4394

Arrange Marriage ಅವಾಂತರಗಳು-Part2

ಮೊದಲನೇ ವರಾನ್ವೇಷಣೆ ಠುಸ್ಸ್ ಆದಮೇಲೆ.. ಮನೇಲಿ ಸ್ವಲ್ಪ ತಲೆ ಬಿಸಿ ಆಗಿದ್ದೇನೂ ನಿಜ.. ನನಗಂತೂ ನಡೆದಿದ್ದನ್ನ ಸ್ನೇಹಿತರಿಗೆ ಹೇಳಿ ಮಜಾ ತೊಗೊಳೋದೇ ಕೆಲಸ ಆಗ್ಬಿಟ್ಟಿತ್ತು.. !! ಇನ್ಮೇಲೆ ಜಾತಕ ಆಗಿದೆ ಅಂದ ತಕ್ಷಣ ಹೋಗೋದು ಬೇಡ.. ಪೂರ್ವಾ ಪರ ವಿಚಾರಿಸಿ.. ಫುಲ್ research ಮಾಡಿದ ಮೇಲೆ ಹುಡುಗನ ಮನೆಗೆ ಹೋಗೋಣ ಅಂತ fix ಆದ್ವಿ..
ಒಂದಿನ ನಮ್ ಅಪ್ಪ ಯಾವುದೋ ಹುಡುಗನ details mail ಮಾಡಿದ್ರು.. ಹುಡ್ಗ ನೋಡಕ್ಕೆ ಸಖತ್ತಾಗಿ ಇದ್ದ.. ಒಳ್ಳೆ ಸಿದ್ಧಾರ್ಥ್ ಮಲ್ಹೋತ್ರಾ ತರ ಪುರುಚಲು ಗಡ್ಡ.. height 6 1’ .. tuf look .. !! ಬೆಳಬೆಳಿಗ್ಗೆ ನೆ mail ನೋಡಿದ್ ನಾನು.. ಇಡೀ ದಿನ “ದೇವ್ರೇ.. ಜಾತಕ ಆಗ್ಬಿಟ್ರೆ ಸಾಕಪ್ಪಾ “ ಅಂತ ಅದ್ಯೆಷ್ಟು ಸಲ ಅನ್ಕೊಂಡಿದೀನೋ.. ನಮ್ ಅಪ್ಪ ಏನೋ ಕೆಲ್ಸ ಇದ್ದಿದ್ರಿಂದ ಜಾತಕ ತೋರಿಸೋದು ತಡ ಮಾಡ್ತಿದ್ರು.. ನಂಗ್ ಮೊದಲೇ patience ಇಲ್ಲ.. ಪದೇ ಪದೇ ಕೇಳಿದ್ರೆ ಎಲ್ಲಿ ನಮಪ್ಪ ನನ್ನ desperate ಅನ್ಕೊಂಡಿಬಿಡ್ತಾರೆನೋ ಅಂತ ಸುಮ್ನೆ ಇರ್ತಿದ್ದೆ.. ಅಮ್ಮನ ಹತ್ರ indirect ಆಗಿ ಕೇಳಿ ವಿಷಯ ತಿಳ್ಕೊತಿದ್ದೆ.. ಯಾಕೋ ಒಂದು ವಾರ ಆದರೂ ನಮಪ್ಪ ಈ ಹುಡುಗನ ಸುದ್ದಿನೇ ಎತ್ತಲಿಲ್ಲ.. ಈ ಕಡೆ ನಾನು facebook.. insta .. ಎಲ್ಲದ್ರಲ್ಲೂ ಅವನ ಬಗ್ಗೆ research ಮಾಡಿದ್ದೆ.. ಅವನ ಕನ್ನಡಾಭಿಮಾನ.. ಅವನು jovial ಆಗಿ ಇದ್ದ ರೀತಿ.. ಎಲ್ಲಾ ನನ್ನ impress ಮಾಡಿತ್ತು.. !!
