3931

” ಕ್ಯಾಂಪಸ್ ಇಂಟ್ರು ” -Purely Mechanical

ನಿರೂಪಕಿ : ನಮಸ್ಕಾರ ನೀವ್ ನೋಡ್ತಾ ಇದಿರ ” ರೋಡ್ ಮಾಡೆಲ್” ಇದು ಇದು ರೋಡಿಗೆ ಬಂದವರ ಕಥೆ, ವಿಶೇಷ ನೇರ ಪ್ರಸಾರ ಕಾರ್ಯಕ್ರಮ .ಸೊ ಫ್ರೆಂಡ್ಸ್ ಇವತ್ತು ನಮ್

ಜೊತೆಗಿದಾರೆ ಶ್ಯಾಮ್ ಅವ್ರು.ಶ್ರಿಯುತ ಶ್ಯಾಮ್ ಇವರು ಮೂಲತಃ ನಮ್ಮ ಹುಬ್ಳಿಯವರು ಎಲ್ಲಾದಕಿಂತ ಹೆಚ್ಚಾಗಿ ಇವ್ರು ವೆಂಕಟರಮಣ ಗೋವಿಂದ Institute of

technology ಅನ್ನೊ ಕಾಲೇಜಿನಲ್ಲಿ ಓದಿ ಇಂಜಿನೀಯರಿಂಗ್ ಪದವಿಯನ್ನು ಪಡೆದವರು.ಇವರು ಈವತ್ತು ನಮ್ ಜೊತೆ ತಮ್ಮ ತಮ್ಮ ಇಂಜಿನಿಯರಿಂಗ್ ಜೀವನದ

ಅನುಭವಗಳನ್ನ ಹಂಚ್ಕೊಳ್ಕೋಕೆ ಅಂತ ಬಂದಿದಾರೆ.ಕಾರ್ಯಕ್ರಮಕ್ಕೆ ಸ್ವಾಗತ ಶ್ಯಾಮ್.

ಶ್ಯಾಮ್ : Thanks shame to you.

ನಿರೂ : ಸೊ ಶ್ಯಾಮ್ ಅವ್ರೆ ಹೇಳಿ ನಿಮಗೆ ಇಂಜಿನಿಯರಿಂಗ್ ಮಾಡ್ಬೇಕು ಅಂತ ಚಿಕ್ಕದಿನಿಂದ ಅನ್ಸಿತ್ತಾ ಅಥವಾ ನೀವು ಬೆಳದ ಹಾಗೆ ಈ ಆಸೆ ಏನಾದ್ರು ಚಿಗುರೊಡಿತ ?

ಶ್ಯಾಮ್ : ಇಲ್ರಿ ಅದು ನಮ್ ಅಪ್ಪಾರಿಗೆ ನಾನು ಡಾಕಟ್ರಾಗ್ಬಕು ಅಂತ ಭಾಳ್ ಆಸಿ ಇತ್ರಿ.ಪಿ ಯೂ ಸಿ ರಿಸಲ್ಟ್ ಬಂದ್ ಮ್ಯಾಲ ಹೋತ್ರಿ.

ನಿರೂ : ನಿಮಗೆ ಚಿಕ್ಕಂದಿನಿಂದಲೂ ಏನಾಗ್ಬೇಕು ಅಂತ ಆಸೆಯಿತ್ತು.

ಶ್ಯಾಮ್ : ನನಗ ಸಣ್ಣವ್ಲಿಂದಾನೂ ನಾನ್ ಇಂಜಿನೀಯರ್ರ ಅಗ್ಬಕು ಅಂತ ಇತ್ರಿ.

ನಿರೂ : ಒಹ್ ಕೆ ಸೊ ಶ್ಯಾಮ್ ಅವ್ರೆ…ನಿಮಗೆ ಇಂಜಿನಿಯರ್ ಅಗ್ಬೇಕು ಅಂತ ಚಿಕ್ಕಂದಿನಿಂದಲೂ ಆಸೆ ಇತ್ತು.

