2719

ಕಿರುಚಿತ್ರ ತಯಾರಕರ ನೆಚ್ಚಿನ ತಾಣ FlixOye.com

ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋಗಿ, ಚಂದ್ರನಾಗಲೇ ಮೇಲೆ ಬಂದಿದ್ದನು. ಶಿವ ಎಂದಿನಂತೆ ತನ್ನ ಕೆಲಸ ಮುಗಿಸಿ ಮನೆಗೆ ಹೊರಟಿದ್ದನು. ಆ ದಿನ ತುಂಬಾ ದಣಿವಾಗಿದ್ದರಿಂದ ಅಚಾನಕ್ ಆಗಿ ನೆನಪಾದ ಅವನ ಮೆಚ್ಚಿನ ಹಳೇ ಹಾಡು ಗುನುಗಲೂ ಕೂಡ ಮನಸ್ಸಾಗುತ್ತಿರಲಿಲ್ಲ. ಹೀಗೆ ಎಲೆಕ್ಟ್ರಾನಿಕ್ ಸಿಟಿ ಇಂದ ಇಸ್ರೋ ಲೇಔಟ್ ಗೆ ಬರುವಾಗ ನೈಸ್ ರಸ್ತೆಯಿಂದ ಇಳಿದು 2 ಕಿಲೋಮೀಟರ್ ಮುಂದೆ ಬರುವ ಹೊತ್ತಿಗೆ ದಾರಿಯಲ್ಲಿ ಸಿದ್ಧಾರ್ಥ ಲಿಫ್ಟ್ ಕೋರಿ ಕೈ ಸನ್ನೆ ಮಾಡುತ್ತಿದ್ದನು‌. ಇಬ್ಬರೂ ಒಬ್ಬರಿಗೊಬ್ಬರು ಅಪರಿಚಿತರಾಗಿದ್ದರು. ಶಿವ ತನ್ನದೇ ಲೋಕದಲ್ಲಿ ಏನನ್ನೋ ಯೋಚಿಸುತ್ತಾ ಬೈಕ್ ಮೇಲೆ ಬರುತ್ತಿದ್ದನು. ಆಕಸ್ಮಿಕವಾಗಿ ಎದುರಿಗೆ ಲಿಫ್ಟ್ ಕೇಳುತ್ತಿದ್ದ ಸಿದ್ಧಾರ್ಥನನ್ನು ನೋಡಿ ಬೈಕ್ ನಿಲ್ಲಿಸಿದನು. ಸಿದ್ಧಾರ್ಥ ಬಂದು ಬೈಕ್ ಹತ್ತಿದನು.

ಸಿದ್ಧಾರ್ಥ: thank you very much ಸಾರ್. ನಮ್ ಹುಡುಗಿ ಆಗಲೇ ಬನಶಂಕರಿ ದೇವಸ್ಥಾನದ ಹತ್ತಿರ ಬಂದು ನಿಂತಿದ್ದಾಳೆ. ATM ಇಂದ ಹಣ ಡ್ರಾ ಮಾಡಬೇಕಿತ್ತು, ಆದರೆ ಎಲ್ಲಾ ಕಡೆ ‘No Cash’ ಬೋರ್ಡು, Uber ಕರೆಯೋಣ ಅಂದರೆ mobile switch off ಆಗಿದೆ. ಟೈಮಿಗೆ ಸರಿಯಾಗಿ ದೇವರು ಥರ ಸಿಕ್ರಿ ನೋಡಿ ನೀವು. Thank you.

ಶಿವ: ಇರಲಿ ಬಿಡಿ, ಅದರಲ್ಲೇನಿದೆ?

ಸಿದ್ಧಾರ್ಥ: ಸಾರ್,ದಯವಿಟ್ಟು ತಪ್ಪು ತಿಳ್ಕೋಬೇಡಿ, ನಿಮ್ದು ದಾವಣಗೆರೆ ನಾ?

ಶಿವ: ಹೌದು, ನಿಮಗೆ ಹೇಗೆ ಗೊತ್ತಾಯಿತು?

ಸಿದ್ಧಾರ್ಥ: ಹಾ, ಅದು KA 17 ಬೋರ್ಡ್ ನೋಡಿದ್ನಲ್ಲಾ, ಅದಿಕ್ಕೆ ಕೇಳಿದೆ.

ಶಿವ: ಹಾ ಹೌದು, ಇದು ನಾನು ಕಾಲೇಜಿನಲ್ಲಿ ಇದ್ದಾಗ ತಗೊಂಡಿದ್ದು, BIET, EC, 2012 batch. ನೀವು ಏನು‌ ಮಾಡ್ಕೊಂಡಿದ್ದೀರಾ?

