3732

Here are few points where you can’t make fun of ಪ್ರೇಮ್ ‘s

ಒಂದ್ ಕಾಲ ಇದ್ದಿತ್ತು ..ಸೋಶಿಯಲ್ ಮೀಡಿಯಾ ಜನರಿಗೆ ಗೊತ್ತೇ ಇರ್ಲಿಲ್ಲ ಆಗಿತ್ತು .. ಅಂತಹ ಕಾಲದಲ್ಲೇ ಕರ್ನಾಟಕದ ಯಾವ್ದೋ ಹಳ್ಳಿಯಲ್ಲಿ ಬೆಳಿಗ್ಗೆ ಟೀ ಅಂಗಡಿ ಹತ್ರ ಹರಟೆ ಹೊಡೆಯೋಕೆ ಬಂದ ಹಳ್ಳಿಯವನಿಗೂ ಪ್ರೇಮ್ ನಿರ್ದೇಶನದ ಚಿತ್ರ ಬರ್ತಿದೆ ಅಂತ ವಿಷಯ ತಲುಪ್ತಾ ಇದ್ದಿತ್ತು .. ಇಂತಹ ಅದ್ಭುತ ಮಾರ್ಕೆಟಿಂಗ್ ಸ್ಕಿಲ್ ಈ ಮನುಷ್ಯನಿಗೆ ಒಲಿದಿತ್ತು .. ಈ ಮನುಷ್ಯನಿಗೆ ಮಾರ್ಕೆಟಿಂಗ್ ಸ್ಕಿಲ್ ಎಷ್ಟಿದೆ ಅಂದರೆ ಯಾವುದೊ ದೊಡ್ಡ ಕಾಲೇಜಲ್ಲಿ MBA ಇನ್ ಮಾರ್ಕೆಟಿಂಗ್ ಮಾಡಿರೋ ಬ್ರಿಲಿಯಂಟ್ ಫೆಲೋ ಅಂತ ಅನ್ನಿಸ್ಕೊಂಡಿರೊನಿಗೂ ಆಗದೆ ಇರೋ ಕೆಲಸ ಈ ಮನುಷ್ಯನ ಕೈಲಿ ಸಾಧ್ಯ ಆಗ್ತಿದೆ .. ಆ ರೇಂಜ್ ಗೆ ತನ್ನ ಪ್ರಾಡಕ್ಟ್ ಮಾರೋ ಟ್ಯಾಲೆಂಟ್ ಇರೋ ಚತುರ ಮನುಷ್ಯ ..

ಮಾತ್ ಎತ್ತಿದ್ರೆ with accent ಇಂಗ್ಲಿಷ್ ಅಲ್ಲಿ fluent ಆಗಿ ಮಾತಾಡೋ ಸ್ಟಾರ್ ಡೈರೆಕ್ಟರ್ಸ್ / ನಟ /ನಟಿಯರಿಗೆ ಕೂಡ ಇಲ್ಲದ ಆ ಮಾರ್ಕೆಟಿಂಗ್ ಸ್ಕಿಲ್ ಬರೀ ಹಳ್ಳಿಯ ಸೊಗಡಿನ ಕನ್ನಡ ಭಾಷೆಯಲ್ಲೇ ಪ್ರಪಂಚದ ಮೂಲೆಮೂಲೆವರೆಗೂ ಅವರ ಚಿತ್ರದ ಪ್ರಚಾರ ಮಾಡೋ ತಾಕತ್ತು ಇದೆ ..

ಹಳ್ಳಿಯಿಂದ ಬಂದು , ಬರೀ ಕನ್ನಡದಲ್ಲೇ ಮಾತಾಡ್ಕೊಂಡು ಎಂತೆಂಥಹ ಘಟಾನುಘಟಿ producers ನ ಕನ್ವಿನ್ಸ್ ಮಾಡಿ ದೊಡ್ಡ ದೊಡ್ಡ ನಟ ನಟಿಯರನ್ನು ತನ್ನ ಚಿತ್ರಕ್ಕೆ ಬಳಸಿಕೊಳ್ಳೋ ತಾಕತ್ತು ಇರೋ ಮನುಷ್ಯ ಸಾಮಾನ್ಯ ಅಲ್ಲ ..

ಹಿಂದೆ ಮಾಡಿರೋ ಚಿತ್ರಗಳು ಸಾಲು ಸಾಲು ತೋಪೆದ್ದು ಹೋದರೂ ದೊಡ್ಡ ನಟರನ್ನು convince ಮಾಡಿ ತನ್ನ ಚಿತ್ರಕ್ಕೆ ಬಳಸಿಕೊಳ್ಳೋ ತಾಕತ್ತು ನಮಗೆ ಗೊತ್ತಿರೋ ಮಟ್ಟಿಗೆ ಯಾರಿಗೂ ಇಲ್ಲ ..