ಶ್ಯಾಮ್ : ಹೌದ್ರಿ…

ನಿರೂ : ಸರಿ ಶ್ಯಾಮ್ ನಿಮ್ಮ ಪ್ರಕಾರ್ ಇಂಜಿನೀಯರಿಂಗ್ ಅಂದ್ರೆ ಏನು?

ಶ್ಯಾಮ್ : ಅದೊಂದ್ ತಪಸ್ಸು ಮೇಡಂ.

ನಿರು : ಇಂಜಿನಿಯರಿಂಗ್ ಅಂದ್ರೆ ಅದು ನಾಲ್ಕ್…..

ಶ್ಯಾಮ್ : (ಅವಳನ್ನು ತಡೆದು) ಗೊತಾತ್ಬಿಡ್ರಿ….ಇಂಜಿನಿಯರಿಂಗ್ ನಾಲ್ಕ್ ವರ್ಷದ್ ಕೋರ್ಸ್ ಐತಿ.ನೀವ್ ಯಾಕ ಎಂಟ್ ವರ್ಷ ಓದಿರಿ ಅನ್ನೊದಲ್ರಿ ನಿಮ್

ಕ್ವಷನ್ನು?

ನಿರೂ : ಯೆಸ್ ಯೆಸ್ ಹೌದು ಆss.ಅದೆ ಅದೆ.

ಶ್ಯಾಮ್ : ನಾನ್ ಇದಕು ಮುಂಚ ಏನ್ ಹೇಳಿನಿ ?ಇಂಜಿನಿಯರಿಂಗ್ ಅಂದ್ರ….ಅದೊಂದು ತಪಸ್ ಅದ ಅಂತ.ತಪಸ್ ಜಾಸ್ತಿ ಮಾಡ್ದಂಗೂ ದೇವರ ಕೃಪೆ ಜಾಸ್ತಿ

ಸಿಗ್ತೈತಿ.

ನಿರೂ : ಒಹ್ ಹಾಗೆ…ಸೊ ಶ್ಯಾಮ್ ನಿಮ್ದು ಯಾವ್ ಬ್ರ್ಯಾಂಚು?

ಶ್ಯಾಮ್ : ರಾಯಲ್ ಮೆಕ್ ರ್ರಿ.

ನಿರೂ : ನಿಮಗೆ ಮೆಕಾನಿಕಲ್ ಇಂಜಿನಿಯರ್ ಆಗ್ಬೇಕು ಅಂತ ಮೊದ್ಲಿಂದ ಮನ್ಸಲ್ ಇತ್ತಾ ಅಥ್ವಾ ?

ಶ್ಯಾಮ್ : ಅದು ಸಡನ್ ಡಿಸಿಷನ್ ರ್ರಿ.

ನಿರೂ : ಅಂದ್ರೆ..ಅರ್ಥ ಆಗ್ಲಿಲ್ಲ.

ಶ್ಯಾಮ್ : ಸಿ ಇ ಟಿ ಕೌನ್ಸಲಿಂಗ್ ನಾಗ ವೆಂಕಟರಮನ ಗೋವಿಂದ ಕಾಲೇಜ್ನ್ಯಾಗ ,ನನ್ ಕ್ಯಟಗರಿನಾಗ ಒಂದೆ ಒಂದು ಸೀಟ್ ಇತ್ರಿ ಹಂಗಾಗಿ ಇದಕ್ ಒತ್ತ್ ಬಿಟ್ರಿ.

ನಿರೂ : ನಿಮ್ಮ ಪ್ರಕಾರ ಮೆಕಾನಿಕಲ್ ಬ್ರ್ಯಾಂಚ್ ನ ಅಡ್ವಾಂಟೇಜ್ ಮತ್ತೆ ಡಿಸ್ ಅಡ್ವಾಂಟೇಜ್ ಏನು?

ಶ್ಯಾಮ್ : ಅಡ್ವಾಂಟೇಜ್ ಅಂದ್ರ ನಮ್ ಬ್ರ್ಯಾಂಚಲ್ಲಿ ಬರೇ ಹುಡುಗೂರ ಇರ್ತಾವ್ರಿ.

