1771

ಯಶಸ್ಸಿಗೊಂದು ಅಡ್ಡದಾರಿ..ಕುರಿಯೊಂದು ಹಳ್ಳಕ್ಕೆ ಬಿತ್ತು.

ಜೀವನದುದ್ದಕ್ಕೂ “ಯಶಸ್ಸಿಗೆ ಯಾವುದೇ ಅಡ್ಡದಾರಿಇಲ್ಲ” ಎಂಬ ಮಾತನ್ನ ಕೇಳಿ ಬೆಳೆದವರು ನಾವು. ಹಾಗಾದರೆ ಯಶಸ್ಸಿಗೆ ಯಾವುದೇ ಅಡ್ಡದಾರಿ ಇಲ್ಲವೇ ?????ಇದೆ ಅಂತ ಹೇಳಿ ನನ್ನ ಬಳಿ ಬಂದವನು ನನ್ನ ಸ್ನೇಹಿತ. ಅವನ ಪ್ರಕಾರ ಇದು ಒಂದು ನ್ಯಾಯಬದ್ಧ ಸಂಸ್ಥೆ. ಹಾಗಾದರೆ ಅದು ಸರಿನಾ??? ಏನಿದು ?ನಿಮ್ಮನ್ನು ಹೇಗೆ ಹಳ್ಳಕ್ಕೆ ಬೀಳಿಸುತ್ತಾರೆ. ಇಲ್ಲಿದೆ ಇದರ ಪೂರ್ಣ ವಿವರ..

ಕಂಪನಿ ಹೆಸರು Q***/ Q****T /G***Q**st .ಇವರ ಬಿಸಿನೆಸ್ ಹೇಗೆ ಅಂದರೆ ನೀವು 2.5 / 3.5 / 5.5 / 8.5 ಲಕ್ಷ ಕೊಟ್ಟು ನೀವು ಇವರ ಸಂಸ್ಥೆಯ ಸದಸ್ಯರಾಗಬೇಕು. ಇದಕ್ಕೆ ಬದಲಾಗಿ ನಿಮಗೆ ಒಂದು ಉತ್ಪನ್ನ (“ಪ್ರಾಡಕ್ಟ್/ product”)  ಹಾಗು ನಿಮಗೆ 5 ಯೂನಿಟ್ ಕೊಡುತ್ತಾರೆ. ಪ್ರತಿ ಯುನಿಟ್ಟಿನ ಕೆಳಗೆ ನೀವು ಎಡ ಹಾಗು ಬಲಭಾಗದಲ್ಲಿ ಒಬ್ಬರನ್ನು ಸೇರಿಸಬಹುದು(ಅವರು ಸಂಸ್ಥೆಗೆ ಹಣ ಕೊಟ್ಟು ಸದಸ್ಯತ್ವ ಪಡೆಯಬೇಕು) . ಹೀಗೆ ಅವರು ಸೇರಿದ್ದಕ್ಕೆ ನಿಮಗೆ 12000 ರೂಪಾಯಿಗಳು ಹಾಗು 20000 ರೂಪಾಯಿಗಳು ಪ್ರಾಡಕ್ಟ್ಪಾಯಿಂಟ್ಗಾಗಿ ಬರುತ್ತದೆ. ನಿಮ್ಮ ಕೆಳಗೆ ಇರುವವರು ಇನ್ನೊಬ್ಬರನ್ನು ಸೇರಿಸಿದರೆ ನಿಮಗೆ ಮತ್ತೆ 20000 ರುಪಾಯಿ ಬರುತ್ತದೆ.ಇದು ದ್ವಿಮಾನ ಪದ್ದತಿಯ ವೃಕ್ಷ ( simple Binary tree ).ಇದು ಪಿರಮಿಡ್ ರೀತಿಯಲ್ಲಿ  ಬೆಳೆಯುತ್ತದೆ.ಹೀಗೆ ಈ ವೃಕ್ಷ ದೊಡ್ಡ ಆಲದಮರವಾಗಿ ಕೆಲವೇ ವರುಷಗಳಲ್ಲಿ ನೀವು ಪ್ರತಿವಾರ ಕೋಟಿ ಕೋಟಿ ಹಣಗಳಿಸಬಹುದು ಎನ್ನುವುದು ಈ ಸಂಸ್ಥೆಯಲ್ಲಿ ಹಣ ಹೂಡಿಸಿರುವವರ ವಾದ.ಅದಕ್ಕೆಸರಿಯೆನ್ನುವಂತೆ  ಹಣ ಮಾಡಿರುವವರನ್ನು ಸಹ ಅವರು ಪರಿಚಯಿಸುತ್ತಾರೆ.

