- By Bhavatarini Rao
- Thursday, March 7th, 2019
ಈ arrange marriage ಅಲ್ಲಿ ಎರಡೂ ಕಡೆಯವರು ತುಂಬಾ expectations ನ ಇಟ್ಕೊಂಡಿರ್ತಾರೆ.. ನಾವು ತುಂಬಾ Expectations ಇಟ್ಕೊಂಡಿದ್ವಿ starting ಅಲ್ಲಿ.. ಹುಡುಗ ಹಂಗಿರ್ಬೇಕು.. ಹಿಂಗಿರ್ಬೇಕು. . ಅಂತೆಲ್ಲಾ…
ಆಮೇಲೆ ಬರ್ತಾ ಬರ್ತಾ.. ಹುಡುಗುರನ್ನ ನೋಡ್ತಾ ನೋಡ್ತಾ… ಒಂದೊಂದಾಗೇ compromise ಆಗ್ತಾ ಬಂದ್ವಿ.. like.. ‘ಸ್ವಂತ ಮನೆ ಇಲ್ಲದಿದ್ರೆ ಏನಂತೆ.. ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡೋದು ಅಂದ್ರೆ ಏನ್ ತಮಾಷೆನಾ!! ಹುಡುಗ ಒಳ್ಳೆಯವನಾಗಿದ್ರೆ ಸಾಕು ’ ‘car bike.. ಎಲ್ಲಾ ಯಾವಾಗಾದ್ರೂ ತೊಗೋಬಹುದು.. ಅದ್ಯೆಲ್ಲ ಇಲ್ಲ ಅಂದ್ರೂ ಪರವಾಗಿಲ್ಲ… ಹುಡುಗ ಒಳ್ಳೆಯವನಾಗಿದ್ರೆ ಸಾಕು ’… ಹೀಗೇ ಇದು ಎಲ್ಲಿ ವರೆಗೂ ಬಂತು ಅಂದ್ರೆ.. ‘ಅಯ್ಯೋ. ಹುಡುಗ height ಇಲ್ಲಾಂದ್ರೆ ಏನಂತೆ.. ಇವಳಿಗಿಂತಾ ಕುಳ್ಳು ಇದ್ರೂ ಪರವಾಗಿಲ್ಲ.. ಹುಡುಗ ಒಳ್ಳೆಯವನಾಗಿದ್ರೆ ಸಾಕು..’ ಹ್ಹ ಹ್ಹ..!!
ಏನಂದ್ರೂ ನಾನು ಎರಡು ವಿಷಯದಲ್ಲಿ compromise ಆಗಲಿಲ್ಲ..
1. ಹುಡುಗ ಚೆನ್ನಾಗಿ ಓದಿರಬೇಕು.. masters ಮಾಡಿರಬೇಕು.. ಒಳ್ಳೆ ಕೆಲಸದಲ್ಲಿ ಇರ್ಬೇಕು..
2. ಹುಡುಗನ family ತುಂಬಾ orthodox ಇರಬಾರದು..
ಅಂತೂ ಇಂತೂ ಹತ್ತಿರದವರಿಂದ ಒಂದು proposal ಬಂತು.. ನಾವು ಹುಡುಗನ ಬಗ್ಗೆ research ಮಾಡಿದ್ವಿ..
ಒಳ್ಳೆ ಕೆಲಸ, ಹುಡುಗ ಮಣಿಪಾಲ್ ಅಲ್ಲಿ MS ಮಾಡಿದ್ದ.. ಜಯನಗರ ಅಲ್ಲಿ ಸ್ವಂತ flat . .i20 ಕಾರು.. ಮನೆ ಕಡೆನೂ ಕಿರಿಕ್ ಇದ್ದಂಗೆ ಕಾಣಲಿಲ್ಲ.. ನಮ್ ಮನೆಲೆಲ್ಲಾ full ಜೋಶ್.. ಖುಷಿ.. ಅಯ್ಯೋ..ಎಂತಾ ಒಳ್ಳೆ ಸಂಬಂಧ.. “ನೀನು jackpot ಹೊಡೆದೆ ಕಣೆ” ಅಂತ ಶುರು ಹಚ್ಕೊಂಡ್ಬಿಟ್ಟಿದ್ರು.. ನನ್ನ cousins ಎಲ್ಲಾ.. “ಜಯನಗರದ jackpot ಜಾಕಿ..” ಅಂತ ನಮ್ಮ whatsapp group name ಏ change ಮಾಡಿಬಿಟ್ಟಿದ್ರು..
