8851

All you need to know about ಕರಾವಳಿಯ ಒಂದು ವಿಶಿಷ್ಟ ದೇವಸ್ಥಾನ “ಮೆಕ್ಕೆಕಟ್ಟು”.

ಕರಾವಳಿಯ ದೇಗುಲಗಳಲ್ಲಿ ಒಂದು ವಿಶಿಷ್ಟ ದೇವಾಲಯ ಮೆಕ್ಕೆಕಟ್ಟು ನಂದಿಕೇಶ್ವರ ದೇವಸ್ಥಾನ . ಉಡುಪಿ ಜಿಲ್ಲೆಯ ಬ್ರಹ್ಮಾವರದಿಂದ ೧೨ ಕ್ಮ ದೂರದಲ್ಲಿರುವ ಈ ದೇವಸ್ಥಾನಕ್ಕೆ ನೂರಾರು ವರ್ಷಗಳ ಇತಿಹಾಸವಿದೆ ಮತ್ತು ಈ ದೇವಸ್ಥಾನವು ಹಲವಾರು ಕಾರ್ಣಿಕಗಳನ್ನು ಒಳಗೊಂಡಿದೆ.
ಈ ದೇವಸ್ಥಾನದ ಸ್ಥಳ ಪುರಾಣ ಹೇಳೋದಾದ್ರೆ ಹಿಂದೆ ಜವಾಲಿ ಸತ್ಯಕಾಮ ಎಂಬ ಋಷಿಗಳ ಆದೇಶದ ಮೇರೆಗೆ ಮಹಾರಾಜನೊಬ್ಬ ಅಶ್ವಮೇಧ ಯಾಗ ಮಾಡಲು ಈ ಸ್ಥಳವೇ ಸೂಕ್ತವೆಂದು ಪರಿಗಣಿಸಿ ಕುದುರೆಯನ್ನು ಶಿರಿಯಾರ ಗ್ರಾಮದ ಒಂದು ಸ್ಥಳದಲ್ಲಿ ಕಟ್ಟಿ ಹಾಕಿ, ಯಜ್ಞಕ್ಕೆ ಬೇಕಾದ ಮೇಕೆಗಳನ್ನು ಈಗ ದೇವಸ್ಥಾನ ಇರುವ ಸ್ಥಳದಲ್ಲಿ ಕಟ್ಟಿ ಹಾಕು ಶ್ರೀ ನಂದಿಕೇಶ್ವರನ ಅನುಗ್ರಹದಿಂದ ಯಾಗವನ್ನು ಯಾವುದೇ ರೀತಿಯ ವಿಘ್ನಗಳಿಲ್ಲದೆ ನೆರವೇರಿಸಿದನು. ಮೇಕೆಯನ್ನು ಕಟ್ಟಿದ ಜಾಗವೇ ಮುಂದೆ ಮೆಕ್ಕೆಕಟ್ಟು ಎಂದು ಪ್ರಸಿದ್ದಿ ಆಯಿತು ಹಾಗೆ ಕುದುರೆಯನ್ನು ಕಟ್ಟಿದ ಜಾಗವೇ ಕುದ್ರೆಕಟ್ಟು ಎಂದು ಪ್ರಸಿದ್ದಿ ಆಯಿತು.
1
ಇಲ್ಲಿನ ಕಾಷ್ಠ (ಮರದ) ವಿಗ್ರಹಗಳು ಇಲ್ಲಿನ ಪೌರಾಣಿಕತೆಯ ಒಂದು ಸಂಕೇತ .ಇಲ್ಲಿ ೧೭೨ ಮರದ ವಿಗ್ರಹಗಳಿವೆ. ಕ್ಷೇತ್ರದ ಪ್ರಧಾನ ದೇವರು ಶ್ರೀ ನಂದಿಕೇಶ್ವರ.ವೃಷಭಕಾರದ ನಂದಿಯ ವಿಗ್ರಹಕ್ಕೆ ಹೆರಿ ನಂದಿ ಎಂದು ಕರೆಯುತ್ತಾರೆ.ನಂದಿಕೇಶ್ವರನ ಬಲ ಭಾಗದಲ್ಲಿ ಪಂಚಮ ಮುಖದ ನಂದಿಯ ಮೇಲೆ ದುರ್ಗಿ, ಎಡ ಭಾಗದಲ್ಲಿ ಪಾರ್ಶ್ವಮುಖ ನಂದಿ ಮತ್ತು ಆಕಾಶ ನಂದಿ,ಬಾಲ ನಂದಿ , ಹಲವಾರು ವಿಗ್ರಹಗಳಿವೆ.
2
ಇಲ್ಲಿನ ಗೆಂಡಸೇವೆ ಈ ದೇವಸ್ಥಾನದ ಇನ್ನೊಂದು ವೈಶಿಷ್ಟ್ಯ . ವಿಶ್ವಕರ್ಮರ ಸಹಭಾಗಿತ್ವದಲ್ಲಿ ನಡೆಯುವ ಗೆಂಡಸೇವೆಯು ಭಕ್ತರ ಇಷ್ಟಾರ್ಥಗಳನ್ನು ಪೂರೈಸುತ್ತದೆ ವಿಶೇಷವಾಗಿ ಸಂತಾನ ಭಾಗ್ಯಕ್ಕಾಗಿ ಮಹಿಳೆಯರು ಗೆಂಡ ಸೇವೆಯನ್ನು ಮಾಡುತ್ತಾರೆ. ಮಾರ್ಚ್ ತಿಂಗಳಲ್ಲಿ ನಡೆಯುವ ಜಾತ್ರಾ ಮಹೋತ್ಸವದಲ್ಲಿ ಹಲವಾರು ಭಕ್ತಾಭಿಮಾನಿಗಳು ಆಗಮಿಸುತ್ತಾರೆ. ಇದೆ ಸಂದರ್ಭದಲ್ಲಿ ದೇವರ ದರ್ಶನವು ನಡೆಯುತ್ತದೆ. ದರ್ಶನವನ್ನು ಹಲವಾರು ವರ್ಷಗಳಿಂದ ಕಾರ್ಣಿಕತೆಯನ್ನು ಹೊಂದಿರುವ ವೆಂಕಟರಮಣ ಆಚಾರ್ಯರು ಮಾಡುತ್ತಾ ಬಂದಿದ್ದಾರೆ. ದರ್ಶನದ ಸಂದರ್ಭದಲ್ಲಿ ಇವರಿಂದ ಆಶೀರ್ವಾದ ರೂಪದಲ್ಲಿ ನೀರು ಚಿಮುಕಿಸಿಕೊಂಡರೆ ಇಷ್ಟಾರ್ಥ ಸಿದ್ಧಿಗಳು ಪ್ರಾಪ್ತಿಯಾಗುತ್ತದೆ ಎನ್ನುದು ಭಕ್ತರ ನಂಬಿಕೆ.
3
ಈ ದೇವಸ್ಥಾನದ ಸಂಕ್ಷಿಪ್ತ ಮಾಹಿತಿಯನ್ನು ಗೋವರ್ಧನ ಆಚಾರ್ಯರ ಈ ಕೆಳಗಿನ ವಿಡಿಯೋದಲ್ಲಿ ನೋಡಬಹುದು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..