2696

ಅಮೇರಿಕಾದಲ್ಲಿ ಅರಳಿತು ಕನ್ನಡದ ಕಂಪು !!

ಸಾಧನೆಗೆ ಭಾಷೆ, ಸ್ಥಳ, ಸಮಯದ ಅಡ್ಡಿ ಎಂದಿಗೂ ಬರಿವುದಿಲ್ಲ. ತಮ್ಮ ಗುರಿಯ ಲಕ್ಷ್ಯ ಇರುವವರಿಗೆ ಮಾತ್ರ, ಯಾವುದೇ ತೊಡಕುಗಳೂ ಬಂದರು ಅದನ್ನು ಮೆಟ್ಟಿ ನಿಂತು, ತಮ್ಮ ಪ್ರತಿಭೆಯನ್ನು ಬಾಹ್ಯ ಪ್ರಪಂಚಕ್ಕೆ ತೋರಿಸಲಿ ಸಾಧ್ಯ. ಅಂತಹ ಸಾಧನೆಯೊಂದನ್ನು ಮಾಡಿದವರು ಈ ಕನ್ನಡದ ಗುಂಪು. ಅಮೆರಿಕಾದಂತ ದೇಶಗಳಿಗೆ, ಬೇರೆ ಬೇರೆ ಉದ್ದೇಶಗಳಿಗಾಗಿ ಹೋದರೂ, ಕನ್ನಡದ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಲಿಲ್ಲ. ತಮ್ಮ ಒತ್ತಡದ ಜೀವನದಲ್ಲಿ ಸಿಗುವ ಅಲ್ಪ ಸ್ವಲ್ಪ ಸಮಯವನ್ನು ಸದುಪಯೋಗಪಡಿಸಿಕೊಂಡು, ತಮ್ಮಲ್ಲಿರುವ ಪ್ರತಿಭೆಯನ್ನು ಹೊರ ಹಾಕಿದ್ದರೆ. ಅವರ ಪ್ರಯತ್ನದ ಫಲವೇ, ಅಮೇರಿಕಾದಲ್ಲಿ ಮೂಡಿಬಂದ ಕನ್ನಡ ಕಿರು ಚಿತ್ರ ‘ಏನೆಂದು ಹೆಸರಿಡಲಿ’.

ಶ್ವೇತಾ ಶ್ರೀನಿವಾಸ್ – ಮೂಲತಃ ಬೆಂಗಳೂರಿನವರಾದ ಇವರು, ಅಮೇರಿಕಾದಲ್ಲಿ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. Cloud10 productions ಹೆಸರಲ್ಲಿ ಮೂಡಿಬಂದಿರುವ ಈ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರಾಗಿ ದುಡಿದಿದ್ದಾರೆ. ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿರುವ ಕಿಶನ್ ಬದ್ರಿನಾಥ್, ಅವರಿಗೆ ಮೊದಲಿನಿಂದಲೂ ಈ ರೀತಿಯ ಚಿತ್ರವೊಂದನ್ನು ತೆರೆಯ ಮುಂದೆ ತರಬೇಕೆನ್ನುವ ಕನಸಿತ್ತು. ಅದೇ ಸಮಯಕ್ಕೆ ಶ್ವೇತಾರವರೊಂದಿಗೆ ಸೇರಿ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ಪೂರ್ಣಗೊಳಿಸಿದ ಇವರು, ಈಗಾಗಲೇ ಚಿತ್ರವನ್ನು Cambridge ನ Apple Cinemas ಮತ್ತು Atlanta ದಲ್ಲಿ ಪ್ರದರ್ಶಿಸಿದ್ದಾರೆ. ಕಸ್ತೂರಿ ಮೀಡಿಯಾ ಮತ್ತು ಕನ್ನಡ ಕೂಟದ ಸಹಕಾರದೊಂದಿಗೆ, ಶಿವರಾಜಕುಮಾರ್ ಅಭಿನಯದ ಶಿವಲಿಂಗ ಚಿತ್ರದ ಜೊತೆ ಈ ಕಿರು ಚಿತ್ರ ಪ್ರದರ್ಶನವಾಗಿದ್ದು, ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ.

