- By Pavan Shetty
- Sunday, March 12th, 2017
ವಾಟ್ಸಪ್ಪ್ ತನ್ನ ಹೊಸ ಆವೃತ್ತಿಯಲ್ಲಿ “ಟೆಕ್ಸ್ಟ್ ಸ್ಟೇಟಸ್” ವ್ಯವಸ್ಥೆಯನ್ನು ಕೈಬಿಟ್ಟು ಇನ್ಸ್ಟಾಗ್ರಾಮ್ ಅಪ್ ನಂತೆ ೨೪ ಗಂಟೆಗಳಲ್ಲಿ ಮಾಯವಾಗುವ ಸ್ಟೇಟಸ್ ವ್ಯವಸ್ಥೆಯನ್ನು ಜಾರಿಗೊಳಿಸಿತ್ತು . ಇದರಲ್ಲಿ ನೀವು ಫೋಟೋ ವಿಡಿಯೋಗಳನ್ನೂ ಸಹ ಸ್ಟೇಟಸ್ ಆಗಿ ಇಡಬಹುದಾಗಿದೆ. ಹೊಸತನದ ಅಬ್ಬರದಲ್ಲಿ ತನ್ನ ಹಳೆಯ “ಟೆಕ್ಸ್ಟ್ ಸ್ಟೇಟಸ್” ವೈಶಿಷ್ಟತೆಯನ್ನು ಕೈಬಿಡುವ ಮೂಲಕ ಹಲವಾರು ಬಳಕೆದಾರರ ಕೆಂಗಣ್ಣಿಗೆ ಗುರಿಯಾಗಿತ್ತು. ಹಲವರು ಇನ್ಸ್ಟಾಗ್ರಾಮಿನಿಂದ code copy+paste ಮಾಡಿದ್ದಾರೆ ಅಂತ ಹೇಳಿದ್ದುಂಟು . ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರದ ಮೇಲೆ ಹಲವಾರು ಜೋಕ್ಸಗಳು ಹಾಗೂ ಟ್ರೊಲ್ಗಳು ಹರಿದಾಡಿದ್ದು ಎಲ್ಲರಿಗೂ ತಿಳಿದಿದೆ.
ಬಹುಶಃ ವಾಟ್ಸಪ್ಪ್ ಕಂಪೆನಿಯವರಿಗೆ ಬಳಕೆದಾರರು ಹಳೆಯ ಸ್ಟೇಟ್ಸ್ಗಾಗಿ ಕೊರಗಿರುವ ವಿಚಾರ ತಿಳಿದಹಾಗಿದೆ ಅನಿಸುತ್ತಿದೆ ಏಕೆಂದರೆ “ವಾಟ್ಸಪ್ಪ್ ಟೆಕ್ಸ್ಟ್ ಸ್ಟೇಟಸ್” ಮರಳಿ ಬಂದಿದೆ.
ವಾಟ್ಸಪ್ಪ್ v2.17.97 Beta ಆವೃತ್ತಿಯಲ್ಲಿ ಸ್ಟೇಟಸ್ ಮತ್ತೆ ಕಾಣಿಸಿಕೊಂಡಿದೆ. ಸ್ಟೇಟಸ್ ಹೆಸರಿನ ಬದಲಾಗಿ ಅಬೌಟ್ (About ) ಅನ್ನುವ ಹೊಸ ನಾಮ ನೀಡಲಾಗಿದೆ. ನೀವು ಇನ್ನೊಬ್ಬರ ಸ್ಟೇಟಸ್ ನೋಡಲು ಮೊದಲಿನಂತೆ “All Contacts” ಅವಕಾಶ ಇಲ್ಲ. ಆದರೆ ನಿಮ್ಮ ಪ್ರೊಫೈಲ್ ಪಿಕ್ನ್ ಕೆಳಭಾಗದಲ್ಲಿ ಮೊದಲಿಂತಯೇ ಸ್ಟೇಟಸ್ ನೋಡಬಹುದಾಗಿದೆ .
ಇನ್ನು ವಿಡಿಯೋ ಕಾಲ್ ಮಾಡಲು ಸಹಕಾರಿಯಾಗುವಂತೆ ಫೋನ್ ಬಟ್ಟನ್ ಪಕ್ಕದಲ್ಲಿ ವಿಡಿಯೋ ಕಾಲ್ ಬಟನ್ ಇರಲಿದೆ. ಅಟ್ಟಚ್ಮೆಂಟ್ಸ್(attachments) ಚಾಟ್ ಬಾಕ್ಸ್ ಬಳಿ ಇರಲಿದೆ.
ಸದ್ಯಕ್ಕೆ ಈ ಹೊಸ ವೈಶಿಷ್ಟ್ಯಗಳು ವಾಟ್ಸಾಪ್ಪ್ BETA ಬಳಕೆದಾರರಿಗೆ ಮಾತ್ರ.