- By Pavan Shetty
- Sunday, April 10th, 2016
Redmi Note 3 16GB ಹಾಗೂ 32GB ಯ ಎರಡು ರೂಪಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿದೆ .ಇವುಗಳ ನಡುವಿನ ಮುಖ್ಯವಾದ ವ್ಯತ್ಯಾಸವೇನೆಂದರೆ 16GBಯಲ್ಲಿ 2 GB RAM ಹಾಗೂ 32GB ಯಲ್ಲಿ 3GB RAM ಇದೆ. ಫೋನ್ 5.5 ಇಂಚು screen ಹೊಂದಿದ್ದು ,1080X1920 ರೆಸೋಲ್ಯುಶನ್ ಇದೆ.
Redmi Note 3 ಇನ್ನೊಂದು ಮುಖ್ಯವಾದ ವಿಶೇಷತೆ 4050Mah ಬ್ಯಾಟರಿ. ನಿಮಗೆ ಒಂದೇ ರೀಚಾರ್ಜ್ನಲ್ಲಿ ಅತ್ಯಂತ ಸುಲಭವಾಗಿ ಒಂದು ದಿನ ಬಳಸಬಹುದು. ಇದರಲ್ಲಿ Quick Charge 1.0 ಇದೆ. ಇದು ಬಹಳಷ್ಟು ವೇಗವಾಗಿ recharge ಮಾಡಲು ಸಹಾಯ ಮಾಡುತ್ತದೆ.
Redmi ಮೊದಲ ಬಾರಿಗೆ ತನ್ನ ಫೋನಿನಲ್ಲಿ ಬೆರಳಚ್ಚು ತಂತ್ರಜ್ಞಾನವನ್ನು ಫೋನಿನಲ್ಲಿ ಅಳವಡಿಸಿದೆ. ಫೋನನ್ನು ಬೆರಳಚ್ಚಿನಿಂದ unlock ಮಾಡಬಹುದು . ಇದರಲ್ಲಿ 5 ಬೆರಳಿನ ಪ್ರತಿಗಳನ್ನು ಶೇಖರಿಸಿ ಇಡಬಹುದು .Finger Print Scanner ಫೋನಿನ ಹಿಂಭಾಗದಲ್ಲಿ ಕ್ಯಾಮೆರಾದ ಕೆಳಗಡೆ ಇದೆ.Redmi Note 3ಗೆಇದನ್ನುಹೋಲಿಸಿದರೆ ಇದರಲ್ಲಿ 16MP ಕ್ಯಾಮೆರಾ ಇದೆ .
ಫೋನಿನ ಇತರೆ ವಿಶೇಷತೆಗಳು:
- 2GB/3GB RAM
- 1.3GHZ Processor
- 16GB/32GBಮೆಮೊರಿ
- 16MP ಹಾಗು 5MPಕ್ಯಾಮೆರಾ
- 4050mah ಬ್ಯಾಟರಿ
- Android 5.1
- ಒಂದು ನ್ಯಾನೋ ಹಾಗೂ ಒಂದು ಮೈಕ್ರೋ SIM
- ಬೆಲೆ: 2GB – 9,999 ರೂಪಾಯಿಗಳು . 3GB 11,999 ರೂಪಾಯಿಗಳು.