1582

Mobile Applications ಬಗ್ಗೆ ತಿಳಿದಿರಿ

‌ಬೆಳಿಗ್ಗೆ ಏಳುವ ಸಮಯ ಅಲ್ಲಿ ಟಿಂಕ್ ಎನ್ನುವ ಮೊಬೈಲ್ ಸದ್ದು ನನ್ನ ಮನಸೇ ಮೊಬೈಲ್ ಎನ್ನುವಷ್ಟಾಗಿತ್ತು ಏನದು ಅಂತ ನೋಡಿದರೆ ವಾಟ್ಸಾಪ್ನ ಮೆಸೇಜ್, ಅಲ್ಲಿಂದ ಶುರು ನೋಡಿ ನನ್ನ ದಿನಚರಿ.ವಾಟ್ಸಾಪ್ ತುಂಬಾ ಬೆಳಗ್ಗೆಯೆ GM ನಂತಹ ಮೆಸೇಜ್ಗಳು,ನಾನೇನೂ ಕಮ್ಮಿ ಇಲ್ಲ ಬೇಕಾದವರಿಗೆ ನಾನೂ ಕಳಿಸಿದೆ(ಅದರಿಂದ ಕಾಸಷ್ಟೂ ಪ್ರಯೋಜನ ಇಲ್ಲವೆಂದೂ ಗೊತ್ತಿದ್ದರೂ).ನಂತರ ವಾಟ್ಸಾಪ್ ನ ಗೆಳೆಯ ಫ಼ೇಸ್ಬುಕ್,ಮುಖ ತೊಳೆಯದಿದ್ದರೂ ಮುಖಪುಸ್ತಕ ನೋಡುವುದಕ್ಕೆ ಭರವಿಲ್ಲ. ಹಾ! ಗಂಟೆ 8 ಆಯಿತು ಆಫ಼ೀಸಿಗೆ ಹೋಗಬೇಕಾದರೆ ಹೊರಗೆ ಹೋಗಿ ಟ್ಯಾಕ್ಸಿ ಕರೆಯಬೇಕಿಲ್ಲ,ಮೊಬೈಲ್ನಲ್ಲಿ Ola,Uber ಇದ್ದರೆ ನಿಮ್ಮ ಸ್ಥಳಕ್ಕೇ ಗಾಡಿಗಳು ಬರುತ್ತವೆ.ಆಶ್ಚರ್ಯಪಡಬೇಡಿ ಇದು ಮನುಷ್ಯನೇ ಮಾಡಿಕೊಂಡ ವ್ಯವಸ್ಥೆ!! ಈ ನಡುವೆ ವೇಗವಾಗಿ ಇಳಿಯುತ್ತಿರುವ ಬ್ಯಾಟರಿ ತಡೆಯಲು Battery saver Appsಗಳು.ಇನ್ನೋ ನಗರ ಪ್ರದೇಶದಲ್ಲಿ Piazza,MacDonald App ಡೌನ್ಲೋಡ್ ಮಾಡಿದರೆ ನೀವಿದ್ದಲ್ಲಿಗೇ ತಿಂಡಿಗಳು ಬರುತ್ತವೆ,ಹಣ ಪಾವತಿಸಲು ಮರೆಯಬೇಡಿ!! ಅಯ್ಯೊ ಕೆಲಸದಲ್ಲಿರುವಾಗ ಇಂಡಿಯಾದ ಮ್ಯಾಚ್ ಬೇರೆ ಸ್ಕೋರ್ ಎಷ್ಟಾಯಿತೋ ಎನ್ನುವ ಹಾಗಿಲ್ಲ Cricbuzz ಇದೆ ನೋಡಿ,ಅದೇನು ಬಿಡಿ ಲೈವ್ ಮ್ಯಾಚನ್ನೋ ಕುಳಿತಲ್ಲಿಯೇ ನೋಡಬಹುದು Hotstar ಸೇವೆ ಒದಗಿಸುತ್ತಿದೆ.ನಿನ್ನೆಯ ಧಾರವಾಹಿ ನೋಡಲಿಲ್ಲ ಎನ್ನುವವರಿಗೆ Voot .