ಒಂದು ಭಾನುವಾರ ವಿಜಯನಗರದಿಂದ ಜಯನಗರಕ್ಕೆ ಪ್ರಯಾಣ ಬೆಳೆಸಿದ್ವಿ . . ಬೆಂಗಳೂರು traffic ಬಗ್ಗೆ ಗೊತ್ತಲ್ಲ.. ನಾವು ಹೋಗೋ ಸಮಯಕ್ಕೆ ಅದ್ಯೆನೋ ರಾಹುಕಾಲ ಶುರು ಆಗ್ಬಿಟ್ಟಿತಂತೆ.. ಹುಡುಗನ ಕಡೆಯವರು ಫೋನ್ ಮಾಡಿ.. ಇನ್ನು 2 ಗಂಟೆ ಬಿಟ್ಟು ಬನ್ನಿ ಅಂದ್ರು.. ನಾವು ಜಯನಗರಕ್ಕೆ ಆಗಲೇ ಬಂದಾಗಿತ್ತು.. obviously ಎಲ್ಲರೂ ಉರ್ಕೊಂಡ್ವಿ… ಇಲ್ಲೇ ಎಲ್ಲಾದ್ರೂ mall ಅಲ್ಲಿ timepass ಮಾಡೋಣ ಅಂದೆ ನಾನು.. ನಮ್ಮಪ್ಪ ಕೇಳಬೇಕೇ!! ಇಲ್ಲೇ ನನ್ನ friend ಮನೆ ಇದೆ.. ಹೋಗೋಣ ಅಂತ ಕರ್ಕೊಂಡ್ ಹೋದ್ರು… I always believe that universe gives u some signs..ಯಾಕೋ ಈ ಹುಡುಗನ್ನ ನಾನು ನೋಡಬಾರದು ಅಂತ universe ನನಗೆ ಹೇಳ್ತಿದೆ ಅನ್ನಿಸ್ತು.. (The Alchemist by Paulo Coelho ಓದಿ.. ನಿಮಗೂ universe ಮಾತು ಕೇಳಿಸತ್ತೆ ಆಮೇಲೆ ! )
But u know .. I hushed my inner voice.. I did not listen to the universe.. 2 hour ರಾಹುಕಾಲ ಮುಗಿಯೋದ್ರೊಳಗೆ ನನ್ನ makeup ಎಲ್ಲ ಡಮಾರ್ ಆಗಿತ್ತು.. ಆ ಶೆಕೆಗೆ ಆಪ್ತಮಿತ್ರ ನಾಗವಲ್ಲಿ ತರ ಕೂದಲೆಲ್ಲಾ ಕೆದರಿತ್ತು.. ಇನ್ನೇನು ಹೊರಡ್ತೀವಿ ಅಂದಾಗ ಅಪ್ಪನ ಫ್ರೆಂಡ್ ನನ್ನ ನೋಡಿ ಸ್ವಲ್ಪ ಬೆಚ್ಚಿ ಬಿದ್ರು.. fresh ಆಗಿ ಹೋಗಬಹುದಾಗಿತ್ತು ಅಂದ್ರು.. ಇದಕ್ಕೇ ಕಾಯ್ತಾ ಇದ್ದೆ ನಾನು.. ಹೇಗೋ ಮತ್ತೆ ready ಆಗಿ.. ನನ್ನ ನೋಡಿ ಹೆದರಿದ uncle ಗೆ thanks ಹೇಳಿ ಹೊರಟ್ವಿ..