ಅಪ್ಪ ಮತ್ತೆ ಇನ್ನೊಂದು mail ಕಳ್ಸಿದ್ರು.. ಬೇರೆ ಹುಡುಗ.. ಜಾತಕ ಆಗಿದೆ.. ನೋಡು.. ಅಂತ.. ನನಗೆ ತಲೆ ಎಲ್ಲಾ ಕೆಟ್ಟೋಯ್ತು.. ಏನಾದ್ರೂ ಆಗ್ಲಿ ನಾನೇ ಕೇಳ್ಬಿಡ್ತೀನಿ ಅಂತ ಅಪ್ಪನಿಗೆ ಫೋನ್ ಮಾಡಿದೆ.. ಕುಶಲೋಪರಿ ಆದಮೇಲೆ..
ನಾನು : (ತುಂಬಾ ನಾಜೂಕಾಗಿ) ಇವತ್ತು ಕಳಿಸಿದ mail ನೋಡಿದೆ.. ಜಾತಕನೂ ಆಗತ್ತೆ ಅಂತ ಅಂದ್ಯಲ್ಲಾ.. ನನಗೇನೋ ಹುಡುಗ ಅಷ್ಟು ಇಷ್ಟ ಆಗ್ಲಿಲ್ಲ.. ಅದೇ ಅವತ್ತು ಒಬ್ಬ ಹುಡುಗನ profile mail ಮಾಡಿದ್ಯಾಲ್ಲಾ.. ಹೆಸರೇನೋ ನೆನಪಿಲ್ಲಾ.. ( ಸ್ವಲ್ಪ over acting) ಆದರೆ xyz software company.. ನೆನಪಾಯ್ತಾ!?? ಅದ್ಯೆನಾಯ್ತು !?
ಅಪ್ಪ: ಅದಾ.. ಅದು cancel ಆಯ್ತು.. ನಿಮ್ಮಮ್ಮ ನಿನಗೆ ಹೇಳಲಿಲ್ವಾ??
ನಾನು : ( disappointed ) ಹೌದಾ . ಯಾಕೆ?? ಜಾತಕ ಆಗ್ಲಿಲ್ವಾ??
ಅಪ್ಪ : ಜಾತಕ ಆಗಿತ್ತಮ್ಮ.. ಆದರೆ ಹುಡುಗನ ಕಡೆಯವರು ಬೇಡ ಅಂದ್ರು !
ನಾನು : (WTF!!) (NOOO.. ) ಯಾಕಂತೆ? ಹುಡುಗನಿಗೆ ಆಗಲೇ ಮದುವೆ fix ಆಗೋಗಿತ್ತಾ??
ಅಪ್ಪ: (ನಗುವನ್ನ control ಮಾಡಿಕೊಳ್ಳುತ್ತಾ..) ಹುಡುಗಿ ಕುಳ್ಳಿ.. ಬೇಡ ಅಂದ್ರು.. ಹುಡುಗನಿಗೆ height ಇರೋ ಹುಡುಗಿ ಬೇಕಂತೆ!!
ನಾನು : ( wondering what to reply.. ) ಓಹ್.. ಹೌದಾ.. ಸರಿ.. ನೀನ್ ನಗಬೇಡ ನೋಡು ಈಗ.. ಸರಿ ನಾನು ಆಮೇಲೆ ಕಾಲ್ ಮಾಡ್ತೀನಿ.. byeeeeee
ಈ ಭೂಮಿ ಬಾಯ್ತೆರೆದು.. ಇಲ್ಲೇ.. ಇದೇ ಕ್ಷಣದಲ್ಲೇ ನನ್ನ ಒಳಗೆ ಎಳೆದುಕೊಂಡು ಬಿಡಲಿ … I was dying from embarrassment!!
I m that person … who is always confident .. n I never thought someone could reject ME!! come-on man.. I am a complete package.. !!
