- By Local Kebal Team
- Saturday, May 13th, 2017
ತಂತ್ರಜ್ಞಾನ ಎಷ್ಟು ವರವೋ ಅಷ್ಟೇ ಶಾಪವೂ ಹೌದು .. ಅಂಗೈಯಲ್ಲಿ ಇಡೀ ವಿಶ್ವವನ್ನೇ ನೋಡಬಹುದು ..ಅಲ್ಲಿಯವರೆಗೆ ತಂತ್ರಜ್ಞಾನ ಬೆಳೆದು ನಿಂತಿದೆ .. ಇಂದಿನ ಮಕ್ಕಳಿಗೆ ಪ್ರಪಂಚದ ಹಲವು ವಿಷಯಗಳು ತಿಳಿದುಕೊಳ್ಳಲೇಬಾರದ ವಯಸ್ಸಲ್ಲಿ ತಿಳಿದುಕೊಂಡು ಅಪಾರ್ಥ ಮಾಡಿಕೊಂಡು ತಪ್ಪು ಎಸಗುತ್ತಿರುವ ಪ್ರಕರಣಗಳು ನಮ್ಮ ಕಣ್ಣ ಮುಂದೆ ಇವೆ .ಈ ವರ್ಷ PUC ರಿಸಲ್ಟ್ ಕಳೆದ ಆರು ವರ್ಷಗಳಲ್ಲೇ ಅತೀ ಕಡಿಮೆ .. ಕಾರಣ ಇಷ್ಟೇ …ಕಡಿಮೆ ಬೆಲೆಗೆ ಸುಗುವ ಸ್ಮಾರ್ಟ್ ಫೋನ್ ಗಳು , ಉಚಿತ ಇಂಟರ್ನೆಟ್ ಸೌಲಭ್ಯ ಹಾಗೆಯೇ ಆ ಮಕ್ಕಳ ತಂದೆ ತಾಯಿಗಳ ಬೇಜವಾಬ್ದಾರಿತನ .. ತಮ್ಮ ಮಕ್ಕಳಿಗೆ ಎಲ್ಲ ಸೌಲಭ್ಯ ಕೊಟ್ಟು ತಮ್ಮ ಸಂಬಂಧಿಕರ ಎದುರು ಬೀಗುವುದು ಈ ಪ್ರಪಂಚದ ಅತೀ ದೊಡ್ಡ ಮೂರ್ಖತನ .. ಮಕ್ಕಳಿಗೆ ಮೂಲಭೂತ ಅವಶ್ಯಕತೆಗಳನ್ನು ಮಾತ್ರ ಕೊಡಿಸಬೇಕು ..ಇಲ್ಲದೆ ಇದ್ದರೆ ಹಣ , ಸಮಯ , ಸಂಬಂಧದ ಬೆಲೆ ಗೊತ್ತಾಗುವುದೇ ಇಲ್ಲ ..
ಇನ್ನೊಂದು ವಿಷಯ ಏನೇನಂದರೆ ನಿಮ್ಮ ಮಗು ಒಳ್ಳೆಯ ಮಾರ್ಕ್ಸ್ ತಗೊಂಡ್ ಕೂಡ್ಲೇ ಅವನು / ಅವಳು ಇಂಜಿನಿಯರ್ ಆಗಲೇಬೇಕು ಅಂತ ನೀವ್ಯಾಕೆ ಪಟ್ಟು ಹಿಡಿದು ಕೊತ್ಕೋತೀರಿ ? ನಾಳೆ ಇಂಜಿನಿಯರಿಂಗ್ ಓದಿದ ಮೇಲೆ ಯಾವುದೊ ಸಾಫ್ಟ್ವೇರ್ ಕಂಪನಿ ಲಿ ಕೆಲಸ ಮಾಡೋಕೆ ಶುರು ಮಾಡ್ತಾನೆ … ಮಾಡುವ ಕೆಲಸ , ಓದಿದ ಡಿಗ್ರಿ ಗೂ ಸಂಬಂಧವೇ ಇಲ್ಲ … ಕೊನೆಗೆ ಕೆಲಸದ ಬಗ್ಗೆ ನಿರ್ಲಕ್ಷೆ ..
