3730

Alzheimer ಖಾಯಿಲೆ ಬಗ್ಗೆ ನಿಮಗೆ ಗೊತ್ತಿರಬೇಕಾದ ಅಂಶಗಳು

Alzheimer ಅಂದರೆ ಇದೊಂದು ಹಂತ ಹಂತವಾಗಿ ಮಿದುಳಿನ ಕೋಶಗಳಲ್ಲಿನ ಕ್ಷಮತೆ ಕಡಿಮೆ ಮಾಡಿ ಕೊನೆಯಲ್ಲಿ ಯಾವೊಂದು ವಸ್ತುವೂ ಸರಿಯಾಗಿ ಮಿದುಳಿನಲ್ಲಿ ಉಳಿಯದೆ ಮಾಡುವಂತಹ ಒಂದು ರೋಗ.ಕೆಲವೊಂದು ವಿಷಯಗಳು ನಾವು ಬೆಳೆದಿರುವ ವಾತಾವರಣದ ಮೇಲೆ ಅವಲಂಬಿತವಾಗಿದ್ದರೂ ಈ ಕೆಳಗೆ ಬರೆದಿರುವ ಅಂಶವನ್ನು ಸ್ವಲ್ಪ ಗಣನೆಗೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಟ್ಟರೆ ಸ್ವಲ್ಪ ಒಳ್ಳೆಯದು

1.ಯಾವ್ ವಸ್ತು ನ ಎಲ್ಲಿ ಇಟ್ಟಿರಬಹುದು ಎಂಬ ಸರಿಯಾದ ಕಲ್ಪನೆ ಕೂಡ  ಇರಲ್ಲ

ಸ್ವಲ್ಪ confusion ಆಗೋದು ಓಕೆ . ಆದರೆ ಟಿವಿ ರಿಮೋಟ್ ನ ಶೂ rack ಹತ್ರ ಹೋಗಿ ಹುಡ್ಕೋದು ಅಥವಾ ಕಾರ್ ಕೀ ನ fridge  ಒಳಗೆ ಹುಡ್ಕೋದು ಮಾಡ್ತಾ ಇದ್ರೆ ನಿಮ್ಮ ಕುಟುಂಬದ ಆ ವ್ಯಕ್ತಿಗೆ ಈ ಖಾಯಿಲೆ ಇದೆ ಅನ್ನೋ ಸೂಚನೆ

2.ಕೆಲವೊಂದು ಅತೀ ಗೊತ್ತಿರುವ ಕೆಲಸ ಮಾಡುವಾಗಲೂ ತಡವರಿಸುತ್ತಾರೆ

ನಿಮ್ಮ ಮನೆಯ ಸದಸ್ಯರು ಅವರು ಮೊದಲಿನಿಂದಾನೂ ದಿನಾಲೂ ಮಾಡಿಕೊಂಡು ಬಂದಿರುವ ದಿನಚರಿಯನ್ನು ಸರಿಯಾಗಿ ಮಾಡಲೂ ಆಗದೆ ತೊಳಲಾಟ ಆಡುತ್ತಿದ್ದರೆ ನ್ಜವಾಗಿಯೂ ಆಲಸ್ಯ ಮಾಡಬೇಡಿ

3.ತಮ್ಮ ವಾಸಸ್ಥಳದ ಬಗ್ಗೆ ಸರಿಯಾಗಿ ನೆನಪಿನಲ್ಲಿ ಇಟ್ಟುಕೊಳ್ಳದೆ  ಇದ್ದರೆ

ಅವರಿಗೆ ಸರಿಯಾಗಿ ತಮ್ಮ ಮನೆಯ ಹಾದಿ ಗೊತ್ತಾಗದೆ ಇದ್ದರೆ ತುಂಬಾ ತೊಳಲಾಟ ಅನುಭವಿಸುತ್ತಾರೆ . ಎಲ್ಲಿ ಇದ್ದೇನೆ ಈವಾಗ ಅನ್ನುವುದು ಸಹ ಗೊತ್ತಿರುವುದಿಲ್ಲ . ಎಲ್ಲೋ ಒಂದು ಕಡೆ ಮೂಕ ವೇದನೆಯಲ್ಲಿ ಕುಳಿತು ನೋಡುತ್ತಾ ಇರುತ್ತಾರೆ