ನಾವು ಅವರು ಮಾಡೋ ಚಿತ್ರ ಚೆನ್ನಾಗಿಲ್ಲ ಅಂತ ಬೈದರೂ ಅವರ ಕೆಲವೊಂದು ಟ್ಯಾಲೆಂಟ್ ಗೆ ಫಿದಾ ಆಗಲೇ ಬೇಕು

1.ಅದ್ಭುತ ಮಾರ್ಕೆಟಿಂಗ್ ಸ್ಕಿಲ್ ಇರೋ ಮನುಷ್ಯ
ಸೋಶಿಯಲ್ ಮೀಡಿಯಾ ಮೂಲಕ ಅಥವಾ ಪಬ್ಲಿಕ್ ಅಲ್ಲಿ ಕಾಂಟ್ರವರ್ಸಿ create ಮಾಡ್ಕೊಂಡು ಮಾರ್ಕೆಟಿಂಗ್ ಮಾಡ್ಕೊಂಡು ಠುಸ್ಸ್ ಪಟಾಕಿ ಆಗೋರ್ ಮಧ್ಯೆ ಅಪ್ಪಟ ಹಳ್ಳಿ ಸೊಗಡಿನ ಕನ್ನಡದಲ್ಲೇ ಮಾತಾಡಿಕೊಂಡು ಕಾಂಟ್ರವರ್ಸಿ ಇಲ್ಲದೆ , ಸೋಶಿಯಲ್ ಮೀಡಿಯಾ ನ ನಂಬಿಕೊಳ್ಳದೆ ತನ್ನದೇ ಆತ ರೀತಿಯಲ್ಲಿ ತನ್ನ ಚಿತ್ರ ಮಾರಿಕೊಳ್ಳೋ ತಾಕತ್ತಿಗೆ ಮೆಚ್ಚಲೇಬೇಕು

2.ಅದ್ಭುತ ಗೀತ ರಚನೆಕಾರ
ಅವರ ಹಳೆ ಚಿತ್ರಗಳ ಹಾಡಿನ ಸಾಹಿತ್ಯ ಸ್ವಲ್ಪ ಗಮನಿಸಿ ..ಒಂದು ಕಾಲದಲ್ಲಿ ನೀವು ಆ ಹಾಡನ್ನು ಗುನುಗುತ್ತಿದ್ರಿ
ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ,

ಬೇಡುವೆನು ವರವನ್ನು

3.ಅದ್ಬುತ ಹಾಡುಗಾರ
ಬೇಡುವೆನು ವರವನ್ನು

ಬ್ರಹ್ಮ ವಿಷ್ಣು ಶಿವ ಎದೆ ಹಾಲು ಕುಡಿದರೋ ,

ಒಬ್ಬ ಸೀನಿಯರ್ employee ಹೊಸ ಟೆಕ್ನಾಲಜೀಸ್ ಬಗ್ಗೆ ಅಪ್ಡೇಟ್ ಆಗದೆ ಇದ್ರೆ ಹಳೆ ಮೆಥಡ್ use ಮಾಡ್ಕೊಳ್ತಾ ಇದ್ರೆ ಅದು ಇಂದಿಗೆ ಹಳಸಿದ ಅಡುಗೆ ಆಗುತ್ತದೆ . ಪ್ರೇಮ್ ವಿಚಾರದಲ್ಲೂ ಕೂಡ ಅದೇ ಆಗಿದೆ .. ಅವರು ಈಗಿನ ಜನರೇಶನ್ ಗೆ ತಕ್ಕಂತೆ ಅಪ್ಡೇಟ್ ಆಗಬೇಕು ..

ಇಮ್ಯಾಜಿನ್ !!, ಪ್ರೇಮ್ ನಿಜವಾಗಿಯೂ ಮನಸ್ಸು ಮಾಡಿ ಈಗಿನ ಜನರೇಶನ್ mindset ಗೆ ಹೊಂದಿಕೆ ಆಗುವ ಹಾಗೆ ಫಿಲಂ ಮಾಡಿದರೆ ಖಂಡಿತ ಬಾಕ್ಸ್ ಆಫೀಸ್ ದೂಳೀಪಟ ಆಗಿ 100cr + ಕ್ಲಬ್ ಮೂವೀಸ್ ಕನ್ನಡದಲ್ಲಿ ಹವಾ ಎಬ್ಬಿಸೋಕೆ ಶುರು ಮಾಡುತ್ತೆ .. ಅವರಿಗೆ ಇರುವ ಮಾರ್ಕೆಟಿಂಗ್ ಸ್ಕಿಲ್ ಅನ್ನು ಉಪಯೋಗಿಸಿಕೊಂಡು film script ಅಲ್ಲಿ ಅಪ್ಡೇಟ್ ಆಗುವುದರ ಮೂಲಕ ಚಿತ್ರ ಮಾಡಿದರೆ ಮುಂದೆ ಪ್ರೇಮ್ ಗೆ ಅತೀ ದೊಡ್ಡ ಅಭಿಮಾನಿಗಳ ಬಳಗ ಸ್ರಷ್ಟಿ ಆಗುತ್ತೆ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..