ನಿರೂ : ಓಕೆ ಡಿಸ್ ಅಡ್ವಾಂಟೇಜ್ ?

ಶ್ಯಾಮ್ : ಡಿಸ್ ಅಡ್ವಾಂಟೇಜ್ ಅಂದ್ರ ಒಬ್ರು ಇಬ್ರು ಹುಡುಗೀರು ಇರ್ತಾವ್ರಿ.

ನಿರೂ : ನಿಮ್ಮ ಈ ನಾಲ್ಕು..

ಶ್ಯಾಮ್ : ಎಂಟ…

ನಿರೂ : ಸಾರ್ರಿ…ಸಾರ್ರಿ…ಈ ಎಂಟು ವರ್ಷದ ಸುಧೀರ್ಘಾವಧಿಯ ಕಾಲೇಜ್ ಲೈಫ್ ನಲ್ಲಿ ಯಾರಾದ್ರು ನಿಮ್ಮನ್ನ ನಿದ್ದೆ ಬರದೆ ಇರೋ ಹಾಗೆ ಕಾಡಿದಾರಾ?

ಶ್ಯಾಮ್ : ಹುಂ….Turbo machine ಅನ್ನೊ ಸಬಜೆಕ್ಟ್ ರ್ರಿ.

ನಿರೂ : ನಿಮ್ಮ ಪ್ರಕಾರ ನಾವು ಇಂಜಿನೀಯರಿಂಗ್ ಕಾಲೇಜ್ ನ ತುಂಬಾ ಕೇರ್ ಫುಲ್ ಆಗಿ ಸೆಲೆಕ್ಟ್ ಮಾಡ್ಬೇಕಾ?ಅಥ್ವಾ ಬ್ರ್ಯಾಂಚ್ ನ?

ಶ್ಯಾಮ್ : ಎರಡು ಅಲ್ರಿ..ಫೈನಲ್ ಇಯರ್ ಅಲ್ಲಿ ಪ್ರಾಜೆಕ್ಟ್ ಪಾರ್ಟನರ್ಸ್ ನ.

ನಿರೂ : ಕಾಲೇಜ್ ಲೈಫ್ ನಲ್ಲಿ ನಿಮ್ಮ ಕಣ್ಣು ತೆರೆಸಿದ್ದು ಅಂತ ಇದ್ರೆ,ಅದು ಯಾರು ?

ಶ್ಯಾಮ್ : ಕ್ಲಾಸ್ ಮುಗದ್ ಮೇಲೆ ಬಾರಸ್ತಾರಲ್ರಿ ಬೆಲ್ಲು.ಅದು.

ನಿರೂ : ಬೇರೆ ಬ್ರ್ಯಾಂಚ್ ಬಗ್ಗೆ ನಿಮ್ಮ ಅಭಿಪ್ರಾಯ?

ಶ್ಯಾಮ್ : ರಾಯಲ್ ಮೆಕ್ ರಾಯಲ್ ಮೆಕ್ ರಾಯಲ್ ಮೆಕ್….ರಾಯಕ್ ಮೆಕ್……

ನಿರೂ : ಒಕೆ …ಒಕೆ …ಒಕೆ…

ಶ್ಯಾಮ್ : ರಾಯಲ್ ಮೆಕ್ ರಾಯಲ್ ಮೆಕ್…ರಾಯಲ್ ಮೆಕ್…ರಾಯಲ್ ಮೆಕ್.

ನಿರೂ : ಸರಿ ಈಗ ತಗೋಳೋಣ ಒಂದು ಸ್ಮಾಲ್ ಬ್ರೇಕ್.

 

ಜಾಹಿರಾತು : 1.ಅರಿಶಿನ ಮತ್ತು ಚಂದನದ ಗುಣಗಳ ಸಂತೂರ್ ತ್ವಚೆಯಿನಷ್ಟು ಅರಳಿದೆ…ಮಮ್ಮಿ…..(ಇಬ್ಬರು ಆಶ್ಚರ್ಯದಿಂದ) ಮಮ್ಮಿ????…

2.ನಿಲ್ಲಿ…ನಿಮ್ಮ ಟೂತ್ ಪೇಸ್ಟನಲ್ಲಿ ಉಪ್ಪು ಇದೆಯೇ…

3.ಬನ್ನಿ ಈಗ ತಗೋಳೊಣ ಒಂದು ಹಾರ್ಪಿಕ್ ಚಾಲೆಂಜ್….ವಿಶ್ವಾಸ್ ನೀವು?…ನನ್ನ ಕಣ್ಣುಗಳನ್ನು ನಂಬೋಕೆ ಆಗ್ತಿಲ್ಲ.

