1990

ಯಾರ್ ಯಾರ್ ಜೀವನ ಹೇಗೇಗೆ ಅಂತ ಹೇಳಕ್ಕಾಗಲ್ಲ…!!!

ನಮಗೆಲ್ಲಾ ಅನೌನ್ ನಂಬರ್ ಕಾಲ್ ಬಂದರೇ ಯಾರದು ಅಂತಾ ಹುಡುಕುವ ಒಂದು ಚಟ ಇರತ್ತೆ. ಹಾಗೇ ನೋಡೋಣ ಎಂದು ವಾಪಾಸ್ ಕಾಲ್ ಮಾಡಿದೆ. ಅತ್ತಕಡೆ ಬರೀ ರಿಂಗ್ ಆಯ್ತು ಆದ್ರೇ ಎತ್ತಲಿಲ್ಲ. ಮತ್ತೆ ಪ್ರಯತ್ನ ಮಾಡ್ದೆ. ಈ ಬಾರಿ ಹಾಗಾಗಲಿಲ್ಲ, ಆ ಕಡೆಯಿಂದ “ಹೆಲೋ” ಎಂಬ ಅವಳ ಸುಮಧುರ ಧ್ವನಿ ಕೇಳಿಸ್ತು. ಆ ಧ್ವನಿಗೇ ನನ್ನ ಮನಸಲ್ಲಿ ಒಮ್ಮೆಗೆ ಆ ಹುಡುಗಿಯ ಮುಖವನ್ನು ನೋಡಲೇಬೇಕು ಎನಿಸಿದ್ದು ಸುಳ್ಳಲ್ಲ. ಇದು ಪ್ರೀತಿ ಅಲ್ಲ ಬೇರೆ ಒಬ್ಬಳು ಅನ್ನೋದು ಕನ್ಫರ್ಮ್ ಆಗಿತ್ತು. ಆದರೇ ಏನ್ ಮಾಡೋದು ಸ್ವಾಮಿ ಈಗಾಗಲೇ ನಿಶ್ಚಿತಾರ್ಥ ಆಗಿದೆ. ಈಗ ಮತ್ತೊಂದು ಹುಡುಗೀನಾ ಅಂತ. ಏನೋ ಧೈರ್ಯ ಮಾಡಿ ‘ಯಾರು?’ ಎಂದು ಕೇಳಿದೆ. ಆ ಕಡೆಯಿಂದ ‘ನಾನು ರಷ್ಮಿ, ನಿಮ್ಮನ್ನ ಅವತ್ತು ಆಫೀಸಿನಲ್ಲಿ ನೋಡಿದ್ದೇ. ಒಮ್ಮೆ ಮೀಟ್ ಮಾಡೋಣ್ವಾ?’ ಎಂದು ಕೇಳಿದಳು. ಬರೀ ಮೀಟ್ ತಾನೇ, ಬೇರೆ ಏನು ಅಲ್ಲಾ ಅನ್ಕೊಂಡು ಒಂದು ಹುಂಬು ಧೈರ್ಯ ಮಾಡಿ ಆಗಲಿ ಎಂದು ಅವಳು ಹೇಳಿದ ಜಾಗಕ್ಕೆ ಬರ್ತೀನಿ ಅಂತ ಒಪ್ಪ್ಕೊಂಡೆ.