“Rejection” … ಮೊದಲ ಅನುಭವ ನನ್ನಲ್ಲಿ ಸಾಕಷ್ಟು ಗೊಂದಲಗಳನ್ನು ಸೃಷ್ಟಿ ಮಾಡಿತ್ತು.. ಯಾರಿಗೆ ಬೇಕು ಈ ಮದುವೆ ಎಲ್ಲಾ . . ಏನ್ ಕರ್ಮ ಇದು ಗುರೂ.. ಬೇಕಿತ್ತಾ ನನಗೆ ಅಂತ ಅನ್ನಿಸ್ತಾ ಇತ್ತು.. ಆದರೂ ಮನದ ಮೂಲೆಯಲ್ಲಿ….. ಹುಡುಗ ನನ್ನ ನೋಡೋಕೆ ಬಂದಿದ್ರೆ.. guarantee ನನ್ನ reject ಮಾಡ್ತಾ ಇರಲಿಲ್ಲ ಅಂತ ಇವತ್ತಿಗೂ ನನಗೆ ಅನ್ಸತ್ತೆ..
ಸ್ಕೂಲ್ ಅಲ್ಲಿ ನನ್ನ nick name ಚೋಟು.. !! ಇನ್ನೂ ಕೆಲವರು ಕುಳ್ಳಿ… ಚೋಟ್ ಮೆಣಸಿನ ಕಾಯಿ.. ಮೂರಡಿ.. ಹೀಗೇ ನನ್ನ ಕರಿತಾ ಇದ್ದಿದ್ದು.. ಆಗೆಲ್ಲಾ ಇದು ದೊಡ್ಡ matter ಏ ಅಲ್ಲ.. ನಾನೂ ಅವರ ಅಡ್ಡ ಹೆಸರು ಕರೆದು.. ಎಲ್ಲಾ ಮಾಮೂಲಿ ಅನ್ನೋಹಾಗೆ ಇರ್ತಿದ್ದೆ.. ಅದ್ಯೆಷ್ಟು ಜನ ನನ್ನ friends ನನ್ನ contact ನ ಚೋಟು ಅಂತ save ಮಾಡ್ಕೊಂಡಿದಾರೋ ಏನೋ.. truecaller ಅಲ್ಲಿ ನನ್ನ number search ಕೊಟ್ಟರೆ.. ಈಗಲೂ… “ಚೋಟು” ಅಂತಾನೇ ಬರತ್ತೆ.. !! ಹ ಹ್ಹ.. (Not funny anymore.. )
ಅಲ್ಲಾ.. ನಾನೇನೂ ತೀರಾ ಕುಳ್ಳಿ ಅಲ್ಲ actually.. school ಅಲ್ಲಿ ನನಗಿಂತ ಮುಂಚೆ ಇನ್ನೂ ಒಬ್ಬಳು ನಿಲ್ತಾ ಇದ್ರು ಗೊತ್ತಾ!? (ನಾನು ಅವಳಿಗೆ ಕುಳ್ಳಿ ಅಂತ ಕರಿತಿದ್ದೆ.. ಹ್ಹ ಹ್ಹಾ) . ಈ ಹುಡುಗ ನನ್ನ ನೋಡಿಲ್ಲಾ ಅಂದ್ರೂ ನಾನು ಕುಳ್ಳಿ ಬೇಡ ಅಂದನಲ್ಲ.. ಹೇಗೆ ಗೊತ್ತಾಯಿತು ಅವನಿಗೆ.. ಯಾವ್ದಾದ್ರೂ ಕುಳ್ಳಿ type ಫೋಟೋ ಕಳ್ಸಿದ್ದರಾ !? ಅಥವಾ.. biodata.. OMG.. yessssa.. biodataaaa.. ನಾನೇ ನನ್ನ biodata ನೋಡಿಲ್ಲ.. ಅಪ್ಪ ತಮ್ಮ ಕೂತು ಮಾಡಿದ್ರು ಅವತ್ತು.. fill in the blanks ಅಲ್ವಾ.. ನೀವೇ biodata ಬರೀರಿ ಅಂದಿದ್ದೆ ನಾನು.. ಥೂ.. !! ನನಗ್ಯಾಕೆ ಇದು ಮೊದಲೇ ಗೊತ್ತಾಗಲಿಲ್ಲ.. !!
