2158

ಅವಲೋಕನ

Beautiful-India-Village-nice-painting-poster-wallpapers-and-picsಸೊಗದೆ ಪುರಕ್ಕೆ ರೈಲಿನ ಅನುಕೂಲ ಇನ್ನು ಆಗಿರಲಿಲ್ಲಿ. ಕಾರಣ ಸೊಗದೆ ಪುರಕ್ಕೆ ಘಾಟ್ ರಸ್ತೆಗಳನ್ನು ದಾಟಿಯೇ ಊರು ಸೇರಬೇಕಿತ್ತು ,ಊರಿಗೆ ಹತ್ತಿರವಾಗಿ ರೈಲ್ವೆ ನಿಲ್ದಾಣ ಮಾಡೋ ವಿಚಾರಗಳು ಕೇಳಿಬರುತ್ತಿದ್ದರು ಇನ್ನು ನೆರವೇರಿರಲಿಲ್ಲ, ಆ ಊರಿಗೆ ಓಡಾಡುವ ಜನಗಳ ಸಂಖ್ಯೆ ಕೂಡ ಕಡಿಮೆ ಇದ್ದ ಕಾರಣ ಸರ್ಕಾರದ ನಿರ್ಲಕ್ಷ್ಯ ಸಹಜವಾಗಿತ್ತು. ಆದ್ದರಿಂದ ಸೊಗದೆ ಪುರಕ್ಕೆ ಬರಬೇಕಾದರೆ ಮಂಜಿನ ಗೂಡು ರೈಲ್ವೆ ನಿಲ್ದಾಣಕ್ಕೆ ಬಂದು ಅಲ್ಲಿಂದ ಮೂವತ್ತು ಕಿ.ಮೀ. ದೂರದ ಪ್ರಯಾಣ ಮಾಡಬೇಕಿತ್ತು.

ಕತ್ತಲೆಯ ಘಾಟ್ ರಸ್ತೆಯಲಿ ಕಪ್ಪು ಆಡಿ ಕಾರ್ ಮಂಜಿನ ಗೂಡಿನ ಕಡೆಗೆ ಇತಿ-ಮಿತಿ ವೇಗದಲ್ಲಿ ಸಾಗುತ್ತಿತ್ತು. ಕೆಲ ವರ್ಷಗಳ ನಂತರ ಸೊಗದೆ ಪುರಕ್ಕೆ ಬಂದಿದ್ದ ಮಾಧವನಿಗೆ ಕಾಡಿನ ದಾರಿಯ ಪಯಣ ತೃಪ್ತಿ ಕೊಡುತ್ತಿತ್ತು.201603091215260952453001457505926 ಆತನ ಐಶರಾಮಿ ಕಾರು ಪಯಣ ಮತ್ತಷ್ಟು ಸಂತಸ ಕೊಟ್ಟಿತ್ತು ಮಾಧವನಿಗೆ. ಕಾರು ಮಂಜಿನ ಗೂಡು ರೈಲ್ವೆ ನಿಲ್ದಾಣಕ್ಕೆ ಬಂದು ನಿಂತಿತು, ಮಾಧವ ಕೆಲವು ದಿನಗಳ ಹಿಂದೆ ಕಾಶ್ಮೀರಕ್ಕೆ ಹೋಗಿದ್ದಾಗ ಕೊಂಡ ಉಣ್ಣೆಯ ಜಾಕೆಟ್ ಹಾಕಿಕೊಂಡು ಮಾಧವ ಕಾರಿನಿಂದ ಇಳಿದ . ಸುತ್ತಲು ಕತ್ತಲು ನಿಲ್ದಾಣದ ಮುಂದೆ ಒಂದೇ ಒಂದು ದಾರಿ ದೀಪ . ಕಗ್ಗತ್ತಲೆಯಲ್ಲಿ ಕಾಣುತ್ತಿದ್ದ ಒಂದೇ ಒಂದು ದಾರಿ ದೀಪ ಆ ದೀಪಕ್ಕೆ ವಿಶಿಷ್ಟವಾಗಿ ಕಾಣುತ್ತಿದ್ದ ನಿಲ್ದಾಣ ಒಂದು ದೃಶ್ಯದಂತೆ ಮಾಧವನಿಗೆ ಕಂಡಿತ್ತು ,

34

ಆ ದೃಶ್ಯವನ್ನು ಅವನ ಮುಖದ ಮೇಲೆ ಸಣ್ನ ನಗು ತರೆಸಿತ್ತು ಚಳಿಗೆ ಕೈ ಉಜ್ಜಿಕೊಳ್ಳುತ್ತ ಮುಂದೆ ಸಾಗಿದ ಹತ್ತಿರದಲ್ಲೆ ಇದ್ದ ಒಂದು ಪೆಟ್ಟಿಗೆ ಅಂಗಡಿಯವನು ಆ ಐಶಾರಾಮಿ ಕಾರನ್ನು, ಮಾಧವನನ್ನು ನೋಡಿ ಟೀ ಕಾಯಿಸುವ ಕೆಲಸದಲ್ಲಿ ಮುಂದಾದ , ಟೀ ಕುಡಿಯಲೆಂದು ಅಂಗಡಿಯ ಬಳಿಗೆ ಹೋಗಿ ಒಂದು ಟೀ ಕೇಳಿ,ಟ್ರೈನ್ ಬರೊ ಹೊತ್ತಾಯ್ತಲ್ವ .? ಎಂದು ಕೇಳಿದ, ಅಂಗಡಿಯವನು ದೇವರಿಗೆ ಗೊತ್ತು ಸರ್ ಎಂದ .