ನಿಮ್ಮ ಮಗುವಿಗೆ ಚಿತ್ರಕೆಲೆಯಲ್ಲಿ ಆಸಕ್ತಿ ಇತ್ತು ಅಂತಾದರೆ ಫೈನ್ ಆರ್ಟ್ಸ್ ಗೆ ಸೇರಿಸಿ ..ಸಾಫ್ಟ್ವೇರ್ ಕಂಪನಿ ಲಿ ಡಿಸೈನರ್ ಆಗಿ ಸಹ ಕೆಲಸ ಸಿಗುತ್ತೆ .. ಯಾವುದೇ ಸಾಫ್ಟ್ವೇರ್ ಯಾವ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ಅಲ್ಲೂ ಕೋಡ್ ಬರೆದ್ರೂ ಅದಕ್ಕೆ ಅತೀ ಸರಳ ಹಾಗು ಕಣ್ಣು ಕುಕ್ಕುವ ಇಂಟರ್ಫೇಸ್ ಇಲ್ಲದೆ ಇದ್ದರೆ ಯಾರೂ ಮೂಸಿ ನೋಡೋಲ್ಲ .. ಅದು ಬಿಟ್ಕೊಂಡು ನಂ ಮಗ ಚಿತ್ರ ಚೆನ್ನಾಗಿ ಬಿಡಿಸ್ತಾನೆ ..ಆರ್ಕಿಟೆಕ್ಚರ್ ಗೆ ಸೇರ್ಸೋಣ ಅಂತ forceful ಆಗಿ ಸೇರಿಸ್ತೀರಿ ..ಅವರು ಪಡೋ ಕಷ್ಟ ನೋಡೋಕ್ ಆಗೋಲ್ಲ .. ಭಾರತದಲ್ಲಿ ಆರ್ಕಿಟೆಕ್ಚರ್ jobಗೆ ಎಷ್ಟು ಡಿಮ್ಯಾಂಡ್ ಇದೆ ಅಂತ ಎಂದಾದರೂ ಅಂದಾಜು ಹಾಕಿದ್ದೀರಾ ?
ನಿಮ್ಮ ಮಗನಿಗೆ ಒಳ್ಳೆ ಹೆಸರು ಇರೋ ಕಾಲೇಜಲ್ಲಿ ಯಾವುದೇ ಕೋರ್ಸ್ ಗೆ ಸಹ ಸೇರ್ಸೋಕೆ ರೆಡಿ ಆಗಿರ್ತೀರಿ ..ಆಮೇಲೆ ಅವನಿಗೆ ಜಾಬ್ ಎಲ್ಲಿಂದ ಸಿಗುತ್ತೆ ? ಎಲೆಕ್ಟ್ರಾನಿಕ್ಸ್ , ಮೆಕ್ಯಾನಿಕಲ್ , ಕೆಮಿಕಲ್ ಇಂಜಿನಿಯರಿಂಗ್ ಎಲ್ಲ ಓದ್ಕೊಂಡು ಕೊನೆಗೆ ಬಂದು ಬೀಳೋದು ಸಾಫ್ಟ್ವೇರ್ ಕಂಪನಿ ಲಿ .. ಓದಿದ್ದು ಒಂದು ..ಕೆಲಸ ಸಿಗೋದು ಇನ್ನೊಂದು ..ಆಮೇಲೆ ಅವರಿಗೆ ತಾವು ಓದಿದ ಡಿಗ್ರಿ ಗಿಂತಲೂ ಕನಿಷ್ಠವಾದ ಕೆಲಸ ಕೊಡೋಕೆ ಶುರು ಮಾಡ್ತಾರೆ ಕಂಪನಿ ಅವ್ರು .. ಒಂದಿನ ಬೇಜಾರಾಗಿ ಲೈಫ್ ಮತ್ತೆ ಕನ್ಫ್ಯೂಷನ್ ಗೆ ಹೋಗುತ್ತೆ .. PUC ಆದ್ಮೇಲೆ ಏನ್ ಕೋರ್ಸ್ ಮಾಡಬೇಕು ಅಂತ ಇರೋ ಕನ್ಫ್ಯೂಷನ್ ಇಂಜಿನಿಯರಿಂಗ್ ಆದ್ ಮೇಲೂ ಸಹ ದುಪ್ಪಟ್ಟಾಗುತ್ತೆ ..
ನಿಮ್ಮ ಮಕ್ಕಳಿಗೆ ಯಾವ ಕೋರ್ಸ್ ಅಲ್ಲಿ ಇಂಟರೆಸ್ಟ್ ಇದೆ ಅನ್ನೋದನ್ನ ಅರ್ಥ ಮಾಡಿಕೊಳ್ಳಿ . ನಿಮ್ಮ ಮಕ್ಕಳ ಟ್ಯಾಲೆಂಟ್ ಏನು ಅಂತ ಗುರುತಿಸಿ .. ಹಾಗೆಯೇ ಅವರು ಯಾವುದೊ ಒಂದು ಫೀಲ್ಡ್ ಅಲ್ಲಿ ಇಂಟರೆಸ್ಟ್ ತೋರಿಸ್ತಾ ಇದ್ದರೆ , ಅದರಲ್ಲಿ ವೃತ್ತಿ ಜೀವನ ಶುರು ಮಾಡಿಕೊಂಡರೆ ಭವಿಷ್ಯದಲ್ಲಿ ಸೋಲುತ್ತಾರೆ ಅಂತ ಪ್ರಾಕ್ಟಿಕಲ್ ಆಗಿ ನಿಮಗೆ ಅನ್ನಿಸಿದರೆ ನಿಮ್ಮ ಮಗುವಿಗೆ advise ಮಾಡಿ .. ನಿಮ್ ಹತ್ರ ದುಡ್ಡಿದ್ರೆ , ನಿಮ್ಮ ನಿಮ್ಮ ಮಗ / ಮಗಳಿಗೆ ಟ್ಯಾಲೆಂಟ್ ಇದ್ದರೆ ಅವರನ್ನು ಲಕ್ಷಾಂತರ ಜನರ ರೋಗ ನಿವಾರಿಸುವ ಡಾಕ್ಟರ್ ಅನ್ನಾಗಿ ಮಾಡಿ ..