4.ಸರಿಯಾಗಿ ಮಾತನಾಡಲೂ ಸಾಧ್ಯ ಆಗುವುದಿಲ್ಲ

ಈ ಖಾಯಿಲೆ ಜಾಸ್ತಿ ಆದಂತೆಲ್ಲ ಅವರಿಗೆ ಮಾತು ಸರಿಯಾಗಿ ಆಡಲೂ ಸಾಧ್ಯ ಆಗುವುದಿಲ್ಲ . ಮಾತಿನ ಮಧ್ಯಕ್ಕೆ ವಿರಾಮ ಹಾಕಿ ಮುಂದೆ ಏನು ಮಾತಾಡಬೇಕು ಅನ್ನುವುದೇ ಅವರಿಗೆ ತೋಚುವುದಿಲ್ಲ

5.ಅಲೆದಾಟ

ಸಂಶೋಧನೆ ಪ್ರಕಾರ ಈ ಖಾಯಿಲೆಯಿಂದ ನರಳುತ್ತಿರುವವರಲ್ಲಿ  60 % ಕ್ಕಿಂತ ಜಾಸ್ತಿ ಜನ ಅಲ್ಲಿ ಇಲ್ಲಿ ತಿರುಗಾಡುತ್ತಿರುತ್ತಾರೆ ..ಎಲ್ಲಿಗೆ ಹೋಗಬೇಕು. ಯಾಕೆ ಇಲ್ಲಿ ಇದ್ದೇವೆ ಅನ್ನುವುದರ ಪರಿವೆ ಇರುವುದಿಲ್ಲ

6.ಹೇಳಿದ ಮಾತನ್ನೇ ಪುನಃ ಪುನಃ ಹೇಳುವುದು , ಕೇಳಿದ ಪ್ರಶ್ನೆಗಳನ್ನೇ ಪುನಃ ಪುನಃ ಕೇಳುವುದು

ಈ ಖಾಯಿಲೆಯಿಂದ ನರಳುವ ವ್ಯಕ್ತಿ ಪದೇ ಪದೇ ಹೇಳಿದ್ದನ್ನೇ ಹೇಳುತ್ತಾ ಇರುತ್ತಾರೆ . ಎಷ್ಟೇ ಸಾರಿ ನೀವು ಉತ್ತರ ಕೊಟ್ಟರೂ ಸ್ವಲ್ಪ ಹೊತ್ತಲ್ಲೇ ಮತ್ತೆ ಅದೇ ಮಾತನ್ನು ಆಡುತ್ತ ಇರುತ್ತಾರೆ

7.ಕಣ್ಣಿನ ದೃಷ್ಟಿ ಕಡಿಮೆ ಆಗುವುದು

ಇದು ವಯೋ ಸಹಜ ಕಣ್ಣಿನ ಸಮಸ್ಯೆ ಆದರೂ ಇದು ಕೂಡ ಒಂದು ಲಕ್ಷಣ ಆಗಿರಲೂ ಬಹುದು . ಸರಿಯಾಗಿ ಓದಲು ಸಾಧ್ಯ ಆಗದೆ ಇರುವುದು , ವಸ್ತುವಿನ ದೂರದ ಬಗ್ಗೆ ಒಂದು ಅಂದಾಜು ಮಾಡಲು ಸಾಧ್ಯ ಆಗದೆ ಇರುವುದು ಇವೆಲ್ಲ ಈ ಖಾಯಿಲೆಯ ಲಕ್ಷಣ ಆಗಿರಲೂಬಹುದು