ಮೀಟ್ ಏನೋ ಆದ್ವಿ. ಆದರೇ ಅದೇನೋ ಗೊತ್ತಿಲ್ಲ ಅವಳ ಮಾತುಗಳು, ನಗು, ಕಣ್ಣು ಎಲ್ಲವೂ ನನ್ನನ್ನ ಆಕರ್ಷಿಸಿದವು. ಒಮ್ಮೆಗೆ ನಿಶ್ಚಿತಾರ್ಥ ಆಗಿದ್ದನ್ನೂ ಮರೆತಿದ್ದೆ. ಅವಳು ಮನಸ್ಸಿಗೆ ತುಂಬಾ ಹತ್ತಿರ ಆಗಲಿಕ್ಕೆ ಪ್ರಾರಂಭಿಸಿದಳು. ಪ್ರತೀದಿನ ಆಫೀಸ್ ಗೆ ಹೋಗದೇ ಅವಳೊಂದಿಗೆ ಸಮಯ ಕಳೆಯೋದೇ ದಿನಚರಿ ಆಗಿತ್ತು. ಷಾಪಿಂಗ್ ಹೋಗೋದು, ರಾತ್ರಿ ಆದರೇ ಪಬ್, ಡಿಸ್ಕೋತೆಕ್ ಅಂತೆಲ್ಲಾ ಅವಳ ಜೊತೆಗೇ ಇರಲಿಕ್ಕೆ ಶುರು ಮಾಡಿದೆ. ನಾನು ಮೆಕ್ಯಾನಿಕಲ್ ಬ್ರಾಂಚ್ ಹುಡುಗನೇ ಆದ್ರೂ ಡ್ರಿಂಕ್ಸ್, ಸಿಗರೇಟ್ ಮುಟ್ಟಿದೋನಲ್ಲ. ಆದರೇ ರಷ್ಮಿ ನನಗೆ ಅವೆಲ್ಲದರ ಅಭ್ಯಾಸ ಮಾಡಿಸಿದ್ದಳು. ಪ್ರತೀ ದಿನದ ಪ್ರಾರಂಭ ಮತ್ತೆ ಮುಕ್ತಾಯ ಅವಳಿಂದಲೇ ಆಗ್ತಾ ಇತ್ತು.
ಈ ಕಡೆ ಮನೇಲಿ ಮದುವೆ ಕೆಲಸಗಳಲ್ಲಿ ಎಲ್ಲಾ ಬ್ಯುಸಿ ಆಗಿದ್ರು. ನಾನು ಆಫೀಸ್ ಗೆ ಹೋಗ್ತಾ ಇಲ್ಲಾ ಅನ್ನೋ ಒಂದೇ ಒಂದು ಸುಳುಹು ಕೂಡಾ ಮನೇಲಿ ಗೊತ್ತಗ್ಲಿಲ್ಲ. ‘ಪ್ರೀತಿ’ ದಿನಕ್ಕೆ 2 ಬಾರಿ ಕಾಲ್ ಮಾಡಿದ್ರೂ ನಾನು ಅದಕ್ಕೆ ಸರಿಯಾಗಿ ಸ್ಪಂದಿಸ್ತಾ ಇರಲಿಲ್ಲ. ಸಾಧ್ಯ ಆದಷ್ಟೂ ಅವಳನ್ನ ದೂರ ಮಾಡಲಿಕ್ಕೆ ನೋಡ್ತಿದ್ದೆ. ರಷ್ಮಿ ನನಗೆ ಅಷ್ಟು ಹತ್ತಿರವಗಿದ್ದಳು.
ಇಷ್ಟೆಲ್ಲಾ ಆಗ್ತಾ ಇರುವಾಗ ಒಂದಿನ ಆಫೀಸಿಂದ ಒಂದು ಲೆಟರ್ ಬಂತು. ತೆಗೆದು ನೋಡಿದ್ರೆ… ಸಸ್ಪೆಂಡ್ ಆರ್ಡರ್!!! . ಒಮ್ಮೆಲೆ ಸಿಡಿಲು ಬಡಿದಂತಾಯ್ತು. ಆಫೀಸಿಗೆ ಹೋಗದೇ ಸುಮಾರು 1 ತಿಂಗಳಾಗಿತ್ತು. ಎಲ್ಲವನ್ನೂ ಅವಳಿಗಾಗಿ ಮರೆತಿದ್ದೆ. ರಷ್ಮಿ ಜೊತೆ ಮಾತನಾಡಬೇಕು ಅನ್ನಿಸ್ತು. ಫೋನ್ ಮಾಡಿದೆ. ಆ ಕಡೆಯಿಂದಾ ಬರೀ ರಿಂಗ್ ಬಿಟ್ಟರೇ ‘ನೀವು ಕರೆ ಮಾಡುತ್ತಿರುವ ಚಂದಾದಾರರು ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ ‘ ಎಂಬ ಉತ್ತರ ಬಂದಿತಷ್ಟೇ. ಅವಳಿಗೂ ನನ್ನನ್ನು ಕೆಲಸದಿಂದ ತೆಗೆದು ಹಾಕಿದ ವಿಷಯ ಗೊತ್ತಾಗಿತ್ತು ಅನ್ನಿಸುತ್ತದೆ. ಸ್ವಲ್ಪ ಸಮಯದ ನಂತರ ‘ನನ್ನನ್ನ ಮರೆತುಬಿಡು, ಇನ್ನುಮುಂದೆ ಯಾವುದೇ ಕಾರಣಕ್ಕೂ ನನ್ನನ್ನು ಭೇಟಿ ಮಾಡುವ ಪ್ರಯತ್ನ ಮಾಡಬೇಡ’ ಎಂದು ಮೆಸೇಜ್ ಕಳಿಸಿದ್ದಳು. ಯಾಕೆ? ಎಂದು ಪ್ರಶ್ನಿಸುವ ಧೈರ್ಯವೂ ನನಗೆ ಬರಲಿಲ್ಲ.