ಇಂಜಿನಿಯರಿಂಗ್ ಮಾಡಲೇಬಾರದು ಅಂತ ಹೇಳುತ್ತಾ ಇಲ್ಲ .. ಆತನಿಗೆ ಸಂಶೋಧನೆಯ ಗುಣ ಇದ್ದರೆ ದಯವಿಟ್ಟು ಇಂಜಿನಿಯರಿಂಗ್ ಗೆ ಕಳಿಸಿ .. ಎಲ್ಲರೊಳಗೊಂದಾಗು ಮಂಕುತಿಮ್ಮ ಅನ್ನೋ ರೀತಿ ನಿಮ್ಮ್ಮ ಮಗುವನ್ನು ಗುಂಪಲ್ಲಿ ಗೋವಿಂದ ಅನ್ನೋರ ಮಧ್ಯೆ ಸೇರೋಕೆ ಬಿಡಬೇಡಿ .ಇಂಜಿನಿಯರಿಂಗ್ ಓದಿದ ಮೇಲೆ ಕೆಲವರಿಗೆ ತಮ್ಮದೇ ಸ್ಟಾರ್ಟ್ಸ್ಪ್ ಮಾಡಬೇಕು ಅಂತ ಆಸೆ ಇರುತ್ತೆ .ಅದಕ್ಕೆ ಸಪೋರ್ಟ್ ಮಾಡಿ.. ವಯಸ್ಸು ಚಿಕ್ಕದಾಗಿರುತ್ತೆ ..ಭವಿಷ್ಯದ ಬಗ್ಗೆ ಅಷ್ಟೊಂದು ಚಿಂತೆ ಮಾಡೋ ಅವಶ್ಯಕತೆ ಇಲ್ಲ ..ಗೆದ್ರೆ ನಿಮಗೆ ಹೆಸರು ಬರುತ್ತೆ ..ಸೋತ್ರೆ ಮತ್ತೆ ಎಲ್ಲಾದರೂ ಕೆಲಸ ಹುಡುಕಿಕೊಳ್ಳಬಹುದು . MNC ಲಿ ಕೆಲಸ ಮಾಡ್ಬೇಕು …ಫಾರಿನ್ ಗೆ ಹೋಗ್ಲೇಬೇಕು ಅಂತ ಹಠ ಹಿಡಿದು ನಿಮ್ಮ ಮಕ್ಕಳಿಗೆ ಬಲವಂತವಾಗಿ ಇಂಜಿನಿಯರಿಂಗ್ ಗೆ ಕಳಿಸ್ಬೇಡಿ..
ನಿಮ್ಮ ಮಗ ಅಥವಾ ಮಗಳು ಉತ್ತಮ ಮಟ್ಟದ ಜೀವನ ನಡೆಸಬೇಕು ..ಅದಕ್ಕೆ ಏನೇನು ಮಾಡಬೇಕು ಅದರ ಬಗ್ಗೆ ಯೋಚಿಸಿ ..ಇಷ್ಟ ಇಲ್ಲದ ಕಡೆ ನೂಕಿ ಅವರ ಜೀವನವನ್ನು ಮತ್ತೆ ಕನ್ಫ್ಯೂಷನ್ ಗೆ ತಳ್ಳಬೇಡಿ . ನಿಮ್ಮ ಮಗ ಅಥವಾ ಮಗಳು ಕಡಿಮೆ ಮಾರ್ಕ್ಸ್ ತೆಗೆದುಕೊಂಡರು ಅಂತ ನಿರ್ಲಕ್ಷಿಸಬೇಡಿ .. ಓದಿನಲ್ಲಿ ಮಹಾನ್ ದಡ್ಡ ಅನ್ನಿಸಿಕೊಂಡವರೇ ಇವತ್ತ್ತು ಜಗತ್ತನ್ನು ಆಳುತ್ತಾ ಇರುವುದು .. ಅತೀ ಹೆಚ್ಚು ಮಾರ್ಕ್ಸ್ ತೆಗೆದುಕೊಂಡವರು ಸಹ ಕಡಿಮೆ ಮಾರ್ಕ್ಸ್ ತೆಗೆದುಕೊಂಡವರು ಹೇಳುವ ಕೆಲಸ ಮಾಡಿಕೊಂಡಿರುತ್ತಾರೆ ..