1921

All you need to know about ಶ್ರೀ ಆನೆಗುಡ್ಡೆ ವಿನಾಯಕ ದೇವಸ್ಥಾನ.

ಕುಂಭಾಶಿ ಇದು ಆನೆಗುಡ್ಡೆಗೆ ಇರುವ ಇನ್ನೊಂದು ಹೆಸರು. ಈ ಹೆಸರು ಬಂದಿರೋದು ಕುಂಭಕರ್ಣನಿಂದ.ಬಹಳ ಹಿಂದೆ ಈ ಪ್ರದೇಶದಲ್ಲಿ ಬರ ಪರಿಸ್ಥಿತಿ ಇರುವಾಗ , ಋಷಿ ಅಗಸ್ತ್ಯ ಮುನಿಗಳು ಇಂದ್ರನನ್ನು ಒಲಿಸಲು ಯಜ್ಞ ಮಾಡಲು ಇಲ್ಲಿ ಬಂದರು . ಈ ಸಮಯದಲ್ಲಿ ರಾಕ್ಷಸ ಕುಂಭಾಸುರ ಋಷಿಗಳ ಯಜ್ಞಕ್ಕೆ ಅಡ್ಡಿಪಡಿಸಲು ಪ್ರಯತ್ನಿಸಿದನು. ಋಷಿಗಳನ್ನು ರಕ್ಷಿಸಲು ವಿನಾಯಕನು ಭೀಮನನ್ನು ಕಳಿಸಿದನು. ಭೀಮನು ಕುಂಭಕರ್ಣನನ್ನು ವಧಿಸಿ ಯಜ್ಞ ಮುಂದುವರಿಸಲು ಅನುವು ಮಾಡಿ ಕೊಟ್ಟನು. ಇದರಿಂದ ಈ ಪ್ರದೇಶಕ್ಕೆ ಕುಂಭಾಶಿ ಎಂಬ ಹೆಸರು ಬಂತು. ಆನೆಗುಡ್ಡೆ ಎಂಬ ಹೆಸರು ಬರಲು ಕಾರಣ ಈ ದೇವಸ್ಥಾನವು ಗುಡ್ಡದ ಮೇಲಿದ್ದು ಈ ವಿನಾಯಕನ ವಿಗ್ರಹವು ಆನೆಯ ಮುಖದ್ದಾಗಿದ್ದು ಆನೆಗುಡ್ಡೆಯಾಗಿದೆ.
sri-vinayaka-templeanegudde_1409381809
ಈ ವಿನಾಯಕನಿಗೆ “ಸಿದ್ಧಿ ವಿನಾಯಕ ” , “ಸರ್ವ ಸಿದ್ಧಿಪ್ರದಾಯಕ” ಎಂದೂ ಕರೆಯುತ್ತಾರೆ.ಕರಾವಳಿಯ ಪ್ರಖ್ಯಾತ ದೇವಸ್ಥಾನಗಳಲ್ಲಿ ಒಂದಾದ ಆನೆಗುಡ್ಡೆ ವಿನಾಯಕ ದೇವಸ್ಥಾನವು ಕುಂದಾಪುರ ತಾಲೂಕಿನಲ್ಲಿದೆ.ಉಡುಪಿಯಿಂದ ಕುಂದಾಪುರ ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ ಕುಂಭಾಶಿಯಲ್ಲಿರುವ ಈ ದೇವಸ್ಥಾನವು ಪ್ರೇಕ್ಷಣೀಯ ಸ್ಥಳವಾಗಿದೆ.
ಗಣೇಶ ಚತುರ್ಥಿಯಂದು ಇಲ್ಲಿ ಗಣೇಶನಿಗೆ ವಿಶೇಷ ಅಲಂಕಾರ ಪೂಜೆಯಿರುತ್ತದೆ , ಪ್ರತಿ ತಿಂಗಳ ಸಂಕಷ್ಟ ಚತುರ್ಥಿಯಂದು ವಿನಾಯಕನಿಗೆ ವಿಶೇಷ ಪೂಜೆ ಇರುತ್ತದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ಪ್ರಥಮ ಪೂಜೆ ವಿನಾಯಕನಿಗೆ ಆಗಿರುವುದರಿಂದ ಇಲ್ಲಿನ ಸುತ್ತಮುತ್ತಲಿನ ಜನರು ಏನೆ ಒಳ್ಳೆ ಕೆಲಸ ಮಾಡೋ ಮುಂಚೆ ಇಲ್ಲಿಗೆ ಬಂದು ಪೂಜೆ ಮಾಡಿಸುತ್ತಾರೆ. ಹೊಸ ವಾಹನಗಳ ಪೂಜೆ ಇಲ್ಲೇ ದಿನಂಪ್ರತಿ ನೂರಾರು ಸಂಖ್ಯೆಯಲ್ಲಿ ಮಾಡುತ್ತಾರೆ.ಇಲ್ಲಿಗೆ ಬರುವ ಭಕ್ತರಿಗೆ ದಿನಂಪ್ರತಿ ಅನ್ನಸಂತರ್ಪಣೆ ಇರುತ್ತದೆ ಭಕ್ತರು ಇದನ್ನು ಶ್ರೀ ದೇವರ ಪ್ರಸಾದವೆಂದು ಸ್ವೀಕರಿಸುತ್ತಾರೆ.
ಈ ದೇವಸ್ಥಾನದ ಪಕ್ಕದಲ್ಲೇ ಶ್ರೀ ನಾಗಾಚಲ ಅಯ್ಯಪ್ಪನ ದೇವಸ್ಥಾನವಿದ್ದು , ಅಯ್ಯಪ್ಪನ ಮಾಲೆ ಹಾಕಲು ಇಲ್ಲಿಗೆ ಬರುತ್ತಾರೆ. ಎರಡು ಪ್ರಸಿದ್ಧ ದೇವಾಲಯರು ಒಂದೇ ಊರಿನಲ್ಲಿರೋದು ಕರಾವಳಿಗರಿಗೆ ಒಂದು ಹೆಮ್ಮೆಯ ವಿಷಯವಾಗಿದೆ .

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..