ಇಷ್ಟೊಂದು ಹಣ ಮಾಡುವ ಸಿಂಪಲ್ ಮಾರ್ಗ ಇರುವಾಗ  ಕಷ್ಟಪಟ್ಟು ಜೀವನವಿಡೀ ದುಡಿಯುವುದೇಕೆ ಅಲ್ವಾ ???

ಹೀಗಂತ ನಿಮಗೂ ಕೂಡ ಅನಿಸಬಹುದು. ಆದರೆ ಅದು ತಪ್ಪು ಮಾರ್ಗ (Short Cut ) . ಬಹಳಷ್ಟು ದೇಶಗಳಲ್ಲಿ ” ಪಿರಮಿಡ್ scheme “(pyramid scheme) ನಿಷೇಧಿಸಲಾಗಿದೆ. ಏಕೆಂದರೆ ಇದರಲ್ಲಿ ನಿಮಗೆ ದುಡ್ಡು ಬರುವುದು ನೀವು ಇನ್ನೊಬ್ಬರನ್ನು ಸೇರಿಸಿದಾಗ ಬರುವ ದುಡ್ಡಿನ ಒಂದು ಭಾಗ. ಯಾವುದೇ ರೀತಿಯಲ್ಲಿ ಇದು ಸರಿಯಾದ ಮಾರ್ಗವಲ್ಲ.ಈ ಬಿಸಿನೆಸ್ ಮಾಡುವವರು ಇದು ಸರಿ ಅನ್ನುತರಲ್ಲ ಯಾಕೆ ? ಯಾಕೆಂದರೆ ನಮ್ಮ ದೇಶದಲ್ಲಿ ಇದಕ್ಕೆ ವಿರುದ್ಧವಾಗಿ ಇನ್ನೂ ಸರಿಯಾದ ಯಾವುದೇ ಕಾನೂನು ಇಲ್ಲ. ಇದ್ದಿದರೆ ಎಷ್ಟು ಜನ ಮೋಸ ಹೋಗುತ್ತಿರಲಿಲ್ಲ.

ಈ ಬುಸಿನೆಸ್ಸ್ನಲ್ಲಿ ಯಾವ ಅಂಶಗಳು ಸರಿಯಾಗಿಲ್ಲ ????

೧. ಅವರು ನಿಮಗೆ ಅವರ ಪ್ರಾಡಕ್ಟ್ ಗೆ  ಸರಿಯಾದ ಮಾಹಿತಿ ನೀಡುವುದಿಲ್ಲ. ಕೇಳಿದರೆ ನಮ್ಮ ಬಳಿ ಬಹಳಷ್ಟು ಪ್ರಾಡಕ್ಟ್ಸ್ ಇದೆ. ನಿಮ್ಮ ರೋಲೆ(Role) ಬೇರೆ ಎನ್ನುತ್ತಾರೆ .

೨. ಇನ್ನೊಬ್ಬರನ್ನುಸದಸ್ಯರನ್ನಾಗಿ ಮಾಡುವುದೇ ಬಿಸಿನೆಸ್ ?ನೀವು ಕುರಿ ಆಗುವುದಲ್ಲದೆ ಇನ್ನೊಬ್ಬರನ್ನು ಕುರಿ ಮಾಡುವುದು ಎಷ್ಟು ಸರಿ?

೩. ನಿಮಗೆ ಕೊಡುವ ಪ್ರಾಡಕ್ಟ್ ಅದರ ಬೆಲೆಗಿಂತಲೂ ಕಡಿಮೆ ಗುಣಮಟ್ಟದ್ದಾಗಿರುತ್ತದೆ. ಇಲ್ಲಿ ಪ್ರಾಡಕ್ಟ್ ಅನ್ನುವುದು ಕಂಪನಿ ಮೋಸ ಮಾಡುತ್ತಿದೆ ಎನ್ನುವುದನ್ನುಮುಚ್ಚಿಡಲಿಕ್ಕೆಮಾಡಿರುವುದು.

