ಸಲ್ಲಿ ಹುಡುಗರು ಹುಡುಗಿಯರಿಗೆ ಕಾಳ್ ಹಾಕದೆ ಇದ್ದರೆ ಅದು ಆ ವಯಸ್ಸಿಗೆ ಮಾಡಿದ ಅವಮಾನ ಇದ್ದ ಹಾಗೆ . ಇವರನ್ನು ಅಲಿ ಇಲ್ಲಿ ಅವಾಗವಾಗ ನೋಡಬಹುದು
14.ಲಾಂಗ್ ಡ್ರೈವ್ ಬುಲೆಟ್ ರಾಜರು
ಇವರುಗಳಿಗೆ ಬುಲೆಟ್ , KTM ಬೈಕ್ ಗಳೇ ಜೀವ . ಒಂದೋ ಫ್ರೆಂಡ್ಸ್ ಜೊತೆ ಲಾಂಗ್ ಡ್ರೈವ್ ಹೋಗ್ತಾರೆ ಇಲ್ಲಾ girlfriend ಜೊತೆ ರೌಂಡ್ ಹೊಡೆಯೋಕೆ ಹೋಗ್ತಾರೆ
15.ಹೊಸ ಹೊಸ ಉತ್ತಮ ಹವ್ಯಾಸ ಬೆಳೆಸಿಕೊಂಡು ಅಭ್ಯಾಸ ಮಾಡುವವರು
ಕೆಲವರು ಸಮಯವನ್ನು ವ್ಯರ್ಥ ಮಾಡುವುದಿಲ್ಲ . ಒಳ್ಳೊಳ್ಳೆ ಹವ್ಯಾಸಗಳ ಮೂಲಕ ಜೀವನವನ್ನು ನಡೆಸುತ್ತ happy ಆಗಿರೋಕೆ try ಮಾಡ್ತಾರೆ
ನಾವೇನಾದರೂ ಮಿಸ್ ಮಾಡಿದ್ದರೆ ಕಾಮೆಂಟ್ ಸೆಕ್ಷನ್ ಅಲ್ಲಿ ತಿಳಿಸಿ . ನಿಮ್ಮ ಬರಹಗಳನ್ನು ನಮಗೆ ಕಳುಹಿಸಲು ಇಮೇಲ್ id ಇಲ್ಲಿದೆ localkebal@gmail.com