ಅಂತೂ ಹುಡುಗನ ಮನೆಗೆ entry ಕೊಟ್ವಿ.. ಮನೆ ತುಂಬಾ ಚೆನ್ನಾಗಿತ್ತು.. ಹುಡುಗನೂ ಸ್ವಲ್ಪ ಇಷ್ಟ ಆದ ನನಗೆ.. ಹುಡುಗನ flat ನ ಅಕ್ಕ ಪಕ್ಕ flat ಅಲ್ಲಿ ಹುಡುಗನ ಚಿಕ್ಕಪ್ಪ, ದೊಡ್ಡಪ್ಪ and family ಎಲ್ಲಾ ಇದ್ರು.. ಎಲ್ಲರೂ ಬಂದು ಮಾತಾಡಿಸಿದ್ರು.. ಎಲ್ಲರಿಗೂ ಖುಷಿ ಆಯ್ತು.. ಹುಡುಗನ ಕಡೆ ಇಂದ deal ಓಕ್ ಆದಂಗೆ ಅನ್ನಿಸ್ತು.. ಇನ್ನೇನು ಈ gents ರಾಜಕೀಯದ ಬಗ್ಗೆ.. ladies serial… ಭಜನಾ ಮಂಡಳಿ ಬಗ್ಗೆ ಮಾತು ಶುರು ಹಚ್ಕೋತಾರೆ ಅನ್ನೋ time ಗೆ.. ನಾನು ನನ್ನ ತಮ್ಮ “ಹೋಗೋಣ” ಅಂದ್ವಿ.. ನಮ್ಮಿಬ್ಬರ ಒತ್ತಾಯಕ್ಕೆ ಬೇಗ ಹೊರಟಿದ್ದಾಯ್ತು.. ಓಹ್.. ಹೇಳೋದೇ ಮರೆತಿದ್ದೆ.. ಹುಡುಗ gap ಅಲ್ಲಿ ನನ್ನ number ತೊಗೊಂಡಿದ್ದ.. ಇನ್ನೂ ಅವರ ಮನೆಯಿಂದ ಹೊರಗೆ ಕಾಲಿಟ್ಟಿಲ್ಲ.. ಆಗಲೇ.. bye .. take care ಮೆಸೇಜ್ ಬಂದಾಗಿತ್ತು.. !!
ನಮ್ ಮನೇಲಿ discussion ಶುರು ಆಯ್ತು.. ಎಲ್ಲರಿಗೂ almost Okay ಆಗಿತ್ತು.. ನಮ್ universe ಯಾಕ್ ಹಾಗ್ ಹೇಳ್ತು ಅಂತ ತಲೆಗೆ ಹುಳ ಬಿಟ್ಕೊಂಡಿದ್ದ ನಾನು.. “ಹುಡುಗನ್ನ ಹೊರಗಡೆ meet ಮಾಡ್ತೀನಿ” ಒಂದ್ ಸಲ ಅಂದೆ.. ಎಲ್ಲರೂ ಓಕೆ ಅಂದ್ರು.. ಹುಡುಗನ ಕಡೆಯವರು green ಸಿಗ್ನಲ್ ಕೊಟ್ಟಾಗಿತ್ತು ಮದುವೆಗೆ.. ಎಲ್ಲರೂ ನಮ್ಮ meeting result ಗೆ ಕಾಯ್ತಾ ಇದ್ರು..
ಮುಂದಿನ ಭಾನುವಾರ ಸಿಗೋದು ಅಂತ ಆಯ್ತು.. ಎಲ್ಲಿ!!? ಅನ್ನೋದು ಯಕ್ಷ ಪ್ರಶ್ನೆ ಆಯ್ತು.. ನಂಗೆ ಬೆಂಗಳೂರು ಅಷ್ಟು ಗೊತ್ತಿಲ್ಲ.. ನನಗೆ ಗೊತ್ತಿರೋದೇ orion mall.. ಮಂತ್ರಿ mall. . ಅಲ್ಲಿ ಸಿಗೋಣವಾ ಅಂದೆ.. ಶುರು ಆಯ್ತು ಹುಡುಗನ ಕ್ಯಾತೆ.. “ಅಯ್ಯೋ . ತುಂಬಾ ಬಿಸಿಲು.. ನನಗೆ ಅದು ತುಂಬಾ ದೂರ.. car ಅಲ್ಲಿ ಏನಿಲ್ಲ ಅಂದ್ರೂ ಒಂದು ಗಂಟೆ ಆಗತ್ತೆ.. ನೀವೇ ಜಯನಗರ CENTRAL ಗೆ ಬನ್ನಿ..