ನಿರೂ : ವೆಲ್ ಕಮ್ ಬ್ಯಾಕ್ ನಮ್ ಜೊತೆಗಿದಾರೆ ಶ್ಯಾಮ್ ಅವ್ರು.ಸೊ ಶ್ಯಾಮ್ ಅವ್ರೆ.ಎಕ್ಸಾಮ್ಸ್ ಬಗ್ಗೆ ನಿಮಗೇನನ್ಸತ್ತೆ?

ಶ್ಯಾಮ್ : ಮರಳಿ ಯತ್ನವ ಮಾಡು ಮರಳಿ ಯತ್ನವ ಮಾಡು ತೊರೆಯದಿರು.we should never give up in our life,in your life and in ouryour life.

ನಿರೂ : ನಿಮಗೆ ಸದಾ ಬೆನ್ನೆಲುಬಾಗಿ ನಿಂತವ್ರು ಯಾರು?

ಶ್ಯಾಮ್ : ಜೆರಾಕ್ಸ್ ಮೆಷೀನು.

ನಿರೂ : ಕಾಲೇಜ್ನಲ್ಲಿರೊ ಹುಡುಗೀರ್ ಬಗ್ಗೆ ಏನ್ ಹೇಳೋಕೆ ಇಷ್ಟ ಪಡ್ತೀರ?

ಶ್ಯಾಮ್ : ಕನ್ನಡವೇ ಸತ್ಯ ಕನ್ನಡವೇ ನಿತ್ಯ.ಇಂಗ್ಲಿಷ್ ಕಮ್ಮಿ ಮಾತಾಡಿ.

ನಿರೂ : ನಿಮ್ಮನ್ನ ಮೂಖ ಸ್ತಬ್ಧರನ್ನಾಗಿ ಮಾಡಿದ ಯಾವ್ದಾದ್ರು Situation?

ಶ್ಯಾಮ್ : ವೈವಾ…

ನಿರೂ : ನಿಮ್ಮ ಫೇವರೇಟ್ ಲೆಕ್ಚರರ್ ಯಾರು?

ಶ್ಯಾಮ್ : ನನ್ ಫ್ರೆಂಡು ಸಿದ್ದೇಶ ಅಂತ.ಆ ಬಡ್ಡಿ ಮಗ,ಲೆಕ್ಚರರ್ ಕುಡ ಒಂದ್ ತಾಸಿನಾಗ ಅರ್ಥ ಮಾಡಸಾಕಾಗ್ದೆ ಇರೋದನ್ನ ಐದೆ ಐದ್ ನಿಮಿಷದಾಗ ಕಲಿಸ್ಬಿಡ್ತಿದ್ರಿ.

ನಿರೂ : ನಿಮಗೆ ಯಾವಾಗಾದ್ರು ಯಾಕಾದ್ರು ಮೆಕಾನಿಕಲ್ ತಗೊಂಡ್ನಪ್ಪಾ ಅಂತ ಅನ್ಸಿದ್ಯಾ?

ಶ್ಯಾಮ್ : ಜಾಬ್ ಹುಡುಕ್ಬೇಕಾದ್ರ.

ನಿರೂ : ನಿಮ್ಮ ಪ್ರಕಾರ ಈಗಿನ ಯುವಕರಲ್ಲಿ ಯಾವ್ ಒಂದು ಕೊರತೆ ಇದೆ?

