1367

ಅಪ್ಪಯ್ಯ

ಅಪ್ಪಯ್ಯ ನೀವ್ ಅಂದ್ರೆ ನಂಗ್ ಬಾರಿ ಇಷ್ಟ
ಮುದ್ ಮಾಡಿ ಸಾಕೀರಿ ಬಿಟ್ ರಾಶಿ ಕಷ್ಟ

ನಿಮ್ಗೆಷ್ಟೆ ಕಮ್ಮಿ ಆರು ನಮ್ಗ್ ಕೆಂಡದೆಲ್ಲಾ ಕೊಡ್ಸಿರಿ
ನಿಮ್ ಜೀವ್ನುವೇ ನಮ್ಗಂದೇಳಿ ಜೀವ ಬಿಟ್ ದುಡ್ದೀರೀ

ಹೆಣ್ಗಳಂದೇಳಿ ನಮ್ಮನ್ನ ಕಾಲಲ್ಲಿ ಚೋಗಿಲಿಲ್ಲ
ಹೆಣ್ ಹೆತ್ತ ಕೊಟ್ಟದ್ಕೆ ಅಮ್ಮಂಗೆ ಬೈಲಿಲ್ಲ

ಬಿಸ್ಲ್ ಮಳಿ ಗಾಳಿ ಅಂದ್ ಕಾಣ್ದೆ ಕಷ್ಟ ಪಟ್ಟ ದುಡಿತಿದ್ರಿ
ಕಷ್ಟ ಸುಖ ಯಂತಾ ಅಂದೇಳಿ ನಿಮ್ಮಿಂದ್ಲೆ ಕಲ್ತಕಂಡ್ವಿ

ಸಾಕಾತ್ಲೆ ಈ ಜನ್ಮ ನಿಮ್ ಋಣವ ತೀರ್ಸುಕೆ
ದೇವ್ರಲ್ಲೆ ಬೇಡ್ಕಂತೆ ನೀಮ್ಮಗ್ಳೆ ಆಪುಕೆ ಮುಂದಿಪ್ಪು ಎಲ್ಲಾ ಜಲ್ಮಕ್ಕೆ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..