ಸಿದ್ಧಾರ್ಥ: ನಮ್ದೂ ಕೂಡ ದಾವಣಗೆರೆ ಸಾರ್, ಅಂದರೆ ಒಂದು ಆಗಲೇ ಬೆಂಗಳೂರಿಗೆ ಶಿಫ್ಟ್ ಆಗಿ ಎರಡು ವರ್ಷ ಆಯ್ತು. ಸದ್ಯ ನಮ್ ಹುಡುಗರ ಜೊತೆ start up ಅಲ್ಲಿ work ಮಾಡ್ತಾ ಇದ್ದೀನಿ‌.

ಶಿವ: ಆಗಲೇ ನಮ್ ಹುಡುಗಿ ಅಂತ ಏನೋ ಹೇಳಿದ್ರಿ.

ಸಿದ್ಧಾರ್ಥ: ಅಯ್ಯೋ ಶಿವಾ, ಅದು ಇನ್ನೊಂದು ಕಥೆ, ನಮ್ ಲವ್ ದು ಈಗ ಸ್ವಲ್ಪ ಪ್ರಾಬ್ಲಮ್ ಆಗಿದೆ. ಅದಿಕ್ಕೆ ದೇವಿಗೆ ಕೈ ಮುಗಿದು ಬರೋಣ, ಬೇಗ ಬಾ ಅಂದಿದ್ದಳು, ನಾವು ನೋಡಿದ್ರೆ ಇಲ್ಲಿ ಟ್ರಾಫಿಕ್ ಅಲ್ಲಿ ಸಿಕ್ಕಾಕ್ಕೊಂಡಿದ್ದೀವಿ‌.

ಶಿವ: Don’t worry boss, shortcut ಗೊತ್ತು, ಬೇಗ ಹೋಗ್ತೀವಿ.

ಸಿದ್ಧಾರ್ಥ: Thanks boss, BTW, ನಿಮ್ ಹೆಸರು? ಎಲ್ಲಿ work ಮಾಡ್ತಾ ಇದ್ದೀರಾ?

ಶಿವ: ನಾನು ಶಿವ, ಇಲ್ಲೇ ಒಂದು MNC ಅಲ್ಲಿದ್ದೀನಿ, ಸ್ವಿಚ್ ಆಗೋ ಪ್ಲಾನ್ ಇದೆ, not sure!

ಸಿದ್ಧಾರ್ಥ: ಹೌದಾ, ಸೂಪರ್, ಯಾವ್ platform ನಿಮ್ಮದು?

ಶಿವ: public relations.

ಸಿದ್ಧಾರ್ಥ: ವಾವ್ ಸಾರ್, ತಪ್ಪು ತಿಳ್ಕೋಬೇಡಿ, coincidentally, ಆಗಲೇ ಹೇಳಿದ್ನಲ್ಲಾ, ನಾನು ನಮ್ ಹುಡುಗರು start up ಮಾಡ್ತಾ ಇದ್ದೀವಿ ಅಂತ, redOt ಅಂತ website ಎಲ್ಲಾ ಆಗಿದೆ. ನಮಗೆ ನಮ್ ಕಂಪನಿ ಏನು, target clients ಎಲ್ಲಾ ಗೊತ್ತು, ಆದರೆ ಹೆಂಗೆ approach ಮಾಡಲು ಹೋದರೂ ಎಲ್ಲಾ ಉಲ್ಟಾ ಹೊಡಿತಾ ಇದೆ. ತಲಾ ಎರಡು ಲಕ್ಷ ಹಾಕಿದ್ದೀವಿ ಆಗಲೇ. I just said this to show we’re serious! We really could use your help.

ಶಿವ: ….

ಸಿದ್ಧಾರ್ಥ: ಇವನ್ಯಾರಪ್ಪಾ, ಈಗ ಇನ್ನೂ ಲಿಫ್ಟ್ ಕೇಳಿದ್ದಾನೆ, ಆಗಲೇ job offer ಮಾಡ್ತಾ ಇದ್ದಾನೆ ಅಂದ್ಕೊಂಡ್ರಾ? ಈಗ ಸದ್ಯಕ್ಕೆ ನಿಮ್ಮ ಕಾರ್ಡ್ ನನಗೆ‌ ಕೊಡಿ, ನಮ್ಮ ಕಂಪನಿ ಸಂಪೂರ್ಣ ಪ್ರೊಫೈಲ್ ನಿಮಗೆ ಮೇಲ್ ಮಾಡ್ತೀನಿ. ಇಷ್ಟ ಆದರೆ ಮಾತ್ರ ಫೋನ್ ಮಾಡಿ.

