- By Vijay Bharadhaj
- Wednesday, May 24th, 2017
ಈ ಜಗತ್ತಿನಲ್ಲಿ ಮನಷ್ಯನಾಡುವ ಒಂದು ಸಹಜವಾದ ವಾಡಿಕೆ ಮಾತುಗಳಲ್ಲಿ ಪ್ರಮುಖವಾದದ್ದು – ಕತ್ತಲು ಆವರಿಸಿದೆ ಅಂತಲು ಮತ್ತು ಬೆಳಕು ಕಾಣಿಸಿತು ಎಂಬ ಮಾತುಗಳು , ಅಷ್ಟಕ್ಕು ಬೆಳಕು ಕಾಣಿಸಲು ಅದು ಮಾಯವಾಗಿಲ್ಲ , ಕತ್ತಲು ಕಾಣಿಸಲು ಅದು ಪ್ರತ್ಯಕ್ಷವಾಗಿಲ್ಲ. ಹಾಗಾದರೆ ಬೆಳಕು – ಕತ್ತಲ ಮಧ್ಯದಲ್ಲಿರುವ ಸತ್ಯವಾದರು ಏನು …? ಉತ್ತರ ಇಷ್ಟೆ…!
ಬೆಳಕಿನ ವರ್ತಮಾನದಲ್ಲಿ ಕತ್ತಲು ಗೈರು, ಕತ್ತಲ ವರ್ತಮಾನದಲ್ಲಿ ಬೆಳಕಿನ ಗೈರು ಅಷ್ಟೆ.
ಕ್ಷಣ-ಕ್ಷಣ ಬದಲಾಗುತ್ತಿರುವ ಇಂದಿನ ಪ್ರಪಂಚದಲ್ಲಿ ಆರ್ಥಿಕವಾಗಿ , ಭೌತಿಕವಾಗಿ ಬೆಳೆಯುತ್ತಿರುವ ಮನುಷ್ಯನ ಜೀವನದಲ್ಲಿ ಹಿಂದೆಂದು ಕಂಡು ಕೇಳಿರಿದಂತಹ ಹಲವಾರು ಮಾನಸಿಕ ಗೊಂದಲಗಳು. ಈ ಗೊಂದಲದಲ್ಲಿ ಬದುಕು ನಡೆಸುತ್ತಿರುವ ವಾಸ್ತವದ ಅರಿವಾಗಿದ್ದರು..! ಕೃತಕವಾಗಿ ನಡೆಸುತ್ತಿರುವ ಬದುಕನ್ನು ತೊರೆದು, ಸತ್ಯದ ಬಾಗಿಲನು ತೆರೆದು ನೆಮ್ಮದಿಯ ಉಸಿರನ್ನು ಉಸಿರಾಡಲು ಅದೇಕೋ ಹೆಜ್ಜೆ ಹಿಂದಕ್ಕೆ ಹಾಕಿ ನಿಂತಿರುವ ಇಂದಿನ ಜನ,ಗಣ,ಮನ ಏನು ಎಂದು ಅರ್ಥವಾಗುತ್ತಿಲ್ಲ,
ಬಹುಶಃ ಅದು ಜನ ಗಣ “ಹಣ” ಇರಬಹುದೇನೋ…!? ಬದುಕು ,ಬದುಕುವುದನ್ನ ಕಲಿಸಿದರು, ಬದುಕಬಿಟ್ಟು ಓಡಿ ಹೋಗಿ ಕಾಣದ ಕಡಲಿಗೆ ಹಂಬಲವೇಕೆ …? ತಿಳಿಯದು…! ನಮ್ಮೆದುರಿಗಿರುವ ಬಾಗಿಲನ್ನು ಮುಚ್ಚಿದರೆ ಕತ್ತಲ್ಲು, ಬಾಗಿಲು ತೆರೆದರೆ ಬದುಕಿನ ಸ್ಪಷ್ಟತೆಯನ್ನ ತೋರಿಸುವ ಬೆಳಕು.
ನಾಗರೀಕ ಸಮಾಜದಲ್ಲಿ ಇಂದಿನ ನಾಗರೀಕರ ಕೆಲವು ಅನಾಗರೀಕ ಯೋಚನೆಗಳಿಂದ ತಮ್ಮ ಬದುಕಿಗೆ ಕತ್ತಲನ್ನುಅವಾಹನೆಯಾಗಲು ದಾರಿ ಮಾಡಿಕೊಡುತ್ತಿರುವವರಿಗೆ ಕೂಗಿ ಹೇಳುತ್ತಿರುವ ಕಿರುಚಿತ್ರ …!
ತೆರೆಯೋ ಬಾಗಿಲನು….! ನಮ್ಮ ಕಿರುಚಿತ್ರದ trailer