ಅಂದ್ರೆ..? ಮಾಧವ ಕೇಳಿದ.

ಅಂಗಡಿಯವನು ಟೀ ಕಾಯಿಸುತ್ತ , ನಾನು ಇಲ್ಲಿ ಅಂಗಡಿ ಇಟ್ಟಾಗಿಂದ ಯವತ್ತು ಟ್ರೈನ್ ಸರಿಯಾದ ಸಮಯಕ್ಕೆ ಬಂದಿದ್ದು ನೋಡೆ ಇಲ್ಲ ಸಾರ್, ದೇವರಲ್ಲಿ ಬೇಡ್ಕೊಳ್ಳಿ ದೇವರು ನಿಂ ಪಾಲಿಗೆ ಎಷ್ಟರ ಮಟ್ಟಿಗೆ ಇರ್ತಾನೋ ,ಅಷ್ಟರ ಮಟ್ಟಿಗೆ ರೈಲು ಬೇಗ ಬರತ್ತೆ, ಒಟ್ನಲ್ಲಿ …! ಬಂದೆ ಬರುತ್ತೆ.! ಈ ಹಾಳು ಮಂಜಿಂದ ಯವಗ್ಲು ಲೇಟೇ ಸರ್ ಎಂದ. ಮಧವ ನಕ್ಕು ಸುಮ್ಮನಾದ, ತಗೊಳ್ಳಿ ಸಾರ್ ಟೀ ,  ಅಂಗಡಿಯವನು ಟೀ ಕೊಟ್ಟ ಟೀ ತೆಗೆದು ಕೊಳ್ಲಲು ಮುಂದೆ ಬಂದ ಮಾಧವನ ಮೇಲೆ ಅಂಗಡಿಯಲ್ಲಿದ್ದ ಬಲ್ಬ್ ನ ಬೆಳಕು ಮಾಧವನ ಮುಖದ ಮೇಲೆ ಬಿತ್ತು. ಅಂಗಡಿಯವನು ಮಾಧವನನ್ನು ನೋಡಿ, ಸಾರ್..! ನೀವಾ… ಮುಖದ ತುಂಬ ನಗು ತುಂಬಿಕೊಂಡು ಸಾರಿ ಸರ್ ನನಗೆ ಗೊತ್ತೆ ಆಗ್ಲಿಲ್ಲ ನೀವು ಅಂತ ಕತ್ಲಲ್ವ…? ಊರಿಗೆ ತುಂಬ ಅಪರೂಪ ಆಗ್ಬಿಟ್ರಲ್ಲ ಸಾರ್… ! ಎಂದ.

ಏನು ಮಾಡೋದು ಕೆಲಸ ಜಾಸ್ತಿ ಬರ್ಬೇಕು ಅಂತ ಅನ್ಕೊಂಡ್ರು ಬರಕ್ಕೆ ಆಗ್ತಾಯಿರಲ್ಲ. ಎಂದ ಮಾಧವ.

ಅದು ಸರಿ ಅನ್ನಿ … ಯಾರ್ ಬರ್ತಾಯಿದ್ದಾರೆ ಸರ್ ಊರಿಗೆ..? ಅಂಗಡಿಯವನು ಕೇಳಿದ.

ನನ್ನ ಸ್ನೇಹಿತ ಶಂಕರ್ ಅಂತ ನಮ್ಮ ಊರಿನವನೆ ಬಾಂಬೆಯಿಂದ ಬರ್ತಾಯಿದ್ದಾನೆ ಎಂದ ಮಾಧವ. ಹೋ.. ಬಾಂಬೇನ ಸರಿ ಹೋಯ್ತು ನಿಂ ಕತೆ ಮುಗಿತು ಸರ್. ಅವರು ಬಾಂಬೆಯಿಂದ ಬೆಂಗ್ಳೂರಿಗೆ ಬಂದು ಮಂಜಿನ ಗೂಡಿಗೆ ಬರೋಷ್ಟರಲ್ಲಿ ನಿಮ್ಮ್ ಸ್ನೇಹಿತನ ಕಥೇನು ಮುಗಿತ್ತು ಬಿಡಿ..! ಎಂದ ಅಂಗಡಿಯವನು.

ಯಾಕ್ರಿ ಹಾಗಂತ್ತೀರ ..? ಕೇಳಿದ ಮಾಧವ.

