1269

ಸಾಧಾರಣ ಲೈಫಲ್ಲಿ ಸಂತಸ ತರುವ ಸಿಲ್ಲಿ ಚಟುವಟಿಕೆಗಳು

  • By Arun Kumar PT
  • Sunday, July 30th, 2017
  • Things You Should Know

ನಮ್ ಲೈಫು ಒಂಥರಾ ಸ್ಕ್ರಿಪ್ಟೆಡ್ ರಿಯಾಲಿಟಿ ಷೋ ಇದ್ದಂಗೆ, ನಮ್ಮನ್ನು ಮಾನಿಟರ್ ಮಾಡುವ ಭಗವಂತನೇ ಬಿಗ್ ಬಾಸ್. ತುಂಬಾ ಹಳೆಯ ವೇದಾಂತ ಆಯಿತಾದರೂ ನಿಜವೇ ಅನ್ನಿ. ಯಾಕೆಂದರೆ ವೇದಾಂತ ಎಂದಿಗೂ ವೈನ್ ಇದ್ದ ಹಾಗೆ, ಅದು ಹಳೆಯದಾದಂತೆ ಅದರ ಕಿಕ್ ಜಾಸ್ತಿ, ಮತ್ತು ಇನ್ನೊಂದು ಸ್ವಾರಸ್ಯಕರ ವಿಷಯ ಏನಪ್ಪಾ ಅಂದರೆ ಈ ವೈನ್ ಅಥವಾ ವೇದಾಂತದ ಕಿಕ್ ತಲೆಗೇರಿದವರ ಯೋಚನಾ ಲಹರಿ ಇನ್ನೊಬ್ಬರಿಗೆ ಬೇಗ ಅರ್ಥವಾಗುವುದಿಲ್ಲ. ಸ್ಕ್ರಿಪ್ಟೆಡ್ ಅಂದರೆ, ನಾವು ಎಲ್ಲಿ, ಯಾರ ಮನೆಯಲ್ಲಿ ಹುಟ್ಟುತ್ತೇವೆ, ಏನು ಉದ್ಯೋಗ ಪಡೆಯುತ್ತೇವೆ, ಯಾವಾಗ ಸಾಯುತ್ತೇವೆ ಎಂಬಿತ್ಯಾದಿ ಹೈಲೈಟ್ಸ್ ಗಳನ್ನು ಅವನು ಬರೆದಿರಬಹುದು, ಆದರೆ ಚಿಕ್ಕ ಪುಟ್ಟ ನಿರ್ಧಾರಗಳೆಲ್ಲವೂ ನಮ್ಮ ಸ್ವಂತದ್ದೇ ಅಟಗಿರುತ್ತದೆ. ಹಾಗಾಗಿ, at any point of time, ನಮ್ಮ ಲೈಫು ನಮ್ಮದೂ ಹೌದು, ಪರಮಾತ್ಮನದೂ ಹೌದು. ಜಾಸ್ತಿ ಕೊರೆಯದೆ ಬದುಕಿನ ಸಿಲ್ಲಿ ವಿಷಯಗಳ ಬಗ್ಗೆ ಹೇಳಿಬಿಡುತ್ತೇನೆ. ಲೈಫಲ್ಲಿ ಒಮ್ಮೊಮ್ಮೆ ಕಷ್ಟ ಬಂದಾಗ, ನೋವಾದಾಗ ಫ್ರೆಂಡ್ಸು, ಫ್ಯಾಮಿಲಿ ಎಲ್ಲಾ ಇರ್ತಾರಲ್ವಾ, ಅವರ ಸಹಾಯ ಪಡೆದು ಸಹಜ ಜೀವನಕ್ಕೆ ವಾಪಸ್ ಬರಬಹುದು. ಆದರೆ ನಗುವೂ ಇಲ್ಲದ, ಅಳುವೂ ಇಲ್ಲದ, ಸಾಧರಾಣ ಕ್ಷಣಗಳಲ್ಲಿ ನಗು / ಸಂತಸ ತರಿಸಬಹುದಾದ 10 ಸಿಲ್ಲಿ ಸಿಲ್ಲಿ ಚಟುವಟಿಕೆಗಳು ಇಲ್ಲಿವೆ. Underrated pleasure activities ಅಂದರೂ ತಪ್ಪಾಗಲ್ಲ ಬಿಡಿ. ಇವನ್ನು ಓದಿ, ನೀವು ಇಂತಹ ಎಷ್ಟು ಸಿಲ್ಲಿ ಕ್ಷಣಗಳಲ್ಲಿ ಸಂತಸ ಕಂಡಿದ್ದೀರಾ ಎಂದು ಹೇಳಿ.

1. ಟೈರ್ ಗಾಳಿ ಬಿಡುವುದು

2. ಹಳ್ಳಿಯಲ್ಲಿ ಅಡ್ಡಾಡುವಾಗ ಬಾವಿ ಕಂಡರೆ, ಎಷ್ಟು ನೀರು ಇದೆ ಅಂತ ಇಣುಕಿ ನೋಡೋದು

3. ಶಾಲಾ ವಾಹನದ ಕಿಟಕಿಯಿಂದ ಹಾಯ್ ಮಾಡುವ ಪುಟ್ಟ ಮಕ್ಕಳಿಗೆ ಹಾಯ್ ಮಾಡುವುದು

4. ಹಸಿವಾಗಿದೆ ಊಟ ಹಾಕೋ BVC ಅಂತ ಬೆಕ್ಕು ಹತ್ತಿರ ಬಂದು ಮಿಯಾವ್ ಅಂದಾಗ ಅದಕ್ಕೆ ತಿರುಗಾ ಮಿಯಾವ್ ಅನ್ನೋದು

5. Photo credits, caption credits, selection credits ಎಲ್ಲವೂ ಕೊಟ್ಟಿರುವ ಫ್ರೆಂಡ್ ಫೋಟೋಗೆ ಹ್ಹ ಹ್ಹ ರಿಯಾಕ್ಷನ್ ಕೊಡೋದು.

6. ಗರ್ಲ್ ಫ್ರೆಂಡ್ ಗೆ “ಏನ್ ಈ ನಡುವೆ ದಪ್ಪ ಆಗಿದ್ದೀಯಲ್ಲಾ ಅನ್ನೋದು” (ತುಂಬಾ ಡೇರಿಂಗ್ ಕೆಲಸ, ಯಾರೂ ಪ್ರಯತ್ನ ಪಡದಿರುವುದಾಗಿ ಕೋರಿದೆ)

7. ಅಮ್ಮ ಅಡುಗೆ ಮಾಡಿ ಮುಗಿಸುವ ಹೊತ್ತಿಗೆ ಕೊನೆಯಲ್ಲಿ ಸೌಟು ತಿರುಗಿಸಿ, ನಾವೇ ಅಡುಗೆ ಮಾಡಿದ್ದು ಎಂದು ಹೇಳಿಕೊಳ್ಳುವುದು

8. ಆಟೋ ಕರೆದು, ಮಲ್ಲೇಶ್ವರಕ್ಕೆ ಬರ್ತೀರಾ ಅಂತ ಕೇಳಿ, ಹ್ಞೂಂ ಅಂದರೆ ಆಯ್ತು ಹೋಗಿ ನಾನು ಬಸ್ಸಲ್ಲೇ ಬರ್ತೀನಿ ಅಂತ ಟ್ರಾಲ್ ಮಾಡೋದು (why should only auto drivers have fun by rejecting us?)

9. ಫ್ರೆಂಡ್ಸು ಫೋನ್ ಮಾಡಿದಾಗ GF / BF ಜೊತೆ ಮಾತನಾಡುತ್ತಿರುವ ಹಾಗೆ ನಟಿಸಿ, ಆಮೇಲೆ ನಿಜ ಹೇಳಿ ಫೋನ್ ಅಮ್ಮನ ಕೈಗೆ ಕೊಡೋದು

10. ಹೊಗೆಯಾತಿ ಹೊಗೆ ಚಿತ್ರಗಳನ್ನು ಥಿಯೇಟರ್ ಅಲ್ಲೇ ನೋಡಿ ಹ್ಹ ಹ್ಹ ಹ್ಹ ಎಂದು ಉಲ್ಡಾಡಿಕೊಂಡು ನಗೋದು

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..