ಶ್ಯಾಮ್ : ಅಟೆಂಡೆನ್ಸ್…

ನಿರೂ : ಎಕ್ಸಾಮ್ ಹ್ವಾಲ್ ನಲ್ಲಿ ನಿಮ್ ಕೈಗೆ ಕ್ವಷನ್ ಪೇಪರ್ ಬಂದ್ ಕೂಡ್ಲೆ ನಿಮ್ ತಲೇಲಿ ಏನ್ ಓಡ್ತಾ ಇತ್ತು?

ಶ್ಯಾಮ್ : ರಾಕೇಟು,ಹೆಲಿಕಾಫ್ಟರ್ರು,ಏರೊ ಪ್ಲೇನು,ಎಲ್ಲಾ…ಎಲ್ಲಾ.

ನಿರೂ : ನಿಮ್ ಪ್ರಕಾರ ಲಕ್ ಅಂದ್ರೆ ಏನು?

ಶ್ಯಾಮ್ : ಲ್ಯಾಬ್ ಎಕ್ಸಾಮ್ ಗೆ ಈಸಿ Experiment ಸಿಗೋದ್ರಿ.

ನಿರೂ : ಬ್ಯಾಡ್ ಲಕ್ ಅಂದ್ರೆ?

ಶ್ಯಾಮ್ : ಎಕ್ಸಾಮ್ ಹಾಲ್ ನಲ್ಲಿ ನಮ್ ರೋಲ್ ನಂಬರ್ ಮುಂದಿನ್ ಬೆಂಚಲ್ ಬಂದಿರದು.

ನಿರೂ : ನಿಮ್ಗೆ ಲೈಫಲ್ಲಿ ,ತುಂಬಾ Confusion ಕ್ರಿಯೇಟ್ ಮಾಡಿರೊ Situation ಯಾವ್ದು?

ಶ್ಯಾಮ್ : ಎಕ್ಸಾಮ್ ನಾಗ ಕ್ವಷನ್ ಪೇಪರ್ ಭಾಳ್ ಟಫ್ ಅದ ಏನ್ ಬರೀಲ್ಯಪ್ಪ ಸಿದ್ದರೂಡ …ಅಂತ ಯೊಚ್ನಿ ಮಾಡ್ಬಕಾರ ಪಕ್ಕದಲ್ಲಿರೊನೊಬ್ಬ additional paper ತಗಂಡಾಗ.

ನಿರೂ : ಓಹ್ ಕೆ…ಸೊ ಕಾಲೇಜಲ್ಲಿ ನೀವು ಹುಡಗೀರ್ ಜೊತೆ ಮಾತಾಡ್ತಾ ಇದ್ರಾ ಇಲ್ವ ?

ಶ್ಯಾಮ್ :ಅಯ್ಯೊ ಭಾಳ್ ಮಾತಾಡ್ತಾ ಇದ್ರಿ .ಜೆರಾಕ್ಸ್ ಶಾಪ್ ನಲ್ಲಿರೊ ಹುಡಗೀರ್ ಕುಡ.ಮೇಡಮ್ಮಾರ್ರೆ ಇದ್ ಎರಡ್ ಕಾಪಿ,ಇದ್ ಒಂದು ಬ್ಯಾಕ್ ಟು ಬ್ಯಾಕ್ ಮಾಡಿಡ್ರಿ.ಅಮ್ಯಾಕ್ ಬಂದ್ ಒಯ್ತೀನ್ರಿ.ಮೇಡಮಾರ್ರೆ ಸ್ಟ್ಯಾಪ್ಲರ್ ಕೊಡ್ರಿ.ಮೇಡಮಾರ್ರೆ ಫೈಲ್ ಐತ್ರಿ? ಹಿಂಗ ಭಾಳ್ ಮಾತಾಡ್ತಿದ್ರಿ.

ನಿರೂ :ಹ ಹ ಹ ವೆರಿ ಫನ್ನಿ…. ಮತ್ತೆ ನಿಮ್ಗೆ ತುಂಬಾ ಭಯ ತರ್ತಾ ಇದ್ದಂತ ಒಂದ್ ವರ್ಡ್ ಯಾವ್ದು?

ಶ್ಯಾಮ್ : External paper.

