1927

“ಅನ್ವಿಕ್ಷಿಕಿ ” ಎಂಬ ಫಿಲೊಸೊಫಿಕಲ್ ಕಿರುಚಿತ್ರ

ನಾನು ನಿಮ್ಮ ಅರುಣ್‌ ಕುಮಾರ್ ಪಿ ಟಿ. ಈ ಹಿಂದಿನ ಅಂಕಣಗಳಲ್ಲಿ ಎಲ್ಲಿಂದಲೋ ವಿಷಯ ಶುರು ಮಾಡಿ, ಇನ್ನೆಲ್ಲಿಗೋ ತಂದು ನಿಲ್ಲಿಸಿ, ವಿಷಯಕ್ಕೆ ಬರೋದು ನನಗೆ ರೂಢಿ. ಈ ಸಲ ಜ಼ುಗ್ ಅಂತ ನೇರವಾಗಿ ವಿಷಯಕ್ಕೆ ಬರೋಣ ಅಂತ ಒಂದು ಕಥೆ ಇಂದ ಶುರು ಮಾಡಿದೆ. ಮೊನ್ನೆ ಒಂದು ಚಿತ್ರ ನೋಡಿದೆ, ಆ ಚಿತ್ರ ಎಷ್ಟು ಬೋರಿಂಗ್ ಆಗಿತ್ತು ಅಂದರೆ, ಅದರ ಬಗ್ಗೆ ಬರೆಯೋದೇ ಬೇಡ ಅನಿಸಿತು, ಅಂದರೆ ಲೆಕ್ಕ ಹಾಕಿ. ಯಾಕೋ ಟೈಮೇ ಸರಿ ಇಲ್ಲ ಅಂತ ಫೇಸ್‌ಬುಕ್‌ ನಗರಿಯಲ್ಲಿ ಓಡಾಡುವಾಗ ಅನ್ವಿಕ್ಷಿಕಿ ಅಂತ ಒಂದು ಕಿರುಚಿತ್ರದ ಕುರಿತು ಮಾಹಿತಿ ಸಿಕ್ಕಿತು. ಸರಿ, ಕಳೆದುಕೊಳ್ಳೋದಾದರೂ ಏನು ಅಂತ ನೋಡಿದೆ. ಅದನ್ನು ನೋಡಿದ ಮೇಲೆ ಅದರ ಬಗ್ಗೆ ಅಂಕಣ ಬರೀಬೇಕು ಅಂತ assignment ಏನೂ ಇರಲಿಲ್ಲ. ಆದರೂ ಈ ಕಿರುಚಿತ್ರ ಬರೀ ಇಷ್ಟವಾಗುವುದಲ್ಲದೇ, ಹಲವಾರು ಪ್ರಶ್ನೆಗಳಿಗೆ ದೂಡಿ, ನೀವು ಮೇಲೆ ಓದಿದ ಒಂದು related ಮತ್ತು unrelated ಕಥೆಯ ಹುಟ್ಟಿಗೆ ಕಾರಣವಾಯಿತು‌. ಈ ಅಂಕಣ basically ಆ ಕಿರುಚಿತ್ರದ ಬಗ್ಗೆಯೇ ಬರೆದಿರೋದು.‌ಆದರೆ ಅದಕ್ಕೆ ಮುನ್ನ ಒಂದು ಕಥೆಯನ್ನು ಹೇಳುವ ಜರೂರು ಇತ್ತು. ಆ ಕಥೆ ಈ ಅಂಕಣಕ್ಕೆ ಹೇಗೆ related ಹಾಗೂ unrelated ಆಗುತ್ತದೆ ಎಂದು ಈಗ ಹೇಳುವೆನು.

