1857

ವೇದಾಂತದ ದೊಡ್ಡ ವಿಷಯವನ್ನು ಚಿಕ್ಕದಾಗಿ ಚೊಕ್ಕವಾಗಿ ನಿರೂಪಿಸಿದ “ದೂರ ಸಂಬಂಧಿ “

ಮನುಷ್ಯ ಸಂಘಜೀವಿ.

ಹಂಗಂದ್ರೆ?

ಅದೇ ಅವನಿಗೆ ಒಬ್ಬನೇ ಇರೋಕೆ ಬರೋದಿಲ್ಲ, ಒಂದು ಸಮುದಾಯ ಮಾಡಿಕೊಂಡು, ತಾನು ಅದರ ಭಾಗವಾಗಿ, ಸಮುದಾಯಕ್ಕೆ ತನ್ನ ಕೊಡುಗೆ ನೀಡುತ್ತಾ ಬಂದಿರುವುದರಿಂದ ನಮ್ಮ ಮುಂದಿರುವ ಸಮಾಜದ ಸಂಯೋಜನೆಯಾಗಿದೆ ಅಂತ.

ಸರಿ, ಅಪ್ಪ ಅಮ್ಮ ಅಂದರೆ ಯಾರು?

ನಮಗೆ ಜನ್ಮ ನೀಡಿದ, ತಮ್ಮ ಸರ್ವಸ್ವವನ್ನೂ ನಮ್ಮ ಓದು, ಅಭಿವೃದ್ಧಿಗೆ ಮುಡಿಪಾಗಿಡುವವರು.

ಮತ್ತೆ ಫ್ರೆಂಡ್ಸು?

ರಕ್ತ ಸಂಬಂಧ ಇರದೇ ಇದ್ದರೂ ನಮ್ಮ ಕಷ್ಟ ಸುಖ ಎಲ್ಲದರಲ್ಲೂ ಸಹಭಾಗಿಯಾಗುವವರು

ಮತ್ತೆ ಈ ಬೆಸ್ಟು ಫ್ರೆಂಡ್ಸು ಅಂದರೆ?

ಈಗ ತಾನೇ ಕ್ಯಾಂಪಸ್ಸಿಗೆ ಬಂದ ಜ್ಯೂನಿಯರ್ ಮುಖ ಮನಸ್ಸಿನಲ್ಲಿ ಅಚ್ಚಾಗುವ ಮೊದಲೇ “ಮಗಾ, ಅವಳೇ ನಿಮ್ ಅತ್ತಿಗೆ” ಅಂತ ಸೇಫ್ ಆಗೋ ನಾಲಕ್ ನಾಲಾಯಕ್ ತರ್ಲೆ ನನ್ಮಕ್ಳು ಇರ್ತಾರಲ್ಲಾ, ಅವರೇ ಬೆಸ್ಟ್ ಫ್ರೆಂಡ್ಸು ಅಂದರೆ.

ಸಂಬಂಧಿಕರ ಬಗ್ಗೆ ಬಿಟ್ಟಂಗಾಯ್ತು?

ಚಿಕ್ಕವರಿದ್ದಾಗ ಪರ್ಸೆಂಟೇಜ್ ಎಷ್ಟಾಯ್ತು? ಅಂತ, ಕಾಲೇಜ್ ಮುಗಿಯುವಾಗ placement ಆಯ್ತಾ? ಅಂತ, ಕೆಲಸಕ್ಕೆ ಹೋಗುವಾಗ “ಸ್ಯಾಲರಿ ಎಷ್ಟು? ಮದುವೆ ಯಾವಾಗ?” ಎಂದು ಕೇಳುವವರೇ ಸಂಬಂಧಿಸಿಕರು.

ಹಂಗಾದರೆ ಈ ದೂರದ ಸಂಬಂಧಿ?

ಓ ಅದಾ, ನಮ್ ಹುಡುಗ, ಪ್ರಮೋದ್ ಮರವಂತೆ ನಿರ್ದೇಶನದ ಹೊಸ ಕಿರುಚಿತ್ರದ ಹೆಸರು. ಇನ್ನೂ ನೋಡಿಲ್ವಾ? ಓಕೆ, ಇದನ್ನು ಓದಿ. ನೋಡಿದ್ದರೂ ಓಕೆ, ಓದಬಹುದು!

