2029

ಈ 15 ವಿಷಯಗಳು ಒಡಹುಟ್ಟಿದವರಿಗಷ್ಟೇ ತಿಳಿದಿರುತ್ತದೆ

1.ಬಟ್ಟೆ ಬರೆಗಳಿಗೆ ಬರವಿಲ್ಲ
ಅಕ್ಕ /ಅಣ್ಣನ ಬಟ್ಟೆ ಚಿಕ್ಕದಾದರೆ ಅದು ತಮ್ಮ /ತಂಗಿಗೆಂದೇ ಮೀಸಲಾಗಿರುತ್ತದೆ

2.ಪಕ್ಕದಲ್ಲಿರುವ ಪ್ರತಿಸ್ಪರ್ಧಿ
ಓದುವುದರಿಂದ ಹಿಡಿದು ಮನೆಯಲ್ಲಿ ಆಡುವ ಆಟದ ವರೆಗೂ ಅಕ್ಕ /ತಂಗಿಯೇ ಸದಾ ಪ್ರತಿಸ್ಪರ್ದಿಯಾಗಿರುತ್ತಾರೆ

3.ಹೊಟ್ಟೆಕಿಚ್ಚಿನ ಮೊಟ್ಟೆ ಕೋಳಿಗಳು
ಮುಖದ ಬಣ್ಣದ ಬಗ್ಗೆ , ಎತ್ತರದ ಬಗ್ಗೆ ,ಕೂದಲಿನ ಬಗ್ಗೆ ಒಬ್ಬರ ಮೇಲೆ ಇನ್ನೊಬ್ಬರಿಗೆ ಹೊಟ್ಟೆಕಿಚ್ಚು ಇರುತ್ತದೆ ಆದರೆ ಇಬ್ಬರು ಕೂಡ ಹೇಳಿಕೊಂಡಿರುವುದಿಲ್ಲ

4.ಕಾಣಸಿಗುವ ಕರ್ಣ
ಒಬ್ಬರ ಪೆನ್ಸಿಲ್ ಇಂದ ಹಿಡಿದು ಪೆರ್ಫ್ಯೂಮ್ ವರೆಗೂ ಇನ್ನೊಬ್ಬರು ಕೇಳಿದ ಕೂಡಲೇ ಕರುಣಿಸುತ್ತಾರೆ , ಒಮ್ಮೊಮ್ಮೆ ಟೂಟ್ ಬ್ರಷ್ ಕೂಡ

5.ಬಯಸದಿದ್ದರೂ ಬರುವ ಬೆಂಬಲ
ಸ್ಕೂಲ್ /ಕಾಲೇಜ್ನಲ್ಲಿ ಓದುವಾಗ ಬೆದರಿಸಿದ ವಿಷಯವನ್ನು ಅಣ್ಣ /ಅಕ್ಕ ಳಿಗೆ ತಿಳಿಸಿದರೆ ಸಾಕು ಮುಂದಿನದ್ದನ್ನು ಅವರು ನೋಡಿಕೊಳ್ಳುತ್ತಿದ್ದರು . ಹಣ ಕಾಸಿನ ವಿಚಾರದಲ್ಲೂ ಹಿರಿಯರ ಬೆಂಬಲ ಕಿರಿಯರಿಗೆ

6.ಪರಿಪೂರ್ಣವಲ್ಲದ ಫ್ಯಾಮಿಲಿ ಫೋಟೋ
ನೀವು ಎಷ್ಟೇ ಪ್ರಯತ್ನಿಸಿದರೂ ನಿಮ್ಮ ತಮ್ಮ /ತಂಗಿ ವಿಚಿತ್ರ ಮುಖ ಮಾಡಿಯೋ ಅಥವಾ ಎತ್ತಲೋ ನೋಡಿ ಸುಂದರವಾಗಿರಬೇಕಾಗಿದ್ದ ಫೋಟೋವನ್ನು ಹಾಳು ಮಾಡಿರುತ್ತಾರೆ

7.ತಂದೆ ಅಥವಾ ತಾಯಿಯ version 2.0
ಅಮ್ಮ /ಅಪ್ಪ ಮಾಡ್ಬೇಕಾಗುವ ಎಷ್ಟೋ ಕೆಲಸಗಳನ್ನು ನಿಮ್ಮಣ್ಣ/ಅಕ್ಕ ನಿಮಗಾಗಿ ಮಾಡಿರುತ್ತಾರೆ /ಳೆ
Ex. ಸ್ಕೂಲ್ ಅಡ್ಮಿಶನ್ , ಬಟ್ಟೆ ಖರೀದಿ