ನಿರೂ : ಮುಂದಿನ ಪೀಳಿಗೆಗೆ ಏನಾದ್ರು ಕಿವಿ ಮಾತು ಹೇಳೊದಕ್ ಇಷ್ಟ ಪಡ್ತೀರ?

ಶ್ಯಾಮ್ : ಹುಂ….3 Idiots,Jolly days,kirik party ಇವು ಸಿನಿಮಾಗಳು.Engineering ಸಿನಿಮಾ ಅಲ್ಲ.Engineering ಅನ್ನೋದು ಬದುಕ್ ಅದ.

ನಿರೂ : ನಿಮ್ಮ ಫೈನಲ್ ಈಯರ್ ಪ್ರಾಜೆಕ್ಟ್ ಬಗ್ಗೆ ಹೇಳಿ.

ಶ್ಯಾಮ್ : ನಾವು…ಈ ಮಂಚಕ್ಕೆ ಕಾಲ್ ಬದ್ಲು Bike shock absorber ನ ಜೋಡ್ಸಿ sound less ಮಂಚ ಮಾಡಿದಿವ್ರಿ.ನಮ್ ಲೆಕ್ಚರರ್ ಒಬ್ರಿಗೆ ಈ ಕಾನ್ಸೆಪ್ಟ್ ಭಾಳ್ ಇಷ್ಟ ಆಗಿ ಮನಿಗ್ ಒಯ್ದು,ನಮ್ಗ ಬೇರೆ ಯಾವ್ದ ಹಳೇ ಪ್ರಾಜೆಕ್ಟ್ ಕೊಂಡ್ಕ ಬಂದ್ ಕೊಟ್ರಿ ಅದ್ ದೊಡ್ಡ್ ಕಥಿ ಬಿಡ್ರಿ.ಇಲ್ಲೆಲ್ಯ ಹೇಳ್ಬಾರ್ದು.

ನಿರೂ : ಮಂಚಕ್ಕೆ shock absorber ವಾವ್ ಸೂಪರ್ concept.Finally ಕಾಲೇಜ್ ಬಿಟ್ಟು ಬರ್ಬೇಕಾದ್ರೆ ನಿಮಗೆ ಏನ್ ಅನಸ್ತು?

ಶ್ಯಾಮ್ : ಬದುಕು ಮೂರ್ ದಿನ ಅಂತಾರ.ಅದ್ರಾಗ ಎರಡ್ ದಿನ ಇಲ್ಲೆ ಕಳದ್ ಬಿಟ್ನ್ಯಲ್ಲ ಅಂತ ಅನಸ್ತ್ರಿ.

ನಿರೂ : ಸೊ ಈಗ ಏನ್ ಮಾಡ್ಕೊಂಡಿದಿರ ಶ್ಯಾಮ್ ಅವ್ರೆ ?

ಶ್ಯಾಮ್ : ಯಾಕಾದ್ರು ಇಂಜಿನಿಯರಿಂಗ್ ಮಾಡಿದ್ನ್ಯಪ್ಪ ?ಅಂತ ಪಶ್ಚಾತಾಪ ಪಟ್ಕಂಡ್ ಕಾಲ ಕಳೀತ ಐದ್ಯನ್ರಿ.

ನಿರೂ : ಹಾಗಲ್ಲ ಸರ್..ಜೀವನಕ್ಕೆ ಏನ್ ಮಾಡ್ಕೊಂಡ್ ಇದೀರ ಅಂತ ಕೇಳ್ದೆ.

ಶ್ಯಾಮ್ : ಸದ್ಯಕ್ಕೆ ಎಲ್ರಿಗು ರೆಸುಮೆ ಕಳಸ್ಕೊಂಡು ,ಕೆಲ್ಸ ಹುಡಕೊಂಡ್ ಹೇಗೊ ಕಾಲ ಕಳೀತಾ ಇದೀನಿ ಮೇಡಂ…..(ಅಳಲು ಆರಂಭಿಸುವನು) ಮೇಡಮ್ಮಾರ್ರೆ ನಿಮ್ ರಿಲೇಷನ್ ದಾಗ

ಯಾರಾರ ಇದ್ರ ಕೇಳ್ ನೋಡಿ ನಂಗೊಂದ್ ಕೆಲ್ಸ ಕೊಡಸ್ರ್ಯಲ…ನಿಮಗೆ ಕೈ ಮುಗಿತೀನ್ರಿ….ಮೇಡಂಮಾರ್ರ.