ನನ್ನ biodata ನನಗೆ ಕಳಿಸಿ ಅಂತ ಕೇಳೋಕೂ ನಾಚಿಕೆ ಆಯ್ತು.. ಬೆಳಿಗ್ಗೆ ತಾನೇ despo ಆಗಿದ್ದೆ.. ಈಗ ಮತ್ತೆ ಮದುವೆ ವಿಷಯ ಮಾತಾಡಿದ್ರೆ.. “ಇವಳಿಗೆ ಕೆಲಸ ಇಲ್ಲ.. ಬರೀ ಇದೇ ಯೋಚನೆ ಅಂದುಕೊಳ್ತಾರೆ.. !!” ಏನಾದ್ರೂ ಮಾಡಬೇಕಲ್ಲ ಇದಕ್ಕೆ.. ತಮ್ಮನ್ನ ಕೇಳಿದ್ರೆ !? ಅನಿಸ್ತು.. ಯಪ್ಪಾ.. ಬೇಡ ಗುರೂ.. ಅವನು ಆಮೇಲೆ ರೇಗಿಸಿ ರೋಧನೆ ಕೊಡ್ತಾನೆ.. ಏನ್ ಮಾಡೋದು ಅಂತ ಯೋಚನೆ ಮಾಡ್ತಾ ಇರ್ಬೇಕಾದ್ರೆ.. ಒಂದು super idea ಬಂತು..
ನಮ್ಮಪ್ಪನ email id password ಯಾವತ್ತೂ ನಮ್ಮಮ್ಮನ ಹೆಸರು!! Try ಮಾಡೋಣ ಅಂತ ಮಾಡಿದೆ.. work ಆಯ್ತು.. !! ಏನೋ ದೊಡ್ಡ hacker type feeling.. ಯಾಕ್ ಕೇಳ್ತೀರಾ.. ! Biodata ನೋಡಿದ್ರೆ.. ನನ್ನ height 4 8’ ಅಂತ ಕೊಟ್ಟಿದ್ದಾರೆ!! ಯಪ್ಪಾ… ಇದು ನನ್ನ ತಮ್ಮನದ್ದೇ ಕೆಲಸ ಅಂತ ನನಗೆ ಗೊತ್ತಾಯ್ತು..ತಕ್ಷಣ ಫೋನ್ ಮಾಡಿ class ತೊಗೊಂಡೆ.. ಎಷ್ಟೇ ಆದರೂ ಅವನ ವಾದ.. “ ನಾನು ಸರಿಯಾಗೇ ಹಾಕಿದೀನಿ.. ನೀನು ಇರೋದೇ ಅಷ್ಟು.. “!! ಅಂತ.. ನಂಗೆ full ಉರ್ದೋಯ್ತು.. ನೋಡೇ ಬಿಡೋಣ.. ಅಂತ ನಮ್ಮ colleague ಮನೆಗೆ ಹೋದೆ.. ಅಲ್ಲಿ ಅವರ ಮಗುಗೆ ಅಂತ height measure ಮಾಡೋಕೆ ಗೋಡೆಗೆ tape ಅಂಟಿಸಿದ್ರು.. ಅವರಿಗೆ ಎಲ್ಲಾ ವಿಷಯ ಹೇಳಿದಮೇಲೆ ನಾನು.. height ನೋಡ್ತೀನಿ ಅಂತ ನೋಡಿದೆ.. ಪುಣ್ಯ.. 5 ಅಡಿ ಇದ್ದೆ.. actually 5 1’ ಅನ್ಸತ್ತೆ.. ಇಲ್ಲ.. 5 1’ ಏ.. confirm.. !! ನನ್ನ ತಮ್ಮನಿಗೆ ಫೋಟೋ ಕಳಿಸಿ.. ಕೊನೆಗೆ change ಮಾಡಿಸಿದೆ biodata ನ.. 5.3’ಅಂತ ಹಾಕಿಬಿಡೋಣ ಅಂತ ಅನಿಸಿದ್ದು ಉಂಟು.. ಆಮೇಲೆ.. ಅಕಸ್ಮಾತ್ ಯಾರಾದ್ರೂ ಹುಡುಗನ ಕಡೆಯವರು.. “ ಈ ಹುಡುಗಿ 5 3’ ಇಲ್ವಲ್ಲಾ..”ಅಂದುಬಿಟ್ರೆ.. ಅಂತಾ ಅವಮಾನಕ್ಕಿಂತ.. ಇದೇ better ಅನ್ನಿಸಿತು.. !