ಸಿಗೋಣ” ಅಂದ.. “ಇವನ್ಯಾರು ಗುರೂ.. ಮಾತ್ ಎತ್ತಿದ್ರೆ ಜಯನಗರ ಅಂತಾನೆ..” ನನಗೆ ಏನಿಲ್ಲ ಅಂದ್ರೂ10km ಆಗತ್ತೆ.. ಹೋಗ್ಲಿ ಎಲ್ಲಾದ್ರೂ ಮಧ್ಯ ಸಿಗೋಣ ಅಂದ್ರೆ.. ಅದಕ್ಕೂ ಒಪ್ಪಲಿಲ್ಲ.. ಸರಿಯಾಗೇ ಹೆಸರಿಟ್ಟಿದ್ದಾರೆ ಇವನಿಗೆ.. “ಜಯನಗರದ ಜಾಕಿ” ಅಂತ.. ಇನ್ನೇನೂ option ಇರಲಿಲ್ಲ.. ಬರ್ತೀನಿ ಅಂದೆ.. ಬೆಳಿಗ್ಗೆ ಸಿಗೋಣ ಅಂದ್ರೆ.. ಬಿಸಿಲು.. ಆಗಲ್ಲ.. ಸಂಜೆ ಸಿಗೋಣ ಅಂದ.. ‘ಆ ರಾಜಕುಮಾರ film ಅಲ್ಲಿ ಪುನೀತ್ ಕೂಡ ಹೀಗೆ prince ತರ ಆಡ್ತಾ ಇರಲಿಲ್ಲ.. ಇವನು ಎಷ್ಟು buildup ತೊಗೊತ್ತಿದ್ದಾನೆ’ ಅನ್ನಿಸ್ತು.. ಆದ್ರೂ ಹೊರಟೆ..
Central ತಲುಪೋ ಅಷ್ಟೊತ್ತಿಗೆ.. ಸುಮಾರು 7 ಗಂಟೆ ಆಗಿತ್ತು.. ನಂಗೆ full ಹಸಿವು.. ಹೇಗಿದ್ರೂ ಒಟ್ಟಿಗೆ dinner ಮಾಡೋ ಪ್ಲಾನ್ ಅಲ್ವಾ ಅನ್ಕೊಂಡು ಏನೂ ತಿಂದಿರಲಿಲ್ಲ ಸಂಜೆ .. ನಮ್ ಜಾಕಿ mall ಹೊರಗೇ ನಿಂತಿದ್ದ.. ನೋಡಿ smile exchange ಆದ್ಮೇಲೆ..
ಜಾಕಿ: ಇನ್ನೇನು ಸಮಾಚಾರ..
ನಾನು: (ಇವನ್ ಯಾಕೆ mall ಹೊರಗೇ ನಿಂತು ಮಾತಾಡಿಸ್ತಾ ಇದಾನೆ!!) ಏನಿಲ್ಲ.. ನೀವ್ ಹೇಳ್ಬೇಕು.. ಒಳಗೆ ಹೋಗೋಣವಾ ??
ಜಾಕಿ : hey it’s okay.. ಇಲ್ಲೇ ನಿಂತ್ಕೊಂಡು ಮಾತಾಡೋಣ.. ನನಗೇನೂ problem ಇಲ್ಲ..
ನಾನು : ( waaaaaat ??! ಅಲ್ಲಿಂದ ಬಂದಿದೀನಿ.. ಇಲ್ಲೇ ನಿಂತ್ಕೊಂಡ್ ಮಾತಾಡೋಣ ನಾ!!!) ( Very strange!! ) ಹ್ಹ ಹ್ಹ.. food court ಗೆ ಹೋಗೋಣ.. ಬನ್ನಿ..ಕೂತ್ಕೊಂಡು ಮಾತಡಬಹುದು.
ಜಾಕಿ : ಇಲ್ಲೇ ಕಟ್ಟೆ ಇದ್ಯಾಲ್ಲ.. ಹೊರಗೆ.. ಆರಾಮಾಗಿ ಕೂರೋಣ ಬನ್ನಿ..
ನಾನು : (ಮಾನ ಮರ್ಯಾದೆ ಬಿಟ್ಟು) actually m hungry.. ಬನ್ನಿ foodcourt ಗೆ ಹೋಗೋಣ.. !