ಈ ಕಡೆ ಮನೆಯಲಿ ಮದುವೆ ಸಂಭ್ರಮದಲ್ಲಿದ್ದರೇ, ಪ್ರೀತಿಯವರ ತಂದೆ ನನ್ನ ಅಪ್ಪನಿಗೆ ಕರೆಮಾಡಿ ಮದುವೆ ನಿಲ್ಲಿಸಲಿಕ್ಕೆ ಹೇಳಿದರು. ಅವರಿಗೂ ನನ್ನ ಎಲ್ಲಾ ವಿಷಯಗಳು ಗೊತ್ತಾಗಿತ್ತು ಅಂತ ಕಾಣತ್ತೆ. “ಕೈಗೆ ಸಿಗದ ‘ರಷ್ಮಿ’ಯಾ ಆಸೆಯಲಿ, ಕಾಣುತ್ತಿದ್ದ ‘ಪ್ರೀತಿ’ಯನ್ನ ಬಲಿ ಕೊಟ್ಟಿದ್ದೆ”. ಒಂದುವೇಳೆ ಕೆಲಸ ಇಲ್ಲಾ ಎಂದಿದ್ದರೂ ಪ್ರೀತಿ ನನ್ನನ್ನ ಒಪ್ಪಿಕೊಳ್ತಾ ಇದ್ದಳೇನೋ ಆದರೇ, ನಿಶ್ಚಿತಾರ್ಥ ವಾಗಿ ಬೇರೊಂದು ಹುಡುಗಿಯ ಜೊತೆ ತಿರುಗಿದರೆ ಯಾವ ಹೆಣ್ಣು ತಾನೇ ಸಹಿಸಿಕೊಳ್ತಾಳೆ ಹೇಳಿ??
ನಾನು ಕುಗ್ಗಿ ಹೋಗಿದ್ದೆ. ಮನೆಗೆ ಹೋಗಿ ಅಪ್ಪ ಅಮ್ಮನಿಗೆ ಮುಖ ತೋರಿಸಲೂ ಮನಸಾಗಲಿಲ್ಲ. ಎಲ್ಲವನ್ನೂ ಬಿಟ್ಟು ಜೀವನವೇ ಬೇಸರವಾಗಿ ಕಂಡಿತ್ತು. ಅದೇನೋ ಯೋಚನೆಯಲ್ಲಿ ನನ್ನ ಬಳಿ ಇದ್ದ ಎಲ್ಲ ಹಣವನ್ನೂ ಭಿಕ್ಷುಕನಿಗೆ ಕೊಟ್ಟಿದ್ದೆ. ಹೊಟ್ಟೆಯಲಿ ಹಸಿವು, ಕೈನಲ್ಲಿ ಹಣವಿಲ್ಲ. ಮನೆಗೆ ಹೋಗಲು ಮನಸಿಲ್ಲ. ಗೆಲುವು ಬಂದರೇ ಬಹಳ ನಿಧಾನವಾಗಿ ಬರತ್ತೆ, ಆದ್ರೇ ಸೋಲು ಬಂದ್ರೇನೇ ಹೀಗೆ ಸಾಲು ಸಾಲಾಗಿ ಬರತ್ತೆ. ಬಹಳ ಯೋಚಿಸಿ ಎಲ್ಲಾದರೂ ದೇಶಾಂತರ ಹೋಗೋಣ ಅನ್ನಿಸ್ತು. ಮುಂದೇನು ಅಂತ ಯೋಚಿಸ್ತಾ ಅಲ್ಲೇ ಹತ್ತಿರದ ಪಾರ್ಕ್ ನಲ್ಲಿ ಕೂತಿದ್ದೆ.