8.ಯಾವಾಗಲೂ ಉಪಯ್ಯೋಗ ಇಲ್ಲದ ಕೆಲಸವನ್ನು ಪದೇ ಪದೇ ಮಾಡುವುದು

ನಿಮ್ಮ ಕುಟುಂಬದ ಹಿರಿಯ ಸದಸ್ಯರು ಉಪಯೋಗಕ್ಕೆ ಬಾರದ ಕೆಲಸ , ಉದಾಹರಣೆಗೆ ಟೇಬಲ್ ನ drawer  ಪದೇ ಪದೇ ತಗೆದು ಹಾಕುತ್ತ ಇರುವುದು ,  ಪದೇ  ಪದೇ ಬಟ್ಟೆಯನ್ನು ಬಿಡಿಸಿ ಪುನಃ ಮಡಿಚಿ ಹಾಕುವುದು ಇಂತವೆಲ್ಲ ಮಾಡುತ್ತಾ ಇದ್ದರೆ ಇದು ಖಂಡಿತವಾಗಿಯೂ ಈ ಖಾಯಿಲೆಯ ಒಂದು ಲಕ್ಷಣ

9.ಕುಟುಂಬ ಸದಸ್ಯರನು ಸರಿಯಾಗಿ ನೆನಪಿನಲ್ಲಿಟ್ಟುಕೊಳ್ಳದೆ ಇರುವುದು

ನಿಮ್ಮ ಮನೆಯ ಹತ್ತಿರದ ಸದಸ್ಯರನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ಇರುವುದು , ಮೊಮ್ಮಕ್ಕಳು ಯಾರೆಂದು ಗುರುತು ಹಿಡಿಯದೆ ಇರುವುದು ಹಾಗೆಯೇ ದಿನ ನಿತ್ಯ ನೋಡುವ ಜನರನ್ನು ಸರಿಯಾಗಿ ಗುರುತಿಸದೆ ಇರುವುದು ಈ ರೋಗದ ಲಕ್ಷಣ

10.ಸರಿಯಾಗಿ ದಿನೋಪಯೋಗಿ ವಸ್ತುಗಳನ್ನು ಉಪಯೋಗಿಸಲು ಕಷ್ಟ ಪಡುವುದು

ಉದಾಹರೆಗೆ ಹಲ್ಲುಜ್ಜಲು ಕಷ್ಟ ಪಡುವುದು , ಬಟ್ಟೆಯ ಗುಂಡಿಗಳನ್ನು ಸರಿಯಾಗಿ ಹಾಕಿಕೊಳ್ಳಲು ಬಾರದೆ ಇರುವುದು ಇವೆಲ್ಲ ಆ ಖಾಯಿಲೆಯಾ ಲಕ್ಷಣ

11.ತಮ್ಮ ಮೂಲ ಕೆಲವನ್ನು ಮಾಡಿಕೊಳ್ಳಲು ಕಷ್ಟ ಪಡುವವರು

ಹಲ್ಲು ಉಜ್ಜದೆ ಇರುವುದು ,ಊಟ ಮಾಡದೆ ಇರುವುದು , ಬಟ್ಟೆ ಸರಿಯಾಗಿ ಹಾಕಿ ಕೊಳ್ಳದೆ ಇರುವುದು ,ಮಲ ಮೂತ್ರ ಸರಿಯಾಗಿ ಮಾಡದೆ ಸುಮ್ಮನೆ ಇರುವುದು ,ಸ್ನಾನ ಮಾಡದೆ ಇರುವುದು ಇತ್ಯಾದಿ ಕಂಡು ಬಂದರೆ ನಿಮ ಮನೆಯ ಆ ಸದಸ್ಯನಿಗೆ ಚಿಕಿತ್ಸೆ ಕೊಡಿಸುವುದು ಮರೆಯಬೇಡಿ