ಬೇರೆ ಕಡೆಯಿಂದ ಬರೋ ಎಲ್ಲಾ ಟ್ರೈನ್ ಗಿಂತ ಈ ಟ್ರೈನ್ ಇದ್ದಿದ್ದು ಲೇಟು ಸರ್, ಅಲ್ಲೀಲ್ಲೊ ಕ್ರಾಸಿಂಗ್ ಅಂತ ನಿಲ್ಸ್ ಬಿಡ್ತಾನೆ, ಕತ್ತಲೆ..! ಎಲ್ಲಿದ್ದೀವಿ ಅಂತ ಗೊತ್ತಾಗೋದು ಇಲ್ಲ , ಫೋನ್ ಗೆ ನೆಟ್ ವರ್ಕ್ ಸಿಗೊದು ಇಲ್ಲ ಸುಮ್ಮನೆ ದೇವರ ಮೇಲೆ ಭಾರ ಹಾಕಿ ಕಾಯ್ಬೇಕು ಅಷ್ಟೆ..! ಎಂದ. ಮಾಧವನಿಗೆ ಏನು ಹೇಳಲು ಗೊತ್ತಾಗಲಿಲ್ಲ.

ಇಲ್ಲಿ ಯಾರು ಜನಾನೆ ಇಲ್ವಲ್ಲ ! ಹೆಂಗೆ ನಿಮಗೆ ವ್ಯಾಪಾರ ..? ಕೆಳಿದ ಮಾಧವ

ನನ್ಗೆ ವ್ಯಾಪಾರ ಆಗೋದೆ ಇಷ್ಟೊತ್ನಲ್ಲಿ ಸರ್..! ಸೊಗದೆಪುರದ ಬೆಟ್ಟ ಹತ್ತೋಕೆ ಜನಗಳು ಬರೋದು ನಿಮಗೆ ಗೊತ್ತೆ ಇದ್ಯಲ್ಲ ಸರ್..! ಬೆಳಗ್ಗಿನ ಜಾವ ಬೆಟ್ಟ ನೋಡೋಕೆ ರಾತ್ರಿ ಇಡಿ ಜನ್ಗಳು ಇಲ್ಲಿಗೆ ಬರ್ತಾನೆ ಇರ್ತಾರೆ ಕಾರ್ಗಳಲ್ಲಿ ಬೈಕ್ ಗಳಲ್ಲಿ. ನನ್ನ ಅಂಗಡಿ ಬಿಟ್ರೆ ಇನ್ನು ಸೊಗದೆಪುರ ಸಿಗೊವರೆಗು ಯಾವ ಅಂಗಡಿನೂ ಇಲ್ಲ ಸರ್.

ಮಂಜಿನ ಗೂಡಲ್ಲಿ ಇರೊ ಸ್ಟಾರ್ ಟೀ ಅಂಗಡಿ ನಿಮ್ಮದು ಹಾಗಾದ್ರೆ..?

ಹ್ಹಾ..ಹ್ಹಾ.. ಒಂಥರ ಹಾಗೆ ಅನ್ನಿ…!

5

ಮಾಧವ ಟೀ ಕುಡಿಯುತ್ತ ಎದುರಿಗಿದ್ದ ಕಟ್ತೆಯ ಮೇಲೆ ಕುಳಿತುಕೊಂಡ, ಕುಳಿತ ಕ್ಷಣ ಅವನಿಗೆ ಜೇಬಿನಲ್ಲಿ ಏನೋ ಚುಚ್ಚಿದಂತಾಯಿತು.ಅದೇನೆಂದು ನೋಡಲು ಟೀ ಪಕ್ಕಕ್ಕೆ ಇಟ್ಟು ಜೇಬಿಂದ ಹೊರಕ್ಕೆ ತೆಗೆದ , ಪಟ್ಟಿ ಕಿತ್ತು ಹೋಗಿದ್ದ ಕೈ ಗಡಿಯಾರ ಅದಾಗಿತ್ತು. ಜೇಬಿನಲಿ ಇಟ್ಟಿಕೊಂಡದ್ದು ಮರೆತೆ ಹೋಗಿತ್ತು ಮಾಧವನಿಗೆ. ಬೆಳಕಿನ ಕಡೆಗೆ ಕೈ ಗಡಿಯಾರವನ್ನು ಹಿಡಿಯುತ್ತ, ಕೈ ಗಡಿಯರವನ್ನು ಎರೆಡು ಬಾರಿ ಹೆಬ್ಬೆರೆಳಿಂದ ಮೆಲ್ಲನೆ ಸವರಿದ. ಸಮಯ ಎಂಟು ಘಂಟೆ ಎಂದು ಹೇಳುತ್ತಿತ್ತು. ಅದೇನೋ ನೆನೆಪಾದಂತೆ ಮಾಧವ ಆ ಕೈ ಗಡಿಯಾರವನ್ನೆ ದಿಟ್ಟಿಸಿ ನೋಡುತ್ತ ಕುಳಿತ ಅದ್ಯಾವುದೊ ಬಹಳ ಹಿಂದಿನ ನೆನಪನ್ನ ಸಮಯ ಎಂಟು ಘಂಟೆ ಎಂದು ಹೇಳುತ್ತಿದ್ದ ಕೈಗಡಿಯಾರ ಮರುಕಳಿಸಲಾರಂಭಿಸಿತ್ತು. ಪಕ್ಕದಲ್ಲಿ ಇಟ್ಟಿದ್ದ ಟೀಯನ್ನು ಎತ್ತಿಕೊಂಡು ಹೀರುತ ಸುತ್ತಲು ಕವಿದ್ದಿದ್ದ ನೀರವ ಮೌನದ ಜೊತೆ ತಾನು ಮೌನವಾಗಿ ಕುಳಿತು ನೆನೆಪಿನ ಗಾಡಿಯನ್ನು ಎರಿದ್ದ.