ಜಾಕಿ : ಓಹ್.. ಹೌದಾ . . ಸರಿ.. actually ನಾನು wallet ತಂದಿಲ್ಲ.. car ಅಲ್ಲಿ ಇದೆ ಅನ್ಸತ್ತೆ.. or ಮನೆಲೂ ಮರೆತು ಬಂದಿರಬಹುದು.. ಸುಮ್ಮನೆ ಹೊರಗೆ ಮಾತಾಡೋದು ಅನ್ಕೊಂಡೆ ನಾನು..
ನಾನು : (ಕಳ್ಳ.. ಜುಗ್ಗ ನನ್ನ ಮಗ.. ಪಕ್ಕದ್ ಕ್ರಾಸ್ ಅಲ್ಲಿ ಮನೆ ಇದೆ.. 7pm ಗೆ ಹುಡುಗಿನ 10km ದೂರದಿಂದ ಬರೋಕೆ ಹೇಳಿ.. ಈಗ, ಹೊರಗೆ ಮಾತಾಡೋದು ಅನ್ಕೊಂಡೆ ನಾ!!! 😑😐😖😠)
ಅಯ್ಯೋ.. ಪರವಾಗಿಲ್ಲ.. ಬನ್ನಿ.. ನಾನ್ ತಂದಿದೀನಿ.. ಅದ್ರಲ್ಲಿ ಏನಿದೆ.. !
ಅಂತೂ foodcourt ಗೆ ಬಲಗಾಲಿಟ್ಟು ಪ್ರವೇಶ ಮಾಡಿದ್ವಿ.. dominos ಹೋಗೋಣ ಅಂದ.. ಆಹಾ.. ಕಳ್ಳ ಅನ್ಕೊಂಡು.. ಹೋದ್ವಿ..
ನಾನು: ನನಗೆ choco lava cake ಸಾಕು.. ನೀವ್ ಏನ್ ತೊಗೊತಿರಾ !?
ಖದೀಮ: ಒಂದು Mexican green wave medium pizza.. ಮತ್ತೆ.. ಒಂದು garlic bread .. ಮತ್ತೆ.. ಒಂದು coke ಸಾಕು..
ನಾನು: ( ಎಲಾ ಇವನ.. ನೋಡಿದ್ಯಾ ಧಿಮಾಕು ) ( ಒಬ್ಬನಿಗೆ order ಮಾಡು ಅಂದ್ರೆ.. family ಗೆ ಮಾಡ್ತಿದಾನೆ!! ) ಓಹ್.. ಸರಿ..
Order ಮಾಡಿ.. receipt ತೊಗೊಂಡು ಬಂದೆ.. ನಾವು ಕೂತಿದ್ದ table ಮೇಲೆ ಇಟ್ಟೆ.. atleast ಪುಣ್ಯಾತ್ಮ ತೊಗೊಂಡಾದ್ರೂ ಬರಲಿ ಅಂತ.. ಮಾತು ಕಥೆ ಶುರು ಮಾಡಬೇಕು ಅಂತ ನನಗಂತೂ ಅನಿಸಲಿಲ್ಲ.. I mean who does like this !! Very irritating.. ಅವನು pay ಮಾಡ್ಲಿಲ್ಲ ಅಂತ ನನಗೆ ಕೋಪ ಇಲ್ಲ.. ಆದರೆ.. pay ಮಾಡೋರಿಗಿಂತಾ ಜಾಸ್ತಿ order ಮಾಡಿದ್ನಲ್ಲ.. ಅದು ಉರಿತು.. ಅದೂ ಏನ್ style ಅಂತೀರಾ!!
ನಮ್ order ready ಆಗಿತ್ತು.. ನಾನು ಜಾಣತನದಿಂದ ಮುಂಚೆನೇ ನಮ್ ನಂಬರ್ ಇದು.. ಅಂತೆಲ್ಲ ಹೇಳಿದ್ದೆ ಅವನಿಗೆ.. so that.. at least ತೊಗೊಂಡ್ ಬರಲಿ ಅಂತ.. ಆದರೆ again screenplay change !!
ಸೋಂಬೇರಿ : ನಮ್ order ready ಆಯ್ತು ಅನ್ಸತ್ತೆ. .