ಅಮೇರಿಕಾದಲ್ಲಿ ಚಿತ್ರಿಸಿದ ಪ್ರಥಮ ಕನ್ನಡ ಕಿರು ಚಿತ್ರ ಇದಾಗಿದ್ದು, ಚಿತ್ರ ವೀಕ್ಷಿಸಿದ ಪ್ರೇಕ್ಷಕರು ಇವರ ಸಾಧನೆಗೆ ಫಿದಾ ಆಗಿದ್ದಾರೆ. ಅಮೇರಿಕಾದಲ್ಲಿ ನೆಲೆಸಿರುವ ಕನ್ನಡದ ಹುಡುಗ ಮತ್ತು ಹುಡುಗಿಯಾ ನಡುವಿನ ಸಂಬಂಧದ ಮೇಲೆ ಚಿತ್ರದ ಕಥೆಯನ್ನು ಮಾಡಲಾಗಿದೆ. ಯಶಸ್ವೀ ಸಂಬಂಧದ ಮೇಲೆ ಪ್ರಭಾವ ಬೀರುವ ಭಾಹ್ಯ ಅಂಶಗಳು ಮತ್ತು ಅದರ ಪ್ರಭಾವಕ್ಕೆ ಒಳಗಾದವರ ಮೇಲೆ ಆಗುವ ಪರಿಣಾಮಗಳು ಚಿತ್ರದ ಕೇಂದ್ರ ಬಿಂದು. ಕಿಶನ್ ಬದ್ರಿನಾಥ್ ಗೆ ಜೊತೆಯಾಗಿ ಮೇಘನಾ ಅನೂಪ್ ಅವರು ನಟಿಸಿದ್ದು, ತಮ್ಮ ನಟನಾ ಕೌಶಲ್ಯವನ್ನು ಚಿತ್ರಕ್ಕೆ ಧಾರೆಯೆರೆದಿದ್ದಾರೆ.

Premier Collage

ಅಮೇರಿಕಾದಲ್ಲಿ ಯಶಸ್ವೀ ಪ್ರದರ್ಶನದ ನಂತರ ಇದೀಗ U .K . ಮತ್ತು Switzerland ಗಳಲ್ಲಿ ಚಿತ್ರ ಪ್ರದರ್ಶನಕ್ಕೆ ತಂಡ ಸಜ್ಜಾಗಿದೆ. ಬದ್ರಿ ನಾರಾಯಣ್ ಸಹನಿರ್ದೇಶಕರಾಗಿ ಕೆಲಸ ಮಾಡಿದ್ದು, ಶ್ಯಾಮ್ ಶ್ರೀನಿವಾಸನ್, ಶ್ರೀಕಾಂತ್ ಪಾಟೀಲ್, ರಜತ್ ಭಟ್, ಅರವಿಂದ್ ಸಾಂಬಮೂರ್ತಿ, ಮಾಧವ್ ರಾವ್ ಆಗುಂಬೆ ಮತ್ತು ಹಲವಾರು ಕನ್ನಡಿಗರು ಚಿತ್ರಕ್ಕೆ ಶ್ರಮಿಸಿದ್ದಾರೆ.

ಸಾಧನೆಯ ಮಾಡ ಹೊರಟವನಿಗೆ ಸಾಗರವೂ ಲೆಕ್ಕಕ್ಕಿಲ್ಲ, ಎಂಬ ಮಾತು ಮತ್ತೆ ಸಾಭೀತಾಗಿದೆ. ಇವರ ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ, ಇವರ ಈ ಸಾಧನೆಗೆ ನಾ ‘ಏನೆಂದು ಹೆಸರಿಡಲಿ’?

ಈ ಚಿತ್ರದ ಇನ್ನಷ್ಟು ವಿವರಗಳನ್ನು ಇಲ್ಲಿ ನೋಡಬಹುದು.

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..