5082

ಯಕ್ಷಗಾನದ ಚಂಡೆಯ ಮಾಂತ್ರಿಕ ಸುಜನ್ ಹಾಲಾಡಿ

ಚಂಡೆ ವಾದನದಲ್ಲಿ ಗುರುವಿಲ್ಲದೆ ಬೆಳೆದ ಪೆರ್ಡೂರು ಮೇಳದ ಟ್ರಂಪ್ ಕಾರ್ಡ್ ಸುಜನ್ ಹಾಲಾಡಿ. ಈ ಯುವ ಗ್ರಾಮೀಣ ಪ್ರತಿಭೆ ಹಾಲಾಡಿಯ ಶಿವರಾಮ ಮತ್ತು ಸರೋಜ ದಂಪತಿಗಳ ಪುತ್ರರಾಗಿ 20.11.1996 ಹುಟ್ಟಿದ ಇವರು ಅತೀ ಕಡಿಮೆ ಸಮಯದಲ್ಲಿ ಸಹಸ್ರಾರು ಅಭಿಮಾನಿಗಳನ್ನು ಹೊಂದಿದ್ದಾರೆ.

ತನ್ನ ಶಾಲಾ ದಿನಗಳಲ್ಲೇ ಬಡಗುತಿಟ್ಟಿನ ಪ್ರಖ್ಯಾತ ಚಂಡೆ ವಾದಕ ಸಾಲಿಗ್ರಾಮ ಮೇಳದ ಶಿವಾನಂದ ಕೋಟ ಇವರ ಚಂಡೆ ವಾದನವನ್ನು ಗಮನಿಸುತ್ತಾ ಮನೆಯಲ್ಲಿ ಅಭ್ಯಾಸ ಮಾಡಿದ್ದ ಇವರು ಬಿದ್ಕಲ್ಕಟ್ಟೆಯ ಮಕ್ಕಳ ಮೇಳದಲ್ಲಿ ಅಕ್ಷಯ್ ಆಚಾರ್ ಮದ್ದಳೆಗೆ ಚಂಡೆಯಲ್ಲಿ ಸಾಥ್ ಕೊಡುತಿದ್ದರು. ಪಿಯುಸಿ ಶಿಕ್ಷಣ ಪೂರೈಸಿ ನಂತರ ಸಿಗಂಧೂರು ಮೇಳದಲ್ಲಿ ಚಂಡೆವಾದಕರಾಗಿ ಸೇರಿಕೊಂಡರು. ನಂತರ ಮಾರಣಕಟ್ಟೆ ಮೇಳದಲ್ಲಿ ಸೇರಿಕೊಂಡ ಇವರು ತನ್ನ ಚಂಡೆಯ ವಾದನದಲ್ಲೇ ಚಪ್ಪಾಳೆ ಗಿಟ್ಟಿಸಿಕೊಂಡು ಬಡಗು ತಿಟ್ಟಿನ ಪ್ರಮುಖ ಚಂಡೆ ವಾದಕರ ಸಾಲಿಗೆ ಸೇರಿಕೊಂಡರು.

ಇವರ ಚಂಡೆಯ ಚಮತ್ಕಾರವನ್ನು ಗಮನಿಸಿದ ಯಕ್ಷಗಾನದ ಗಾನಕೋಗಿಲೆ ಜನ್ಸಾಲೆ ರಾಘವೇಂದ್ರ ಆಚಾರ್ಯರು ಮಳೆಗಾಲದ ಕಾರ್ಯಕ್ರಮಗಳಿಗೆ ಆಹ್ವಾನಿಸಿದರು. ಇದು ಇವರ ಬದುಕಿನ ತಿರುವು ಅಂತಾನೆ ಹೇಳ್ಬೋದು. ಬಡಗುತಿಟ್ಟಿನ ಗಾನಕೋಗಿಲೆಯ ಜೊತೆಗೆ ಚಂಡೆ ವಾದನ ಇವರ ಪ್ರತಿಭೆ ಇನ್ನಸ್ಟು ಜನರಿಗೆ ಮುಟ್ಟುವಂತೆ ಮಾಡಿತು. ಫೇಸ್ಬುಕ್, ವಾಟ್ಸ್ಯಾಪ್ಪ್ಪ್ , ಯೂಟ್ಯೂಬ್ ಗಳಲ್ಲಿ ಇವರ ಚಂಡೆ ವಾದನ ಎಲ್ಲರ ಮೊಬೈಲ್ ಗಳಲ್ಲೂ ಸಂಚಲನ ಮೂಡಿಸಿತು. ಅಲ್ಪ ಸಮಯದಲ್ಲೇ ಬಹು ಬೇಡಿಕೆಯ ಚಂಡೆ ವಾದಕರಾದ್ರು.

ತೀರ್ಥಹಳ್ಳಿ ಗೋಪಾಲ ಆಚಾರ್ಯ, ವಿಧ್ಯಾಧರ ಜಲವಳ್ಳಿ, ತೊಂಬಟ್ಟು ವಿಶ್ವನಾಥ ಆಚಾರ್ಯ, ಪ್ರಕಾಶ್ ಕಿರಾಡಿ, ಕಡಬಾಳ್ ಉದಯ್ ಹೆಗ್ಡೆ ಮುಂದಾದ ಘಟಾನುಗತಿಗಳನ್ನು ಕುಣಿಸಿ ಯಕ್ಷ ಪ್ರೇಮಿಗಳಿಂದ ಮೆಚ್ಚುಗೆ ಗಿಟ್ಟಿಸಿಕೊಂಡರು. ಸಾಮಾಜಿಕ ಜಾಲತಾಣದಲ್ಲಿ ಸಂಚಲನವನ್ನೇ ಮೂಡಿಸಿದರು. ಏಕಕಾಲಕ್ಕೆ 7 ಚಂಡೆಗಳನ್ನು ಬಾರಿಸುವ ಚಮತ್ಕಾರ ಇವರಿಗಿದೆ.
ಗಾನಕೋಗಿಲೆ ಜನ್ಸಾಲೆ, ಮದ್ದಲೆಯ ಸುನಿಲ್ ಭಂಡಾರಿ ಕಡತೊಕರ ಜೊತೆ ಸಮರ್ಥ ಚಂಡೆ ವಾದಕರಾಗಿ,ಪೆರ್ಡೂರು ಮೇಳದ ಪ್ರಧಾನ ಚಂಡೆ ವಾದಕರಾಗಿದ್ದಾರೆ. ಇವರ ಭವಿಷ್ಯ ಇನ್ನಷ್ರು ಉಜ್ವಲವಾಗಲಿ ಎಂದು ಲೋಕಲ್ ಕೇಬಲ್ ಟೀಮ್ ಹಾರೈಸುತ್ತದೆ.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..