ಇದೇ ಯೋಚನೆಯಲ್ಲಿ ವೀಕೆಂಡ್ ಶಾಪಿಂಗ್ಗೆ FlipKart,Amazon,Snapdeal,Shipclues ತುಸು ಜಾಸ್ತಿಯೇ ಆಫ಼ರ್ಗಳ ಮಳೆಯನ್ನು ಸುರಿಸುತ್ತವೆ ಹಾಗೂ ಮನೆ ಬಾಗಿಲಿಗೇ ವಸ್ತುಗಳು ಬರುತ್ತವೆ,ಬ್ಯಾಡವಾದರೆ ವಾಪಾಸು ಕಳಿಸುವ ವ್ಯವಸ್ಥೆ ಎಂತಾ ಸೌಲಭ್ಯ ಯಾರಿಗೆ ಬೇಕು ಸ್ವಾಮಿ!!! ಈ ನಡುವೆ ಗೆಳತಿಯೊಂದಿಗೆ ಫಿಲ್ಮ್ ಗೆಹೋಗೋಣ ಎಂದರೆ ಲೈನ್ ನಲ್ಲಿ ನಿಲ್ಲಬೇಕು,ಕೆಲವೊಮ್ಮೆ ನಿಂತರೂ ಟಿಕೇಟ್ ಸಿಗುವುದಿಲ್ಲ ಇದನ್ನು ಸಲೀಸು ಮಾಡಲು Book My Show ಕಾಲವನ್ನೇ ಬದಲಾಯಿಸಿದೆ.ಬೋರ್ ಆಗಿದ್ದಲ್ಲಿ ಆಡಲು ಗೇಮ್ಸ್ Applications ಗಳಿವೆ ಅದನ್ನೂ ನಾನು ಹೇಳಬೇಕೆ?ನಿಮಗೆ ತುಸು ಜಾಸ್ತಿಯೇ ಗೊತ್ತಿದೆ. ನಾಡಿದ್ದು ಊರಿಗೆ ಹೋಗಬೇಕು ಅದಕ್ಕಗಿಯೇ RedBus ಮೂಲಕ ನಿಮಗೆ ಬೇಕಾದ ಸೀಟನ್ನು ಕುಳಿತಲ್ಲಿಯೇ ಬುಕ್ ಮಾಡಬಹುದು.ಹೀಗೆ ಹೇಳುತ್ತಾ ಹೋದರೆ ತುಂಬಾ ಇದೆ ನೋಡಿ ,ಬ್ಯಾಂಕ್ ಗೆ ಓಡಬೇಕಿಲ್ಲ ಕಾರ್ಡ್ಗಳಿದ್ದರೆ Paytm,Freecharge ಮೂಲಕ ಸಹಾಯ ಮಾಡುತ್ತವೆ,
‌ಈ ಕೆಳಗಿನ ಮುಖ್ಯ Applicationಗಳು
*Share it -Applicationಗಳನ್ನು ಸುಲಭವಾಗಿ ಮೊಬೈಲ್ ನಿಂದ ಮೊಬೈಲ್ಗೆ ವರ್ಗಾಯಿಸಲು
*Imo -ವೀಡಿಯೋ ಕಾಲ್‌ಗೆ
*PicsArt- ಫೋಟೋ ಎಡಿಟಿಂಗ್
*Viva Video- ವಿಡಿಯೋ ಎಡಿಟಿಂಗ್
*TubeMate/VidMate -You Tube ವಿಡಿಯೋ ಡೌನ್ಲೋಡ್ ಮಾಡಲು.
*Just Kannada -ಕನ್ನಡ ಬರೆಯಲು

ಸಾಕು ಬಿಡಿ ಕೊನೆಯದಾಗಿ ಈ ನಡುವೆ ಈ ಲೇಖನ ಓದುತ್ತಾ ಎಲ್ಲೊ ಕಳೆದು ಹೋದರೆ GoogleMap ಮೂಲಕ ನಿಮ್ಮ ಮನೆ ಸೇರಿಕೊಳ್ಳಿ ಮನೆ ಸೇರಲು ದಾರಿ ತೋರಿಸುತ್ತೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..