ನಿರೂ : ಒಕೆ ಒಕೆ …ಏನಾದ್ರು ಮಾಡೋಣ…ಅಳ್ಬೇಡಿ….ಡೋಂಟ್ ವರ್ರಿ..ಯಾವದಕ್ಕು ರೆಸುಮೆ ಕಳ್ಸಿರಿ.ನನ್ Mail ID ಕೊಟ್ಟಿರ್ತಿನಿ ಬಿಡಿ.

ಶ್ಯಾಮ್ : (ಅಳು ನಿಲ್ಲಿಸಿ ಖುಷಿಯಿಂದ) Mail ID ಬ್ಯಾಡ್ರಿ ನಿಮ್ ನಂಬರ್ರ ಕೊಡ್ರಿ.ಈಗೆಲ್ಲಾ whatsapp ನಾಗ word,Pdf file ಕಳಸ್ಬೋದ್ರಿ.ಕೊಡ್ರಿ ಕೊಡ್ರಿ…(ತನ್ನ ಮೊಬೈಲ್ ತೆಗೆಯುತ್ತ)

ನಿರೂ :ಒಕೆ ಒಕೆ ಪ್ರೋಗ್ರಾಮ್ ಅದ್ಮೇಲೆ ಕೊಡ್ತೀನಿ.ಸೊ ಶ್ಯಾಮ್ ಅವ್ರೆ engineeringನಲ್ಲಿ ನಿಮ್ಮ average ಎಷ್ಟು?

ಶ್ಯಾಮ್ : ನಿಮ್ಮೌವ್ನ್ …..ಪರ್ಸನಲ್ ಕ್ವಷನ್ ಕೇಳಂಗಿಲ್ಲ ಅಂತ ಪ್ರೋಗ್ರಾಮ್ ಗು ಮುಂಚ ಚಾ ಕುಡಿಯ ಹೊತ್ನ್ಯಾಗ ಹೇಳಿನ್ಯ ಇಲ್ಲ.

ನಿರೂ : ಒಕೆ ಸಾರ್ರಿ ಸಾರ್ರಿ …ಒನ್ ಲಾಸ್ಟ್ ಕ್ವಷನ್ ನಮ್ ಪ್ರೋಗ್ರಾಮ್ ಮೂಲಕ ನಿಮ್ಮ ಫ್ರೆಂಡ್ಸಿಗೆಲ್ಲಾ ಏನ್ ಹೇಳೊಕ್ ಇಷ್ಟ ಪಡ್ತೀರ?

ಶ್ಯಾಮ್ : ರಾ…ಯ…ಲ್ ಮೆಕ್…ರಾ…ಯ..ಲ್ ಮೆಕ್…ರಾಯಲ್ ಮೆಕ್ ರಾಯಲ್ ಮೆಕ್ ರಾಯಲ್ ಮೆಕ್..ರಾಯಲ್ ಮೆಕ್………(ನಿಧಾನವಾಗಿ ಜೈಕಾರ ಹಾಕುತ್ತಾ ಅಲ್ಲಿಂದ ಹೋಗುವನು)

ನಿರೂ : ಇದು ಈವತ್ತಿನ “ರೋಡ್ ಮಾಡೆಲ್”.ಇನ್ನೊಬ್ಬ ಲೂಸ್ ನನ್ ಮಗನ ನೊಂದಿಗೆ ಮತ್ತೆ ಮುಂದಿನ ವಾರ ಭೇಟಿಯಾಗ್ತೀನಿ,ಅಲ್ಲಿ ವರ್ಗು ನೀವ್ ನೋಡ್ತಾ ಇರಿ ಬೇರೆ ಯಾವ್ದಾದ್ರು

ಚಾನೆಲ್ ನ .ನಮಸ್ಕಾರ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..