2617

ಈ 10 ಡೈಲಾಗುಗಳು ಕಾಲೇಜು ಜೀವನವನ್ನು ಮತ್ತೊಮ್ಮೆ ನೆನೆಯುವಂತೆ ಮಾಡುತ್ತವೆ

  • By Arun Kumar PT
  • Wednesday, March 7th, 2018
  • Things You Should Know

Student life is golden life ಎನ್ನುತ್ತಾರೆ. ಇವತ್ತಿಗೂ school life best ಆ? College life ಮಸ್ತ್ ಆ? ಅಂತ ಒಂದು ಚಿಕ್ಕ debate ಆಗಾಗ ಆಗುತ್ತಲೇ ಇರುತ್ತದೆ. ಚಿಕ್ಕವರಿದ್ದಾಗ ದೊಡ್ಡವರಾಗುವ ಕನಸು ಕಾಣುತ್ತೇವೆ. ದೊಡ್ಡವರಾದ ಮೇಲೆ ಮರಳಿ ಬಾಲ್ಯಕ್ಕೆ ಹೋದಂತೆ ಹಗಲುಗನಸು ಕಾಣುತ್ತೇವೆ. ಅದೇನೇ ಇದ್ದರೂ, ಕಾಲೇಜ್ ಲೈಫಿನ ನೆನಪುಗಳು ರಪ್ಪ್ ಅಂತ ಕಣ್ಣಿನ ಮುಂದೆ ಪಾಸ್ ಆಗುವ ಕೆಲವು ಸ್ಯಾಂಪಲ್ ಡೈಲಾಗ್ ಗಳು ಇಲ್ಲಿವೆ. ಇದನ್ನು ಓದಿ, ಇದರಲ್ಲಿನ ಎಷ್ಟು ಘಟನೆಗಳು ನಿಮ್ಮ ಲೈಫಲ್ಲಿ‌ ಆಗಿದೆ ಎಂಬುದರ ಸ್ಕೋರ್ ಕಾಮೆಂಟ್ ಮಾಡಿ. ಒಂದು ಡೈಲಾಗ್ ಗೆ 10 ಮಾರ್ಕ್ಸ್ ಎಂಬಂತೆ 100 ಅಂಕಗಳಿಗೆ ಎಷ್ಟು ಜನ FCD ಪಾಸ್ ಆಗ್ತಾರೆ, ಎಷ್ಟು ಜನ ನಮ್ಮಂಗೆ ಫೇಲಾಗದವರುಂಟೇ ಚೊಂಬೇಶ್ವರ ಎಂದು ಹಾಡುತ್ತಾರೆ ನೋಡೋಣ. Your Time starts now!!

1. ಮಗಾ ಅಲ್ನೋಡೋ ನಿಮ್ ಅತ್ತಿಗೆ!

ಪಿಂಕ್ ಚೂಡಿದಾರ್, ಅವಳು ನಮ್ ಅತ್ತಿಗೆ ಅಲ್ವೋ, ನಿಮ್ ಅತ್ತಿಗೆ!!!

2. ಮೊನ್ನೆ ಇನ್ನೂ ಕಾಲೇಜ್ ಶುರು ಆದಂಗಿತ್ತು, ಆಗಲೇ ಇಂಟರ್ನಲ್ಸ್ ಆ?

3. ಮಗಾ, ಬೆಳಿಗ್ಗೆ ಬೇಗ, ಬೇಗ ಅಂದರೆ 4am ಗೆ ಎದ್ದೇಳಿಸೋ, ಗ್ರೂಪ್ ಸ್ಟಡಿ ಮಾಡೋಣ

4. ಪ್ರಿಯಾ, ಈ ಸೀರೆ ನಿಮಗೆ ತುಂಬಾ ತುಂಬಾ ತುಂಬಾ ಚೆನ್ನಾಗಿದೆ, ಒಂದು ಫೋಟೋ ತಗೊಳ್ಳೋದಾ?? ಜೊತೆಯಲ್ಲಿ???

5. ಮಗಾ, ಬೇಗ ಬನ್ರೋ, ನಿಮಗೂ ಸೇರಿಸಿ ಬಾಲ್ಕನಿ ಟಿಕೆಟ್ ತಗೊಂಡರ್ತೀನಿ.

6. ಮಗಾ, FCD ಬಂತಲ್ಲಾ, ಪಾರ್ಟಿ ಕೊಡ್ಸೋ.

ನಿನ್ನದೂ FCD ಬಂತು ತಾನೆ, ನನ್ನ ಪಾರ್ಟಿ, ನಿನ್ನ ಪಾರ್ಟಿ ಕ್ಯಾನ್ಸಲ್!!

7. ಸಾರ್, ಇನ್ಮೇಲಿಂದ attendance shortage ಮಾಡ್ಕೊಳಲ್ಲ, ತಪ್ಪದೇ ಕ್ಲಾಸ್ ಗೆ ಬರ್ತೀನಿ, please, may I come in sir??

8. ಮಗಾ, ಕೇಳೋ ಪ್ರಿಯಾ ಇವತ್ತು ಅವಳೇ ನನ್ನ ನಂಬರ್ ಕೇಳಿದಳು, ಡಂಕಣಕಣಕಣ, ಡಂಕಣಕಣಕಣ!!

9. ಮಗಾ, ಆಗಿದ್ದು ಆಗಲಿ, ಈ ಸಲ ಗೋವಾ ಹೋಗಿ fenny ಎತ್ತೇ ಬರಬೇಕು!!

10. ಅಯ್ಯಯ್ಯೋ, ಐದು‌ ನಿಮಿಷ ಲೇಟಾಗೋಯ್ತು, magaaz, ಬಂಕ್ ಮಾಡೋಣ?!?

 

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..