2184

ಮಳೆ ಬರುವ ಹಾಗಿದೆ.

ಹಾಯ್ ಚಿನ್ನು,

ಓ ಸಾರಿ, hubby ಅನ್ನಬೇಕಿತ್ತು‌ ಅಲಾ, ಮಿಸ್ ಆಗೋಯ್ತು, ಸಾರಿ. ಆಮೇಲೆ ನಾನೇ ಒಂದು ಪ್ಲೇಟ್ ಪೂರಿ‌ ಕೊಡಿಸ್ತೀನಿ, ಓಕೆ ನಾ? ಈಗ ಮುಂದೆ ಓದು! ನಾನೀಗ ನಿನ್ನ ಮಿಸರ್ಸ್ ಆಗಿದ್ದೀನಿ ಅನ್ನೋದೇ ಮರೆತುಹೋಗಿತ್ತು; ಮರೆತು ಹೋಗಿತ್ತು ಅನ್ನೋದಕ್ಕಿಂತ 6-7 ವರ್ಷಗಳಿಂದ ಚಿನ್ನು‌ ಚಿನ್ನು ಅಂತ ನಿನ್ನ ಗೋಳು ಹೊಯ್ಕೊಂಡು ರೂಢಿ ಆಗೋಗಿದೆ. ಈಗ ಸಡನ್ನಾಗಿ ನಾನು ನೀನು‌ ಮದುವೆ ಆಗಿದ್ದೀವಿ, ನಾನು‌ ನಿಮ್ ಮನೆ ಸೊಸೆ ಆಗಿದ್ದೀನಿ ಅನ್ನೋದೆಲ್ಲಾ ದೊಡ್ಡ ಮಟ್ಟದ ಬದಲಾವಣೆಗಳಾಗಿದ್ದರೂ ನಿಮ್ಮ ಅಪ್ಪ ಅಮ್ಮ ನನಗೆ ತುಂಬಾನೇ ಕ್ಲೋಸ್ ಇರೋದರಿಂದ ನನಗೇನೂ ಅಂತಹ ವ್ಯತ್ಯಾಸ ಕಾಣುತ್ತಿಲ್ಲ. Coming to point, facebook ನಲ್ಲಿ ಲೈವ್ ಬಂದು ಸಿನಿಮಾ ಆಡಿಯೋ ರಿಲೀಸ್ ಮಾಡೋ ಈ ಕಾಲದಲ್ಲಿ ನಾನ್ಯಾಕೆ ಒಳ್ಳೆಯ ಸ್ಟುಪಿಡ್ ಥರ ಬಾಬು ಅಂಕಲ್ ಅಂಗಡಿಯಿಂದ ₹1 ಕವರ್ ತಂದು, ತಮ್ಮ ಪ್ರಮೋದ್ ಹತ್ತಿರ ಸ್ಟಾಂಪ್ ತರಿಸಿಕೊಂಡು ಪತ್ರ ಬರೆಯುತ್ತಾ ಇದ್ದೀನಿ ಅಂತ ನಿನಗೆ ಆಶ್ಚರ್ಯ ಆಗಬಹುದು. ಅದೇನೆಂದರೆ‌ ನಮ್ಮ ಮದುವೆಗೆ ನಿನ್ನ ಫ್ರೆಂಡ್ಸ್ ಎಲ್ಲಾ ಸೇರಿ diamond ring ಇಲ್ಲಾ amazon gift card ಏನಾದರೂ ಕೊಡ್ತಾರೆ ಅಂದ್ಕೊಂಡಿದ್ದೆ, ಅವರು‌ ನೋಡಿದ್ರೆ, ನೀನು‌ ವ್ಯಾಯಾಮ ತಪ್ಪಿಸುವ ಸೋಮಾರಿ ಅಂತ ನಿನಗೆ ಹೇಳಿ ಮಾಡಿಸಿದಂತೆ ಕರೆಕ್ಟಾಗಿ cycle ಕೊಟ್ಟಿದ್ದಾರೆ. ಆ ಥರ ಗಿಫ್ಟ್ ಬರಬಹುದು ಅಂತ ನಾನಂತೂ expect ಮಾಡಿರಲಿಲ್ಲ, ನೀನು ಕೂಡ expect ಮಾಡಿರಲಿಲ್ಲ ಅಂತ ಅವತ್ತು ನೀನಯ ಖುಷಿಯಾಗಿ ಕುಣಿತಾ ಇದ್ದದ್ದು ನಾನು‌ ನೋಡಿದೆ. ಈ past ಒಂಥರಾ ಮಜಾ ಅಲಾ, ನಾವು ಈ ದಿನ, ಈ ಕ್ಷಣ ಪಡುವ ಸುಖ ದುಃಖ ಇವತ್ತಿಗಿಂತಲೂ ಜಾಸ್ತಿ ಮುಂದೆ ಕಾಡುತ್ತದೆ. ಆದ್ದರಿಂದ ಈ‌ ಪತ್ರ ಇಂದು ನಿನಗೆ ಬರೆಯುತ್ತಿದ್ದೇನೆ, like old school! ಈಗ ಇದು ಸಿಲ್ಲಿ ಅನಿಸಿಸರೂ ಮುಂದೊಂದಿನ ನಾನು‌ ನೀನು‌ ಚಿಕ್ಕದಾಗಿ ಜಗಳ ಮಾಡಿಕೊಂಡು ಊಟ ಮಾಡದೇ ಮಲಗಿಕೊಂಡಾಗ ನಿದ್ರೆ ಬರದೇ ಎಚ್ಚರವಾಗಿ ಈ ಪತ್ರ ಓದಿ, ಇದು ನಮ್ಮನ್ನು ಹತ್ತಿರ ತರಬಹುದು ಎಂಬ ಹುಚ್ಚು ನಂಬಿಕೆ ನನ್ನದು. ಈಗ ವಿಷಯಕ್ಕೆ ಬರೋಣ??