How can you make world a better place? ಎಂಬ ಪ್ರಶ್ನೆಯನ್ನು ಯಾರಿಗಾದರೂ ಕೇಳಿ, ಅವರಿಗೆ ತೋಚಿದ್ದು, ಗೊತ್ತಿದ್ದು ಏನಾದರೂ ಹೇಳುತ್ತಾರೆ. But, the basic idea is you can’t make world the better place ever! ಯಾಕೆ ಗೊತ್ತಾ, ಈ ಪ್ರಪಂಚ ಯಾವಾಗಿನಿಂದಲೋ ಚೆನ್ನಾಗಿದೆ, ನಾವು ಸರಿಯಾಗಿ ನೋಡಿಲ್ಲ ಅಷ್ಟೇ ಅನ್ನಬಹುದು. ಇವೆಲ್ಲದರ ಮಧ್ಯ ಒಂದು ವಿಷಯ ಗಮನಿಸಿದಿರೋ ಇಲ್ಲವೋ ಗೊತ್ತಿಲ್ಲ! ಈ ಪ್ರಪಂಚ ಚೆನ್ನಾಗಿದೆಯೋ ಇಲ್ಲವೋ ಎಂಬುದು ಚಿಂತನಾರ್ಹ ವಿಷಯ. ಅದು ಪ್ರಾಯಶಃ ಮನುಷ್ಯನನ್ನೂ ಸೇರಿ ಎಲ್ಲಾ ಪ್ರಾಣಿಗಳ ತಲೆಯಲ್ಲೂ ಓಡಬಹುದು. ಆದರೆ ಈ ವಿಷಯದಲ್ಲಿ ಮನುಷ್ಯ ಯಾಕೆ ಎಲ್ಲಾ ಪ್ರಾಣಿಗಳಿಗಿಂತ ಭಿನ್ನವಾಗಿ ನಿಲ್ಲುತ್ತಾನೆ ಅಂದರೆ ತನ್ನ ಯೋಚನೆ, ಯೋಜನೆ, ವೇದನೆ, ಸಂತಸ ಎಲ್ಲವನ್ನೂ ಅಭಿವ್ಯಕ್ತಿ ಮಾಡಬಲ್ಲ ಭಾಷೆಯನ್ನು ಕಂಡು ಹಿಡಿದಿರುವುದರಿಂದ! ಭಾಷೆಯ ಆಗಮನದ ನಂತರ ಮನುಷ್ಯನಿಗೆ ತನಗೆ ಅನಿಸಿದ್ದನ್ನು ಇನ್ನೊಬ್ಬರಿಂದಿಗೆ ಹಂಚಿಕೊಳ್ಳುವ ಅವಕಾಶವೇನೋ ಸಿಕ್ಕಿತು. ಆದರೆ ಹೇಳಿಕೊಳ್ಳಲು ನಮ್ಮವರು ಅಂತ ಯಾರಾದರೂ ಇರಲೇಬೇಕಲ್ಲ! ಇಂತಹ ಟೈಮಲ್ಲಿ‌ ನಮಗೆ ಸಹಾಯಕ್ಕೆ ಬರುವುದು ಸಂಬಂಧಿಕರು ಯಾನೆ ನಮ್ಮವರು. In general, ತಂದೆ ತಾಯಿ, ಫ್ರೆಂಡು, bae, ನೆಂಟರು ಎಲ್ಲಾ. ನಾವು ಇನ್ನೊಬ್ಬರೊಂದಿಗೆ ನಮ್ಮ ಕಷ್ಟ ಸುಖವನ್ನು ಹಂಚಿಕೊಳ್ಳಲು ಮೆಸೇಜ್ ಮಾಡುತ್ತೇವೆ. ನಮ್ಮೊಂದಿಗೆ ನೋವು ಸಂಭ್ರಮ ಸಂತಸವನ್ನು ಹಂಚಿಕೊಳ್ಳಲು ಮತ್ಯಾರೋ ಕರೆ ಮಾಡುತ್ತಾರೆ. So, in a way, ಗೊತ್ತಿದ್ದೋ, ಗೊತ್ತಿಲ್ಲದೆಯೋ ನಾವು ಒಬ್ಬರಿಗೊಬ್ಬರು ಸಂಬಂಧಿಗಳೇ! So, ಸಂಬಂಧಿಕರಾಗಿ ನಾವು ಒಬ್ಬರು ಇನ್ನೊಬ್ಬರಿಗೆ ಏನು ಮಾಡಬಹುದು? ಏನು ಮಾಡಬಾರದು ಎಂಬ ಚಿಕ್ಕ ಸಂದೇಶವನ್ನು ಸದ್ದಿಲ್ಲದೆ ದಾಟಿಸುವ ಪ್ರಯತ್ನ ಈ‌ ಕಿರುಚಿತ್ರದಲ್ಲಿದೆ. ಸಚಿನ್ ಬಸ್ರೂರ್ ಸಂಗೀತ ಮತ್ತು ಪ್ರಮೋದ್ ಕ್ಯಾಮೆರಾ ಸಂಯೋಜನೆ ಅಣ್ಣಾವ್ರ “ಹಾಲು ಜೇನು‌ ಒಂದಾದ ಹಾಗೆ…” ಹಾಡನ್ನು ನೆನಪಿಸುತ್ತದೆ.

ವೇದಾಂತ ಎಂಬುದು ಈ ಖಗೋಳ ಲೋಕವನ್ನೇ ಕಿರುದು ಮಾಡಬಹುದಾದಷ್ಟು ದೊಡ್ಡ ಚಿಂತನಾ ವಿಷಯ! ಅಂತಹ ದೊಡ್ಡ ವಿಷಯವನ್ನು ಚಿಕ್ಕದಾಗಿ ಸಾಂಕೇತಿಕವಾಗಿ ಹೇಳಿರುವುದೇ ಈ‌ ಕಿರುಚಿತ್ರದ ಬಹು ದೊಡ್ಡ ಶಕ್ತಿ. ನೀವೂ ಒಮ್ಮೆ ‌ನೋಡಿ, ಇದೊಂದು ಸಲ ನಾನು ಸರಿಯಾಗಿದ್ದೀನಿ ಅಂತ ನೀವೇ ಹೇಳುತ್ತೀರಾ!

ನಮ್ಮ facebook page ಅನ್ನು ಲೈಕ್ ಮಾಡಿ, share ಮಾಡಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..