- By Guest Writer
- Friday, September 16th, 2016
Pramod ಮರವಂತೆ
100% ಸತ್ಯ
ಮದುವೆಯಾದ ಮೇಲೆ
ಗಂಡನಾಗುವನು ಅಪ್ಪ
ಹೆಂಡತಿಯಾಗುವಳು ದಪ್ಪ
ಸಿಡಿ-ಮುದ್ದು
ನನ್ನ ಸೌಮ್ಯತೆಗೆ
ಬೆಂಕಿ ಹಚ್ಚಿ
ಅದರೊಳಗೆ
ಸಿಡಿಮದ್ದು ಎಸೆದು
ದೂರ ಓಡಿ ಕಿವಿಮುಚ್ಚಿ
ನಿಂತಳವಳು..
ಹಿಂಗಾಲು ಮಳೆ
ಜಡಿ ಮಳೆಯಲಿ
ಅವಳ ಹಿಂದೆ ಹೋದ
ಅವನಿಗೆ ಸಿಕ್ಕಿದ್ದು
ಅವಳ ಹವಾಯಿ
ಚಪ್ಪಲಿಯಿಂದ ಸಿಡಿದ
ಕೆಸರಿನ ಸ್ನಾನ ಮಾತ್ರ…
BAR ವಿಷ್ಯ್
ಕುಡುಕನ ಕೈಯಲ್ಲಿ
ಬಾಟಲಿಯ ಜೊತೆಗೆ
ಬಾರ್ ಮಾಲಿಕನ
ಭವಿಷ್ಯವೂ ಇರುವುದನ್ನು
ಯಾರೂ ಗಮನಿಸಲಿಲ್ಲ
ಹೆಗ್ಗಳಿಕೆ
ಹೆಣ್ಣನ್ನು ಹೆಣ್ಣು
ಹೊಗಳುವುದು ಕಮ್ಮಿ
ಹೊಗಳಿದರೂ ಅದು
ಮಗಳನ್ನು ಅವಳ ಮಮ್ಮಿ
ಪಿಂಪಲ್
ಅವಳ ಮುಂಗುರುಳಿನಿಂದ
ಜಾರಿಬಿದ್ದ ಹೊಟ್ಟೊಂದು
ನನಗೆ ಮೊಡವೆಯಾಗಿ ಕಾಡಿತು
ಮರೆವು
ಮೊದಲು ದಿಗಂಬರನಾಗಿ
ಬಟ್ಟೆ ಇಲ್ಲದೇ ಓಡಾಡುತ್ತಿದ್ದ ಮನುಷ್ಯ
ಮುಚ್ಚಿಕೊಳ್ಳಬೇಕಾದ ಭಾಗಗಳನ್ನು
ಮುಚ್ಚಿಕೊಳ್ಳಲು ಕಲಿತ
ಆದರೆ..ಬಾಯಿಯನ್ನೇ ಮರೆತ..
ಕಲ್ಪನೆ
ಕಾಣದ ಕಣ್ಣೀಗೂ
ಪ್ರಪಂಚವೆನ್ನೋ ಪಟ್ಟಣ
ಅಂದವಾಗಿ ಕಾಣಲು
ಕಲ್ಪನೆಯೇ ಕಾರಣ
ಕಣ್ಣ ಮುಚ್ಚಿ
ಕತ್ತಲಲ್ಲೂ
ಕಾಣುವುದೆಂದರೆ
ಕನಸು ಮಾತ್ರ
ಭಕ್ತಿ
ದೇವರಿಗೆಂದು
ಹಣ್ಣು ಹಂಪಲು ತಂದರು
ಪೂಜೆಯ ನಂತರ
ತಾವೇ ತಿಂದರು
ಆಹಾ…!!!
ಮುಪ್ಪಿನಲಿ ವಿವಾಹ
ಏನೋ ಒಂದು ತರಹ
ಆದಾಗ ನೀರಿನ ದಾಹ
ಕುಡಿದ ಹಾಗೆ ಬಿಸಿ ಚಹಾ
ಪಾ ಆ ಆ ಆ..ಪ
ತನ್ನ ಪ್ರೇಯಸಿಗೆ
ಕೈಕೊಟ್ಟವನಿಗೆ ಸಿಕ್ಕಿದ್ದು
ಇನ್ನೊಬ್ಬರ ಪ್ರೇಯಸಿಯ
ಮದುವೆಯಾಗುವ ಶಾಪ…
ಕಚಗುಳಿ
ನಿನ್ನ ತಲೆಯ ಮೇಲೆ
ಕೈಯಾಡಿಸಿದಾಗಲೆಲ್ಲಾ
ಹೇನುಗಳು ನನ್ನ ಬೆರಳುಗಳಿಗೆ
ಕಚಗುಳಿಯಿಟ್ಟು ಓಡುತ್ತಿವೆ
ನಿರುದ್ಯೋಗ
ಓ ದೇವರೆ
ನಿರುದ್ಯೋಗದ
ತಾಪದಿಂದ
ಬರಡಾಗಿರುವ
ಈ ಜೀವದ ಮೇಲೆ
ಚಿಮುಕಿಸು ನೀನು
ಕಾಯಕವೆಂಬ ಚಿಲುಮೆ
ನೋಡು……..
ಈಗ ನೀನೂ ಹೇಳಬೇಡ
ಕಳುಹಿಸಲು ನನ್ನ ರೆಸ್ಯೂಮೆ