IT ಲೈಫು ಕಷ್ಟ, ಅದು‌ ನನಗೂ ಗೊತ್ತು, ಏನ್ ನೀನೋಬ್ನೇ ಮಹಾ ಕೋಡ್ಸ್ ಬರೆದು ನಿನ್ನ ಕಂಪನಿ ಉದ್ಧಾರ ಮಾಡೋ ಥರ ಪೋಸ್ ಕೊಡ್ತೀಯಲ್ಲಾ? ಸರಿನಾ? ಆಗಲೇ ಒಂದು ದಿನ ಆಯ್ತು ನಿನ್ನ ಜೊತೆ ಫೋನಲ್ಲಿ ಮಾತಾಡಿ, ನನ್ನ ಹೆಂಡತಿ ಹೆಂಗವ್ಳೆ, ಏನ್ ಮಾಡ್ತವ್ಳೆ, ತಿಂದಳಾ ಇಲ್ವಾ? ಏನಾದರೂ ಕೇಳೋಣ ಅಂತ ಸ್ವಲ್ಪನೂ ಇಲ್ಲಪ್ಪ!! ಅದೇ ಮದುವೆಗೆ ಮುಂಚೆ, ಓನೋ ಚಿನ್ನು, ಓನೋ ಬಂಗಾರ ಅಂದ್ಕೊಂಡು ಮೊಬೈಲ್ ಸ್ವಿಚ್ ಆಫ್ ಆಗುವವರೆಗೂ ಮಾತಾಡ್ತಿದ್ದೆ!! ನೀವು ಹುಡುಗರೆಲ್ಲಾ ಇಷ್ಟೇ ಅಲಾ, ಮದುವೆ ಆದ ತಕ್ಷಣ take it for granted! ಹೋದ ತಿಂಗಳು ಮದುವೆ ಆಗಿದ್ದು, ಈಗ ಆಷಾಡ ಅಂತ ನೀನು ಬೆಂಗಳೂರಿನಲ್ಲಿ, ನಾನು ದಾವಣಗೆರೆಯಲ್ಲಿ! ಮುಂಚೆಗಿಂತಲೂ ಈಗ ಮದುವೆ ಆದ ಮೇಲೆ ನಿನ್ನ ನೆನಪು ಜಾಸ್ತಿ ಆಗುತ್ತೆ ನನಗೆ. ನಿನ್ನ ಕೋತಿ ಮುಖ ನೋಡಿ, ನನ್ನ ಫೋನ್ ರಿಸೀವ್ ಮಾಡದಲೇ ಇದ್ದದ್ದಕ್ಕೆ ಥಟ್ ಅಂತ ಏಟು‌ ಕೊಟ್ಟು ಮತ್ತೆ ಅಪ್ಪಿಕೊಳ್ಳಬೇಕು ಅನಿಸುತ್ತೆ. ಆದರೆ ಸಾಹೇಬ್ರು ಮಾತ್ರ ಕಂಪ್ಯೂಟರ್ ಮುಂದೆ ಬ್ಯುಸಿ. ನನಗೂ ಆಫೀಸ್ ಇದೆ, ಸಾಕಾಗಿ‌ ಹೋಯ್ತು ಅಂತ ರಜಾ ಹಾಕಿ ಮನೆಗೆ ಬಂದಿದ್ದೀನಿ, ನೀನು ನೋಡಿದ್ರೆ ಅಲ್ಲಿ ಒಬ್ಬನೇ ಬೇತಾಳದ ಥರ ಹೋಟೆಲ್ ಅಲ್ಲಿ ಊಟ ಮಾಡ್ಕೊಂಡಿದ್ದೀಯಾ? ಆರೋಗ್ಯ ಏನಾದರೂ ಹೆಚ್ಚು ಕಮ್ಮಿ ಆದರೆ? ನನಗೆ ಶಾಪಿಂಗ್ ಬ್ಯಾಗ್ ಹಿಡ್ಕೊಂಡು ಜೊತೆಯಲ್ಲಿ ಓಡಾಡೋದು ಯಾರು? ಹಾ? ಹ್ಯಾಗೂ ಹೆಂಡತಿ ಊರಲ್ಲಿ ಇಲ್ಲ ಅಂತ ಬೇರೆ new recruitment ಗೆ ಕಾಳು ಹಾಕ್ತಾ ಇಲ್ಲ ತಾನೆ? ಚಿನ್ನು, ಈಗೀಗ ಒಂದು ನಿಮಿಷಕ್ಕೆ ಹತ್ತು ಹತ್ತು ಸಲ ನಿನ್ನ ಯೋಚನೆ ಬರುತ್ತೆ, ನನ್ನ ಕರ್ಮ! ಕಾಲೇಜಲ್ಲಿ ಪ್ರಭಾಸ್, ರಕ್ಷಿತ್, ಹೃತಿಕ್ ಎಲ್ಲರೂ ಕನಸಲ್ಲಿ ಬರುತ್ತಿದ್ದರು, ಈಗ ಹಳೇ ಉಪ್ಪಿಟ್ಟಿನ‌ ಥರ ಇರೋ ನಿನ್ನ ಮುಖ ಒಂದೇ ತುಂಬಾ ನೆನಪಾಗುತ್ತದೆ.