ನಾನು : (ನಂಗೊತ್ತು.. ಹೋಗ್ ತೊಗೊಂಡಾದ್ರೂ ಬಾ) ಓಹ್.. ಹೌದಾ.. !
ಸೋಂಬೇರಿ : ಹೂ.. ತೊಗೊಳಿ receipt.. ತೊಗೊಂಡ್ ಬನ್ನಿ..
ನಾನು : ( ದೊಡ್ ನಮಸ್ಕಾರ..) ಸರಿ..
ನಾನು ಬೇಕಂತಾ ಎಲ್ಲಾ ಒಟ್ಟಿಗೆ ತರದೆ.. ನಿಧಾನಕ್ಕೆ ಒಂದೊಂದೇ ಕಷ್ಟ ಪಟ್ಟು ತರೋ ಹಾಗೆ act ಮಾಡಿದೆ.. ಊಹುಂ.. no use.. ನನ್ನ ನೋಡಿ smile ಬೇರೆ ಮಾಡ್ತಿದಾನೆ ಸೋಂಬೇರಿ..
ನಾನು : ( choco lava cake ತಿಂತಾ ) ಮತ್ತೆ.. ಇನ್ನೇನು ಸಮಾಚಾರ..? ಏನ್ ಅಂದ್ರು ಮನೇಲಿ ಎಲ್ಲಾ !?
ಬಕಾಸುರ : ( not paying attention to my words ) ಹಾ.. ಏನಿಲ್ಲ.. ಎಲ್ಲ okay.. ನಿಮಗೆ !!?
ನಾನು : ( definitely not okay ) ಇನ್ನೂ ಮನೇಲಿ ಮಾತಾಡಬೇಕು.. ( offering him cake ) ತೊಗೊಳಿ.. cake.. ಚೆನ್ನಾಗಿದೆ..
ಬಕಾಸುರ : ( not paying attention again for the first part .. but reacted for the second ) ಹೌದಾ.. ಕೊಡಿ ನೋಡಣ.. !! (Took a biiiiiiiiiiig bite in my small cake !!)
ನಾನು : ( ಉಳಿದಿರೋ ಚೂರು cake ತಿನ್ನುತ್ತಾ ) ಮತ್ತೆ? ನೀವೇನು expect ಮಾಡ್ತೀರಾ.. ನಿಮ್ಮ ಹುಡುಗಿ ಇಂದ ?
ಬಕಾಸುರ : ( ಒಂದು piece garlic bread ಬಕ ಬಕಾ ಅಂತ ತಿಂತಾ..) ನಿಮ್ಮ ತರ ಇರ್ಬೇಕು.. ನಮಗೆಲ್ಲ ನೀವು ಇಷ್ಟ ಆಗಿದೀರ.. ನಿಮ್ಮ smile ನನಗೆ ತುಂಬಾ ಇಷ್ಟ ಆಯ್ತು.. ನಿನ್ನೆ ನಿಮ್ಮ short movies ಎಲ್ಲ ನೋಡಿದೆ.. ಚೆನ್ನಾಗಿದೆ..
ನಾನು : ( finally.. ನನ್ನ ಬಗ್ಗೆ ಮಾತಾಡಿದ್ನಲ್ಲ.. ) thank you.. (pizza ಕೊಡಿಸಿದ್ದು ಸಾರ್ಥಕ ಆಯ್ತು.. )
ಜಾಕಿ : ( ಕಚ ಪಚ sound ಮಾಡ್ಕೊಂಡು ತಿಂತಾ.. ) ನಿಮಗೆ ಇಷ್ಟ ಆಗಿದ್ಯಾ ಹೇಳಿ.. ಮುಂದಿನ ಮಾತು ಕಥೆಗೆ ನಿಮ್ಮ ಮನೆಗೆ ಕರ್ಕೊಂಡು ಬರ್ತೀನಿ
ನಾನು : ಹೇಳ್ತೀನಿ.. sure.. ( ಮೊದಲು ನೀನು sound ಮಾಡ್ಕೊಂಡ್ ತಿನ್ನೋದು ನಿಲ್ಲಿಸು.. ಮಾರಾಯ.. )
ಬಕಾಸುರ : ( garlic bread ನನಗೆ ಕೊಡದೆ ತಿಂದು ತೀಗಿದ ನಂತರ ) pizza ಸ್ವಲ್ಪ ತೊಗೊಳಿ.. ನನಗೆ ಇಷ್ಟೊಂದು ಆಗಲ್ಲಪ್ಪ..