12.ನಿದ್ದೆ ಮಾಡದೆ ಇರುವುದು

ಈ ರೋಗಕ್ಕೆ ತುತ್ತಾದವರು ಸರಿಯಾಗಿ ನಿದ್ದೆ ಮಾಡದೆ , ಮನಸ್ಸನ್ನು ಸರಿಯಾಗಿ ಇಟ್ಟುಕೊಳ್ಳದೆ ಅಲ್ಲಿ ಇಲ್ಲಿ ಓಡಾಡಿಕೊಂಡು ಇರ್ತಾರೆ

13.ಮಗುವಿನ ಹಾಗೆ ವರ್ತನೆ ಮಾಡುತ್ತಾರೆ

ತಜ್ಞರ ಪ್ರಕಾರ ಈ ಖಾಯಿಲೆಗೆ ತುತ್ತಾದವರು ಬೇರೆಯವರ ಮೇಲೆ ಜಾಸ್ತಿ ಅವಲಂಬಿತರಾಗಿರುತ್ತಾರೆ . ಬೇರೆಯವರ ನೆರಳಿನ ಹಾಗೆ ಅಲ್ಲಿ ಇಲ್ಲಿ ಸುತ್ತಾಡುತ್ತ ಇರುತ್ತಾರೆ

ಈ ಖಾಯಿಲೆಗೆ ಬಂದರೆ ಜೀವನೆವೆ ಹೋದಂತೆ ಅಲ್ಲ . ಸರಿಯಾದ ಚಿಕಿತ್ಸೆ ಕೊಟ್ಟರೆ ಆ ವ್ಯಕ್ತಿ ಸಹಜ ಜೀವನ ನಡೆಸಬಹುದು .

ಈ ಪೋಸ್ಟ್ ಬರೆಯುವ ಮುಖ್ಯ ಉದ್ದೇಶ ಏನೆಂದರೆ , ನಾವೆಲ್ಲಾ ಉದ್ಯೋಗದ ಮೇಲೆ ಊರು ಬಿಟ್ಟು , ತಂದೆ ತಾಯಿಗಳನ್ನು ಬಿಟ್ಟು ದೂರದ ಊರಲ್ಲಿ ವಾಸ ಮಾಡುತ್ತಾ ಇರುತ್ತೇವೆ . ಎಲ್ಲೋ ಒಂದು ಕಡೆ ಕುಟುಂಬದ ಮೇಲೆ ನಿಗಾ ಇಡುವುದು ಕಡಿಮೆ ಆಗುತ್ತಾ ಇದೆ . ಕೆಲವೊಂದು ಸಾರಿ ಅತೀ ದುರಾಸೆಯಿಂದ ನಮ್ಮ ಹತ್ತಿರದವರನ್ನು ಸರಿಯಾಗಿ ನೋಡಿಕೊಂಡು ಇರುವುದಕ್ಕೆ ಆಗುವುದಿಲ್ಲ . ಈ ದೇಶ ಬಿಟ್ಟು ಬೇರೆ ಕಡೆ ಹೋಗಿ ಜಾಸ್ತಿ ದುಡ್ಡು ಸಂಪಾದನೆ ಮಾಡುವ ಕಡೆ ಜಾಸ್ತಿ ಗಮನ ಕೊಡುತ್ತೆವೆಯೇ ಹೊರತೂ ಇಲ್ಲೇ ಇದ್ದು ತಂದೆ ತಾಯಿ , ಕುಟುಂಬದವರ ಹತ್ತಿರ ಒಳ್ಳೆಯ ಸಮಯ ಕಳೆದು ಅವರ ಆಗು ಹೋಗುಗಳ ಬಗ್ಗೆ ತಿಳಿದು ಸಹಾಯ ಮಾಡಿ ಬದುಕಿದರೆ ಜೀವನ ಒಂಥರಾ ಖುಷಿ ಖುಷಿ ಆಗಿರುತ್ತದೆ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..