ಸಮಯ ರಾತ್ರಿ 10:30 ಇರಬೋದು, ಪೋಲಿಸ್ನೋರು ಬಂದು ರಾತ್ರಿ ಆಯ್ತು ಕಣಪ್ಪಾ, ಇಷ್ಟೊತ್ತಿನ ಮೇಲೆ ಇಲ್ಲೆಲ್ಲಾ ಇರಬಾರ್ದು ಎದ್ದೇಳು ಮನೆಗೆ ಹೋಗಪ್ಪಾ ಅಂತೆಲ್ಲಾ ಹೇಳ್ತಾನೇ ಇದ್ದಾರೆ ಆದ್ರೇ ನಾನು ಮಾತ್ರ ಏನೋ ಯೋಚನೆಯಲ್ಲೇ ಇದ್ದೆ. ನಾನು ಏಳದೇ ಇರೋದು ನೋಡಿ ಅವರು ಹತ್ತಿರ ಬಂದು, ಮೈ ತಟ್ಟಿ, ಎದ್ದೇಳೊ. ಎಷ್ಟು ಎಬ್ಬಿಸ್ಬೇಕೋ ನಿನಗೇ?? ಬೇಗ ಎದ್ದು ಸ್ನಾನ ಸಂಧ್ಯಾವಂದನೆ ಮುಗ್ಸೋ. ಪ್ರತೀದಿನ ಇದೇ ಆಯ್ತು ನಿಂದು. ಬೆಳಿಗ್ಗೆ 5 ಯಿಂದಾ ಅಲರಾಂ ಬಡ್ಕೊಳ್ತಾನೇ ಇದೆ. ಈಗ ಗಂಟೆ 9 ಆಯ್ತು, ಆದ್ರೂ ಏಳೋ ಯೋಚನೆನೇ ಇಲ್ಲ. ಎದ್ದೇಳೋ … ಅಂತಾ ಹೇಳ್ತಾ ಇದ್ದಾನೆ. ನನಗೆ ಪೋಲೀಸ್ ಯಾಕೆ ಹೀಗೆಲ್ಲಾ ಹೇಳ್ತಾನೆ?  ಅಂತ ಮುಚ್ಚಿದ್ದ ಕಣ್ಣನ್ನ ನಿಧಾನವಾಗಿ ಬಿಟ್ಟೆ. ನೋಡಿದ್ರೇ ನನ್ನಮ್ಮ ಬೈತಾನೇ ಇದ್ದಳೆ. ಈ ಟೈಮಲ್ಲಿ ಅಮ್ಮ ಯಾಕೆ ಇಲ್ಲಿ ಬಂದಳು ಅಂತಾ ಸುತ್ತ ನೋಡಿದ್ರೇ ಬೆಳಕಾಗಿದೆ.
ಹಾಗಾದ್ರೇ, ನಾನು ಇಷ್ಟೊತ್ತೂ ಕಂಡಿದ್ದೆಲ್ಲಾ ಏನು ?? …  ಕನಸಾ??? ಅಥವಾ ಆ ಬ್ರಹ್ಮಾಂಡ ಗುರೂಜಿ ಹೇಳ್ದಂಗೇ ಕನಸು ಭವಿಷ್ಯದ ಮುನ್ಸೂಚನೆ ನಾ??? ಬೆಳಗಿನ ಜಾವದ ಕನಸು ಬೇರೆ ಎಲ್ಲಾದ್ರೂ ನಿಜ ಆಗಬಿಟ್ರೇ ಏನ್ ಗತಿ ಅಂತ ಯೋಚಿಸ್ತಾ ಇರ್ಬೇಕಾದ್ರೇ ಕಣ್ಣು

ಮುಂದಿನ ಅಂಕಣ ಓದಲು ಇಲ್ಲಿ ಕ್ಲಿಕ್ ಮಾಡಿ..