೪. ಒಂದು ಬಾರಿ ಹಣ ಹೂಡಿದರೆ ನಿಮಗೆ ಇದರಲ್ಲಿ ಇನ್ನೊಬ್ಬರನ್ನು ಸೇರಿಸದೆ ವಿಧಿಯಿಲ್ಲ. ಏಕೆಂದರೆ ನಿಮ್ಮ ಹಣ ವಾಪಾಸ್ ಪಡೆಯಲು  ಇದೊಂದೇ ದಾರಿ. ಬೇರೆ ಯಾವುದೇ ರೀತಿಯಲ್ಲಿ ವಾಪಾಸ್ ಪಡೆಯಲು  ಆಗುವುದಿಲ್ಲ.

೫. ಈ ಕಂಪನಿಯ ಬಗ್ಗೆ Google ಮಾಡಿದರೆ ವಂಚನೆಯ ಪರಮಾವತಾರ ತಿಳಿಯುತ್ತದೆ.

ಅವರು ನಿಮ್ಮನ್ನ ಹೇಗೆ ಸಂಪರ್ಕಿಸುತ್ತಾರೆ ?ಹೇಗೆ ನಿಮ್ಮನ್ನು ಬಿಸಿನೆಸ್ ಬಗ್ಗೆ ಕುತೂಹಲ ಮೂಡಿಸಿ ಹಣ ಹೂಡುವಂತೆ ಮಾಡುತ್ತಾರೆ ???? ನಮ್ಮ ಬಳಿ ಒಂದು ಸನ್ನಿವೇಶ ಇದೆ . ಒಬ್ಬ ವ್ಯಕ್ತಿ ನಮಗೆ ಅವರ ವಯಕ್ತಿಕ ಅನುಭವ ತಿಳಿಸಿದ್ದಾರೆ

“ಬಹಳಷ್ಟು ದಿನಗಳ ಬಳಿಕ ನನ್ನ ಹಳೆಯ ಸ್ನೇಹಿತ ಮತ್ತೆ ನನಗೆ  whatsapp text ಮಾಡಲು ಶುರು ಮಾಡಿದ.ಹೀಗೆ ಮಾತನಾಡುವಾಗ ನಾನು ಬಿಸಿನೆಸ್ ಮಾಡುತ್ತಿದ್ದೇನೆ ಎಂದು ಹೇಳಿದ. ನಾನು ಸೂಪರ್. all the best  ಅಂದೆ. ಆದರೆ ಆತ ಬಿಸಿನೆಸ್ ಬಗ್ಗೆ ಏನನ್ನು ಹೇಳಲಿಲ್ಲ. ಮತ್ತೆ 2 ದಿನಗಳ ಬಳಿಕ ಮತ್ತೆ text ಮಾಡಿದಾಗ ಕುಶಲೋಪರಿ ಕೇಳಿದ ಬಳಿಕ ಮತ್ತೆ ಬಿಸಿನೆಸ್ ಬಗ್ಗೆ ಹೇಳಿದ. ಆದರೆ ಇವಾಗ online  ಬಿಸಿನೆಸ್, ಬಿಸಿನೆಸ್ ಶುರು ಮಾಡಿದ ನಂತರ ನನ್ನ ಬದುಕಿನ ಶೈಲಿನೆ ಬದಲಾಗಿದೆ ಎಂದ. ನಾನು ಸರಿ ಎಂದೆ.  ಮತ್ತೆ ಮರುದಿನ ಬಿಸಿನೆಸ್ ಬಗ್ಗೆ ಹೇಳಿದ. ಬಿಸಿನೆಸ್ ಮಾಡಲು ಶುರು ಮಾಡಿದ ಬಳಿಕ ಅವನ ಬದುಕು ಹೇಗಿದೆ, ಬಿಸಿನೆಸ್ ಎಷ್ಟು ಲಾಭದಾಯಕವಾಗಿದೆ ಎಷ್ಟು ಹಣ ಗಳಿಸಬಹುದು ಎಲ್ಲದರ ಬಗ್ಗೆ ನಿಧಾನವಾಗಿ ಮಾಹಿತಿ ನೀಡಲು ಪ್ರಾರಂಭಿಸಿದ. ಆದರೆ ಯಾವ ರೀತಿಯ ಬಿಸಿನೆಸ್ ಎನ್ನುವ ಬಗ್ಗೆ ಯಾವುದೇ ರೀತಿಯ ಮಾಹಿತಿ ನೀಡಲಿಲ್ಲ.ಒಂದು ದಿನ ನನಗೆ call ಮಾಡಿ ನನ್ನ ಬಿಸಿನೆಸ್ನಲ್ಲಿ partnership ಮಾಡು ಬಹಳಷ್ಟು ಒಳ್ಳೆಯ ಅವಕಾಶವಿದೆ. ನೀನು ಜೀವನದಲ್ಲಿ ಮುಂದೆ ಬರಬಹುದು ಎಂದು ಹೇಳಿದ. ನಾನು ಸರಿ ಆದರೆ ಬಿಸಿನೆಸ್ ಯಾವ ರೀತಿ ಎಂದು ಕೇಳಿದಾಗ ನನ್ನ ಸಂಸ್ಥೆಯ ಹಿರಿಯರು ವಿವರಿಸುತ್ತಾರೆ ಎಂದು ಹೇಳಿ ಅವರನ್ನು ಒಂದು ದಿನ ಭೇಟಿ ಮಾಡುವಂತೆ ಕೇಳಿಕೊಂಡ.