6

ಪಿ.ಯೂ.ಸಿ. ಫಲಿತಾಂಶ ಬಂದು ಆಗ ಇನ್ನು ಬರಿ ಎರೆಡು ದಿನಗಳು ಸರಿದಿದ್ದವು. ಮಾಧವ ಎರೆಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದ. ತಾನು ಅನುತ್ತೀರ್ಣನಾಗಿದ್ದರಿಂದ ಮಾಧವನಲ್ಲಿ ಮೂಡಿದ್ದ ಬೇಸರಕ್ಕಿಂತ ಮನೆಯವರು ಅವನನ್ನು ತೀವ್ರವಾಗಿ ಬೈದಿದ್ದ ದುಃಖವೆ ಮಾಧವನಲ್ಲಿ ಹೆಚ್ಚಾಗಿತ್ತು. ಮಾಧವನಿಗೆ ಪಿ.ಯೂ.ಸಿ. ಓದಲು ಇಷ್ಟವಿರಲಿಲ್ಲ ಆದರು ಮನೆಯವರು ಒತ್ತಾಯ ಪೂರ್ವಕವಾಗಿ ಮಾಧವನ್ನನ್ನು ಸೇರಿಸಿದ್ದರು , ಆ ಎರೆಡು ವರ್ಷಗಳನ್ನು ಬಹಳ ಭಯದಿಂದ ಕಳೆದಿದ್ದ ಮಾಧವ , ಏಕೆಂದರೆ ತಾನು ಪಿ.ಯೂಸಿ. ಉತ್ತೀರ್ಣನಾಗುವುದರ ಬಗ್ಗೆ ಮಾಧವನಿಗೆ ನಂಬಿಕೆ ಇರಲಿಲ್ಲ. ಕಾರಣ ಮಾಧವನಿಗೆ ಏನು ಅರ್ಥವಾಗುತ್ತಲು ಇರಲ್ಲಿಲ್ಲ, ವಿಷಯಗಳನ್ನು ಜೀರ್ಣಿಸಿಕೊಳ್ಳಲ್ಲು ಆಗುತ್ತಿರಲಿಲ್ಲ , ತನ್ನನ್ನು ಯಾರು ಅರ್ಥ ಮಾಡಿಕೊಳ್ಳುವವರು ಇಲ್ಲ ಎಂದು ಬಹಳ ಮರುಗಿದ್ದ , ಪಿ.ಯೂ.ಸಿ. ತನಗೆ ಅರ್ಥವಾಗದೆ ಹೆಣಗಾಡುತ್ತಿರುವ ಬಗ್ಗೆ ಮನೆಯವರಿಗೆ ಗೊತ್ತಿದ್ದರು , ತನ್ನನ್ನು ಇಷ್ಟೊಂದು ಬೈದರಲ್ಲ ನನ್ನನ್ನು ಅರ್ಥಮಾಡಿಕೊಳ್ಳುವವರು ಯಾರು ಇಲ್ಲ ಅನ್ನೋ ಬೇಸರದಲ್ಲಿ ಒಂಟಿಯಗಿ ಒಂದು ಉದ್ಯಾನವದ ಕಲ್ಲು ಹಾಸಿನ ಮೇಲೆ ತಲೆ ಬಗ್ಗಿಸಿ ಮಂಕಾಗಿ ಕೂತ್ತಿದ್ದ. ಸ್ವಲ್ಪ ಸಮಯ ಸರಿದಿತ್ತು ಒಂದು ಧ್ವನಿ ಕೇಳಿ ಬಂತು , ಒಬ್ಬನೆ ಕೂತ್ಕೊಂಡ್ ಏನು ಮಾಡ್ತಾಯಿದ್ಯೊ..? ಮಾಧವ ತಲೆ ಎತ್ತಿ ನೊಡಿದ ಎದುರಿಗೆ ಶಂಕ್ರ ನಿಂತ್ತಿದ್ದ. ಇದೆ ಶಂಕ್ರನಿಗಾಗೆ ಅಲ್ವ ಈ ಮಾಧವ ಈಗ ರೈಲು ನಿಲ್ದಾಣದಲ್ಲಿ ಕಾಯ್ತಾಯಿರೋದು. ಶಂಕ್ರ ನಾಲ್ಕೂ ವಿಷಯದಲ್ಲಿ ಅನುತ್ತೀರ್ಣನಾಗಿದ್ದ . ಆದರೆ ಅವನ ಮುಖದಲ್ಲಿ ಯಾವ ಬೇಸರವು ಕಾಣುತ್ತಿರಲಿಲ್ಲ , ಬಹಳ ಗೆಲುವಾಗಿದ್ದ. ಶಂಕ್ರ ಮಾಧವನ ಪಕ್ಕದಲ್ಲಿ ಕೂರುತ್ತಾನೆ. ಯಾಕೋ ತುಂಬ ಬೇಜಾರಲ್ಲಿದ್ಯ! ಏನಾಯ್ತು..? ಶಂಕ್ರ ಕೇಳಿದ .

