“ಅಂದು ಅರಮನೆಯಲ್ಲಿ, ಮತ್ತೆ ಸೆರೆಮನೆಯಲ್ಲಿ, ಅಲ್ಲಿ ತುರುಪಟ್ಟಿಯಲ್ಲಿ, ಇಲ್ಲಿ ಕಿರುಗುಡಿಸಿಲಿನಲ್ಲಿ” ಭಗವಂತ ಅವತರಿಸುವುದಕ್ಕೆ ಇಂಥದ್ದೇ ಜಾಗವಂತಿಲ್ಲ
ನಾನೀಗಾಗಲೇ ಹೇಳಿದಂತೆ ಚುಕ್ಕೆಯಿಟ್ಟು ಬಿಡಿಸಿದ ರಂಗೋಲಿಯೇ ಸರಿ. ಆ ಚುಕ್ಕೆಗಳೇ ಪಾತ್ರಗಳು ಮತ್ತು ಸನ್ನಿವೇಶಗಳು ಒಟ್ಟು ಕಥಾಹಂದರವೇ ರಂಗೋಲಿ
ಈ ವಾರದ ಹಾಡು ಜಾಡುವಿನಲ್ಲಿ ಅಮೃತ ವರ್ಷಿಣಿ ಚಿತ್ರದ ಹಾಡು
“ದೀಪ ಗಾಳಿ ಹಡಗು ಕಡಲು” ಎಲ್ಲವೂ ಅವನದೇ ಕತ್ತಲು ಆವರಿಸದಂತೆ ಬದುಕು ಮುಳುಗದಂತೆ ಪ್ರಾರ್ಥಿಸುವುದಷ್ಟೆ ನಮ್ಮ ಪಾಲು.
ಸು.ರಂ.ಎಕ್ಕುಂಡಿಯವರ ಈ ಹಾಡು ವಿಶೇಷ ಎನಿಸುವುದೆಂದರೆ ಸರಳ ಭಾಷೆಯಲ್ಲಿ ಕ್ಲಿಷ್ಟಾರ್ಥವನ್ನು ತುಂಬಿಕೊಟ್ಟಿದ್ದಕ್ಕೆ.
ಈ ಹಾಡನ್ನು ಪ್ರೇಮ ವಿಯೋಗಕ್ಕೆ ಹುಡುಗಿಯ ಆಂತರ್ಯದ ಸಿದ್ಧತೆ ಎಂದು ಹೇಳಬಹುದು. ಹೌದು ಅವಳು ಒಮ್ಮೆಲೇ ಬಿಟ್ಟಿರುವುದಿಲ್ಲ. ಒಳಗೊಳಗೆ ಬೆಂದಿರುತ್ತಾಳೆ