ನಾನು : ( ಅಂತೂ ಕೊಡೋ ಮನಸಾಯ್ತಲ್ಲ..) thanks . . ( Wait a sec. . Y am I telling him thanks !! )
ಈ ತಿನ್ನೋ episode ನ ಇನ್ನು ಎಳಿಯೊಲ್ಲ.. ನನ್ನ ಗಮನ ಎಲ್ಲಾ ಅವನು sound ಮಾಡ್ಕೊಂಡು pizza ತಿಂತಾ ಇದ್ದ ಕಡೆಗೇ ಇತ್ತು.. ಕೊನೆಗೆ.. ತಿಂದು ಮುಗಿಯೋ ಹೊತ್ತಿಗೆ ಸುಮಾರು 8.45 ಆಗಿತ್ತು.. at least ನಾನು cab ಹತ್ತೋ ವರೆಗೆ ಪುಣ್ಯಾತ್ಮ ಜೊತೆಗೆ ಮಾತಾಡ್ತಾ ಇರ್ತಾನೆ ಅನ್ಕೊಂಡೆ.. ಆದರೆ.. screenplay ಇಷ್ಟರಲ್ಲಿ ನಿಮಗೆ ಗೊತ್ತಾಗಿರ್ಬೇಕಲ್ಲಾ..
ಬೇಜವಾಬ್ದಾರಿ ಮನುಷ್ಯ : ಹೇಗೆ ಹೋಗ್ತೀರಾ..?? Cab ಆ !? ನಾನು car ಇಲ್ಲೇ ಬೇರೆ road ಅಲ್ಲಿ ಪಾರ್ಕ್ ಮಾಡಿದೀನಿ.. mall ಅಲ್ಲಿ ಸುಮ್ಮನೆ parking charges ಎಲ್ಲಾ ಕೊಡಬೇಕು ಅಂತ . .
ನಾನು : ( ಜುಗ್ಗ ನನ್ನ ಮಗನೇ ) ಓಹ್ . ಹೌದಾ . ನಾನು cab ಬುಕ್ ಮಾಡ್ತೀನಿ ಇನ್ನೇನು..
ಬೇಜವಾಬ್ದಾರಿ ಮನುಷ್ಯ : ಸರಿ ಹಾಗಾದರೆ.. bye.. ನಾಳೆ ಫೋನ್ ಮಾಡಿ ಯಾವಾಗ ಮಾತು ಕಥೆಗೆ ಬರಬೇಕು ಅಂತ.. ನನಗೆ late ಆಯ್ತು.. ಮನೇಲಿ ಕಾಯ್ತಾ ಇರ್ತಾರೆ.. ಇನ್ನೂ 15 ನಿಮಿಷ ಆಗತ್ತೆ ಮನೆಗೆ ಹೋಗೋಕೆ.. uff!!
ನಾನು : ( ನನಗೆ cab ಬರೋಕೇ ಇನ್ನೂ 10 min ಬೇಕು.. ) ಸರಿ… ಹೋಗ್ಬನ್ನಿ.. ಬೈ..
ನಮ್ಮ ಜಯನಗರದ ಜಾಕಿ.. ಅಲಿಯಾಸ್ ಪ್ರಿನ್ಸ್.. ಅಲಿಯಾಸ್ ಸೋಂಬೇರಿ.. ಅಲಿಯಾಸ್ ಬಕಾಸುರ.. ಅಲಿಯಾಸ್ ಬೇಜವಾಬ್ದಾರಿ ಮನುಷ್ಯ.. ಡಾರ್ರಾ.. ಬುರ್ರಾ.. ಅಂತ ತೇಗುತ್ತಾ.. ಹಿಂದೆ ತಿರುಗಿ ಕೂಡ ನೋಡದೆ ಹೊರಟುಹೋದ..