7

ನೀನೇನು ಇಷ್ಟೊಂದ್ ಸಂತೋಷವಾಗಿದ್ಯ..? ಮಾಧವ ಕೇಳಿದ. ರಿಸಲ್ಟ್ ಬಂತಲ್ಲ .! ಅದಕ್ಕೆ. ನೀನು ನಾಲ್ಕು ವಿಷಯ ಚೊಂಬಾಗಿದೆ , ಮರ್ತೋಗಿದ್ಯ ಅನ್ಸತ್ತೆ. ಎಂದ ಮಾಧವ. ಆಗಿದೆ ಅದಕ್ಕೆ ನಾನೇನು ಮಾಡ್ಲಿ..? ನಾನು ಹೇಳಿದ್ನ ಇವರಿಗೆ ಪಿ.ಯೂ.ಸಿ. ಗೆ ಸೇರ್ಸಿ ಅಂತ ನನಗೆ ಇದನ್ನ ಓದಕ್ಕೆ ಇಷ್ಟ ಇರಲಿಲ್ಲ . ತುಂಬ ಕಷ್ಟ ಆಗೊಯ್ತು ಕಣೋ ಮಾಧವ ಈ ಎರೆಡು ವರ್ಷ ಕಳೆಯೋದು , ಆದೇನು ಸುಡ್ಗಾಡು ಲ್ಯಾಬ್ ರೆಕಾರ್ಡ್ಗಳೊ . ಅದೇನು ಮನೆ ಹಾಳ್ ಎಕ್ಸಪರಿಮೆಂಟ್ಗಳೋ… ಕರ್ಮ …! ಸಧ್ಯ ಕರ್ಮ ಕಳಿತು.! ವಿಷಯ ಹೋಗಿದ್ದರ ಬಗ್ಗೆ ಯಾವ ಬೇಜಾರು ಇಲ್ಲ ಕಣೋ ಸಧ್ಯ ಪಿ.ಯೂ.ಸಿ ಸಹವಾಸ ಮುಗಿತ್ತಲ್ಲ ಅಷ್ಟ ಸಾಕು ಎಂದ ಶಂಕ್ರ. ಮನೇಲಿ ಬೈತಾಯಿಲ್ವ ನಿಂಗೆ ಹಾಗಾದ್ರೆ ? ಕೇಳಿದ ಮಾಧವ. ಒಂದ್ ಕ್ಷಣ ಇರೋಕ್ಗಾತ್ತಾಯಿಲ್ಲ ಕಣೋ ಮನೇಲಿ ಬೈದು,ಬೈದು ಹಿಂಸೆ ಮಾಡ್ತಾಯಿದ್ದಾರೆ. ಪಿ.ಯೂ.ಸಿ ನಲ್ಲಿ ಪಲ್ಟಿ ಹೊಡೆದಿದ್ದಕ್ಕೆ ನಮ್ಮ ಮನೇಲಿ ಎಲ್ರುಗು ಸಿಡಿಲು ಹೊಡ್ದಂಗೆ ಆಡ್ತಾಯಿದ್ದಾರೆ. ಸುಮ್ಮನೆ ಬೈದ್ರೆ  ಪರ್ವಾಗಿಲ್ಲ ಮಾಧವ ಅಕ್ಕ,ಪಕ್ಕದ ಮನೆ ಹುಡುಗ,ಹುಡೀಗಿರನ್ನ ಉದಾಹರಣೆ ಕೊಟ್ಟು ಬೈತ್ತಾಯಿದ್ದಾರೆ ಅದು ತಡಿಯೋಕೆ ಆಗ್ತಾಯಿಲ್ಲ ಕಣೋ ಅದಕ್ಕೆ ಮನೇಲಿ ಇರೋದಕ್ಕೆ ಆಗದೆ ಇಲ್ಲಿಗೆ ಬಂದೆ ಎಂದ ಶಂಕ್ರ. ನಾನು ಕಂಡಂಗೆ ಅವರು ಯಾರು ಮನ್ಸಿಗೆ ಅನ್ಸಿದ್ದನ್ನ ಮಾಡೋ ಜಾಯಮಾನದವರೆ ಅಲ್ಲ ಕಣೊ. ನಮಗೆ ಆದಂಗೆ ಏನಾದ್ರು ಆಗಿದ್ದಿದ್ರೆ ಆತ್ಮಹತ್ಯೆ ಮಾಡ್ಕೊಳೊ ಮನ್ಸಸ್ತಿತಿ ಇರೋರು ಕಣೋ ಅವರು, ಬರಿ ಓದೋದೊಂದೆ ಗೊತ್ತಿರೋದು ಅವರಿಗೆ ಬೇರೆ ಯಾವ ವಿಷಯದ ಬಗ್ಗೆ ಜ್ಞಾನೇನೆ ಇಲ್ಲ ಮಗ, ಆದ್ರೆ ಅದೆಲ್ಲ ನಮ್ಮ್ ಮನೇಲಿ ಯೋಚನೇನೆ ಮಾಡಲ್ಲ. ನೆನ್ನೆ ನಮ್ಮಪ್ಪ ನಮ್ಮ ಪಕ್ಕದ ಮನೆ ಕೀಶೋರನ್ನ ಕರೇದು ಕೇಳ್ತಾಯಿದ್ರು ಮುಂದೆ ಏನು ಮಾಡ್ತ್ಯಾ ಅಂತ. ಎಂಜಿನಿಯರಿಂಗ್ ಸಿಕ್ರೆ ಎಂಜಿನಿಯರಿಂಗ್ ಮಾಡ್ತೀನಿ, ಎಂ.ಬಿ.ಬೀ.ಎಸ್. ಸಿಕ್ರೆ ಎಂ.ಬಿ.ಬೀ.ಎಸ್ ಮಾಡ್ತೀನಿ ಅಂದ ಗುರು .ನನಗೆ ನಗು ಬಂದ್ಬಿಡ್ತು , ಜೀವನದಲ್ಲಿ ಏನಾಗ್ಬೇಕು, ಏನ್ಮಾಡ್ಬೇಕು ಅಂತ ಯೋಚನೆ ಮಾಡೊ ಮನಸ್ತಿತಿನೆ ಇಲ್ಲ ಇವರುಗಳಿಗೆ, ಕುರಿ ಮಂದೆ ತರ ಎಲ್ರು ಇಂಜಿನಿಯರಿಂಗ್ ಮಾಡ್ತೀರೆ ನಾನು ಮಾಡ್ತೀನಿ, ಎಲ್ರು ಡಾಕ್ಟ್ರು ಆಗ್ತಾರೆ ನಾನು ಆಗ್ತೀನಿ ಅನ್ನೊ ಪಂಗಡ ಇವರುಗಳು. ಆದ್ರೆ ಅವನು ನಮ್ಮಪ್ಪಂಗೆ ಒಬ್ಬ ಆದರ್ಶ ವಿಧ್ಯಾರ್ಥಿತರ ಕಾಣ್ಸಬಿಟ್ಟ ಏನು ಮಾಡು ಅಂತ್ಯ ಹೇಳು..? ಭೂಮಿ ಮೇಲೆ ಜೀವನ ನಡ್ಸುದ್ರೆ ಸಾಕು ಅಂತ ಇರೋ ಜನ್ಮ ಅವರದ್ದು. ಆದ್ರೆ ನಾನು , ನೀನು ಹಂಗಲ್ಲ ಬಿಡು.ಎಂದ ಶಂಕ್ರ . ಆದ್ರೆ ನಮ್ಮ ಆಸೇನ ನಮ್ಮ ಮನೇಯವರು ಕೇಳೋದಿಲ್ಲ ಏನು ಮಾಡೋದೋ ಶಂಕ್ರ..? ಎಂದ ಮಾಧವ . ಅದೆ ನಂಗು ಗೊತ್ತಾಗ್ತಾಯಿಲ್ಲ. ಆದ್ರೆ  ನಾನೊಂತು ಮನೇಲಿ ಪಿ.ಯೂ.ಸಿ ಕಟ್ಟಿ ಪಾಸ್ ಮಾಡು ಅಂದ್ರೆ ಮಾತ್ರ ದೇವರಾಣೆ ಕಟ್ಟಲ್ಲ. ಎಂದ ಶಂಕ್ರ . ಮನೇಲಿ ಸುಮ್ಮನೆ ಇರ್ತಾರ ? ಎಂದ ಮಾಧವ . ಮನೆ ಬಿಟ್ಟು ಆಚೆ ಕಳ್ಸಿಲಿ ಪರ್ವಾಗಿಲ್ಲ , ಆದ್ರೆ ನಾನೊಂತು ಮನೇಲಿ ಹೇಳ್ದಂಗೆಲ್ಲ ಕುಣಿಯಲ್ಲ ಎಂದ ಶಂಕ್ರ. ಮಾಧವ ಏನು ಮಾತಾಡದೆ ಸುಮ್ಮನಾದ , ಶಂಕ್ರ ಧೈರ್ಯವಂತ ಎಲ್ಲಾದಕ್ಕು ಮುಂದೆ ನುಗ್ಗುತ್ತಾನೆ. ಅವನ ಮಾತುಗಳನ್ನ ಕೇಳಿ ಮಾಧವನಿಗು ಸ್ವಲ್ಪ ಸಮಧಾನ ಆದ ಹಾಗೆ ಆಯ್ತು. ಬಹಳೊಷ್ಟು