(ಇಲ್ಲಿಯವರೆಗೆ ನನ್ನಲ್ಲಿ ಬಿಸಿನೆಸ್ ಬಗ್ಗೆ ಬಹಳಷ್ಟು ಕುತೂಹಲ ಮೂಡಿಸಿದ)

ನಾನು ಅವರನ್ನು ಭೇಟಿ ಮಾಡಲು HSR Layout ಅಲ್ಲಿರೋ  ಒಂದು ಕಾಫಿ ಡೇ ಗೆ (Cafe coffee day) ಹೋದೆ . ಅಲ್ಲಿ ಆತ ಇನ್ನು ಇಬ್ಬರನ್ನು ಪರಿಚಯಿಸಿದ.ಅವರು ನನ್ನ ಬಗ್ಗೆ ಮಾಹಿತಿ ಪಡೆದರು. ನಂತರ ಅವರು ಬಿಸಿನೆಸ್ ಮಾಡಿದ ನಂತರ ಹೇಗೆ ಜೀವನದಲ್ಲಿ ಮುಂದೆ ಬಂದಿದ್ದಾರೆ ಎನ್ನುವುದನ್ನು ಹೇಳಿದರು. ಕೇವಲ 4 ವರ್ಷಗಳಲ್ಲಿ ಕೋಟಿ ಕೋಟಿ ದುಡಿಯಬಹುದು ಎಂದು ಹೇಳಿದರು. ಅವರು ನಾನು ಆದಷ್ಟು ಬೇಗ ಒಂದು ತಿರ್ಮಾನಕ್ಕೆ ಬರಲಿ ಹೇಳಿದರು. ಆದರೆ ಅವರು ಬಿಸಿನೆಸ್ ಬಗ್ಗೆ ವಿವರಿಸಲು ಹೇಳಿದಾಗ ನನಗೆ ಗೊತ್ತಾಯಿತು ಇದು pyramid scheme  ಎಂದು. ನಾನು ಸರಿ ಸದ್ಯದಲ್ಲೇ ನಾನು ನಿಮಗೆ ನನ್ನ decision ತಿಳಿಸುತ್ತೇನೆ ಎಂದು ಹೇಳಿ ಅಲ್ಲಿಂದ ಬಂದೆ. ನನಗೆ ಆವಾಗ ತಿಳಿದಿದ್ದು ಏನೆಂದರೆ ಇದು ಬಹಳ ದೊಡ್ಡ ಜಾಲ. ನಮಗೆ ಬಿಸಿನೆಸ್ ಬಗ್ಗೆ ಹೇಳುವವರ ವಾಕ್ಚಾತುರ್ಯ (soft skill)  ಹೇಗಿದೆ ಅಂದರೆ ಯಾರೇ ಆದರು ಅವರು ಹೇಳುವುದೇ ಸರಿ ಎಂದು ಭಾವಿಸಬೇಕು. ಇದರಲ್ಲಿ ಬಹಳಷ್ಟು ಜನ ಮೊಸ ಹೋಗಿದ್ದಾರೆ ಹಾಗು ಹೊಸ ಹೋಗುತ್ತಾ ಇದ್ದಾರೆ.ನನ್ನ ಗೆಳೆಯನಿಗೂ ಹೇಳಿದೆ ಎದು ಸರಿ ಇಲ್ಲ. ಆದರೆ ಅವನಿಗೆ ಬಿಸಿನೆಸ್ ಎಂಬ ಪೊರೆ ಸುತ್ತಿಕೊಂಡಿದೆ. ಸರಿ ತಪ್ಪು ಯಾವುದು ತಿಳಿಯುವುದಿಲ್ಲ… ಏಕೆಂದರೆ  ಅವನಿಗೆ ಬಿಸಿನೆಸ್ ಎಂದು ಅವರು ಆ ರೀತಿ ಮೋಡಿ ಮಾಡಿದ್ದಾರೆಯೇ ?, ಅಥವಾ ತಿಳಿದಿದ್ದರೂ ಅವನ ಹಣ ಹಿಂದೆ ಪಡೆಯಲು ಇನ್ನೊಬ್ಬರನ್ನು ಕುರಿ ಮಾಡುತ್ತಿದ್ದಾನೋ ಗೊತ್ತಿಲ್ಲ. ಕೋಣನ ಮುಂದೆ ಎಷ್ಟೇ ಬಾರಿಸಿದರೂ ಅದಕ್ಕೆ ಗೊತ್ತಾಗುವುದಿಲ್ಲ. ಇದನ್ನ ಓದಿಯಾದರೂ ಸ್ವಲ್ಪ ಜನರು ಈ ಕೂಪಕ್ಕೆ ಬೀಳದಿದ್ದರೆ ಅಷ್ಟೇ ಸಾಕು.”