(ಬನಶಂಕರಿ ದೇವಸ್ಥಾನ ಬಂತು)

ಶಿವ: ಇದು ನನ್ನ ಕಾರ್ಡು, ನೀವು ಮೇಲ್ ಮಾಡಿ, ನಾನು ಯಾವುದಕ್ಕೂ ನೋಡಿ ಹೇಳ್ತೀನಿ.

ಸಿದ್ಧಾರ್ಥ: Thank you so much, see you soon!

***

ಕಥೆ ಆದ ಮೇಲೆ ನೀತಿ ಬಂದರೆ ಅದು ನೀತಿಕಥೆ, ಪ್ರಶ್ನೆ ಬಂದರೆ ಅದು ವಿಕ್ರಮ ಮತ್ತು ಬೇತಾಳನ ಕಥೆ. ಇಲ್ಲಿ ನೀವೇ ರಾಜ ವಿಕ್ರಮಾದಿತ್ಯ, ನಾನೇ ಬೇತಾಳ. ಹಿಂದೆ ಮುಂದೆ ಗೊತ್ತಿಲ್ಲದೆ ಕಥೆ ಓದಿದ್ದೀರಾ, ಈಗ ನಾನು ಕೇಳುವ ಪ್ರಶ್ನೆಗೆ ಉತ್ತರಿಸಬೇಕು, ಇಲ್ಲಾಂದ್ರೆ ಗೊತ್ತಲ್ಲಾ ನಿಮ್ಮ ಮೊಬೈಲ್ / ಟ್ಯಾಬ್ಲೆಟ್ / ಗ್ಯಾಜೆಟ್ ಸಿಡಿದು ನೂರು ಚೂರಾಗುತ್ತದೆ (just kidding!)

The question is: ಬೆಂಗಳೂರಿನಲ್ಲಿ ಪ್ರತಿ ದಿನ ಓಡಾಡುವವರಿಗೆ ಲಿಫ್ಟ್ ಕೊಡೋದು, ತಗೊಳ್ಳೋದು ಎರಡೂ ಹೊಸತಲ್ಲ, ದೊಡ್ಡ ವಿಷಯ ಅಲ್ಲವೇ ಅಲ್ಲ. ಎಷ್ಟೋ ಸಲ, ಆ ರೀತಿ ಲಿಫ್ಟ್ ಕೊಡುವವರು ತಗೊಳ್ಳುವವರು small talks ಇಂದ awkward ಅನಿಸಿ ಮಾತು ಆಡದಿರುವುದೂ ಇದೆ! ಮೇಲಿನ ಕಥೆಗೆ ಅನುಸಾರವಾಗಿ ಕೇಳೋದಾದರೆ, ಶಿವ ಕಂಪನಿ ಸ್ವಿಚ್ ಮಾಡಬೇಕು ಅಂತ ಫಿಕ್ಸ್ ಆಗಿದ್ದ, ಆದರೆ ಮುಂದೆ ಏನು, ಎಲ್ಲಿ ಎಂಬುದರ ಬಗ್ಗೆ ಯೋಚಿಸಿರಲಿಲ್ಲ. ಆಕಸ್ಮಿಕವಾಗಿ ದಾರಿಯಲ್ಲಿ ಸಿಕ್ಕ ಸಿದ್ಧಾರ್ಥನ ಬಳಿ job offer ಇತ್ತು. ಶಿವನಿಗೆ ಬೇರೆ ಕಂಪನಿಯ ಅಗತ್ಯ ಎಷ್ಟಿತ್ತೋ, ಸಿದ್ಧಾರ್ಥನ ಕಂಪನಿಗೆ ಹೊಸ employee ಅಗತ್ಯ ಅಷ್ಟೇ ಇತ್ತು. Coincidentally ಇಬ್ಬರೂ ಸಿಕ್ಕರು. ಆನಂತರ ಶಿವ ಸಿದ್ಧಾರ್ಥನ ಕಂಪನಿ ಸೇರಿದನೋ‌ ಇಲ್ಲವೋ ಅದು ಬೇರೆ ಮಾತು. ಆದರೆ, ಮೇಲಿನ ಕಥೆ ತುಂಬಾ rare happening ಗಳಲ್ಲಿ ಒಂದು. Job / Employee ಬೇಕಿದ್ದವರು ಇಂತಹ rare happening ಗಳನ್ನು ನಂಬಿಕೊಂಡು ಇರಲಾಗದು. ಅದಕ್ಕೆ ಅಂತಲೇ naukri, shine, monster ಜಾಲತಾಣಗಳಿವೆ. ಅದರ ಬಗ್ಗೆ ನಿಮಗೆ ಗೊತ್ತಿಲ್ಲದ್ದು ಏನಿಲ್ಲ ಬಿಡಿ. “ಓ ನಿಮ್ ಕಡೆ ಮದುವೆ email ಅಲ್ಲೇ ಆಗುತ್ತಂತೆ, ನಮ್ ಕಡೆ female ಇದ್ದರೆ ಆಗುತ್ತಪ್ಪಾ” ಅನ್ನೋ ಹಳೇ ಜೋಕ್ ತೀರಾ ನೀರಸ ಅನಿಸುವಷ್ಟು ಮುಂದಕ್ಕೆ ಹೋಗಿದೆ ಕಾಲ‌ ಈಗ. ಜಾಗತೀಕರಣದ ಬಿಸಿಯಲ್ಲಿ ‘ವಸುಧೈವ ಕುಟುಂಬಕಂ’ ಕಾನ್ಸೆಪ್ಟ್ ಈಗ ‘this world is a tiny global village’ ಎನ್ನುವ ಮಟ್ಟಿಗೆ upgrade ಆಗಿದೆ. ಈ ನಿಟ್ಟಿನಲ್ಲಿ ನಮ್ಮದೂ ಒಂದು ಇರ್ಲಿ ಅಂತ ಮಾಡಿರೋ ಒಂದು ಜಾಲತಾಣದ ಪರಿಚಯ ಅಂಕಣ ಇದು: ಸುತ್ತಾಕ್ಕೊಂಡು ಬಂದಿದ್ದಕ್ಕೆ ಕ್ಷಮೆಯಿರಲಿ, ಮುಂದೆ ಓದಿ.

