- By Local Kebal Team
- Monday, October 22nd, 2018
ವೈದೇಹಿಯವರ ಸಾಹಿತ್ಯದ “ಅಮ್ಮಚ್ಚಿಯೆಂಬ ನೆನಪು..” ಚಿತ್ರದ ಧ್ವನಿ ಸುರುಳಿ ಇದಾಗಲೇ ಪುನೀತ್ ರಾಜಕುಮಾರ್ PRK ಸಂಸ್ಥೆ ಬಿಡುಗಡೆಮಾಡಿದೆ. ಹೊಸ ಪ್ರತಿಭೆಗಳ, ರಂಗಭೂಮಿಯಲ್ಲಿ ಪಳಗಿದ ಅನೇಕರ ಪರಿಶ್ರಮದ ಕನಸು ಇದೇ ನವಂಬರ್ 1 ಕನ್ನಡ ರಾಜ್ಯೋತ್ಸವದಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿದೆ. ಒಂದು ಮೊಟ್ಟೆಯ ಖ್ಯಾತಿಯ ರಾಜ್ ಬಿ ಶೆಟ್ಟಿ ಒಂದು ವಿಶಿಷ್ಟ ಪಾತ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದಾರೆ. ಪಂಡಿತ್. ಕಾಶಿನಾಥ ಪತ್ತಾರರ ಸಂಗೀತವಿರುವ ಅಮ್ಮಚ್ಚಿಯೆಂಬ ನೆನಪು ಚಿತ್ರದ ಸುಮದುರ ಹಾಡುಗಳನ್ನು PRK ಯೂಟ್ಯೂಬ್ ಚಾನೆಲ್ ನಲ್ಲಿ ಕೇಳಿ ಆನಂದಿಸಿ. ಕಿರುತೆರೆ, ನಾಟಕ, ಹಿರಿತೆರೆಗಳಲ್ಲಿ ಕೆಲಸ ಮಾಡಿರುವ ಚಂಪಾ ಪಿ. ಶೆಟ್ಟಿ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಿಗೆ, ಹೊಸ ಹುರುಪಿಗೆ ನಿಮ್ಮೆಲ್ಲರ ಬೆಂಬಲ ಕೊಡಿ. ಕನ್ನಡ ಸಾಹಿತ್ಯವನ್ನು ಮತ್ತೆ ಬೆಳೆಸೋಣ. ಹಾಡುಗಳನ್ನು like, share ಮಾಡಿ.