ಮನೆಗೆ ಬಂದು ಕಥೆ ಹೇಳಿದ್ರೆ.. ಎಲ್ಲರೂ ಮತ್ತೆ ನಗೋಕೆ ಶುರು ಮಾಡಿದ್ರು.. ನಿನಗೇ ಇಂತೋರು ಸಿಗ್ತಾರೆ.. ನಮ್ಮ್ ಕರ್ಮ .. ಅಂತ.. ನನ್ ತಮ್ಮ ಗೊತ್ತಲ್ಲಾ ಹೇಗೆ ಅಂತ.. ಅವನು.. “ಅಯ್ಯೋ.. ಅದ್ರಲ್ಲಿ ಏನಿದೆ . . ಯಾವಾಗಲೂ ಹುಡುಗುರೇ pay ಮಾಡಬೇಕಾ !? ಹುಡುಗುರೇ ತಂದು ಕೊಡಬೇಕಾ ?? ನಿನಗೆ ಸರಿಯಾಗಿ ಮಾಡಿದ್ದಾನೆ..” ಅಂತಿದ್ದ..
ಮದುವೆ ಆಗೋ ಹುಡುಗನ್ನ ನೋಡಿದ್ರೆ.. ಈ ಸಿನಿಮಾ ಅಲ್ಲಿ ತೋರಿಸೋ ಹಾಗೆ slow motion ಅಲ್ಲಿ ಒಂದು romantic ಹಾಡು play ಆಗತ್ತೆ.. ಒಳ್ಳೆ ಹೂವಿನ ಪರಿಮಳ ಬರತ್ತೆ.. ತಂಗಾಳಿ ಬೀಸತ್ತೆ.. ಹೀಗೇಲ್ಲಾ imagination ಇಟ್ಕೊಂಡಿದ್ದ ನನಗೆ.. ಅವನ ಕಚ ಪಚ ತಿನ್ನೋದು.. ಡಾರ್ರಾ ಬುರ್ರಾ ತೆಗೋದು.. !! ಪುಣ್ಯಕ್ಕೆ ಹೂಸು ಬಿಡಲಿಲ್ಲ ಅನ್ಸತ್ತೆ.. ಅಥವಾ ನನಗೆ ಗೊತ್ತಾಗಲಿಲ್ಲ . ನನ್ನ ಪುಣ್ಯ !! ಅವನ ದಶಾವತಾರ ನೋಡಿ.. ನನಗಂತೂ ಈ arrange marriage ಸುದ್ದಿನೇ ಬೇಡ ಅನ್ನಿಸ್ತು.. ಮದುವೆನೇ ಬೇಡ ಅನ್ನಿಸ್ತು.. !! ಈ ಜಯನಗರದ ಜಾಕಿ ನೂ ಬೇಡ.. ರಾಜಾಜಿನಗರದ ರಾಕಿ ನೂ ಬೇಡ.. ಎಲ್ಲರಿಗೂ ದೊಡ್ಡ ನಮಸ್ಕಾರ ಅನ್ಕೊಂಡು.. ನಮ್ಮ cousins group ಹೆಸರನ್ನ.. ಮತ್ತೆ “ happy family” ಅಂತ ಮತ್ತೆ change ಮಾಡಿ.. ಈ ಜನುಮದಲ್ಲಿ ನನಗೆ ಮದುವೆ ಆಗಲ್ಲ ಅನ್ಸತ್ತೆ . . ಅಂತ ಅನ್ಕೊಂಡು ಮಲ್ಕೊಂಡೆ.. ಅಷ್ಟರಲ್ಲಿ ಜಾಕಿ ಮೆಸೇಜ್ ಬಂದಿತ್ತು ಮೊಬೈಲ್ ಗೆ.. “ goodnight “ ಅಂತ . . ಅವತ್ತು ರಾತ್ರಿ ಕನಸಲ್ಲೆಲ್ಲಾ.. ಬರೀ . . ‘ಕಚ ಪಚ.. ಡಾರ್ರಾ ಬುರ್ರಾ.. ‘ !!! ಹ್ಹ ಹ್ಹ..
Universe : ನಾನ್ ಅವತ್ತೇ ಹೇಳ್ದೆ ನಿಂಗೆ.. ಬೇಡಾ ಅಂತ.. ಜಾಕಿ ಜಾಕಿ ಅನ್ಕೊಂಡು ಹೋದೆ ನೀನು!! ಈಗ ನೋಡು !! 🙁 😛 😀