ಹೊತ್ತು  ಇಬ್ಬರು ಸುಮ್ಮನೆ ಮೌನವಾಗಿ ಕುಳಿತ್ತಿದ್ದರು. ತಲೆ ಕೆಟ್ಟೋದ ಹಾಗೆ ಆಗ್ತಾಯಿದೆ ಶಂಕ್ರ ಏನೋ ಮಾಡೋದು? ಎಂದ ಮಾಧವ. ನನಗು ಅಷ್ಟೆ ಏನು ಮಾಡಣ ಹೇಳು? ಎಂದ ಶಂಕ್ರ. ದುಡ್ಡಿದ್ಯ ಯಾವುದಾದ್ರು ಸಿನಿಮಾಗೆ ಹೋಗೋಣ ಎಂದ ಮಾಧವ , ಶಂಕ್ರ ಜೇಬನ್ನು ತಡುಕಾಡಿ ನೋಡಿದ ಐವತ್ತು ರುಪಾಯಿ ಸಿಕ್ಕಿತ್ತು. ನನ್ನ ಹತ್ರಾನು ಐವತ್ತು ರುಪಾಯಿ ಇದೆ ನಡಿ ಸಾಕಾಗತ್ತೆ ಹೋಗಣ ಎಂದ ಮಾಧವ. ಅವರು ಇದ್ದ ಉದ್ಯಾನವನದ ಸಮೀಪದಲ್ಲೆ ಒಂದು ಚಿತ್ರ ಮಂದಿರ ಇತ್ತು. ಇಬ್ಬರಿಗು ಎಷ್ಟರ ಮಟ್ಟಿಗೆ ಸಂಧರ್ಭ ಬೇಸೆತ್ತು ಮಾಡಿತ್ತು ಎಂದರೆ ಅದಾವ ಸಿನಿಮಾ ಎಂದು ಸಹ ನೋಡದೆ ಎರಡನೆ ದರ್ಜಿಯ ಟಿಕೇಟ್ ಪಡೆದು ಒಳ ಹೋಗಿ ಕುಳಿತರು. ಸಿನಿಮಾ ಪ್ರಾರಂಭವಾಯಿತು ಮೌನವಾಗಿ ಸಿನಿಮಾ ನೋಡುತ್ತ ಕುಳಿತ್ತಿದ್ದರು , ಸಿನಿಮಾದ ಕಥೆ ಮುಂದೆ ಸಾಗುತ್ತ ಸಾಗುತ್ತ ಇವರ ಮನಸ್ಸಿನಲ್ಲಿದ್ದ ಬೇಸರ, ನೋವು ಸಹ ಮನಸ್ಸಿನಿಂದ ದೂರ ಸರಿಯುವ ಹಾಗೆ ಮಾಡಿತ್ತು, ಬೆಳ್ಳಿ ಪರದೆಯ ಮೇಲೆ ಕಥೆ ಮುಗಿದು ಚಿತ್ರಮಂದಿರದ ಒಳಗೆ ಬೆಳಕು ಪ್ರವೇಶಿಸಿದರು, ಖಾಲಿ ಪರದೆ ನೋಡುತ್ತ ಕೂತಲ್ಲೆ ಕೂತ್ತಿದ್ದ ಇಬ್ಬರ ಮುಖದ ಮೇಲೂ ತೃಪ್ತಿಯ ನಗೆ ಬೀರಿತ್ತು. ಇಬ್ಬರ ಶಿರ ಶರ ವೇಗದಲ್ಲಿ ಏನೇನೋ ವಿಚಾರಗಳನ್ನು ಹೊತ್ತು ಬೆಳಕಿನ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬುದ್ದಿ ವಿಷಯಗಳನ್ನ ಹೊತ್ತು ಓಡುತ್ತಿತ್ತು. ಚಿತ್ರಮಂದಿರದ ಹೊರಗೆ ಬರುವಷ್ಟರಲ್ಲಿ ಕತ್ತಲು ಆವರಿಸಿತ್ತು. ರಾತ್ರಿ ಎಂಟು ಗಂಟೆ ಆಗಿತ್ತು ಇಬ್ಬರು ಮಾತನಾಡದೆ ರಸ್ತೆ ಬದಿಯಲ್ಲಿ ಸುಮ್ಮನೆ ನಡೆದು ಹೋಗುತ್ತಿದ್ದರು. 