8.ಅಕ್ಕ /ಅಣ್ಣನ ದುರದೃಷ್ಟ
ಅಪ್ಪ ಅಮ್ಮ ಏನೇ ತಂದರೂ ಅದರಲ್ಲಿ ಪ್ರಮುಖ ಪಾಲು ಕಿರಿಯರಿಗೆ . ಜಗಳವಾದಾಗಲೂ ಕೂಡ ಅಪ್ಪ ಅಮ್ಮರು ಕಿರಿಯರ ಕಡೆಗೆ ನಿಂತು ವಾದಿಸಿ ಅವ್ರ ತಪ್ಪನ್ನು ಸಮರ್ಥಿಸುತ್ತಾರೆ

9.ಚಾಕಲೇಟ್ ಚೋರ/ರೀ
ನೀವು ಚಾಕಲೇಟ್ ತಂದು ನಿಮಗೆ ಗೊತ್ತಿರದ ಜಾಗದಲ್ಲಿ ಇಟ್ಟರೂ ಮರು ದಿನ ಅದು ಕಾಣೆ

10.ಹೊಸದೊಂದು ಭಾಷೆ
ನೀವು ಮಾತಾಡುವ ರಹಸ್ಯ ವಿಷಯಗಳು ಅಮ್ಮ /ಅಪ್ಪನಿಗೆ ತಿಳಿಯದಿರಲಿ ಎಂದು ‘ಪ /ಬ ’ ಭಾಷೆ ಬಳಸುವುದು
Ex. ( nipinn hupudga capall maapadidda )

11.ಮಾದರಿ ಅಕ್ಕ /ಅಣ್ಣ
ಸ್ಕೂಲ್ ನಲ್ಲಿ ಟೀಚರ್ ಗಳು ಹೇಳುತಿದ್ದ ಒಂದೇ ಮಾತು -“ಅಣ್ಣ /ಅಕ್ಕ ನ ನೋಡಿ ಕಲಿ”

12.ರಾಖಿ ರಾದ್ಧಾಂತ
20 ರೂ . ರಾಖಿ ಕಟ್ಟಿ 200 ರೂಪಾಯಿ ಉಡುಗೊರೆ ಪಡೆಯುವ ಅದೃಷ್ಟ ಮಾಡಿರುತ್ತಾರೆ ಕಿರಿಯರು

13.ದೆವ್ವದ ದಿನಗಳು
ಬಹಳ ದಿನಗಳ ಬಳಿಕ ನೀವಿಬ್ಬರೇ ಸಿಕ್ಕರೆ ಆ ಪೂರ್ತಿ ದಿನ ಮಾತುಗಳೇ ಆಗಿರುತ್ತದೆ , ಅದರಲ್ಲಿ ಹೆಚ್ಚಿನಷ್ಟು ದೆವ್ವ ಪ್ರೇತಗಳ ಬಗ್ಗೆಯೇ ಮಾತನಾಡಿ ನಿಮ್ಮಲ್ಲಿದ್ದ ಸ್ವಲ್ಪ ಧೈರ್ಯವನ್ನು ಹಾಳು ಮಾಡಿರುತ್ತಾರೆ

14.ತಮ್ಮ /ತಂಗಿಯ ನಿರ್ಧಾರ
ಅಮ್ಮ ನಾಳೆಯ ತಿಂಡಿ ಮಾಡಬೇಕಿದ್ದರೂ ತಮ್ಮ /ತಂಗಿಯ ನಿರ್ದಾರವನ್ನಷ್ಟೇ ಪರಿಗಣಿಸುತ್ತಾರೆ ಹೊರತೂ ಹಿರಿಯರದಲ್ಲ

15.ಭಾವನೆಗಳಿಗೆ ಬೆಲೆ
ಅಕ್ಕ /ಅಣ್ಣ ನಿಮ್ಮ ಎಲ್ಲ ಭಾವೆನೆಗಳಿಗೂ ಪ್ರತಿಕ್ರಿಯಿಸಿ ಅದಕ್ಕೆ ಸೂಕ್ತ ಸಹಾಯ ಮಾಡಿರುತ್ತಾರೆ

ನೀವೂ ಕೂಡ ಬರೆಯಬಹುದು . ನಿಮ್ಮ ಬರಹಗಳನ್ನು locakebal@gmail.com ಗೆ ಕಳುಹಿಸಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..