ನೀವಿನ್ನೂ ಅನ್ವಿಕ್ಷಿಕಿ ಕಿರುಚಿತ್ರ ನೋಡಿಲ್ಲ ಅಂದರೆ ಲೈಟಾಗಿ ಒಂದು spoiler alert! ಒಂದು ಕಾಫಿ‌ ಡೇ, ಅಲ್ಲಿ ಒಬ್ಬ ಕಸ್ಟಮರ್ ಬಂದು ಕಾಫಿ ಕುಡಿದು ಎದ್ದು ಹೋಗುವಾಗ ಪುಸ್ತಕ ಬಿಟ್ಟು ಹೋಗಿರುತ್ತಾನೆ (intentional or not, ಅದೂ ಕೂಡ ಒಂದು ಪ್ರಶ್ನೆಯೇ, as I said earlier, ಈ ಕಿರುಚಿತ್ರದಿಂದ ಎಷ್ಟು ಅರ್ಥ ಆಗುತ್ತೋ, ಅಷ್ಟೇ ಚಿಂತಿಸುವ ಕೆಲಸ ಸಿಗುತ್ತದೆ). OK, coming back to topic, ಅಲ್ಲಿಗೆ ಬರುವ ಒಂದು ಹುಡುಗಿ ಅದೇ ಜಾಗದಲ್ಲಿ ಕೂರುತ್ತಾಳೆ. ಅಲ್ಲಿ ಅವನು ಬಿಟ್ಟು ಹೋಗಿದ್ದ ಪುಸ್ತಕವನ್ನು ಅವಳು ಈಗಾಗಲೇ ಓದಿರುತ್ತಾಳಾದರೂ, ಆ ಪುಸ್ತಕದ ಮೇಲೆ ಕಣ್ಣಾಡಿಸುವಾಗ ಆ ಹುಡುಗ ಪುಸ್ತಕದಲ್ಲಿ ಬರೆದಿಟ್ಟುಕೊಂಡ ನೋಟ್ಸ್ ತುಂಬಾ ಇಷ್ಟವಾಗುತ್ತದೆ. ಕೆಲವು ನಿಮಿಷಗಳ ನಂತರ ಅವನು ಮತ್ತೆ ಬರುತ್ತಾನೆ, ಇಬ್ಬರ ನಡುವಿನ ಮಾತು, ಅಭಿಪ್ರಾಯ ವಿನಿಮಯ ಇತ್ಯಾದಿಯೇ ಈ ಕಿರುಚಿತ್ರದ ಸಾರಾಂಶ. ಎಲ್ಲಿಂದಲೋ ಶುರುವಾಗಿ, ಎಲ್ಲಿಗೋ ಬಂದು‌ ನಿಲ್ಲುವ ನಮ್ಮ ಬದುಕಿನ ರೂಪಕದಂತೆ ಈ ಕಿರುಚಿತ್ರವೂ ಇದೆ ಎಂದರೆ ತಪ್ಪಾಗಲಾರದು. ಒಂದು ಪುಸ್ತಕ, ಧಾರವಾಹಿ, ಸಿನಿಮಾ, ಇವುಗಳಲ್ಲಿ ಎಷ್ಟು ಅಂತ ಹೊಸ ವಿಷಯ ಹೇಳೋಕಾಗುತ್ತೆ ಹೇಳಿ. ಏನೇ ಹೊಸದು ಅಂತ ಮಾಡಲು ಹೋದರೂ romantic, crime thriller, longu macchu ಅಂತ ಯಾವುದೋ ಕೆಟಗರಿಗೆ ಸೇರಿ ಹೋಗಿ ಬಿಡುತ್ತದೆ. So, the solution is, ಇರುವುದರಲ್ಲೇ ಹೊಸತನವನ್ನು ನೀಡುವ ಪ್ರಯತ್ನ. ಈ ವರ್ಷದ ಹಿಟ್ ಚಿತ್ರಗಳನ್ನು ನೋಡಿದರೆ, ಈ ವಿಷಯ ಕೂಡ ಸ್ಪಷ್ಟವಾಗುತ್ತದೆ. ಅದೇ ರೀತಿ ಈ ಕಿರುಚಿತ್ರದಲ್ಲಿ ಕೂಡ ಒಂದು ಹುಡುಗ ಮತ್ತು ಹುಡುಗಿ ಮಾತಾಡುವುದಷ್ಟೇ, ಮತ್ತೇನೂ ಇಲ್ಲ ಅಂತ categorize ಮಾಡೋಕೆ ಆಗಲ್ಲ, ಅಂತಹ ವಿಶಿಷ್ಟ ನಿರೂಪಣೆ ಇಲ್ಲಿದೆ. ಈ ಕಿರುಚಿತ್ರದ ಒಂದು ಭಾಗದಲ್ಲಿ ಇಷ್ಟ ಕಷ್ಟಗಳ ಬಗ್ಗೆ ಮಾತು ಬರುತ್ತದೆ. ಹೆಂಗೆ ಎಲ್ಲರಿಗೂ ಇಷ್ಟವಾಗುವ ‘ಇದು’ stereotype ಆಗುತ್ತದೆ, ಇತ್ಯಾದಿ ಇತ್ಯಾದಿ. ಒಬ್ಬರಿಗೆ ಇಷ್ಟವಾಗಿದ್ದು, ಇನ್ನೊಬ್ಬರಿಗೆ ಇಷ್ಡವಾಗಲೇ ಬೇಕು ಅಂತ ಏನಿಲ್ಲ, ಅದರ ಬಗ್ಗೆ ಉಳಿದವರು ಕಂಡಂತೆ ಸಿನಿಮಾದಲ್ಲಿ ಇನ್ನೂ ಚೆನ್ನಾಗಿ ವಿವರಿಸಿದ್ದಾರೆ, ಆ ಮಾತು ಆಮೇಲೆ. The point is, ನಮ್ಮ ನಡುವೆ ಓದಲು / ನೋಡಲು ಹಲವಾರು (ಪ್ರೇಮ) ಕಥೆಗಳಿವೆ. ಒಬ್ಬರಿಗೆ ಒಂದು ಅತೀವ ಇಷ್ಟವಾಗುವ, ಇನ್ನೊಬ್ಬರಿಗೆ ಇಷ್ಟವೇ ಆಗದಿರುವ complexion ಅನ್ನು‌ ಅರ್ಥ ಮಾಡಿಕೊಳ್ಳುತ್ತಾ ಕಾಲ ಹಾಕುವುದೇ ಲೈಫು. ಈ ಲೈಫಿನಂತೆಯೇ ಕುತೂಹಲ ಉಳಿಸಿಕೊಂಡು ನೋಡಿಸಿಕೊಂಡು ಹೋಗುವ ಕಿರುಚಿತ್ರ: ಅನ್ವಿಕ್ಷಿಕಿ, ಈ ಸಂಸ್ಕೃತ ಪದದ ಅರ್ಥ logical philosophy ಎಂದು. ಈ‌ ಕಿರುಚಿತ್ರ ನೋಡಿದ ಮೇಲೆ ಯಾಕೆ ಈ ಹೆಸರು ಅಂತ ನಿಮಗೇ ಗೊತ್ತಾಗುತ್ತದೆ.

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..