8

“ ರಂಚೋಡ್ ದಾಸ್ ಶ್ಯಾಮಲ್ ದಾಸ್ ಚಾಂಚಡ್” ಎಂಬ ಪಾತ್ರ ಅವರ ಹೃದಯ ಸಿಂಹಾಸನದಲ್ಲಿ ಗುರುವಿನ ಸ್ಥಾನ ಅಲಂಕರಿಸಿದ್ದ.ಆ “ತ್ರಿ ಇಡಿಯೆಟ್ಸ್” ಸಿನಿಮಾ ತಮ್ಮ ಜಿವನದಲ್ಲಿ ಈ ಪ್ರಸ್ತುತ ಸನ್ನಿವೇಶ ಯೋಚಿಸುವಷ್ಟು ದೊಡ್ಡ ವಿಚಾರವಲ್ಲ ಎಂಬುದನ್ನ ಮನವರಿಕೆ ಮಾಡಿಕೊಟ್ಟಿತ್ತು . ಚಾಂಚಡ್ ನ ಮಂತ್ರ “ ಆಲ್ ಈಸ್ ವೆಲ್”.! ನಿಜ..! “ ಆಲ್ ಈಸ್ ವೆಲ್” ಎಂದು ಅವರಿಗೆ ಅನ್ನಿಸಿತ್ತು.  ಯಾರ ಮಾತನ್ನು ಕೇಳೋ ಅವ್ಯಕತೆ ಇಲ್ಲ. ನಮ್ಮ ಹೃದಯ ಹೇಳೋ ದಾರೀಲಿ ಮುಂದೆ ಹೆಜ್ಜೆ ಹಾಕುವಲ್ಲಿ ಅವರ ಬುದ್ದಿ,ಮನಸ್ಸು ಎರೆಡು ಬದ್ದತೆಯನ್ನು ಕಂಡುಕೊಂಡಿತ್ತು. ಇಂದು ಮಾಧವ ಯುವ ಲೇಖಕ, ತನ್ನ ಬರವಣಿಗೆಯ ಮೂಲಕ ಯುವ ಸಮೂಹ ತನ್ನ ಕಡೆ ತಿರುಗಿ ನೋಡುವ ಹಾಗೆ ಮಾಡಿಕೊಂಡಿರುವನು, ಅವನು ಬರೆದಿರಿವ ಪುಸ್ತಕಗಳಿಗೆ ಪ್ರಪಂಚದಾದ್ಯಂತ ಬೇಡಿಕೆ ಇದೆ, ಸಾಕಷ್ಟು ಭಾಷೆಗಳಿಗೆ ಅನುವಾದವಾಗಿದೆ. ಎಲ್ಲರಿಂದ ಪ್ರಶಂಸೆಗೊಳ ಪಟ್ಟಿದ್ದಾನೆ, ಎಲ್ಲರಿಗು ಬೇಕಾದವನಾಗಿದ್ದಾನೆ, ಇನ್ನು ಶಂಕರ ದೇಶದಲ್ಲೆ ಬಹುಬೇಡಿಕೆಯ ಗ್ರಾಫಿಕ್ ಡಿಸೈನರ್, ಅವನ ಉದ್ಯಮದಲ್ಲಿ ಬಹು ಬೇಡಿಕೆಯ ಡಿಸೈನರ್ ಆಗಿದ್ದಾನೆ. ಯಾರು ಊಹೆ ಮಾಡದ ಮಟ್ಟಿಗೆ ಇಬ್ಬರು ಬೆಳೆದಿದ್ದಾರೆ, ತಮ್ಮದೆ ದಾರಿಯಲ್ಲಿ…. ದಾರಿಯಿಲ್ಲದ ಕಡೆ ನಡೆದು…… ಮನಸ್ಸು ಹೇಳೊದನ್ನ ಮಾಡುತ್ತ ಮನಸ್ಸಿನ ಮಾತು ಕೇಳುತ್ತ ಪ್ರತಿ ಕ್ಷಣ ಬದುಕುತ್ತಾಯಿದ್ದಾರೆ.

910

ತ್ರಿ ಇಡಿಯೆಟ್ಸ್ ಸಿನಿಮಾ ಆ ಇಬ್ಬರು ಹುಡುಗರ ಆತ್ಮ ವಿಶ್ವಾಸ ಹೆಚ್ಚಿಸುವಲ್ಲಿ ನಿಜಕ್ಕು ಗೆದ್ದಿತ್ತು. ಅವರ ಆತ್ಮಾವಲೋಕನ ಮಾಡಿಕೊಳ್ಳವ ಬಗೆ ತಿಳಿಸಿತ್ತು. ಅದಾಗ ಮಾಧವನ ಕೈಗಡಿಯಾರ ಸಮಯ ಎಂಟು ಗಂಟೆ ಎಂದು ಹೇಳುತ್ತಿತ್ತು. ಒಂದಷ್ಟು ವರ್ಷಗಳ ಹಿಂದಿನ ನನಪಿನಿಂದ ಹೊರ ಬಂದ ಮಾಧವ ಕೈಗಡಿಯಾರ ಮೇಲೆ ಹೆಬ್ಬೆರಳಾಡಿಸುತ್ತ ಒಂದು ಒಳ್ಳೆ ಸಿನಿಮಾ ಅವರಲ್ಲಿ ಅದೆಷ್ಟು ಬದಲಾವಣೆ ತಂದಿತ್ತೆಂದು ಕತ್ತಲೆಯಲ್ಲಿ ಆವರಿಸಿದ್ದ ಮೌನದಲ್ಲಿ ನೆಮ್ಮದಿಯ ಉಸಿರಿಟ್ಟು ಮುಖದ ಮೇಲೆ ಸಣ್ಣನೆಯ ನಗು ಮೂಡಿಸಿಕೊಂಡು ಕುಳಿತ. ಇನ್ನು ಟ್ರೈನ್ ಬಂದಿರಲಿಲ್ಲ……

11

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..