ಒಬ್ಬ ವ್ಯಕ್ತಿ ಒಂದೇ ಸಾರಿ ಹಣ ಗಳಿಸುವ ಹಿಂದೆ ಬಿದ್ದರೆ ಕೊನೆಗೆ ಜೀವನವೇ ನರಕ ಆಗುತ್ತದೆ . ಹಣ ಒಳ್ಳೆಯ ಹಾದಿಯ ಮೂಲಕ ಬರಬೇಕು . ನ್ಯಾಯಯುತ ಆಗಿರಬೇಕು. ದೊಡ್ಡ ಮನೆ , ದೊಡ್ಡ ಕಾರ್ ಕೊಳ್ಳ ಬೇಕಾದರೆ ಸುಮಾರು ವರ್ಷ ತೆಗೆದುಕೊಳ್ಳುತ್ತದೆ . ಚಿಕ್ಕ ವಯಸ್ಸಿನಲ್ಲಿ ಹಣದ ವ್ಯಾಮೋಹ ಜಾಸ್ತಿ ಇದ್ದಾರೆ ಕೊನೆಗೆ ತುಂಬಾ ನಿರಾಸೆ ಅನುಭವಿಸಬೇಕಾಗುತ್ತದೆ . ದುರದೃಷ್ಟ ಏನೆಂದರೆ ಇಂತಹ ಜಾಲದಲ್ಲಿ ಓದಿರುವವರೇ ಜಾಸ್ತಿ ಇರುವುದು .ನೆನಪಿಡಿ . ಇಂತಹ ಬಿಸಿನೆಸ್ ಅಲ್ಲಿ ಹುಡುಗೀಯರು ಕೂಡ ಇರ್ತಾರೆ . ಅವರು ನಿಮ್ಮ ಬಳಿ nice  ಆಗಿ ಮಾತಾಡಿ ಆಮೇಲೆ friendship  ಬೆಳೆಸಿಕೊಂಡು ಆಮೇಲೆ ಬಿಸಿನೆಸ್ ಅಂತ ಶುರು ಹಚ್ಕೊತಾರೆ ..ಜೋಪಾನ !!.. ಅದು ನೀವು ಕಷ್ಟ ಪಟ್ಟು ದುಡಿದ ಹಣ

ನೀವೂ ಕೂಡ ಬರೆಯಬಹುದು . ಬರೆಯಲು ಆಸಕ್ತಿ ಇದ್ದರೆ localkebal@gmail.com  ಸಂಪರ್ಕಿಸಿ

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..