ಯಾಕೋ ಬೆಳಿಗ್ಗೆ ಇಂದ ಜಾಸ್ತಿ ತಲೆ ಕೆಡೆಸಿಕೊಂಡು ಬಿಟ್ಟಿದ್ದೆ.. ಸಂಜೆ pg ಅಲ್ಲಿ coffee ಕೂಡ ಕುಡಿಲಿಲ್ಲ.. ರಾತ್ರಿ ಆದರೂ ಒಳ್ಳೆ ಊಟ ಮಾಡಿ ಮಲಗಿದರೆ ಸಾಕಪ್ಪಾ ಅನ್ಸ್ಬಿಟ್ಟಿತ್ತು.. it was a looooong day for me.. !!
ಇಡೀ ದಿನದ ನೆನಪನ್ನು ಹಂಗೇ control +alt + delete ಮಾಡೋಣ ಅಂತ ಅನ್ಕೊಂಡು ಮಲಗೋ ಅಷ್ಟರಲ್ಲಿ.. ಅಪ್ಪ ಬೆಳಿಗ್ಗೆ ಕಳಿಸಿದ mail ನೆನಪಾಯ್ತು.. ‘ಛೇ ಯಾವುದೋ ಜ್ಞಾನದಲ್ಲಿ.. ಪಾಪ ಈ ಹುಡುಗನ್ನ ಸರಿಯಾಗಿ ನೋಡಲೂ ಇಲ್ವಲ್ಲಾ.. ಒಂದು ಸಲ ನೋಡಣ’ ಅಂತ ಅವನ ಫೋಟೋ.. biodata ಎಲ್ಲಾ ನೋಡಿದೆ.. ಹುಡುಗ ಪರವಾಗಿಲ್ಲ ಅನ್ನಿಸ್ತು.. ಏನೋ ಖುಷಿ ಮತ್ತೆ.. ಏನೋ ಹುರುಪು.. facebook profile ನೋಡಣ ಅಂತ ತೆಗೆದರೆ.. ಯಾಕೆ ಕೇಳ್ತೀರಾ !!?? ಅವನ dp ನೂ ಪಪ್ಪು .. cover pic ಊ ಪಪ್ಪು ..!! “ ಯಪ್ಪಾ.. ಗುರೂ.. ಮುಚ್ಕೊಂಡ್ ಮಲ್ಕೊಬೇಕಿತ್ತು ನಾನು.. ಬೇಕಿತ್ತಾ ನನಗೆ ಇದು “ ಅಂತ ಅನ್ನಿಸಿ.. screenshot ತೊಗೊಂಡು ನಮ್ಮ family group ಅಲ್ಲಿ ಹಾಕಿ.. ಒಂದೆರಡು ಬಿದ್ದೂ ಬಿದ್ದೂ ನಗೋ smiley ನ ನೋಡಿ.. ನಾನೂ smile ಮಾಡ್ತಾ ಮಲ್ಕೊಂಡೆ.. !!

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..