ನಾನು ಆರ್ಟ್ಸ್ ಓದಿಲ್ಲ, ನಿನ್ನ ಹಾಗೆಯೇ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್, ನಿನ್ನ ಕ್ಲಾಸೇ. So, I’m not quite sure how to pour down my feelings for you and ask you to come here n meet me! WhatsApp ಮೆಸೇಜ್ ನೋಡುತ್ತಿಲ್ಲ ಅಂತ ನೇರವಾಗಿ ನಿನ್ನ ಆಫೀಸಿಗೆ ಬಂದು I miss you ಅಂತ ಹೇಳುಬಿಡಬೇಕು ಅನಿಸುತ್ತಿದೆ. ಆದರೆ ಆಗುತ್ತಿಲ್ಲ. ಯಾಕೆ ಗೊತ್ತಾ ಚಿನ್ನು, ಇಲ್ಲಿ ಮಳೆ ಬರುತ್ತಿದ್ದೆ. ಹೊರಗೆ ಬರಲಾಗದಷ್ಟು‌ ಜೋರು ಮಳೆಯಲ್ಲ, ಬಾಲ್ಕನಿಯಲ್ಲಿ ಆರಾಮ್ ಚೇರ್ ಹಾಕಿ ಕುಳಿತು, ದೊಡ್ಡದೊಂದು ಲೋಟದಲ್ಲಿ ಕಾಫಿ ಹೀರುತ್ತಾ ನಿನ್ನ ಜೊತೆ ಮಾತನಾಡಬೇಕು ಎಂದು ಆಸೆಯಾಗುವಷ್ಟು ಸಣ್ಣ ಸೋನೆ ಮಳೆ. ಅದಕ್ಕೆ ನಾನು‌ ಇಲ್ಲೇ ಇರುತ್ತೀನಿ. ಮಳೆಗೂ ಫೋನ್ ಮಾಡಿ ಎಲ್ಲೂ ಹೋಗದಂತೆ ಹೇಳಿದ್ದೀನಿ. ನನ್ನ ಪ್ರದೀಪನ ಬರುವಿಕೆಗಾಗಿ ಕಾಯುತ್ತಿರುವ…

ನಿನ್ನ ಶ್ವೇತಾ

ಬರುತ್ತೀಯಾ ತಾನೆ?

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..