flixoye.com

Rap ಸಾಂಗ್ ಇಂದ Pop ಸಾಂಗ್ ವರೆಗೆ, award winning ಕಿರುಚಿತ್ರಗಳಿಂದ box office record ಮಾಡಿರುವ feature film ಗಳವರೆಗೆ ದಕ್ಷಿಣ ಭಾರತದ ಎಲ್ಲಾ ಭಾಷೆಯ ಮನೋರಂಜನಾ ವಿಷಯದ ಮಾಹಿತಿ ಒಂದೇ ಜಾಗದಡಿ ಲಭ್ಯ. ಈ ಕುರಿತು ಈಗಾಗಲೇ ಹಲವು ಜಾಲತಾಣಗಳು ಇವೆಯಾದರೂ ಆಗಲೇ ಹೇಳಿದಂತೆ ನಮ್ಮದೂ ಒಂದು ಇರಲಿ ಅಂತ ಈ ಸಾಹಸಕ್ಕೆ ಕೈ ಹಾಕಿದ್ದೇವೆ. ನಿಮಗೆ ಈ ರೀತಿಯ update ಗಳಹ ಬೇಕಿದ್ದರೆ ನಮ್ಮ ಚಾನಲ್ ನಲ್ಲಿ ಬೇಕಿರುವ ಮಾಹಿತಿ ಸಿಗುತ್ತದೆ. ಒಂದು ವೇಳೆ ನೀವು ಚಿತ್ರ ತಂಡದವರೇನಾದರೂ ಆಗಿದ್ದರೆ ನಮ್ಮನ್ನು ಸಂಪರ್ಕಿಸಿ ನಿಮ್ಮ ಚಿತ್ರವನ್ನು promote ಮಾಡಬಹುದು, dual ಲಾಭ. ಹೆಚ್ಚಿನ ಮಾಹಿತಿಗೆ ಕೆಳಗಿನ ಕೊಂಡಿಯನ್ನು ಕ್ಲಿಕ್ಕಿಸಿ.

http://flixoye.com/why-flixoye.php

ಇದೆಲ್ಲದಕ್ಕೂ ನಿಮಗೂ ಸಂಬಂಧವೇ ಇಲ್ಲ ಅಂತಾದರೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮ facebook ಪೇಜ್ ಲೈಕ್ ಮಾಡಿ, ಸರಿ ದಾರಿಯಲ್ಲಿ ಹೋಗ್ತಾ ಇದ್ದೀವಿ ಅಂತ ನಮಗೂ ಒಂಚೂರು confidence ಬರುತ್ತೆ.

https://www.facebook.com/flixoyeIN/

P.s: ಬೇತಾಳನ ಥರ ಒಂದು ಪ್ರಶ್ನೆ ಕೇಳುತ್ತೇನೆ ಅಂದೆ, ಪ್ರಶ್ನೆ ಏನು ಅಂತ ಎಲ್ಲಾದರೂ ಗೊತ್ತಾಯ್ತಾ?!?

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..