1394

ಕಳ್ಳ ಆದ ಮಹಾನ್ ಕಳ್ಳ

madhyastha
ರಾಕೇಶ್ ಮಧ್ಯಸ್ತ

ಹನಿ ಹನಿ ಕೂಡಿ ಹಳ್ಳ
ಎಂದು ಯೋಚಿಸಿದ ಕಳ್ಳ
ಸ್ವಲ್ಪ ಸ್ವಲ್ಪವೇ ಕದ್ದು
ಆದನವ ಮಹಾನ್ ಕಳ್ಳ
ಆಕಳು ಕಪ್ಪಾದರೆ
ಹಾಲು ಕಪ್ಪೆ?

ಆಕಳು ಕಪ್ಪಾದರೆ
ಹಾಲು ಕಪ್ಪೆ?
ಎಂದು ಯೋಚಿಸಿ ಕಳ್ಳ
ನಾನಾದರೆ ನಾ
ಮಾಡುವ ವೃತ್ತಿ ತಪ್ಪೆ?
ಈ ಚಿಕ್ಕ ಕಳ್ಳ ಆದನಾ
ದೊಡ್ಡ ಕಳ್ಳ
ಹಾರಿದಂತೆ ಕಪ್ಪೆ
ತಾಳಿದವನು ಬಾಳಿಯಾನು
ಯೋಚಿಸಿ ಕಳ್ಳನಾದವನು
ಕಾದನು ಅರ್ಧ ರಾತ್ರಿ
ಹೋಗುವರೆಗೆ ಕರೆಂಟು
ಹೋದಾಗ ಕರೆಂಟು
ಮಾಡಿ ಪೂರ್ತಿ ಖಾತ್ರಿ
ದೋಚಿದನು ಎಲ್ಲಾ ಮನೆಗಳ
ಹಾಡಿದನು ಮಂಗಳ
ಒಗ್ಗಟ್ಟಿನಲ್ಲಿ ಬಲವಿದೆ

ಕಾರನ್ನು ತನಗೆ
ಕದಿಯಲಾಗದೆಂದು ಚೋರನು,
ಹತಾಶನಾಗಿ
ಒಗ್ಗಟ್ಟಿನಲ್ಲಿ ಬಲವಿದೆ
ಎಂದು ತಿಳಿದು,ಕಗ್ಗತ್ತಲಿನಲ್ಲಿ
ತನ್ನ ಕಳ್ಳರ ಸಂಗಡವನು
ಕರೆದು,ಖುಷಿಯಾಗಿ
ಕದ್ದನು ಕಾರನು.
ಕುಂಬಾರನಿಗೆ ವರುಷ
ದೊಣ್ಣೆಗೆ ನಿಮಿಷ
ಎಂದು ತನ್ನ ಮನದೊಳಗೆ
ಬಂದೊಡೆ ಪಟ್ಟ ಹರುಷ
ಈಬಾರಿ ಗಾದೆಯೇ
ತಿರುಗಿಸಿ ಕಳ್ಳ
ಶ್ರೀಮಂತನಿಗೆ ವರುಷ
ಕಳ್ಳನಿಗೆ ನಿಮಿಷ
TUES 19:23

ಊಟಬಲ್ಲನಿಗೆ ರೋಗವಿಲ್ಲ
ಮಾತುಬಲ್ಲನಿಗೆ ಜಗಳವಿಲ್ಲ
ಎಂದು ಕೂತರೆ ಫಲವಿಲ್ಲ
ಎಂದು ಕಳ್ಳ,ಸರಿಯಾದ
ಕಳ್ಳತನಬಲ್ಲವನಿಗೆ
ಜೈಲೂಟದ ಯೋಗವಿಲ್ಲ!
ಎಂದು ಮನದೊಳಿರ್ದನು.
ಸಿಕ್ಕಿ ಬಿದ್ದ ಕಳ್ಳ

ಕದ್ದು ಸಿಕ್ಕಿಬಿದ್ದು
ಜೈಲಿಗೆ ಹೋದ ಈ ಕಳ್ಳ
ಎನಿಸಿಕೊಂಡ
ಉಪ್ಪು ತಿಂದವ ನೀರು
ಕುಡಿಯಲೇ ಬೇಕು
ಕದ್ದು ತಿಂದವ ಜೈಲೂಟ
ತಿನ್ನಲೇ ಬೇಕು
ಇತಿ ಕಳ್ಳ ವಿಜಯಗಾದೆಯಾತ್ರೆ
ಸಂಪೂರ್ಣ

if you wish to submit your articles then send your article to localkebal@gmail.com

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..